• Home
  • »
  • News
  • »
  • state
  • »
  • M P Kumaraswamy: ಸಾಂತ್ವನ ಹೇಳಲು ಹೋದ ಶಾಸಕರಿಗೆ ಹೊಡೆದ್ರಾ ಜನ? ಹರಿದ ಅಂಗಿಯಲ್ಲಿ ಎಂಪಿ ಕುಮಾರಸ್ವಾಮಿ ಪ್ರತ್ಯಕ್ಷ!

M P Kumaraswamy: ಸಾಂತ್ವನ ಹೇಳಲು ಹೋದ ಶಾಸಕರಿಗೆ ಹೊಡೆದ್ರಾ ಜನ? ಹರಿದ ಅಂಗಿಯಲ್ಲಿ ಎಂಪಿ ಕುಮಾರಸ್ವಾಮಿ ಪ್ರತ್ಯಕ್ಷ!

ಶಾಸಕ ಎಂ.ಪಿ ಕುಮಾರಸ್ವಾಮಿ

ಶಾಸಕ ಎಂ.ಪಿ ಕುಮಾರಸ್ವಾಮಿ

ಶಾಸಕರು ಆನೆ ಸಾಕಿದ್ದಾರೆ ಎಂದು ಜನರು ನನ್ನನ್ನು ಹೊಡೆದು ಕಳುಹಿಸಿದ್ದಾರೆ. ಸಂಚು ಮಾಡಿ ಹಲ್ಲೆ ಮಾಡಿದ್ರು, ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಶಾಸಕ ಎಂ.ಪಿ ಕುಮಾರಸ್ವಾಮಿ ಆರೋಪಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಚಿಕ್ಕಮಗಳೂರು (ನ.20): ಕಾಡಾನೆ ದಾಳಿಗೆ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜನರ ಆಕ್ರೋಶದ ಕಟ್ಟೆ ಒಡೆದಿದ್ದು, ಸ್ಥಳಕ್ಕೆ ಬಂದ ಶಾಸಕ ಎಂ.ಪಿ ಕುಮಾರಸ್ವಾಮಿ (MP Kumaraswamy) ವಿರುದ್ಧ ಆಕ್ರೋಶ ಹೊರಹಾಕಿದ ಸಾರ್ವಜನಿಕರು, ಶಾಸಕರಿಗೆ ಹೊಡೆದು, ಅವರ ಬಟ್ಟೆಯನ್ನು ಹರಿದು ಹಾಕಿರುವ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ (Mudigere) ತಾಲೂಕಿನ ಕುಂದೂರಿನಲ್ಲಿ ನಡೆದಿದೆ. ಹರಿದ ಬಟ್ಟೆಯಲ್ಲಿ ಹೇಳಿಕೆ ನೀಡಿರುವ ಶಾಸಕ ಎಂ.ಪಿ. ಕುಮಾರಸ್ವಾಮಿ, ಇದರಲ್ಲಿ ಬೇಕು ಅಂತ ಕೆಲವರು ಗುಂಪು (Grou[) ಮಾಡಿಕೊಂಡು ಹಲ್ಲೆ (Assault) ಮಾಡಿದ್ದಾರೆ ಎಂದು ಹೇಳಿದ್ದಾರೆ. 


ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ


ಶಾಸಕರು ಆನೆ ಸಾಕಿದ್ದಾರೆ ಎಂದು ಜನರು ಹೊಡೆದು ಕಳುಹಿಸಿದ್ದಾರೆ. ಸಂಚು ಮಾಡಿ ಹಲ್ಲೆ ಮಾಡಿದ್ರು, ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಶಾಸಕ ಎಂ.ಪಿ ಕುಮಾರಸ್ವಾಮಿ ಆರೋಪಿದ್ದಾರೆ.


ಶಾಸಕ ಎಂ.ಪಿ ಕುಮಾರಸ್ವಾಮಿ


ಪೊಲೀಸರು ಮಿಸ್ ಗೈಡ್ ಮಾಡಿದ್ರು


ನಾನು ಅಲ್ಲೆ ಇರ್ತಿದ್ದೆ ಪೊಲೀಸರು ಮಿಸ್ ಗೈಡ್ ಮಾಡಿ ಹೊರಗೆ ಕಳುಹಿಸಿದ್ರು. ಸಾರ್ವಜನಿಕರ ಸೇವೆ ಮಾಡಲು ಇರೋರು ಎಲ್ಲ ತಾಗ್ಯಕ್ಕೂ ರೆಡಿ ಇರ್ತೀವಿ. ಆ ಜಾಗ ಬಿಟ್ಟು ನಾನು ಕದಲ್ತಾ ಇರ್ಲಿಲ್ಲ ಎಂದು ಮೂಡಿಗೆರೆ ಶಾಸಕ ಎಂ. ಪಿ.ಕುಮಾರಸ್ವಾಮಿ ಹೇಳಿದ್ದಾರೆ.


ಕಾಡಾನೆ ತುಳಿದು ಮಹಿಳೆ ಸಾವು


ಹುಲ್ಲೆ ಮನೆ ಕುಂದೂರಿನಲ್ಲಿ ಕಾಡಾನೆ ತುಳಿದು ಮಹಿಳೆ ಸಾವನ್ನಪ್ಪಿದ್ದ ಪ್ರಕರಣ ನಡೆದಿದೆ. ಮಹಿಳೆಯ ಶವ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಲಾಠಿಚಾರ್ಜ್ ಕೂಡ ಮಾಡಿದ್ರು. ಬೆಳಗ್ಗೆ 7.30ಕ್ಕೆ ಕಾಡಾನೆ ತುಳಿದು ಮಹಿಳೆ ಸಾವನ್ನಪ್ಪಿದ್ದಾಳೆ.


ಗ್ರಾಮಸ್ಥರು ಹಾಗೂ ಶಾಸಕರ ನಡುವೆ ಮಾತಿನ ಚಕಮಕಿ


ಸಂಜೆ 6 ಗಂಟೆಗೆ ಗ್ರಾಮಕ್ಕೆ ತೆರಳಿದ ಶಾಸಕ ಎಂ ಪಿ ಕುಮಾರಸ್ವಾಮಿ ನಡೆಯನ್ನ  ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಗ್ರಾಮಸ್ಥರು ಹಾಗೂ ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪ್ರತಿಭಟನಾಕಾರರು ಶಾಸಕ ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡ್ರು.


ಗ್ರಾಮದಲ್ಲಿ ಬಿಗುವಿನ ವಾತಾವರಣ


ಪ್ರಶ್ನೆ ಮಾಡಿದ ಜನರ ಮೇಲೆ ಪೊಲೀಸರು ಲಾಠಿ ಬೀಸಿದ್ರು. ಈ ವೇಳೆ ಪೊಲೀಸರ ಕ್ರಮಕ್ಕೆ ಖಂಡನೆ ವ್ಯಕ್ತವಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮದಿಂದ ಜೀಪ್​ನಲ್ಲಿ ಕೂರಿಸಿಕೊಂಡು ಶಾಸಕರನ್ನು  ಪೊಲೀಸರು ಕರೆತಂದಿದ್ದಾರೆ.


ಆನೆ ದಾಳಿ ಮಹಿಳೆ ಸಾವು


ಚಿಕ್ಕಮಗಳೂರು (ನ.20): ಹುಲ್ಲು ಕೊಯ್ಯುತ್ತಿದ್ದ ಮಹಿಳೆ (Women) ಮೇಲೆ ಕಾಡಾನೆಯೊಂದು ಹಲ್ಲೆ ನಡೆಸಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟ (Death) ಘಟನೆ ಮೂಡಿಗೆರೆ ತಾಲೂಕಿನ ಹುಲ್ಲೆಮನೆ ಕುಂದೂರಿನಲ್ಲಿ ನಡೆದಿದೆ. ಹುಲ್ಲೆಮನೆ ಗ್ರಾಮದ ಶೋಭಾ (Sobha) (45) ಕಾಡಾನೆ ದಾಳಿಗೆ ಮೃತಪಟ್ಟ ದುರ್ದೈವಿ. ಶೋಭಾ ಅವರು ಎಂದಿನಂತೆ ಭಾನುವಾರ ಕೂಡ ಬೆಳಗ್ಗೆ 7 ಗಂಟೆಗೆ ಮನೆಯಲ್ಲಿ (House) ಸಾಕಿದ ಹಸುವಿನಿಂದ ಹಾಲು (Milk) ಕರೆದು ಅದನ್ನು ಗ್ರಾಮದ ಕೆಲ ಮನೆಗೆ ವಿತರಿಸಿ ತನ್ನ ಪತಿ ಸತೀಶ್‍ಗೌಡ (Sathish) ಅವರೊಂದಿಗೆ ಅಡಕೆ ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ದರು.


ಇದನ್ನೂ ಓದಿ: Robbery: ಚಿನ್ನದ ವರ್ತಕನನ್ನು ಬೆದರಿಸಿ ಪೊಲೀಸರಿಂದಲೇ ದರೋಡೆ! ಠಾಣಾಧಿಕಾರಿ ಸೇರಿ ನಾಲ್ವರು ಎಸ್ಕೇಪ್​


ಜತೆಗೆ ಗ್ರಾಮದ ವಿಜಯ ಎಂಬುವರು ಕೂಡ ಆ ಸ್ಥಳದಲ್ಲೇ ಹುಲ್ಲು ಕೊಯ್ಯುತ್ತಿದ್ದರು. ದಿಢೀರ್ ಎಂಬಂತೆ ಕಾಡಾನೆ ಪ್ರತ್ಯಕ್ಷವಾಗಿದ್ದು, ವಿಜಯ ಎಂಬುವರ ಸಾಕು ನಾಯಿ ಅಲ್ಲಿಯೇ ಇದದ್ದರಿಂದ ಕಾಡಾನೆ ನಾಯಿ ಬೆರೆಸುವ ಸಮಯದಲ್ಲಿ ವಿಜಯ ಹಾಗೂ ಸತೀಶ್‍ಗೌಡ ತಪ್ಪಿಸಿಕೊಂಡಿದ್ದಾರೆ.

Published by:ಪಾವನ ಎಚ್ ಎಸ್
First published: