• Home
 • »
 • News
 • »
 • state
 • »
 • Bengaluru: ಕೇರಳ ಮೂಲದ ಯುವತಿಯಿಂದ ಕರ್ನಾಟಕದ ವೈದ್ಯೆ ಮೇಲೆ ಹಲ್ಲೆ; ಕನ್ನಡ ಭಾಷಿಕರ ಬಗ್ಗೆ ನಿಂದನೆ ಆರೋಪ!

Bengaluru: ಕೇರಳ ಮೂಲದ ಯುವತಿಯಿಂದ ಕರ್ನಾಟಕದ ವೈದ್ಯೆ ಮೇಲೆ ಹಲ್ಲೆ; ಕನ್ನಡ ಭಾಷಿಕರ ಬಗ್ಗೆ ನಿಂದನೆ ಆರೋಪ!

ವೈದ್ಯೆ ವಿಡಿಯೋ

ವೈದ್ಯೆ ವಿಡಿಯೋ

ಕನ್ನಡದಲ್ಲಿ ಮಾತನಾಡಿದಕ್ಕೆ ನನ್ನನ್ನು ಹೊಡೆದು, ಈ ರೀತಿ ಹಲ್ಲೆ ಮಾಡಿದ್ದಾಳೆ. ನನ್ನ ರೂಮ್​ಮೆಟ್​ ಮಲೆಯಾಳಿ, ನನ್ನ ಕೂದಲು ಹಿಡಿದು ಹೊಡೆದು ಥಳಿಸಿದ್ದಾಳೆ ಅಂತ ವೈದ್ಯೆ ವಿಡಿಯೋದಲ್ಲಿ ತನ್ನ ಅಳಲು ತೋಡಿಕೊಂಡಿದ್ದಾರೆ.

 • News18 Kannada
 • 3-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಕೇರಳ (Kerala) ಮೂಲದ ಯುವತಿಯೋರ್ವಗಳು ತನ್ನ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ಆರೋಪಿ ಕನ್ನಡದ (Karnataka) ಯುವತಿ ಅಳುತ್ತಾ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಬೆಂಗಳೂರಿನ (Bengaluru) ಬಿಟಿಎಂ ಲೇಔಟ್‌ನ (BTM Layout) ಪಿಜಿಯೊಂದರಲ್ಲಿ (Paying Guest) ಘಟನೆ ನಡೆದಿದ್ದು, ಮಂಗಳವಾರ ರಾತ್ರಿ ಘಟನೆ ನಡೆದಿದೆ ಎನ್ನಲಾಗಿದೆ. ಹಲ್ಲೆ ಮಾಡಿದ ಯುವತಿ, ಕರ್ನಾಟಕದ ವೈದ್ಯ ಎನ್ನಲಾಗಿದೆ. ಕನ್ನಡದಲ್ಲಿ ಮಾತನಾಡಿದಕ್ಕೆ ನನ್ನನ್ನು ಹೊಡೆದು, ಈ ರೀತಿ ಹಲ್ಲೆ ಮಾಡಿದ್ದಾರೆ. ನನ್ನ ರೂಮ್​ಮೆಟ್​ ಮಲೆಯಾಳಿ, ನನ್ನ ಕೂದಲು ಹಿಡಿದು ಹೊಡೆದು ಥಳಿಸಿದ್ದಾಳೆ ಅಂತ ವೈದ್ಯೆ ವಿಡಿಯೋದಲ್ಲಿ ತನ್ನ ಅಳಲು ತೋಡಿಕೊಂಡಿದ್ದಾರೆ.


ಪಿಜಿಯಲ್ಲಿ ‘ಮಿಡ್‌ನೈಟ್‌’ ಕಿರಿಕ್!  ಏನಿದು ಘಟನೆ?


ಮಿಡ್‌ನೈಟ್‌ನಲ್ಲಿ ಮೊಬೈಲ್ ಬಳಕೆಯಿಂದ ಪಿಜಿಯಲ್ಲಿ ಯುವತಿರ ನಡುವೆ ಗಲಾಟೆಯಾಗಿದೆಯಂತೆ. ಈ ಘಟನೆ ಕೇರಳ ಮೂಲದ ಅಶೀಲ ಹಾಗೂ ವೈದ್ಯೆಯಾಗಿರುವ ಡಾ.ಸೃಷ್ಟಿ ನಡುವೆ ಜಗಳವಾಗಿದೆ. ಈ ವೇಳೆ ಕೇರಳ ಮೂಲದ ಅಶೀಲ, ವೈದ್ಯೆ ಸೃಷ್ಟಿ ಮೇಲೆ ಹಲ್ಲೆ ಮಾಡಿದ್ದಾರಂತೆ. ಅಲ್ಲದೇ ಕನ್ನಡ ಭಾಷಿಕರ ಬಗ್ಗೆ ನಿಂದಿಸಿದ್ದಾರಂತೆ. ಈ ಕುರಿತು ಡಾ.ಸೃಷ್ಟಿ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.


ಇದನ್ನೂ ಓದಿ: NATIONAL YOUTH DAY 2023: ಪ್ರಧಾನಿ ಮೋದಿ ರೋಡ್​ ಶೋ ವೇಳೆ ಭದ್ರತಾ ಲೋಪ; ಪ್ರಧಾನಿಗೆ ಹಾರ ಹಾಕಲು ಬ್ಯಾರಿಕೇಟ್​ ದಾಟಿದ ಬಾಲಕ


ಇನ್ನು, ಹಲ್ಲೆ ಮಾಡಿದ ಯುವತಿ ಅಶೀಲ ಇಂದಿರಾ ನಗರ ಖಾಸಗಿ ಕಂಪೆನಿಯಲ್ಲಿ ಹೆಚ್.ಆರ್.ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಹಲ್ಲೆಗೊಳಗಾದ ಕನ್ನಡದ ಯುವತಿ ಡಾ.ಸೃಷ್ಟಿ ಬಿಬಿಎಂಪಿ ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೈಕೋಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಂಬಂಧ ದೂರು ದಾಖಲಾಗಿದೆ.


Woman NGO worker thrashed for opposing move to nab stray dogs in Ghaziabad
ಸಾಂದರ್ಭಿಕ ಚಿತ್ರ


ರಾತ್ರಿ ನಡೆದಿದ್ದೇನು?


ವೈದ್ಯೆ ತನ್ನ ಮೊಬೈಲ್​​ನಲ್ಲಿ ವಿಡಿಯೋ ಮಾಡಿ, ಇನ್​ಸ್ಟಾದಲ್ಲಿ ಅಪ್​ಲೋಡ್ ಮಾಡಿದ್ದಾರೆ. ಇನ್ನು, ವಿಡಿಯೋದಲ್ಲಿ ಕೇರಳದ ಮೂಲದ ಯುವತಿ ಮಾತನಾಡುತ್ತಾ, ನಾನು ಜೀವನೋಪಾಯಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ನನ್ನಲ್ಲಿರುವ ಸ್ಕಿಲ್​​ನಿಂದ ಇಲ್ಲಿವರೆಗೂ ಬಂದಿದ್ದೇನೆ ಹೇಳುತ್ತಿದ್ದು, ಆ ವೇಳೆ ಮೊಬೈಲ್ ಕ್ಯಾಮೆರಾ ಬಳಿ ಯುವತಿಯ ಕೈ ಸಮೀಪಿಸುತ್ತಿದ್ದಂತೆ ವಿಡಿಯೋ ಅಂತ್ಯವಾಗಿದೆ. ಈ ಸನ್ನಿವೇಶದ ಬಳಿ ಯುವತಿ, ವೈದ್ಯೆ ಮೇಲೆ ಹಲ್ಲೆ ಮಾಡಿದ್ದಾಳೆ ಎನ್ನಲಾಗಿದೆ.


ಮಧ್ಯರಾತ್ರಿ ವಿಡಿಯೋ ಕಾಲ್, ಜೋರಾಗಿ ಮಾತನಾಡುತ್ತಾ ಕಿರುಕುಳ


ಈ ಕುರಿತಂತೆ ವೈದ್ಯೆ ಪಿಜಿ ವಾರ್ಡನ್​ಗೆ ಪತ್ರ ಬರೆದಿದ್ದು, ನನ್ನ ರೂಮ್‌ಮೇಟ್ ಮಧ್ಯರಾತ್ರಿಯಲ್ಲಿ ವೀಡಿಯೊ ಕರೆಗಳಲ್ಲಿ ಜೋರಾಗಿ ಮಾತನಾಡುತ್ತಾಳೆ. ಇದರಿಂದ ನನಗೆ ನಿದ್ರೆ ಮಾಡಲು ಆಗುತ್ತಿಲ್ಲ. ಇದರಿಂದ ನನ್ನ ಫ್ರೈವೇಸಿಗೆ ಧಕ್ಕೆಯಾಗುತ್ತಿದೆ. ವೈದ್ಯೆಯಾಗಿ ತಾನು ಬೆಳಗ್ಗೆ 8 ರಿಂದ ರಾತ್ರಿ 9:30 ರವರೆಗೆ ಕೆಲಸ ಮಾಡಬೇಕು ಮತ್ತು ರಾತ್ರಿ 11 ಗಂಟೆಯ ವೇಳೆಗೆ ಮಲಗುತ್ತೇನೆ. ಆದರೆ, ರೂಮ್‌ಮೇಟ್‌ಗೆ ಫೋನ್‌ನಲ್ಲಿ ಜೋರಾಗಿ ಮಾಡಬೇಡಿ ಎಂದು ಹೇಳಿದ್ದರೂ ಸಹ ಆಕೆಗೆ ಪದೇ ಪದೇ ಸಮಸ್ಯೆ ಮಾಡುತ್ತಿದ್ದಾಳೆ.


What kind of pictures to send your boyfriend
ಸಾಂದರ್ಭಿಕ ಚಿತ್ರ


ಇದನ್ನೂ ಓದಿ: Bengaluru: ಬ್ರಿಗೇಡ್ ರೋಡ್​​ನಲ್ಲಿ ಏಕಾಏಕಿ ಬಾಯ್ತೆರೆದ ರಸ್ತೆ; ಹಳಕ್ಕೆ ಬಿದ್ದು ಇಬ್ಬರು ಬೈಕ್​ ಸವಾರರಿಗೆ ಗಾಯ


ಜನವರಿ 10 ರಂದು ಕೂಡ, ಮಧ್ಯರಾತ್ರಿ 2 ರಿಂದ 3 ಗಂಟೆಯ ನಡುವೆ ಆಕೆ ಜೋರಾಗಿ ಫೋನ್​ನಲ್ಲಿ ಮಾತನಾಡಿದ್ದಳು. ಇನ್ನೊಬ್ಬ ವ್ಯಕ್ತಿಯೊಂದಿಗೆ ವೀಡಿಯೊ ಕರೆಯಲ್ಲಿ ಮಾತನಾಡುತ್ತಿದ್ದಳು. ಅಲ್ಲದೇ ನಾನು ರಾತ್ರಿಯ ಬಟ್ಟೆಯಲ್ಲಿ ಮಲಗಿರುವ ವೇಳೆ ವಿಡಿಯೋ ಕಾಲ್‌ನಲ್ಲಿ ಅಸಭ್ಯವಾಗಿ ತೋರಿಸಿದ್ದಳು. ಇದನ್ನು ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ಮಾತನಾಡಿ ಬೆದರಿಕೆ ಹಾಕಿದ್ದಾಳೆ ಎಂದು ಆರೋಪಿಸಿದ್ದಾರೆ.


ಪೊಲೀಸ್ ಠಾಣೆಯಲ್ಲಿ ದೂರು ದಾಖಲು


ಇನ್ನು, ವಿಡಿಯೋವನ್ನು ವೈದ್ಯೆಗೆ ತಿಳಿದಿರುವ ಸ್ನೇಹಿತರು ಇನ್​​ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ. ಹಲ್ಲೆ ಬಳಿಕ ಗುರುವಾರ ಮಧ್ಯಾಹ್ನ ವೈದ್ಯೆ ಆಸ್ಪತ್ರೆ ತೆರಳಿದ್ದು, ಪರೀಕ್ಷೆ ವೇಳೆ ತಲೆಗೆ ಪೆಟ್ಟಾಗಿರುವ ಬಗ್ಗೆ ವೈದ್ಯರು ವರದಿ ನೀಡಿದ್ದಾರೆ. ಘಟನೆ ಸಂಬಂಧ ವೈದ್ಯೆ, ಮೈಕೋ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಐಪಿಸಿ 153 ಎ ಸೇರಿದಂತೆ ವಿವಿಧ ಸೆಕ್ಷನ್​ಗಳಲ್ಲಿ ಪೊಲೀಸರು ಮಹಿಳೆ ವಿರುದ್ಧ ದೂರು ದಾಖಲಿಸಿ ವಿಚಾರಣೆ ನಡೆಸಿದ್ದಾರೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು