• Home
  • »
  • News
  • »
  • state
  • »
  • Hubballi: ಗಂಡನ ಕೊಲೆ, ಹೆಂಡತಿಯ ಆತ್ಮಹತ್ಯೆ, ತಬ್ಬಲಿಯಾದ ಮಕ್ಕಳು; ಪ್ರೇಮಿಗಳ ದುರಂತ ಅಂತ್ಯ

Hubballi: ಗಂಡನ ಕೊಲೆ, ಹೆಂಡತಿಯ ಆತ್ಮಹತ್ಯೆ, ತಬ್ಬಲಿಯಾದ ಮಕ್ಕಳು; ಪ್ರೇಮಿಗಳ ದುರಂತ ಅಂತ್ಯ

ದಂಪತಿ

ದಂಪತಿ

ಪ್ರೀತಿಸಿ ಮದುವೆಯಾದಾಗ ತಿರಸ್ಕರಿಸಿದ್ದ ಪೋಷಕರು ಸತ್ತ ಮೇಲೆ ಅಂತ್ಯಕ್ರಿಯೆ ನೆರವೇರಿಸಿ ಕೈತೊಳೆದುಕೊಂಡಿದ್ದಾರೆ. ಆದರೆ ಮಗಳ ಹೊಟ್ಟೆಯಲ್ಲಿ ಹುಟ್ಟಿದ ಮೊಮ್ಮಕ್ಕಳನ್ನು ಕರೆದೊಯ್ಯಲು ನಿರಾಕರಿಸಿದ್ದು, ಪುಟ್ಟ ಕಂದಮ್ಮಗಳಿಗೆ ಅನಾಥ ಪ್ರಜ್ಞೆ ಕಾಡಲಾರಭಿಸಿದೆ.

  • Share this:

ಹುಬ್ಬಳ್ಳಿ : ಲವ್, ಮರ್ಡರ್, ಸೂಸೈಡ್. ಪ್ರೇಮಿಗಳ (Couple) ದುರಂತ ಅಂತ್ಯ. ತಬ್ಬಲಿಗಳಾದ ಪುಟ್ಟ ಮಕ್ಕಳು. ಇಂಥದ್ದೊಂದು ಮನಕಲುಕುವ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ. ಮನೆಯವರ ವಿರೋಧದ ನಡುವೆಯೇ ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು (Love Marriage). ಇಬ್ಬರು ಪುಟ್ಟ ಕಂದಮ್ಮಗಳು, ಮೂರನೇ ಕೂಸು ಹೊಟ್ಟೆಯಲ್ಲಿತ್ತು. ದುಡಿದೋ ಹಾಕೋ ಶಕ್ತಿ ಗಂಡನ (Husband) ರೆಟ್ಟೆಯಲ್ಲಿತ್ತು. ಇಂತಹ ಸುಂದರ ಸಂಸಾರದ ಮೇಲೆ ಬಡಿದ ಬರಸಿಡಿಲು ಲವ್ ಬರ್ಡ್ ಕನಸನ್ನು ನುಚ್ಚು ನೂರು ಮಾಡಿದೆ. ಮೊದಲು ಗಂಡನ ಹತ್ಯೆಯಾಗುತ್ತೆ (Husband Murder), ನಂತರ ಹೆಂಡತಿಯೂ ಆತ್ಮಹತ್ಯೆಗೆ ಶರಣಾಗ್ತಾಳೆ. ಇಬ್ಬರು ಮಕ್ಕಳು ತಬ್ಬಲಿಯಾಗುತ್ತವೆ. ಕೊನೆಗೆ ಕೊಲೆಯಾದವನ ಮನೆಯವರ ಮೇಲೆಯೇ ಕೇಸ್ ಬುಕ್ ಮಾಡಲಾಗುತ್ತೆ. ಗ್ರಾ.ಪಂ. ಸದಸ್ಯನೋರ್ವನ ಕೊಲೆ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದು ದುರುಂತ ಅಂತ್ಯ ಕಂಡಿದೆ.


ದೀಪಕ್ ಪಟದಾರಿ, ಪುಷ್ಪ ದಂಪತಿಯ ಪ್ರೀತಿ ದುರಂತ ಅಂತ್ಯ ಕಂಡಿದೆ. ದೀಪಕ್ ಪಟದಾರಿ ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮ ಪಂಚಾಯತಿ ಸದಸ್ಯನಾಗಿದ್ದರು. ಕಳೆದ ಜುಲೈ ನಾಲ್ಕರಂದು ದೀಪಕ್ ಪಟದಾರಿಯನ್ನು ರಾಯನಾಳ ಗ್ರಾಮದ ನಡುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕೊಲೆಯ ಹಿಂದೆ ಪುಷ್ಪ ತವರು ಮನೆಯವರ ಕೈವಾಡ ಇದೆ ಅನ್ನೋದು ಮೇಲ್ನೋಟಕ್ಕೆ ಕಂಡು ಬಂದಿತ್ತು.


ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಮದುವೆ


ಪಕ್ಕಾ ಬಿಜೆಪಿ ಕಾರ್ಯಕರ್ತ ಮತ್ತು ಗಂಗಿವಾಳ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯ ದೀಪಕ್ ಪಟದಾರಿ ರಾಯನಾಳ ಗ್ರಾಮದ ಪ್ರತಿಷ್ಠಿತ  ಮೇಟಿ ಕುಟುಂಬ ಮಗಳು ಪುಷ್ಪ ಅವರನ್ನ ಪೋಷಕರ ವಿರೋಧದ ನಡುವೆಯೂ ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು.


ದೀಪಕ್ ಮತ್ತು ಪುಷ್ಪ ದಂಪತಿಗೆ ಎರಡು ಮಕ್ಕಳು ಸಹ ಇವೆ.‌ ಮತ್ತೊಂದು ಕಡೆ ರಾಜಕೀಯವಾಗಿ ಪ್ರಬಲವಾಗಿ ಬೆಳೆಯುತ್ತಿದ್ದ ದೀಪಕ್ ತನ್ನ ಮಾವನ ಕುಟುಂಬ ಅಂದರೆ ಪುಷ್ಪ ಕುಟುಂಬ ಬೆಂಬಲಿತ ಗ್ರಾಮ ಪಂಚಾಯತಿ ಅಧ್ಯಕ್ಷೆಯ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದರು.


ನಡು ಗ್ರಾಮದಲ್ಲಿಯೇ ಕೊಚ್ಚಿ ಕೊಲೆ


ದೀಪಕ್ ಮೇಲೆ ಮೊದಲೇ ಕೋಪಗೊಂಡಿದ್ದ ಪುಷ್ಪ ತವರು ಮನೆಯವರು, ಅಳಿಯ ಏಳಿಗೆಯನ್ನು ಸಹಿಸಲಾರದೆ, ಜುಲೈ 4 ರಾತ್ರಿ ರಾಯನಾಳ ನಡು ಗ್ರಾಮದಲ್ಲಿ ಕೊಚ್ಚಿ ಕೊಲೆ ಮಾಡಿದ್ದರು ಎನ್ನಲಾಗಿದೆ.


ದೀಪಕ್ ಹತ್ಯೆಗೆ ಯಲ್ಲಪ್ಪ ಶಂಕ್ರಪ್ಪ ಮೇಟಿ, ರುದ್ರಪ್ಪ ಶಂಕ್ರಪ್ಪ ಮೇಟಿ, ನಾಗರಾಜಪ್ಪ ಮಲ್ಲಪ್ಪ ಹೆಗ್ಗಣ್ಣವರ, ಪ್ರವೀಣ್ ಮುದಲಿಂಗಣ್ಣವರ, ಚಂದ್ರಶೇಖರ್ ಮುದಲಿಂಗಣ್ಣವರ, ಮಲ್ಲಿಕಾರ್ಜುನ್ ಶಂಕ್ರಪ್ಪ ಮೇಟಿ, ಶಿವಪ್ಪ ರೇವಣಪ್ಪ ಮೇಟಿ, ಪರಶುರಾಮ ಬಸಪ್ಪ ಮೇಟಿ, ಯಲ್ಲಪ್ಪ ಬಸಪ್ಪ ಮೇಟಿ ಎಂಬುವವರೇ ಕಾರಣ ಅಂತ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.


woman died by Suicide after husband murder saklb mrq
ಕೊಲೆಯಾದ ದೀಪಕ್


ಪೊಲೀಸರು ಇಲ್ಲಿಯವರೆಗೆ ಕೇವಲ 6 ಜನ ಆರೋಪಿಗಳನ್ನು ಬಂಧಿಸಿದ್ದು, 3 ಜ‌ನ ಮುಖ್ಯ ಆರೋಪಿಗಳಾದ ಯಲ್ಲಪ್ಪ ಶಂಕ್ರಪ್ಪ ಮೇಟಿ, ರುದ್ರಪ್ಪ ಶಂಕ್ರಪ್ಪ ಮೇಟಿ, ನಾಗರಾಜಪ್ಪ ಮಲ್ಲಪ್ಪ ಹೆಗ್ಗಣ್ಣವರನ್ನು ಬಂಧಿಸಿಲ್ಲ ಅಂತ ಆರೋಪಿಸಲಾಗಿತ್ತು.


ಇದನ್ನೂ ಓದಿ:  Bharat Jodo Yatra: ಗುಂಡ್ಲುಪೇಟೆಯಿಂದ ಮೈಸೂರಿಗೆ ಭಾರತ್ ಜೋಡೋ; 2ನೇ ದಿನದ ಪಾದಯಾತ್ರೆ ಡೀಟೈಲ್ಸ್ ಇಲ್ಲಿದೆ


ಕೊಲೆ ಪ್ರಕರಣ ಸಿಐಡಿಗೆ ಹಸ್ತಾಂತರ


ಹೀಗಾಗಿ ತನ್ನ ಗಂಡ ಕೊಲೆಯಲ್ಲಿ ಪೊಲೀಸರ ಪಾತ್ರವಿದೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ತಪ್ಪಿಸಬೇಕು ಅಂತ ಪುಷ್ಪ ಮತ್ತು ದೀಪಕ್ ತಮ್ಮ ಸಂಜಯ್ ಸರ್ಕಾರಕ್ಕೆ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿದ್ದ ರಾಜ್ಯ ಸರ್ಕಾರ ದೀಪಕ್ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ತಂಡ ಹುಬ್ಬಳ್ಳಿಗೆ ಬಂದು ತನಿಖೆಯನ್ನೂ ಬಿರುಸುಗೊಳಿಸಿತ್ತು. ಸ್ವತಃ ದೀಪಕ್ ಪತ್ನಿ ಪುಷ್ಪಾಳ ವಿಚಾರಣೆಯನ್ನೂ ಮಾಡಿತ್ತು. ಸಿಐಡಿ ತನಿಖೆಯಿಂದ ತನ್ನ ಗಂಡನ ಸಾವಿಗೆ ನ್ಯಾಯ ಸಿಕ್ಕೇ ಸಿಗುತ್ತೆ ಅಂತ ಮನೆಗೆ ಹೋದ ಪುಷ್ಪಾ ಮತ್ತೆ ವಾಪಸ್ಸಾಗಿರೋದು ಮಾತ್ರ ಹೆಣವಾಗಿ.


ಪುಷ್ಪ ಅವರ ಮನವಿಯಂತೆ ಸರ್ಕಾರ ಈ‌ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದೆ. ಈಗಾಗಲೇ ಹುಬ್ಬಳ್ಳಿಗೆ ಸಿಐಡಿ ತಂಡ ಆಗಮಿಸಿ ತನಿಖೆ ಸಹ ಆರಂಭಿಸಿದೆ. ಅಲ್ಲದೆ ಸಿಐಡಿ ಅಧಿಕಾರಿಗಳು ಗುರುವಾರ ಪುಷ್ಪ ಅವರಿಂದ ಹೇಳಿಕೆ ಸಹ ಪಡೆದಿದ್ದರು. ಆದಾದ ಕೆಲವೇ ಸಮಯದಲ್ಲಿಯೇ ಪುಷ್ಪ ಏಕಾಏಕಿ ನವನಗರದ ಸಂಬಂಧಿಕರ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.


ವಿಪರ್ಯಾಸವೆಂದರೆ ಪುಷ್ಪ ಸದ್ಯ ಐದು ತಿಂಗಳ ಗರ್ಭಿಣಿಯಾಗಿದ್ದರು. ತನ್ನ ಗಂಡ ಸಾವಿನಿಂದ ತೀವ್ರವಾಗಿ ಮನನೊಂದಿದ್ದ ಪುಷ್ಪಗೆ ಆಗಾಗ ಬೆದರಿಕೆ ಕರೆಗಳೂ ಬರುತ್ತಿದ್ದವು ಎನ್ನಲಾಗಿದೆ.


ಸಂಬಂಧಿಕರ ಮನೆಯಲ್ಲಿ ನೇಣಿಗೆ ಶರಣು


ಇದರ ನಡುವೆ ಗಂಡನಿಲ್ಲದೆ ತನ್ನ ಮಕ್ಕಳನ್ನು ಸಾಕುವುದು ಹೇಗೆ ಅಂತ ಚಿಂತೆಗೀಡಾಗಿದ್ದರು ಎ‌ನ್ನಾಲಾಗಿದೆ. ಈ ಬಗ್ಗೆ ತಮ್ಮ ಸ್ನೇಹಿತರ ಜೊತೆ ಚರ್ಚೆ ಸಹ ಮಾಡಿದ್ದರು. ಸಿಐಡಿ ವಿಚಾರಣೆ ಮುಗಿದ ನಂತರ ಸಂಬಂಧಿಕರ ಮನೆಗೆ ಹೋಗಿ ರಾತ್ರಿ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.


ವಿಚಿತ್ರವೆಂದರೆ ಇಷ್ಟು ದಿನ ತಮ್ಮ ಮಗಳು ಮತ್ತು ಗಂಡನ ಕುಟುಂಬದ ಮೇಲೆ ಹಲ್ಲು ಮಸೆಯುತ್ತಿದ್ದ ಪುಷ್ಪ ಕಡೆಯವರು ಈಗ ಏಕಾಏಕಿ ದೀಪಕ್ ಮನೆಯವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮಗಳ ಸಾವಿಗೆ ದೀಪಕ್ ತಮ್ಮ ಸಂಜಯ್ ಮತ್ತು ಅವರ ತಂದೆ ತಾಯಿ ಕಾರಣ ಅಂತ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ದೂರ ಸಹ ದಾಖಲಿಸಿಕೊಂಡಿದ್ದಾರೆ.


woman died by Suicide after husband murder saklb mrq
ಸಾಂದರ್ಭಿಕ ಚಿತ್ರ


ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯ?


ಗಂಡನನ್ನು ಬಲಿ ತೆಗೆದುಕೊಂಡೆ, ನೀನು ಈ ಮನೆಯಲ್ಲಿದ್ದು ಏನು ಮಾಡುತ್ತಿ ಅಂತ ಕಿರುಕುಳ ಕೊಟ್ಟು ದೀಪಕ್ ಕುಟುಂಬದವರು ಆತ್ಮಹತ್ಯೆಗೆ ಕಾರಣರಾಗಿದ್ದಾರೆ ಅಂತ ಪುಷ್ಪಾ ತಂದೆ ಮತ್ತು ತಾಯಿ ಆರೋಪಿಸಿದ್ದಾರೆ. ಆದರೆ ಹೊಟ್ಟೆಯಲ್ಲಿ ಇದ್ದ ಮಗುವಿನ ಬಗ್ಗೆ ಪುಷ್ಪ ಅತ್ಯಂತ ಆತಂಕಕ್ಕೆ ಒಳಗಾಗಿದ್ದರು ಎಂದು ಅವರ ಸ್ನೇಹಿತರು ಹೇಳುತ್ತಾರೆ.


ಇದನ್ನೂ ಓದಿ:  Bharat Jodo: ಕಾಂಗ್ರೆಸ್ ಬಣ ರಾಜಕೀಯ, ಡಿಕೆಶಿಗೆ ಯಾಮಾರಿಸಿ ರಾಹುಲ್ ಗಾಂಧಿಗೆ ಸ್ವಾಗತ ಕೋರಿದ ಸಿದ್ದರಾಮಯ್ಯ


ಪುಷ್ಪಾ ತವರು ಮನೆಯವರು ಹೊಟ್ಟೆಯಲ್ಲಿರುವ ಮಗುವನ್ನು ತೆಗೆಸಿಕೊಳ್ಳಲು ಹೇಳಿದ್ರಂತೆ. ಹೊಟ್ಟೆಯಲ್ಲಿರೋ ಮಗು ಹುಟ್ಟಿತೆಂದರೆ ಮೂರು ವರ್ಷದ ನಂತರ ಕಂಟಕವಾಗುತ್ತೆ. ಹಾಗಾಗಿ ಹುಟ್ಟುವ ಮುಂಚಿತವಾಗಿಯೇ ಅಬಾರ್ಷನ್ ಮಾಡಿಸಿಕೊ ಅಂತ ಪುಷ್ಪಾಳ ತವರು ಮನೆಯ ಕಡೆಯವರು ಹೇಳಿದ್ದರು ಎನ್ನಲಾಗಿದೆ.


ಮಾನಸಿಕ ಖಿನ್ನತೆಯೇ ಆತ್ಮಹತ್ಯೆಗೆ ಕಾರಣ?


ಈ ವಿಚಾರದ ಕುರಿತು ಜ್ಯೋತಿಷಿಗಳ ಬಳಿ ಕೇಳುವಂತೆ ಪುಷ್ಪಾ ಆಕೆಯ ಸ್ನೇಹಿತರನ್ನು ಕೇಳಿಕೊಂಡಿದ್ದಳು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದಿರುವಂತೆ ಗೆಳತಿಯರು ಸಲಹೆ ನೀಡಿದ್ದರು ಎನ್ನಲಾಗಿದೆ. ಗಂಡನ ಸಾವು, ತವರು ಮನೆಯವರ ವರ್ತನೆ ಇತ್ಯಾದಿಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅದೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎನ್ನುತ್ತಾರೆ ಪುಷ್ಪಾಳ ಸ್ನೇಹಿತರು.


woman died by Suicide after husband murder saklb mrq
ಸಾಂದರ್ಭಿಕ ಚಿತ್ರ


ಮಕ್ಕಳನ್ನು ಕರೆದೊಯ್ಯಲು ಒಪ್ಪದ ಪುಷ್ಪಾ ಪೋಷಕರು


ಪುಷ್ಪಾಳ ಶವವನ್ನು ತಮಗೇ ನೀಡುವಂತೆ ದೀಪಕ್ ಸಹೋದರ ಸಂಜಯ್ ಪಟ್ಟು ಹಿಡಿದಿದ್ದ. ಆದರೆ ಪೊಲೀಸರು ಪುಷ್ಪಳ ಮೃತದೇಹವನ್ನು ತವರು ಮನೆಯವರಿಗೆ ಹಸ್ತಾಂತರಿಸಿದ್ದು, ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಪ್ರೀತಿಸಿ ಮದುವೆಯಾದಾಗ ತಿರಸ್ಕರಿಸಿದ್ದ ಪೋಷಕರು ಸತ್ತ ಮೇಲೆ ಅಂತ್ಯಕ್ರಿಯೆ ನೆರವೇರಿಸಿ ಕೈತೊಳೆದುಕೊಂಡಿದ್ದಾರೆ. ಆದರೆ ಮಗಳ ಹೊಟ್ಟೆಯಲ್ಲಿ ಹುಟ್ಟಿದ ಮೊಮ್ಮಕ್ಕಳನ್ನು ಕರೆದೊಯ್ಯಲು ನಿರಾಕರಿಸಿದ್ದು, ಪುಟ್ಟ ಕಂದಮ್ಮಗಳಿಗೆ ಅನಾಥ ಪ್ರಜ್ಞೆ ಕಾಡಲಾರಭಿಸಿದೆ.

Published by:Mahmadrafik K
First published: