Crime News: ಮಕ್ಕಳ ಜೊತೆ ಗೃಹಿಣಿ ಅತ್ಮಹತ್ಯೆ, ಪತ್ನಿ ರುಂಡ ಮುಂಡ ಬೇರ್ಪಡಿಸಿದ ಗಂಡ, ಆತ್ಮಹತ್ಯೆಗೆ ಯತ್ನಿಸಿದವನ ರಕ್ಷಣೆ

ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತ್ನಿಯ ರುಂಡ ಮುಂಡ ಬೇರೆ ಮಾಡಿ ಭಯಾನಕವಾಗಿ ಕೊಲೆಗೈದಿರುವ ಘಟನೆ ಮೈಸೂರು ತಾಲೂಕು ಚೆಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದು ಬೆಳ್ಳಂ ಬೆಳಗ್ಗೆ ಕ್ರೈಂ ನ್ಯೂಸ್ ಗಳು (Crime News) ವರದಿಯಾಗುತ್ತಿವೆ. ಮೈಸೂರಿನಲ್ಲಿ (Mysuru) ಪತಿಯ ಅಕ್ರಮ ಸಂಬಂಧಕ್ಕೆ ಗೃಹಿಣಿ ಆತ್ಮಹತ್ಯೆಗೆ (Woman Suicide) ಶರಣಾದ್ರೆ, ಮತ್ತೊಂದು ಕಡೆ ಪತಿಯೋರ್ವ ಪತ್ನಿಯ (Woman Murder) ರುಂಡ ಮುಂಡ ಬೇರೆ ಮಾಡಿ ಕೊಲೆ ಮಾಡಿದ್ದಾನೆ. ಬೆಂಗಳೂರಿನಲ್ಲಿ ಬುದ್ಧಿಮಾಂದ್ಯ ಸಂಪ್ ನೊಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ರೆ, ಇತ್ತ ಆತ್ಮಹತ್ಯೆಗೆ ಯತ್ನಿಸಿದ (Suicide Attempt) ಯುವಕನನ್ನು ಪೊಲೀಸರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕೌಟುಂಬಿಕ ಕಲಹ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ರಾಮೇಗೌಡನಪುರ ಗ್ರಾಮದಲ್ಲಿ ನಡೆದಿದೆ. ತನ್ನ ಎರಡು ಮಕ್ಕಳ ಜೊತೆ ತಾನು ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸರೋಜಾ (32) ಆತ್ಮಹತ್ಯೆಗೆ ಶರಣಾಗಿರುವ ಗೃಹಿಣಿ. ಮಕ್ಕಳಾದ ಗೀತಾ (6) ಮತ್ತು ಕುಸುಮ (4) ಮೃತ ಮಕ್ಕಳು. ಕೆಲ ದಿನಗಳ ಹಿಂದೆ ಗಂಡನ ಮನೆಯಿಂದ ಸ್ವಗ್ರಾಮ ರಾಮೇಗೌಡನಪುರಕ್ಕೆ ಸರೋಜಾ ಮಕ್ಕಳ ಜೊತೆ ಆಗಮಿಸಿದ್ರು. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ.

ಸದ್ಯ ಮೃತ ದೇಹಗಳನ್ನ ಟಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ನರಸೀಪುರ ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದ ನಿಂಗರಾಜು ಎಂಬವರ ಜೊತೆ ಸರೋಜಾ ಅವರ ಮದುವೆ ಆಗಿತ್ತು. ದಂಪತಿಗೆ ಎರಡು ಮಕ್ಕಳ ಸಹ ಇದ್ರು.

ಇದನ್ನೂ ಓದಿ:  Electricity Bill: ರಾಜ್ಯದ ಜನತೆಗೆ ‘ಪವರ್’ ಶಾಕ್; ಜುಲೈ 1 ರಿಂದ ವಿದ್ಯುತ್ ಬಿಲ್ ಏರಿಕೆ, ಎಷ್ಟು ಹೆಚ್ಚಳ?

ಗಂಡ ನಿಂಗರಾಜುಗೆ ಅಕ್ರಮ ಸಂಬಂಧದ ವಿಷಯಕ್ಕೆ ದಂಪತಿ ನಡುವೆ ಪದೇ ಪದೇ ಗಲಾಟೆ ಆಗ್ತಿತ್ತು ಎಂದು ತಿಳಿದು ಬಂದಿದೆ. ಇದೇ ವಿಚಾರಕ್ಕೆ ಬೇಸತ್ತು ಸರೋಜಾ ಅವರು ತವರು ಸೇರಿದ್ದರು. ಈ ಸಂಬಂಧ ಟಿ.ಬರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿಯ ರುಂಡ ಮುಂಡ ಕತ್ತರಿಸಿ ಕೊಲೆ

ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತ್ನಿಯ ರುಂಡ ಮುಂಡ ಬೇರೆ ಮಾಡಿ ಭಯಾನಕವಾಗಿ ಕೊಲೆಗೈದಿರುವ ಘಟನೆ ಮೈಸೂರು ತಾಲೂಕು ಚೆಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪುಟ್ಟಮ್ಮ (40) ಕೊಲೆಯಾದ ಮಹಿಳೆ. ಕೊಲೆ ಬಳಿಕ ಪತಿ ದೇವರಾಜ್ ಪರಾರಿಯಾಗಿದ್ದಾನೆ. ಈ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಪೊಲೀಸರ ಸಮಯಪ್ರಜ್ಞೆಯಿಂದ ಉಳಿಯಿತು ಯುವಕನ ಪ್ರಾಣ

ಜೆ ಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಖಿನ್ನತೆಯಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನನ್ನ ಹೊಯ್ಸಳ ಸಿಬ್ಬಂದಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಎಸ್ಐ ಚಂದ್ರಶೇಖರ್ ಹಾಗೂ ಹೆಡ್ ಕಾನ್ಸ್ಟೇಬಲ್ ಬಿ.ರಮೇಶ್ ಅವರು ಯುವಕನನ್ನು ರಕ್ಷಣೆ ಮಾಡಿದ್ದಾರೆ.

112 ಸಹಾಯವಾಣಿಗೆ ಸ್ನೇಹಿತನಿಂದ ಕರೆ

ಮಾನಸಿಕ ಖಿನ್ನತೆಯಿಂದ 24 ವರ್ಷದ ಯುವಕ ಕೈ ಕುಯ್ದುಕೊಂಡಿದ್ದನು. ಆತ್ಮಹತ್ಯೆ ಯತ್ನಕ್ಕೂ ಮುನ್ನ ಸ್ನೇಹಿತನಿಗೆ ಮೆಸೇಜ್ ಕಳುಹಿಸಿದ್ದನು. ಸ್ನೇಹಿತ ದೂರದ ಊರಿನಲ್ಲಿದ್ದ  ಕಾರಣ 112 ಸಹಾಯವಾಣಿಗೆ ಕರೆ ಮಾಡಿ ಗೆಳೆಯನ ಸಂದೇಶ ಮತ್ತು ಆತನ ವಿಳಾಸ ತಿಳಿಸಿದ್ದರು. ತಕ್ಷಣ ಪಿಜಿಗೆ ತೆರಳಿದ ಪೊಲೀಸರು ಅಸ್ವಸ್ಥನಾಗಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಿಬ್ಬಂದಿಯ ಕಾರ್ಯಕ್ಕೆ ಹಿರಿಯ ಅಧಿಕಾರಿಗಳಿಂದ ಶ್ಲಾಘನೆ ವ್ಯಕ್ತವಾಗಿದೆ.

Woman committed suicide with two kids, Husband kills wife in Mysuru mrq
ಯುವಕನನ್ನು ರಕ್ಷಿಸಿದ ಪೊಲೀಸರು


ಸಂಪಿಗೆ ಬಿದ್ದು ಬುದ್ಧಿಮಾಂದ್ಯ ಬಾಲಕ ಸಾವು

ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ನೀರಿನ ಸಂಪಿಗೆ ಬಿದ್ದು ಬುದ್ಧಿಮಾಂದ್ಯ ಬಾಲಕ ಸಾವನ್ನಪ್ಪಿರುವ ಘಟನೆ ವಿದ್ಯಾರಣ್ಯಪುರ ಸಮೀಪದ ಮುನೆಶ್ವರ ಲೇಔಟ್ ನಲ್ಲಿ ನಡೆದಿದೆ. ಸಾಯಿ ಶರಣ್ (15 ) ಮೃತ ಬಾಲಕ. ಆಟವಾಡಲು ಮನೆಯಿಂದ ಹೊರಗೆ ಹೋಗಿದ್ದ ಶರಣ್ ಸೋಮವಾರ ಮಧ್ಯಾಹ್ನ ಸುಮಾರು 4 ಗಂಟೆಗೆ ಸಂಪಿನೊಳಗೆ ಬಿದ್ದಿದ್ದಾನೆ.

ಇದನ್ನೂ ಓದಿ:  Chitradurga: ಅಪ್ರಾಪ್ತೆ ಪತ್ನಿಯ ಮೇಲೆ ಪತಿ ಸ್ನೇಹಿತರಿಂದಲೇ ಗ್ಯಾಂಗ್​​ರೇಪ್; ಮೂವರ ಬಂಧನ, ಓರ್ವ ಎಸ್ಕೇಪ್

ಮೃತ ದೇಹ ರವಾನೆಯನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published by:Mahmadrafik K
First published: