• Home
  • »
  • News
  • »
  • state
  • »
  • Chikkaballapur: ಪತ್ನಿಗೆ ಪ್ರೇಯಸಿ ಜೊತೆಗಿನ ಫೋಟೋ ಕಳುಹಿಸಿದ ಗಂಡ; ಡೆತ್​ನೋಟ್ ಬರೆದು ಹೆಂಡ್ತಿ ಆತ್ಮಹತ್ಯೆ

Chikkaballapur: ಪತ್ನಿಗೆ ಪ್ರೇಯಸಿ ಜೊತೆಗಿನ ಫೋಟೋ ಕಳುಹಿಸಿದ ಗಂಡ; ಡೆತ್​ನೋಟ್ ಬರೆದು ಹೆಂಡ್ತಿ ಆತ್ಮಹತ್ಯೆ

ಮೋನಿಕಾ ಮತ್ತು ಭಾರ್ಗವ್

ಮೋನಿಕಾ ಮತ್ತು ಭಾರ್ಗವ್

ಪತಿಯ ರಂಗಿನ ಆಟದ ಫೋಟೋ ನೋಡಿದ ಮೋನಿಕಾ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • News18 Kannada
  • Last Updated :
  • Chikkaballapura (Chik Ballapur), India
  • Share this:

ಪತಿ ಎಷ್ಟೇ ತಪ್ಪು ಮಾಡಿದ್ರೂ ಮಹಿಳೆ (Woman) ಕ್ಷಮಿಸುತ್ತಾಳೆ ಎಂಬ ಮಾತಿದೆ. ಪತಿ (Husband) ನಿರುದ್ಯೋಗಿಯಾದರೂ ಮಹಿಳೆ ಇರೋದರಲ್ಲಿಯೇ ಸಂಸಾರ ನಡೆಸುವ ಜಾಣೆ. ಆದರೆ ಅನೈತಿಕ ಸಂಬಂಧ (Illicit Relationship) ವಿಷಯ ಬಂದ್ರೆ ಮಹಿಳೆ ಇದನ್ನು ಎಂದೂ ಒಪ್ಪಿಕೊಳ್ಳಲ್ಲ. ಇಂತಹ ಕೆಲ ಪ್ರಕರಣಗಳಲ್ಲಿ ಮಹಿಳೆ ಪತಿಯಿಂದಲೇ ದೂರವಾಗಲು ನಿರ್ಧರಿಸುತ್ತಾರೆ. ಇನ್ನೂ ಕೆಲವು ಪ್ರಕರಣಗಳು ದುರಂತದಲ್ಲಿ ಅಂತ್ಯಗೊಳ್ಳುತ್ತವೆ. ಇಬ್ಬರಲ್ಲಿ ಯಾರೇ ನಂಬಿಕೆ ದ್ರೋಹ ಮಾಡಿದ್ರೆ ಸಂಸಾರ ಬಂಡಿಯ ತಾಳ ತಪ್ಪೋದುಂಟು. ಇಂತಹವುದೇ ಒಂದು ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪತಿಯೋರ್ವ ಪತ್ನಿಗೆ (Husband And Wife Relationship) ತನ್ನ ಗೆಳತಿ ಜೊತೆಗಿನ ಫೋಟೋ (Photos) ಕಳುಹಿಸಿದ್ದಾನೆ. ಫೋಟೋ ನೋಡುತ್ತಿದ್ದಂತೆ ನೊಂದ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.


ಈ ಘಟನೆ ನಡೆದಿರೋದು ಚಿಕ್ಕಬಳ್ಳಾಪುರ ತಾಲೂಕಿನ ಹೆಣ್ಣೂರು ಕದಿರೇನಹಳ್ಳಿಯಲ್ಲಿ ನಡೆದಿದೆ. 22 ವರ್ಷದ ಮೋನಿಕಾ ಆತ್ಮಹತ್ಯೆಗೆ ಶರಣಾದ ಮಹಿಳೆ. ಎಂಟು ತಿಂಗಳ ಹಿಂದೆ ಮೋನಿಕಾ ಮದವೆ ಪ್ರಶಾಂತ ನಗರದ ಭಾರ್ಗವ್ ಎಂಬಾತನ ಜೊತೆ ಮದುವೆ ಮಾಡಿಕೊಡಲಾಗಿತ್ತು.


ಪತ್ನಿಗೆ ಫೋಟೋ ಕಳುಹಿಸಿದ ಭಾರ್ಗವ್


ಕೆಲ ದಿನಗಳ ಪತ್ನಿ ಮೋನಿಕಾಳನ್ನು ತವರಿಗೆ ಕಳುಹಿಸಿದ್ದ ಭಾರ್ಗವ್ ಪ್ರೇಯಸಿಯ ಸಂಪರ್ಕ ಬಂದಿದ್ದನು. ಇತ್ತ ಗೆಳತಿಯ ಜೊತೆ ಪ್ರವಾಸಕ್ಕೆ ತೆರಳಿದ್ದನು. ಆದರೆ ಪ್ರೇಯಸಿ ಜೊತೆ ಕ್ಲಿಕ್ಕಿಸಿಕೊಂಡಿದ್ದ ಪೋಟೋಗಳನ್ನು ಪತ್ನಿ ಮೋನಿಕಾಗೆ ಕಳುಹಿಸಿದ್ದಾನೆ.


ಡೆತ್ ನೋಟ್ ಬರೆದು ಆತ್ಮಹತ್ಯೆ


ಪತಿಯ ರಂಗಿನ ಆಟದ ಫೋಟೋ ನೋಡಿದ ಮೋನಿಕಾ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


https://kannada.news18.com/news/state/dakshina-kannada-aryapu-gram-panchayat-using-solar-system-for-water-supplying-akp-mrq-862268.html
ಸಾಂದರ್ಭಿಕ ಚಿತ್ರ


ವೈದ್ಯೆಯ ನಿರ್ಲಕ್ಷ್ಯಕ್ಕೆ ಮಹಿಳೆ ಸಾವು; ಕುಟುಂಬಸ್ಥರ ಆರೋಪ


Doctor Negligence: ವೈದ್ಯೆಯ ನಿರ್ಲಕ್ಷ್ಯಕ್ಕೆ ಮಹಿಳೆ (Woman Death) ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ. ಮೃತ ಮಹಿಳೆಯ ಕುಟುಂಬಸ್ಥರು ಶವವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಆಸ್ಪತ್ರೆಯ (Chintamani Hospital) ಮುಂದೆ ಇರಿಸಿ ಪ್ರತಿಭಟನೆ ನಡೆಸಿದ್ದು, ವೈದ್ಯೆಯನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.


ಹೆರಿಗೆ ಬಳಿಕ ಸರಿಯಾಗಿ ಹೊಲಿಗೆ ಹಾಕದ ಪರಿಣಾಮ ಮಹಿಳೆಯ ಸಾವು ಆಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಚಿಂತಾಮಣಿ ತಾಲೂಕಿನ ನೀಲಪಲ್ಲಿ ಗ್ರಾಮದ ನೇತ್ರಾವತಿ ಮಹಿಳೆ. ಕೆಲ ದಿನಗಳ ಹಿಂದೆ ನೇತ್ರಾವತಿ ಹೆರಿಗೆಗಾಗಿ (Baby Delivery) ಆಸ್ಪತ್ರೆಗೆ ದಾಖಲಾಗಿದ್ದರು.


ಕಿಡ್ನಿ ಮತ್ತು ನರದೌರ್ಬಲ್ಯದಿಂದ ಸಾವು


ಸಿಜೇರಿಯನ್ ಬಳಿಕ ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ವೈದ್ಯ ಜಯಂತಿ ಇಬ್ಬರನ್ನು ಡಿಸ್ಚಾರ್ಜ್ ಮಾಡಿದ್ದರು. ಎರಡು ದಿನದ ನಂತರ ಮಹಿಳೆಗೆ ಜಾಂಡಿಸ್ ಕಾಣಿಸಿಕೊಂಡಿತ್ತು. ಸೆಫ್ಟಿಕ್ ಆಗಿ ಗಾಯದಲ್ಲಿ ನೀರು ತುಂಬಿಕೊಂಡು ಕಿಡ್ನಿ ಮತ್ತು ನರದೌರ್ಬಲ್ಯದಿಂದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿದ್ದಾರೆ.


ಇದನ್ನೂ ಓದಿ:  Solar System: ಸೋಲಾರ್ ಶಕ್ತಿಯ ಮೂಲಕ ವಿದ್ಯುತ್​ನಲ್ಲಿ ಸ್ವಾವಲಂಬಿಯಾದ ಪುತ್ತೂರಿನ ಗ್ರಾಮ ಪಂಚಾಯತ್


ನೇತ್ರಾವತಿಯವರ ಮೊದಲ ಹೆರಿಗೆ ಸಹ ಇದೇ ಆಸ್ಪತ್ರೆಯ ಮಾಡಿಸಲಾಗಿತ್ತು. ಅಂದು ಇದೇ ಡಾಕ್ಟರ್ ಜಯಂತಿ ಸಿಜೇರಿಯನ್ ಮಾಡಿಸಿಕೊಂಡಿದ್ದರು. ಅದೇ ನಂಬಿಕೆ ಮೇಲೆ ನೇತ್ರಾವತಿಯನ್ನು ಚಿಂತಾಮಣಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು ಎಂದು ಪತಿ ಗೋಪಾಲಗೌಡ ಹೇಳುತ್ತಾರೆ.


https://kannada.news18.com/news/state/dakshina-kannada-aryapu-gram-panchayat-using-solar-system-for-water-supplying-akp-mrq-862268.html
ಸಾಂದರ್ಭಿಕ ಚಿತ್ರ


RSS ಕಾರ್ಯಕರ್ತರ ಮೇಲೆ ಹಲ್ಲೆ


RSS ಕಾರ್ಯಕರ್ತರ ಮೇಲೆ ಮುಸ್ಲಿಂ ಯುವಕರು ಹಲ್ಲೆ ಮಾಡಿದ ಘಟನೆ ಹಾವೇರಿ ಜಿಲ್ಲೆ ರಟ್ಟೀಹಳ್ಳಿಯಲ್ಲಿ ನಡೆದಿದೆ. ಓರ್ವ ಕಾರ್ಯಕರ್ತನ ತಲೆಗೆ ಏಟು ಬಿದ್ದಿದ್ದು, ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪಥಸಂಚಲನ ನಡೆಸೋಕೆ ಮಾರ್ಗ ವೀಕ್ಷಣೆಗೆ ತೆರಳಿದ್ದಾಗ ಮುಸ್ಲಿಂ ಯುವಕರು ಹಲ್ಲೆ ಮಾಡಿದ್ರು.


ಇದನ್ನೂ ಓದಿ:  Hijab Verdict: ಹಿಜಾಬ್ ತೀರ್ಪು, ಬಿ ಸಿ ನಾಗೇಶ್, ಚಕ್ರವರ್ತಿ ಸೂಲಿಬೆಲೆ, ಮುತಾಲಿಕ್ ಹೇಳಿದ್ದೇನು?


ಕಾರ್ಯಕರ್ತನ ಕಾರಿನ‌ ಹಿಂಭಾಗದ ಗ್ಲಾಸ್‌ ಜಖಂಗೊಂಡಿತ್ತು. ಘಟನೆಗೆ ಸಂಬಂಧಿಸಿದಂತೆ ಹತ್ತು ಮುಸ್ಲಿಮರನ್ನು ಬಂಧಿಸಿದ್ದೇವೆ ಎಂದು ಎಸ್‌ಪಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.

Published by:Mahmadrafik K
First published: