Death: ಸಾಂಬಾರ್‌ ಪಾತ್ರೆಯಲ್ಲಿ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು! ಹೇಗೆ ನಡೆಯಿತು ಗೊತ್ತಾ ಘೋರ ದುರಂತ?

ಬಿಸಿ ಸಾಂಬಾರು ಪಾತ್ರೆಗೆ ಬಿದ್ದ ಅಗ್ನೇಸ್ ಪ್ರಮಿಳಾ ಜೋರಾಗಿ ಕೂಗಿಕೊಂಡಿದ್ದಾರೆ. ಆಗ ಶಾಲೆಯ ಇತರೇ ಸಿಬ್ಬಂದಿ, ಶಿಕ್ಷಕರು, ಅಕ್ಕಪಕ್ಕದ ನಿವಾಸಿಗಳೆಲ್ಲ ಬಂದು, ಅವರನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಪ್ರಮಿಳಾ ಡಿಸೋಜಾ ಗಂಭೀರವಾಗಿ ಗಾಯಗೊಂಡಿದ್ದರು.

ಮೃತ ಮಹಿಳೆ

ಮೃತ ಮಹಿಳೆ

  • Share this:
ಪುತ್ತೂರು, ದಕ್ಷಿಣ ಕನ್ನಡ: ಶಾಲೆಯಲ್ಲಿ (School) ಬಿಸಿಯೂಟ (Bisi Oota) ತಯಾರಿಸೋದು ಎಷ್ಟು ಕಷ್ಟ ಅಂತ ಅಲ್ಲಿ ಅಡುಗೆ (Meals) ತಯಾರಿ ಮಾಡುವ ಕಾರ್ಯಕರ್ತೆಯರಿಗೇ (Workers) ಗೊತ್ತು. ಅದರಲ್ಲೂ ಎಷ್ಟೋ ಬಾರಿ ಅವಘಡಗಳು (Accidents) ನಡೆಯುತ್ತವೆ. ಇದೀಗ ಬಿಸಿಯೂಟ ತಯಾರಿಸುವ ವೇಳೆ ಮಹಿಳೆಯೊಬ್ಬಳು (Women) ಆಕಸ್ಮಿಕವಾಗಿ ಕಾಲು ಜಾರಿ ಕುದಿಯುತ್ತಿರುವ ಬಿಸಿ ಬಿಸಿ (Hot Hot) ಸಾಂಬಾರು ಪಾತ್ರೆಗೆ (Sambar Vessel) ಬಿದ್ದಿದ್ದಾಳೆ. ಆದರೆ ಆಸ್ಪತ್ರೆಗೆ ದಾಖಲಿಸಿ (Hospital) ಚಿಕಿತ್ಸೆ (Treatment) ನೀಡಿದರೂ ಫಲ ಕೊಡಲಿಲ್ಲ. ಇದೀಗ ಚಿಕಿತ್ಸೆ ಫಲಿಸದೇ ಗಾಯಾಳು ಮಹಿಳೆ ಸಾವನ್ನಪ್ಪಿದ್ದಾರೆ (Dead).  ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು ನಗರ (Puttur City) ಪೊಲೀಸ್ ಠಾಣಾ ವ್ಯಾಪ್ತಿಯ (Police Station Limit) ಸೈಂಟ್ ವಿಕ್ಟರ್ ಶಾಲೆಯಲ್ಲಿ (Saint Victor School) ನಡೆದಿದೆ.

ಕುದಿಯುತ್ತಿರುವ ಸಾಂಬಾರು ಪಾತ್ರೆಯಲ್ಲಿ ಬಿದ್ದ ಮಹಿಳೆ

ಶಾಲೆಯಲ್ಲಿ ಬಿಸಿಯೂಟ ತಯಾರಿಸುತ್ತಿದ್ದ ವೇಳೆ ಸಾಂಬಾರ್‌ ಪಾತ್ರೆಗೆ ಕಾಲು ಜಾರಿ ಬಿದ್ದ ಮಹಿಳೆಯೋರ್ವರು, ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಘಟನೆ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೈಂಟ್ ವಿಕ್ಟರ್ ಶಾಲೆಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಅಗ್ನೆಸ್ 37 ವರ್ಷದ ಪ್ರಮೀಳಾ ಡಿಸೋಜಾ ಎಂದು ಗುರುತಿಸಲಾಗಿದೆ.

ಮೇ 30ರಂದು ಶಾಲೆಯಲ್ಲಿ ನಡೆದಿದ್ದ ಅವಘಡ

ಕಳೆದ ಮೇ 30ರಂದು ಪುತ್ತೂರು ನಗರದ ಸೈಂಟ್ ವಿಕ್ಟರ್ ಶಾಲೆಯಲ್ಲಿ ಈ ಅವಘಡ ನಡೆದಿತ್ತು. ಅಗ್ನೇಸ್ ಪ್ರಮೀಳಾ ಡಿಸೋಜಾ ಅವರು ಪುತ್ತೂರು ಕಸ್ಬಾ ಗ್ರಾಮದ ಸೈಂಟ್ ವಿಕ್ಟರ್ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಮೇ.30 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಶಾಲೆಯ ಅಡುಗೆ ಮನೆಯಲ್ಲಿ ಸಾಂಬಾರು ತಯಾರು ಮಾಡಿ, ಅದನ್ನು ಬಾಗಿಲ ಬಳಿಯಲ್ಲೇ ಇಟ್ಟಿದ್ದರು. ಆಗ ಪ್ರಮಿಳಾ ಅವರು ಆಕಸ್ಮಿಕವಾಗಿ ಕಾಲು ಜಾರಿ ಬಿಸಿ ಸಾಂಬಾರು ಪಾತ್ರೆಗೆ ಬಿದ್ದಿದ್ದಾರೆ. ಈ ವೇಳೆ ಪ್ರಮಿಳಾ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: Murder Case: ಪತ್ನಿಯ ಸ್ನೇಹಿತೆ ಜೊತೆ ಅಫೇರ್; ಲಾಡ್ಜ್​ಗೆ ಕರೆದೊಯ್ದು ಕೊಂದೇ ಬಿಟ್ಟ; ಹೆಂಡತಿಯೇ ಕೊಟ್ಲಾ ಸಾಥ್​?

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಬಿಸಿ ಸಾಂಬಾರು ಪಾತ್ರೆಗೆ ಬಿದ್ದ ಅಗ್ನೇಸ್ ಪ್ರಮಿಳಾ ಜೋರಾಗಿ ಕೂಗಿಕೊಂಡಿದ್ದಾರೆ. ಆಗ ಶಾಲೆಯ ಇತರೇ ಸಿಬ್ಬಂದಿ, ಶಿಕ್ಷಕರು, ಅಕ್ಕಪಕ್ಕದ ನಿವಾಸಿಗಳೆಲ್ಲ ಬಂದು, ಅವರನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಪ್ರಮಿಳಾ ಡಿಸೋಜಾ ಗಂಭೀರವಾಗಿ ಗಾಯಗೊಂಡಿದ್ದರು ಎನ್ನಲಾಗಿದೆ. ಆಗ ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಿಸದೇ ಇಂದು ಪ್ರಮಿಳಾ ಸಾವು

ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರಮಿಳಾ ಡಿಸೋಜಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರು ಅವರನ್ನು ಉಳಿಸಲು ಸತತ ಪ್ರಯತ್ನ ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಮಿಳಾ ಇಂದು ಮೃತಪಟ್ಟಿದ್ದಾರೆ. ಇನ್ನು ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: KIMSನಲ್ಲಿ ಮಗು ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಬೆಳ್ಳಂಬೆಳಗ್ಗೆ ಆಸ್ಪತ್ರೆ ಆವರಣದಲ್ಲಿ ಪತ್ತೆಯಾದ ಕಂದಮ್ಮ

ಗ್ಯಾಸ್ ಸಿಲಿಂಡರ್ ಸ್ಪೋಟದಿಂದ ಇಬ್ಬರಿಗೆ ಗಾಯ

ಮತ್ತೊಂದು ಪ್ರಕರಣದಲ್ಲಿ ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಉಡುಪಿಯ ಮೂಡುಬೆಟ್ಟುವಿನಲ್ಲಿ ನಡೆದಿದೆ. ಮೂಡಬೆಟ್ಟುವಿನ ಗೋಪಾಲ ಎಂಬವರ ಮನೆಯಲ್ಲಿ ಅಡುಗೆ ಕೋಣೆಯಲ್ಲಿದ್ದ ಸಿಲಿಂಡರ್ ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಸಿಲಿಂಡರ್ ಸ್ಪೋಟಗೊಂಡು ಬೆಂಕಿ ಮನೆಯಲ್ಲ ಹರಡಿದೆ. ಸಿಲಿಂಡರ್ ಗೆ ಬೆಂಕಿ ಹಿಡಿಯುತ್ತಿದ್ದಂತೆ ಮನೆಯವರು ಹೊರಗೆ ಓಡಿ ಹೋಗಿದ್ದು, ದೊಡ್ಡ ಅವಘಡ ತಪ್ಪಿದೆ.
Published by:Annappa Achari
First published: