• Home
  • »
  • News
  • »
  • state
  • »
  • Vijayapura: ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದು ಮಹಿಳೆ ಸಾವು; ಐವರಿಗೆ ಗಂಭೀರ ಗಾಯ

Vijayapura: ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದು ಮಹಿಳೆ ಸಾವು; ಐವರಿಗೆ ಗಂಭೀರ ಗಾಯ

ಆಟೋ ಮೇಲೆ ಬಿದ್ದ ಮರ

ಆಟೋ ಮೇಲೆ ಬಿದ್ದ ಮರ

ರಸ್ತೆಯಲ್ಲಿ ಸಂಚರಿಸುತ್ತಿದ್ದ ಅಟೋ ಮೇಲೆ ಮರವೊಂದು ಉರುಳಿ ಬಿದ್ದ ಪರಿಣಾಮ ಓರ್ವ ಮಹಿಳೆ ಸಾವಿಗೀಡಾಗಿ ಐದು ಜನ ಗಾಯಗೊಂಡ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.

  • Share this:

ವಿಜಯಪುರ (ಏ.5): ಚಲಿಸುತ್ತಿದ್ದ ಆಟೋ (Auto) ಮೇಲೆ ಮರ ಬಿದ್ದು (Falling Tree) ಓರ್ವ ಮಹಿಳೆ ಸಾವನ್ನಪ್ಪಿದ್ದು (Women Died) ಐವರು ಗಂಭೀರವಾಗಿ ಗಾಯಗೊಂಡಿರೋ ಘಟನೆ ವಿಜಯಪುರದ (Vijayapura) ಪೊಲೀಸ್ ತರಬೇತಿ ಕೇಂದ್ರದ ಬಳಿ ಸಂಭವಿಸಿದೆ. ವಿಜಯಪುರ ತಾಲೂಕಿನ ಮದಬಾವಿ ತಾಂಡಾದ  ಯಲ್ಲಮ್ಮ ಮಹಾದೇವಪ್ಪ ಕೊಂಡಗೂಳಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಚಾಲಕ, ಮತ್ತಿಬ್ಬರು ಮಹಿಳೆಯರು ಹಾಗೂ ಒಟ್ಟು ಐದು ಮಂದಿಗೆ ಗಾಯ ಆಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಂಧಿಚೌಕ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


ಏಕಾಏಕಿ ಆಟೋ ಮೇಲೆ ಬಿದ್ದ ಮರ 


ಮಧ್ಯಾಹ್ನ 2.15 ರ ಸುಮಾರಿಗೆ ದರ್ಗಾ ಕ್ರಾಸ್ ನಿಂದ ಸೋಲಾಪುರ ರಸ್ತೆಯಲ್ಲಿ ಜೋರಾಪುರ ಕಡೆಗೆ ಅಟೋ ಸಂಚರಿಸುತ್ತಿತ್ತು. ಆಗ ಏಕಾಏಕಿ ಮರ, ಅಟೋ ಮೇಲೆ ಉರುಳಿ ಬಿದ್ದಿದೆ.  ಸಾವಿಗೀಡಾದ ಮಹಿಳೆಯನ್ನು ಯಲ್ಲಮ್ಮ ಮಹಾದೇವಪ್ಪ ಕೊಂಡಗೂಳಿ (45) ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಇಂದುಮತಿ ವಿಜಯಕುಮಾರ ಕುಲಕರ್ಣಿ (54), ಚಂದ್ರಕಲಾ ಬಾಬು ವಾಲಿಕಾರ (25), ಮಂದಾಕಿನಿ ದೊಡ್ಡಪ್ಪ ಬಿರಾದಾರ (51), ಸುವರ್ಣಾ ಬಸವರಾಜ ಮಕಜ್ಜಗಿ (42), ಮದಭಾವಿ ತಾಂಡಾದ ಅಟೋ ಚಾಲಕ ಸಚಿನ ತಾರಾಸಿಂಗ್ ರಾಠೋಡ(19) ಗಾಯಗೊಂಡಿದ್ದಾರೆ.


ನಾಮಕರಣಕ್ಕೆ ಹೋಗಿ ಬರ್ತಿದ್ದ ವೇಳೆ ಅಪಘಾತ


ವಿಜಯಪುರ ತಾಲೂಕಿನ ಮದಬಾವಿ ತಾಂಡಾದ ಅಟೋ‌ ಚಾಲಕ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ಸಂಬಂಧಿಕರ ಮನೆಯಲ್ಲಿನ ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್ ಹೋಗುತ್ತಿದ್ದ ವೇಳೆ ನಡೆದ ಅವಘಡ ಸಂಭವಿಸಿದೆ. ಗಾಯಾಗಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕನ ಸ್ಥಿತಿ‌ ಚಿಂತಾಜನಕ ಆಗಿದೆ ಎಂದು ತಿಳಿದುಬಂದಿದೆ. ಘಟನೆಯಿಂದ ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ಮರ ತೆರವಿಗೆ ಅರಣ್ಯ‌ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.


ಇದನ್ನೂ ಓದಿ:  ಮೇಲ್ಮುಖವಾಗಿ ಚಲಿಸಿದ ಎಲಿವೇಟರ್, ಗಲ್ಫ್​​ನಲ್ಲಿ ದುಡಿಯುತ್ತಿದ್ದ ಮಲಯಾಳಿ ಯುವಕ ಸಾವು


ಐಪಿಎಲ್ ಬೆಟ್ಟಿಂಗ್​ಗೆ ಯುವಕ ಬಲಿ


2022 ಐಪಿಎಲ್ (IPL 2022) ರಂಗೇರಿದ್ದು, ಕ್ರಿಕೆಟ್ ಅಭಿಮಾನಿ(Cricket Fans)ಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮತ್ತೊಂದು ಕಡೆ ಐಪಿಎಲ್ ಬೆಟ್ಟಿಂಗ್ (IPL Betting) ದಂಧೆ ಸಹ ನಡೆಯುತ್ತಿದೆ,  ಗ್ರಾಮೀಣ ಭಾಗದಿಂದ ಹಿಡಿದು ನಗರ ಪ್ರದೇಶದವರೆಗೂ ಬೆಟ್ಟಿಂಗ್ ದಂಧೆ ವ್ಯಾಪಕವಾಗಿ ಹಬ್ಬಿದೆ. ಬೆಟ್ಟಿಂಗ್ ನಡೆಸಿ ಹಣ (Money) ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿ ಜನರು ಸಿಲುಕಿಕೊಳ್ಳುತ್ತಾರೆ. ಆದರೂ ಜನರು ಹಣದ ಮೇಲಿನ ವ್ಯಾಮೋಹದಿಂದಾಗಿ ಮತ್ತೆ ಬೆಟ್ಟಿಂಗ್ ದಂಧೆ ನಡೆಯುತ್ತಿದೆ. ಇನ್ನು ಕ್ರಿಕೆಟ್ ಬೆಟ್ಟಿಂಗ್ ಸಂಬಂಧ ನಡೆಯುವ ಜಗಳಗಳು ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿವೆ. ಇದೀಗ ಇಂತಹುವುದೇ ಒಂದು ಪ್ರಕರಣ ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ.


ಈ ನಡುವೆ ಕ್ರಿಕೆಟ್ ಬೆಟ್ಟಿಂಗ್ ಹಣದ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಯುವಕನೋರ್ವ ಸಾವನ್ನಪ್ಪಿದ್ದ ಘಟನೆ ನಗರದ ಕೋಟೆ ಟ್ಯಾಂಕ್ ಬಳಿ ನಡೆದಿದೆ. ಸೋಮವಾರ ರಾತ್ರಿ ಘಟನೆ ನಡೆದಿದದ್ದು, ಗವನಹಳ್ಳಿ ಮೂಲದ ಧ್ರುವರಾಜ್ ಅರಸ್​ (23) ಮೃತಪಟ್ಟಿದ್ದಾನೆ.


ಇದನ್ನೂ ಓದಿ: Bengaluru: ಊಟಕ್ಕೆ ಹೊರಟ್ಟಿದ್ದ ಯುವಕನಿಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಕೊಲೆಯ ದೃಶ್ಯ ಸೆರೆ


ದಾವಣಗೆರೆ: ಹೆರಿಗೆ ಆದ ಬಳಿಕ ಮಗು ಬಿಟ್ಟು ಹೋದ ತಾಯಿ

ತಾಯಿ ಮತ್ತು ಸಂಬಂಧಿಕರು ಪತ್ತೆ ಆಗದ ಹಿನ್ನೆಲೆ ಬಸವನಗರ ಠಾಣೆಯ ಪೊಲೀಸರಿಗೆ ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಒಂದು ಕೆಜಿ 50 ಗ್ರಾಂ ತೂಕದ ಗಂಡು ಮಗುವಿಗೆ ಆಸ್ಪತ್ರೆಯಲ್ಲಿ ಆರೈಕೆ ಮಾಡಲಾಗುತ್ತಿದೆ. ಇದೇ ಆಸ್ಪತ್ರೆಯಲ್ಲಿ ಈ ಮೊದಲು ಒಂದು ಗಂಡು ಮಗ ಅಪರಣ ಆಗಿತ್ತು. ಇದೇ ಆಸ್ಪತ್ರೆ ಯಲ್ಲಿ ಮಾರ್ಚ 16 ರಂದು ಗಂಡು ಮಗು ಅಪಹರಣ ಪ್ರಕರಣ ನಡೆದಿತ್ತು. ಆ ಘಟನೆಯಲ್ಲಿ ಅಪಹರಣಕ್ಕೆ ಒಳಗಾದ ಮಗು ಇನ್ನೂ ಪತ್ತೆಯಾಗಿಲ್ಲ. ಮಗುವಿಗಾಗಿ ತಾಯಿ ಪರಿತಪಿಸುತ್ತಿದ್ದಾರೆ. ಈ ಮಧ್ಯೆ ಇದೀಗ ಹೊಸ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ.

Published by:ಪಾವನ ಎಚ್ ಎಸ್
First published: