Chitradurga: ಡಿವೋರ್ಸ್ ಬಳಿಕ ಇನಿಯನ ಜೊತೆ ವಾಸವಿದ್ದ ಮಹಿಳೆಯ ಸಾವು: ಬಿಟ್ಟಿರಲಾರೆ ಅಂತ ವಿಷ ಸೇವಿಸಿದ ಗೆಳೆಯ

ಪ್ರಿಯತಮೆಯ ಸಾವಿನ ಸುದ್ದಿ ತಿಳಿದು ದಿಗ್ಭ್ರಾಂಥನಾದ ಪ್ರಿಯಕರ ಮಂಜುನಾಥ್ ಹಿರಿಯೂರಿಗೆ ತೆರಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಅವನನ್ನ ನೋಡಿದ ಜನರು ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

ಮೃತ  ಮಹಿಳೆ

ಮೃತ ಮಹಿಳೆ

  • Share this:
ಚಿತ್ರದುರ್ಗ :  ಗಂಡನನ್ನ ಬಿಟ್ಟು ಹೋಗಿದ್ದ ಮಹಿಳೆ (Woman) ಪ್ರಿಯಕರನ ಜೊತೆ ಸೇರಿ ಜೀವನ ಸಾಗಿಸುತ್ತಿದ್ದಳು. ಅದೇನಾಯ್ತೋ ಏನೋ ಇದ್ದಕ್ಕಿದ್ದಂತೆ ಜ್ವರ ಅಂತ ಆಸ್ಪತ್ರೆಗೆ ಸೇರಿದವಳು ಸಾವಿಗೀಡಾಗಿ ಇಹಲೋಕ ತ್ಯಜಿಸಿದ್ದಾಳೆ. ಇತ್ತ ಪ್ರಿಯತಮೆಯ ನೆನಪಲ್ಲಿ ಪ್ರಿಯಕರ ವಿಷ (Poison) ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾನೆ. ಮಗಳ (Daughter) ಸಾವಿನ ಸುದ್ದಿ ತಿಳಿದ ಪೋಷಕರು ಅವನು ನಮ್ಮ ಮಗಳನ್ನ ಕೊಲೆ (Murder) ಮಾಡಿದ್ದಾನೆ ಅನ್ನೋ ಆರೋಪ ಮಾಡಿದ್ದಾರೆ. ಈ  ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕೆಂಕೆರೆ (Kenkere village, Chitradurga) ಗ್ರಾಮದಲ್ಲಿ ನಡೆದಿದೆ.

ದಿವ್ಯಾ ಸಾವನ್ನಪ್ಪಿದ ಮಹಿಳೆ. ಮೂರು ವರ್ಷಗಳ ಹಿಂದೆ ಪೋಷಕರು ದಿವ್ಯಾಳ ಮದುವೆಯನ್ನು ಸತೀಶ್ ಎಂಬಾತನ ಜೊತೆ ಮಾಡಿದ್ದರು. ಆದ್ರೆ ಮೊದಲ ಪ್ರೇಮ (Love) ಪಾಶದಲ್ಲಿ ಸಿಲುಕಿದ್ದ ದಿವ್ಯಾ ಕೈ ಹಿಡಿದ ಗಂಡನ  ಜೊತೆ ಚೆನ್ನಾಗಿ ಸಂಸಾರ ನಡೆಸಿರಲಿಲ್ಲ. ಅದರ ಫಲವಾಗಿಯೇ ದಾಂಪತ್ಯ ಜೀವನ ಅರ್ದದಲ್ಲಿಯೇ ಮುರಿದು ಬಿದ್ದಿದೆ. ಅಲ್ಲದೇ ಇಬ್ಬರು ವಿಚ್ಛೇದನ (Divorce) ಸಹ ಪಡೆದುಕೊಂಡಿದ್ದರು.

ಡಿವೋರ್ಸ್ ಬಳಿಕ ಇನಿಯನನ್ನ ಸೇರಿದ್ದ ದಿವ್ಯಾ

ಇಷ್ಟಕ್ಕೆ ಸುಮ್ಮನೆ ಇರದ ದಿವ್ಯ ತನ್ನ ಪ್ರಿಯಕರನ ಸಂಪರ್ಕ ಬೆಳಸಿ ಹೊಸ ಜೀವನ ಆರಂಭ ಮಾಡುವ ಫ್ಲಾನ್ ಮಾಡಿದ್ದಳು. ಅದರಂತೆ ಕಳೆದ ಮೂರು ತಿಂಗಳ ಹಿಂದೆಯಷ್ಟೆ ಅದೇ ಗ್ರಾಮದ ಮಂಜುನಾಥ್ ಎಂಬ ಪ್ರಯಕರನ ಜೊತೆ ಸೇರಿ ಊರು ಬಿಟ್ಟು ಪರಾರಿ ಆಗಿದ್ಲು.

ತನ್ನಿಚ್ಚೆಯಂತೆ ಬಂದಿದ್ದ ದಿವ್ಯಾಳ ಜೊತೆ ಪ್ರಿಯಕರ ಮಂಜುನಾಥ್ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ವಾಸವಿದ್ದ. ಅಲ್ಲದೇ ನಿನಗೆ ನಾನು ನನಗೆ ನೀನು ಅಂತ ಹೊಂದಾಗಿ ಜೀವನ ಸಾಗಿಸುತ್ತಾ ಖುಷಿಯಾಗಿ ಜೀವನ ಸಾಗಿಸುತ್ತಿದ್ದರು.

ಇದನ್ನೂ ಓದಿ:  Davanagere: ಅತ್ತಿಗೆ ಆಗಬೇಕಿದ್ದವಳ ಕಣ್ಣಾಕಿದ ತಮ್ಮನನ್ನೇ ಮುಗಿಸಿದ ಅಣ್ಣ: ಶಾಪಿಂಗ್ ಕರೆದೊಯ್ದು ಕೊಲೆ

ಚಿಕಿತ್ಸೆ ಫಲಕಾರಿಯಾಗದೇ ದಿವ್ಯಾ ಸಾವು!

ಕಳೆದ ನಾಲ್ಕೈದು ದಿನಗಳ ಹಿಂದೆ ದಿವ್ಯಾಗೆ ಜ್ವರ ಕಾಣಿಸಿಕೊಂಡು ಅನಾರೋಗ್ಯದಿಂದ ಬಳಲುತ್ತಿದ್ದಳು. ಬಳಿಕ ಆಕೆಯನ್ನ ಹಿರಿಯೂರಿನ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದ ಪ್ರಿಯಕರ ಮಂಜುನಾಥ್. ಆದರೆ ಆರೋಗ್ಯ ಚೇತರಿಕೆ ಕಂಡಿರಲಿಲ್ಲ, ಆದ್ದರಿಂದ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆತಂದು ಅಡ್ಮಿಟ್ ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದ. ಅಷ್ಟೊತ್ತಿಗಾಗಲೆ ದಿವ್ಯಾಳ ಆರೋಗ್ಯ ಪರಿಸ್ಥಿತಿ ಚಿಂತಾಜನಕ ಸ್ಥಿತಿ ತಲುಪಿದ್ದ ಕಾರಣ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಳು.

ದಿವ್ಯಾಳ ಪೋಷಕರಿಂದ ಕೊಲೆ ಆರೋಪ

ಪ್ರಿಯತಮೆಯ ಸಾವಿನ ಸುದ್ದಿ ತಿಳಿದು ದಿಗ್ಭ್ರಾಂಥನಾದ ಪ್ರಿಯಕರ ಮಂಜುನಾಥ್ ಹಿರಿಯೂರಿಗೆ ತೆರಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಅವನನ್ನ ನೋಡಿದ ಜನರು ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಮನೆ ಬಿಟ್ಟು ಪ್ರಿಯಕರನ ಜೊತೆ ತೆರಳಿದ್ದ ಮಗಳ ಸಾವಿನ ಸುದ್ದಿ ತಿಳಿದು ದಿವ್ಯಾ ಪೋಷಕರು ಜಿಲ್ಲಾಸತ್ರೆಗೆ  ಬಂದು ಗೋಳಿಟ್ಟು ಅತ್ತಿದ್ದಾರೆ.

FSL ವರದಿಗಾಗಿ ಕಾಯುತ್ತಿರುವ ಪೊಲೀಸರು

ದಿವ್ಯಾಳ ಸ್ಥಿತಿ ಕಂಡು ಇದು ಸಹಜ ಸಾವಲ್ಲ, ಮಂಜುನಾಥನೇ ಕೊಲೆ ಮಾಡಿದ್ದಾನೆ ಅನ್ನೋ ಆರೋಪ ಕೂಡಾ ಮಾಡಿದ್ದಾರೆ. ಸಂಶಯಾಸ್ಪದ ಸಾವು, ಕೊಲೆ ಆರೋಪ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿಸಿ ವರದಿಗಾಗಿ FSL ಗೆ ಕಳುಹಿಸಿದ್ದಾರೆ. ವರದಿ ಬಂದ ಬಳಿಕ ಸಾವಿಗೆ ನಿಜವಾದ ಕಾರಣ ತಿಳಿಯಲಿದ್ದು ಸತ್ಯಾಸತ್ಯತೆ ಬಯಲಾಗಲಿದೆ.

ಇದನ್ನೂ ಓದಿ:  Kalaburagi: ಕೆಲಸಕ್ಕೆ ಹೋಗೋದಾಗಿ ಹೇಳಿದ ಮಗ ನಾಪತ್ತೆ: ಪೊಲೀಸ್ ಠಾಣೆಗೆ ತೆರಳಿದ್ರೆ ಸಿಕ್ತು ಪುತ್ರನ ಶವದ ಫೋಟೋ

ಇನ್ನೂ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸ್ಥಳೀಯರು ಮತ್ತು ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ದಿವ್ಯಾ ಯಾವುದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಳು ಎಂಬುದರ ಬಗ್ಗೆಯೂ ನಿಖರ ಮಾಹಿತಿ ಲಭ್ಯವಾಗಿಲ್ಲ.
Published by:Mahmadrafik K
First published: