• Home
  • »
  • News
  • »
  • state
  • »
  • Chitradurga: ಸೆಲ್ಫಿ ವಿಡಿಯೋ ಮಾಡಿ ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ; ಭಗತ್ ಸಿಂಗ್ ಪಾತ್ರಾಭಿನಯ ತಂದ ಸಾವು

Chitradurga: ಸೆಲ್ಫಿ ವಿಡಿಯೋ ಮಾಡಿ ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ; ಭಗತ್ ಸಿಂಗ್ ಪಾತ್ರಾಭಿನಯ ತಂದ ಸಾವು

ಅರ್ಪಿತಾ

ಅರ್ಪಿತಾ

ಸೆಲ್ಫಿ ವಿಡಿಯೋ ಮಾಡುತ್ತಿರುವಾಗ ಪುತ್ರ ಸಹ ಕಾಣಿಸಿಕೊಂಡಿದ್ದಾನೆ. ತಾಯಿ ಹಿಂದೆ ನಿಂತಿರುವ ಬಾಲಕ ಅಪ್ಪ ಎಂದು ಜೋರಾಗಿ ಕೂಗುತ್ತಿರೋದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.

  • Share this:

ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ (Mother Suicide) ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ (Hosadurga, Chitradurga) ತಾಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ. ಮಳಲಿ ಬಳಿಯ ಚೆಕ್‌ ಡ್ಯಾಂಗೆ ಹಾರಿ ಮಕ್ಕಳೊಂದಿಗೆ (Children) ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಾನಕಲ್ ಲಂಬಾಣಿ ಹಟ್ಟಿಯ ಅರ್ಪಿತಾ (28), ಮಗಳು ಮಾನಸ (6) ಮತ್ತು ಮಗ ಮದನ್ (4) ಮೃತರು. ಪತಿ ಮಂಜಾನಾಯ್ಕ್​ ಪತ್ನಿ ಅರ್ಪಿತಾಳನ್ನು ಅನುಮಾನಿಸುತ್ತಿದ್ದನು. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಹಲವು ಬಾರಿ ಜಗಳ (Quarrel) ಸಹ ನಡೆದಿದೆ ಎನ್ನಲಾಗಿದೆ. ಇದೇ ವಿಷಯವಾಗಿ ಕುಡಿದು ಬರುತ್ತಿದ್ದ ಮಂಜಾನಾಯ್ಕ್​, ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದನು ಜೊತೆಗೆ ಮಾನಸಿಕ ಕಿರುಕುಳ ಸಹ ನೀಡುತ್ತಿದ್ದನು. ಪತಿಯ ಕಿರುಕುಳದಿಂದ ಮನನೊಂದ ಅರ್ಪಿತಾ ಮಕ್ಕಳ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.


ಎಂಟು ವರ್ಷದ ಹಿಂದೆ ಕೊಂಡಜ್ಜಿ ಲಂಬಾಣಿಹಟ್ಟಿಯ ಮಂಜಾನಾಯ್ಕ್ ಮತ್ತು ಹೊಸದುರ್ಗ ತಾಲೂಕಿನ ಜಾನಕಲ್ ಲಂಬಾಣಿಹಟ್ಟಿಯ ಅರ್ಪಿತಾ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದರು. ಪತಿಯ ಕಿರುಕುಳದಿಂದ ಮನನೊಂದ ಅರ್ಪಿತಾ ಅತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ (Selfie Video) ಮಾಡಿದ್ದಾರೆ.


ಸೆಲ್ಫಿ ವಿಡಿಯೋದಲ್ಲಿ ಏನಿದೆ?


ಸೆಲ್ಫಿ ವಿಡಿಯೋದಲ್ಲಿ ಗಂಡ ತನ್ನ ಮೇಲೆ ನಡೆಸಿರುವ ಬಗ್ಗೆ ಅರ್ಪಿತಾ ಹೇಳಿಕೊಂಡಿದ್ದಾರೆ. ಪದೇ ಪದೇ ಅನುಮಾನಿಸುತ್ತಿದ್ದನು. ಸಂಸಾರದಲ್ಲಿ ಯಾವುದೂ ಸರಿ ಇರಲಿಲ್ಲ ಎಂದು ಹೇಳುತ್ತಾ ಅರ್ಪಿತಾ ಕಣ್ಣೀರು ಹಾಕಿದ್ದಾರೆ.


ಸೆಲ್ಫಿ ವಿಡಿಯೋ ಮಾಡುತ್ತಿರುವಾಗ ಪುತ್ರ ಸಹ ಕಾಣಿಸಿಕೊಂಡಿದ್ದಾನೆ. ತಾಯಿ ಹಿಂದೆ ನಿಂತಿರುವ ಬಾಲಕ ಅಪ್ಪ ಎಂದು ಜೋರಾಗಿ ಕೂಗುತ್ತಿರೋದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Woman Commits Suicide With two Children in chitradurga mrq
ಘಟನೆ ನಡೆದ ಸ್ಥಳ


ಭಗತ್ ಸಿಂಗ್ ಪಾತ್ರಾಭಿನಯ ತಂದ ಸಾವು


ಭಗತ್ ಸಿಂಗ್ ಪಾತ್ರದ ಪ್ರಾಕ್ಟೀಸ್ ವೇಳೆ ಬಾಲಕ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. 7ನೇ ತರಗತಿಯ ಸಂಜಯ್ ನವೆಂಬರ್ 1ರ ಕನ್ನಡ ರಾಜ್ಯೋತ್ಸವಕ್ಕಾಗಿ ಭಗತ್ ಸಿಂಗ್ ಪಾತ್ರ ನಿರ್ವಹಿಸಲು ಸಿದ್ಧತೆ ಮಾಡ್ತಿದ್ದ.


ಮನೆಗೆ ಬಂದ ಬಳಿಕವೂ ರಿಹರ್ಸಲ್​ಗೆ ಮುಂದಾಗಿದ್ದ. ಫ್ಯಾನಿಗೆ ನೂಲಿನ ಹಗ್ಗ ಬಿಗಿದು ಮಂಚದ ಮೇಲೆ ನಿಂತಿದ್ದ. ಬಳಿಕ ತನ್ನ ಮುಖಕ್ಕೆ ಉಲ್ಲನ್ ಟೋಪಿ ಹಾಕಿಕೊಂಡು ಜಿಗಿದಿದ್ದಾನೆ. ಹೀಗಾಗಿ, ಸಂಜಯ್ ಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.


ಹೋರಿ ಬೆದರಿಸೋ ಸ್ಪರ್ಧೆ, ಮೂವರ ಸಾವು


ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಕಳೆದ 2 ದಿನಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಣೆಗೆ ತೆರಳಿದ್ದ ಪ್ರಶಾಂತ್, ಸೊರಬ ತಾಲೂಕಿನ ಜಡೆ ಗ್ರಾಮದ ಆದಿ ಹಾಗೂ ಕಲ್ಮನೆ ಗ್ರಾಮದ ವಸಂತ ಮೃತಪಟ್ಟಿದ್ದಾರೆ. ಈ ಕುರಿತು ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ: Siddaramaiah: ನಿಮಗೆ ಧಮ್, ತಾಕತ್ತು ಇದ್ದರೆ ತನಿಖೆ ಮಾಡ್ಸಿ! ಬಿಜೆಪಿ ಸರ್ಕಾರಕ್ಕೆ ಸಿದ್ದು, ಡಿಕೆಶಿ ಸವಾಲ್​


ಶಾಸಕರ ಹೆಸರು ಬರೆದು ಆತ್ಮಹತ್ಯೆಗೆ ಯತ್ನ


ಧಾರವಾಡದಲ್ಲಿ ಮಹಿಳೆಯೊಬ್ಬರು ಶಾಸಕ ಅರವಿಂದ ಬೆಲ್ಲದ್ (MLA Arvind Bellad) ಹೆಸರನ್ನು ಡೆತ್​ನೋಟ್​ನಲ್ಲಿ (Death note) ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಶಕುಂತಲಾ ಮನಸೂರ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.


cm basavaraj bommai reacts rahul gandhi letter saklb mrq
ಶಾಸಕ, ಅರವಿಂದ್ ಬೆಲ್ಲದ್


ಇನ್ನು ಶಕುಂತಲಾ ಕಿರಿಯ ಸಹಾಯಕಿಯಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿದ್ದಾರೆ. ಆದ್ರೆ ಕಳೆದ 4 ತಿಂಗಳ ಹಿಂದೆ ಶಕುಂತಲಾ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಕೆಲಸದಿಂದ ತೆಗೆದಿದ್ದಕ್ಕೆ ಶಾಸಕ ಬೆಲ್ಲದಗೆ ಮನವಿ ಮಾಡಲು ಶಕುಂತಲಾ ಮುಂದಾಗಿದ್ರು. ಈ ವೇಳೆ ಶಾಸಕರು ನನಗೇ ಅಪಮಾನ ಮಾಡಿದ್ದಾರೆ. ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ಶಾಸಕರೇ ನನ್ನನ್ನು ಕೆಲಸದಿಂದ ತೆಗೆಸಿದ್ದಾರೆ ಎಂದು ಆರೋಪಿಸಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.


ಇದನ್ನೂ ಓದಿ:  Teppotsava: ಬಯಲು ಸೀಮೆಯಲ್ಲಿ ನಡೆಯಿತು ಅದ್ಧೂರಿ ತೆಪ್ಪೋತ್ಸವ!


ಇನ್ನು ತಮ್ಮ ವಿರುದ್ಧದ ಆರೋಪಕ್ಕೆ ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ನಾನೇನು ಹೇಳಲ್ಲ, ತಪ್ಪು ಮಾಡಿದವರ ಮೇಲೆ ಕ್ರಮ‌ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

Published by:Mahmadrafik K
First published: