ಮೈಸೂರು: ಆಕೆಯ ವಯಸ್ಸು (Age) ಇನ್ನೂ ಚಿಕ್ಕದು. ಇನ್ನೂ ಬಾಳಿ, ಬದುಕಬೇಕಾಗಿದ್ದವಳು. ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡು ಗಂಡನ ಮನೆಗೆ ಕಾಲಿಟ್ಟಿದ್ದಳು. ಆದರೆ ಕಾಲಿಟ್ಟ ಘಳಿಗೆಯಿಂದ ಆಕೆಯ ಕನಸೇ ಕಮರಿ ಹೋಗಿತ್ತು. ಹೊಸ ಬಾಳಿಗೆ ಬೆಳಕಾಗಬೇಕಾದ ಮದುವೆ (Marrige) ಆಕೆಯ ಬಾಳಿಗೆ ನೇಣು ಕುಣಿಕೆಯಾಗಿ ಮಾರ್ಪಟ್ಟಿತ್ತು. ಇಂತಹ ಮನಃ ಕಲಕುವ ಘನಟೆ ನಡೆದಿದ್ದು ಮೈಸೂರಿನಲ್ಲಿ (Mysore). ಈ ದುರ್ದೈವಿಯ ಹೆಸರು ನಂದಿನಿ. ವಯಸ್ಸು ಇನ್ನೂ 25 ವರ್ಷ ಅಷ್ಟೇ. ಆಗಲೆ ಈಗ ಜೀವನ ಸಾಕೆನಿಸಿ, ಬಾರದ ಲೋಕಕ್ಕೆ ಹೋಗಿದ್ದಾಳೆ. ಈಕೆ ಮೈಸೂರಿನ ಟಿ.ಕೆ. ಬಡಾವಣೆಯ (Layout) ನಿವಾಸಿ. ಮದುವೆಯಾದ ಎರಡೇ ವರ್ಷಕ್ಕೆ ನಂದಿನಿ ಈಗ ನೆನಪು ಮಾತ್ರವಾಗಿ ಉಳಿದಿದ್ದಾರೆ. ಗಂಡನ (Husband) ಹಾಗೂ ಅವರ ಮನೆಯವರ ವರದಕ್ಷಿಣೆ (Dowry) ದಾಹಕ್ಕೆ ನಂದಿನಿ ಬಲಿಯಾಗಿದ್ದಾಳೆ.
ವರದಕ್ಷಿಣೆ ಕೊಟ್ಚು, ಅದ್ಧೂರಿಯಾಗಿ ಮದುವೆ ಮಾಡಿದ್ದ ತಂದೆ
ಅಂದ ಹಾಗೇ ಮೈಸೂರಿನ ಜೆ.ಪಿ. ನಗರದ ನಿವಾಸಿಗಳಾದ ಸಾವಿತ್ರಮ್ಮ ಮಹದೇವ ಶೆಟ್ಟಿ ಎಂಬುವವರು ಎರಡು ವರ್ಷಗಳ ಹಿಂದೆ ತಮ್ಮ ಮಗಳು ನಂದಿನಿ ವಿವಾಹ ಮಾಡಿದ್ದರಿ. ವಿಜಯ್ ಎಂಬಾತನಿಗೆ ಮದುವೆ ಮಾಡಿ ಕೊಟ್ಟಿದ್ದರು. ಮದುವೆ ವೇಳೆ ಸಾಕಷ್ಟು ವರದಕ್ಷಿಣೆ ನೀಡಲಾಗಿತ್ತು.
ಒಂದೂವರೆ ಲಕ್ಷ ನಗದು, 50 ಗ್ರಾಂ ಚಿನ್ನ ನೀಡಿ ಅದ್ದೂರಿಯಾಗಿ ಮದುವೆ ಮಾಡಿ ಕೊಟ್ಟಿದ್ದರು. ಮದುವೆ ಆದ ಕೆಲ ದಿನಗಳು ಎಲ್ಲವೂ ಚೆನ್ನಾಗಿಯೇ ಸಂಸಾರವು ಇತ್ತು. ಆದ್ರೆ ದಿನ ಕಳೆದಂತೆ ವಿಜಯನ ವರಸೆಯೇ ಬದಲಾಗಿತ್ತು.
ಸ್ವಲ್ಪ ದಿನಗಳಲ್ಲೇ ಶುರುವಾಯ್ತು ವರದಕ್ಷಿಣೆ ಕಿರುಕುಳ
ತನ್ನ ಕುಟುಂಬದ ಸದಸ್ಯರ ಜೊತೆ ಸೇರಿ ನಂದಿನಿಗೆ ವರದಕ್ಷಿಣೆಗಾಗಿ ಕಿರುಕುಳ ಕೊಡಲು ಆರಂಭಿಸಿದ್ದನಂತೆ. ಅಗಾಗ ಹಣ ತೆಗೆದುಕೊಂಡು ಬಾ ಎಂದು ಮಾನಸಿಕವಾಗಿ ಕಿರುಕುಳ ನೀಡೋದು, ಹೊಡೆಯೋದು ಮಾಡುತ್ತಿದ್ದನಂತೆ. ಸರಿಯಾಗಿ ಕೆಲಸಕ್ಕೂ ಹೋಗದೆ ಹಣಕ್ಕಾಗಿ ಪೀಡಿಸುತ್ತಿದ್ದನಂತೆ
ಇದನ್ನೂ ಓದಿ: Shocking News: ಬಿಸಿ ಸಾಂಬಾರ್ ಪಾತ್ರೆಯಲ್ಲಿ ಬಿದ್ದ ಮಗು, Birthday ದಿನವೇ ಕಣ್ಮುಚ್ಚಿದ ಕಂದಮ್ಮ!
ಮಗಳು, ಅಳಿಯನಿಗೆ ಮನೆ ಮಾಡಿ ಕೊಟ್ಟಿದ್ದ ಹೆತ್ತವರು
ಗಂಡನ ಕಾಟ ತಾಳಲಾರದೇ ನಂದಿನಿ ತವರು ಮನೆಗೆ ಬಂದು ಕಣ್ಣೀರಾಗುತ್ತಿದ್ದಳು. ಹೀಗಾಗಿ ಈತನ ಕಾಟ ತಡೆಯಲಾರದೆೇ, ಮಗಳ ನೋವು ನೋಡಲಾಗದೆ 6 ತಿಂಗಳ ಹಿಂದೆ ನಂದಿನಿ ಪೋಷಕರೇ 4 ಲಕ್ಷ ಹಣ ನೀಡಿ, ಮೈಸೂರಿನ ಟಿ.ಕೆ ಬಡಾವಣೆಯಲ್ಲಿ ಮನೆ ಮಾಡಿ ಕೊಟ್ಟಿದ್ದಾರೆ.
ಈ ನಡುವೆ ನಂದಿನಿಗೆ ಹೆಣ್ಣು ಮಗುವಾಗಿದೆ. ಮಗುವಾದ ನಂತರವೂ ಹಿಂಸೆ ಮತ್ತಷ್ಟು ಹೆಚ್ಚಾಗಿದೆ. ವಿಜಯ್ ಜೊತೆ ಅವರ ಮನೆಯವರು ಸೇರಿಕೊಂಡು ಮೃತ ನಂದಿನಿಗೆ ಕಿರುಕುಳ ಕೊಡಲು ಆರಂಭಿಸಿದ್ದಾರೆ.
“ನಿಮ್ಮ ಅಕ್ಕ ನೇಣು ಹಾಕಿಕೊಂಡಿದ್ದಾಳೆ” ಎಂದ ಭಾವ
ನಿನ್ನೆಯೂ ಇದ್ದಕ್ಕಿದ್ದಂತೆ ನಂದಿನಿ ತಂಗಿ ದೀಪಿಕಾಗೆ ಕರೆ ಮಾಡಿದ ವಿಜಯ್, ನಿಮ್ಮ ಅಕ್ಕ ನೇಣು ಹಾಕಿಕೊಂಡಿದ್ದಾಳೆ. ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇನೆ ಅಂತಾ ಹೇಳಿದ್ದಾನೆ. ಆಸ್ಪತ್ರೆಗೆ ದೌಡಾಯಿಸಿ ಬಂದ ನಂದಿನಿ ಮನೆಯವರಿಗೆ ಶಾಕ್ ಕಾದಿತ್ತು. ನಂದಿನಿ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಇದನ್ನೂ ಓದಿ: Murder: ಸಾಲಕೊಟ್ಟು ಪ್ರಾಣ ಕಳೆದುಕೊಂಡ ಸ್ನೇಹಿತ, ದುಡ್ಡು ವಾಪಸ್ ಕೇಳಿದ್ದಕ್ಕೆ ಡೆಡ್ಲಿ ಮರ್ಡರ್!
”ನಂದಿನಿಯನ್ನು ಕೊಂದೇ ಬಿಟ್ಟರಾ ಧನದಾಹಿಗಳು?
ನಂದಿನಿಗೆ ಹಲ್ಲೆ ಮಾಡಿ ವಿಜಯ್ ಹಾಗೂ ಆತನ ಮನೆಯವರು ಕೊಲೆ ಮಾಡಿದ್ದಾರೆ ಅನ್ನೋದು ನಂದಿನಿ ಮನೆಯವರ ಆರೋಪ. ಈ ಸಂಬಂಧ ಸರಸ್ವತಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ವಿಜಯನನ್ನು ವಶಕ್ಕೆ ಪಡೆದಿದ್ದಾರೆ. ತನಿಖೆಯ ನಂತರ ಇದು ಆತ್ಮಹತ್ಯೆಯೋ, ಕೊಲೆಯೋ ಅನ್ನೋದು ಸಾಬೀತಾಗಲಿದೆ.
ಇದೆಲ್ಲಾ ಏನೇ ಇರಲಿ ಹೊಸಬಾಳಿನ ಕನಸು ಹೊತ್ತು ಹೋಗಿದ್ದ ನಂದಿನಿಗೆ ಮದುವೆಯೇ ಮೃತ್ಯುಪಾಶವಾಗಿದ್ದು ಮಾತ್ರ ದುರಂತ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ