• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Road Accident: ಸಿಮೆಂಟ್​ ತುಂಬಿದ ಲಾರಿ ಹರಿದು ಮಹಿಳೆ ತಲೆ ಛಿದ್ರ ಛಿದ್ರ! ಅದೃಷ್ಟವಶಾತ್ ಮೃತಳ ತಾಯಿ-ಮಗು ಸೇಫ್

Road Accident: ಸಿಮೆಂಟ್​ ತುಂಬಿದ ಲಾರಿ ಹರಿದು ಮಹಿಳೆ ತಲೆ ಛಿದ್ರ ಛಿದ್ರ! ಅದೃಷ್ಟವಶಾತ್ ಮೃತಳ ತಾಯಿ-ಮಗು ಸೇಫ್

ಮೃತ ಮಹಿಳೆ ಅನುಷಾ

ಮೃತ ಮಹಿಳೆ ಅನುಷಾ

ಅಪಘಾತದ ಬೆನ್ನಲ್ಲೇ ಚಲಿಸುತ್ತಿದ್ದ ಲಾರಿಯನ್ನು ಬಿಟ್ಟು ಚಾಲಕ ಸ್ಥಳದಿಂದ ಎಸ್ಕೇಪ್​ ಆಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ರಾಜಧಾನಿ ಬೆಂಗಳೂರಿನ (Bengaluru) ನಾಯಂಡಹಳ್ಳಿ ಜಂಕ್ಷನ್ (Nayanda Halli) ಬಳಿ ಭೀಕರ ಅಪಘಾತ ಸಂಭವಿಸಿದ್ದು, ಲಾರಿಯೊಂದು (Lorry) ಬೈಕ್​​ಗೆ (Bike) ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು (Woman) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮತ್ತಿಬ್ಬರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ವೇಗವಾಗಿ ಬಂದ ಲಾರಿ, ಬೈಕ್​ ಹಾಗೂ ಕೆಎಸ್​ಆರ್​ಟಿಸಿ ಬಸ್ (KSRTC Bus)​ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಬ್ಯಾಟರಾಯನಪುರ (Byatarayanapura) ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಹಿಳೆಯನ್ನು 34 ವರ್ಷದ ಅನುಷಾ ಎಂದು ಗುರುತಿಸಲಾಗಿದೆ.


ಮೃತ ಮಹಿಳೆ ಅನುಷಾ ಮೈಸೂರು ರಸ್ತೆಯಲ್ಲಿ ತಮ್ಮ ತಾಯಿ ಮಂಜುಮ್ಮ ಹಾಗೂ ಮಗು ಜೊತೆ ಬೈಕ್​​ನಲ್ಲಿ ಚಲಿಸುತ್ತಿದ್ದ ಸಂದರ್ಭದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಲಾರಿ ಚಾಲಕನ ಅಜಾಗರೂಕತೆ ಮತ್ತು ಅತಿವೇಗದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.


ಅಪಘಾತದ ದೃಶ್ಯ


ಇದನ್ನೂ ಓದಿ: Crime News: ಕೇವಲ 5 ರೂಪಾಯಿಗಾಗಿ 8 ವರ್ಷದ ಬಾಲಕನ ಹತ್ಯೆ! ತಲೆ ಮೇಲೆ ಕಲ್ಲು ಎತ್ತಿಹಾಕಿದ್ದ ಆರೋಪಿ ಅರೆಸ್ಟ್


ನಾಯಂಡಹಳ್ಳಿ ಫ್ಲೈಓವರ್ ಮೇಲಿಂದ ವೇಗವಾಗಿ ಬರುತ್ತಿದ್ದ ಸಿಮೆಂಟ್ ಚೀಲ ತುಂಬಿದ್ದ ಲಾರಿ ಬೈಕ್​ಗೆ ಡಿಕ್ಕಿಯಾಗಿದೆ. ಕೂಡಲೇ ಹೆದರಿಕೊಂಡ ಲಾರಿ ಚಾಲಕ, ಚಲಿಸುತ್ತಿದ್ದ ಲಾರಿಯನ್ನು ನಡುರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಈ ವೇಳೆ ಸಮಯಪ್ರಜ್ಞೆ ಮೆರೆದ ಕೆಎಸ್ಆರ್ ಟಿಸಿ ಬಸ್ ಚಾಲಕ ಲಾರಿಗೆ ಬಸ್​ ಅಡ್ಡ ನಿಲ್ಲಿಸಿ ತಡೆದಿದ್ದಾರೆ.


ಅಪಘಾತ ಸಂಭವಿಸಿ ಅರ್ಧ ಗಂಟೆಯಾದರೂ ಪೊಲೀಸರು ಸ್ಥಳಕ್ಕೆ ಬರಲಿಲ್ಲ ಎಂದು ಸ್ಥಳೀಯ ಆಕ್ರೋಶ ಹೊರ ಹಾಕಿದ್ದರು. ಅಲ್ಲದೆ ರಸ್ತೆ ತಡೆ ನಡೆಸಿದ್ದರು. ಆ ವೇಳೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯನ್ನ ಚದುರಿಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರು. ಅಪಘಾತ ಎಸಗಿದ ಲಾರಿ ಹಾಗೂ ಕೆಎಸ್​ಆರ್​ಡಿಸಿ ಬಸ್​​ಅನ್ನು ಪೊಲೀಸರು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ: Siddaramaiah: ಕಾಂಗ್ರೆಸ್‌ನಲ್ಲಿ ಸಿದ್ದು ಮೂಲೆ ಗುಂಪು ಮಾಡುವ ಹುನ್ನಾರ ನಡೀತಿದ್ಯಾ? ಹೈಕಮಾಂಡ್‌ಗೆ ರಮೇಶ್ ಕುಮಾರ್ ವಾರ್ನಿಂಗ್

top videos


  ಘಟನೆಯಲ್ಲಿ ಗಾಯಗೊಂಡಿರುವ ಅಜ್ಜಿ ಮಂಜುಮ್ಮ ಹಾಗೂ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದ್ದಾರೆ. ಲಾರಿ ಚಾಲಕ ಸ್ಕೂಟರ್​ ಡಿಕ್ಕಿ ಹೊಡೆದು ಪರಾರಿಯಾಗುತ್ತಿದ್ದನ್ನು ಗಮನಿಸಿ ಕೆಎಸ್​ಆರ್​ಟಿಸಿ ಬಸ್ ಚಾಲಕ ನಂದೀಶ್​ ಗಮನಿಸಿ ಬಸ್​ಅನ್ನು ಲಾರಿಗೆ ಅಡ್ಡಲಾಗಿ ನಿಲ್ಲಿಸಿ ಮುಂದಕ್ಕೆ ಹೋಗದಂತೆ ತಡೆದಿದ್ದಾರೆ. ಮೃತ ಅನುಷಾ ಮಂಡ್ಯ ಮೂಲದವರಾಗಿದ್ದು, ಅತ್ತಿಗುಪ್ಪೆಯಲ್ಲಿ ವಾಸಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು