ಮಂಡ್ಯ (ಜೂ. 2): ತನ್ನ ಪುಟ್ಟ ಕಂದಮ್ಮನ (Child) ಎದುರೇ ತಾಯಿ ನೇಣಿಗೆ ಶರಣಾಗಿರುವ ಮನಕಲಕುವ ಘಟನೆ ಮಂಡ್ಯದಲ್ಲಿ (Mandya) ಜರುಗಿದೆ. ಕೆಂಪೇಗೌಡ ಬಡಾವಣೆಯಲ್ಲಿ ವಾಸವಿದ್ದ ರವಿಶಂಕರ್ (Ravishankar) ಪತ್ನಿ ಕವಿತಾ (Kavita) ತನ್ನ ಒಂದು ವರ್ಷದ ಮಗುವಿನ ಮುಂದೆಯೇ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ. ತಾಯಿಯನ್ನು(Mother) ನೋಡಿದ ಒಂದು ವರ್ಷದ ಎಳೆಯ ಕಂದಮ್ಮ ಅಮ್ಮ, ಅಮ್ಮ ಎಂದು ಸುಮಾರು ಎರಡೂವರೆ ಗಂಟೆಗಳ ಕಾಲ (2 Hours) ಮಮ್ಮಲ ಮರುಗಿದೆ.
ಮಗು ಅಳು ಕಂಡು ಮನೆಗೆ ಬಂದ ಸ್ಥಳೀಯರು
ಮಗುವಿನ ಆಕ್ರಂದನ ಕೇಳಿ ಅಕ್ಕ-ಪಕ್ಕದ ಮನೆಯವರು ಕಿಟಕಿಯಿಂದ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಒಂದು ಕಡೆ ಕವಿತಾ ನೇಣು ಬಿಗಿದುಕೊಂಡಿದ್ದು, ಮತ್ತೊಂದು ಕಡೆ ಪುಟ್ಟ ಕಂದಮ್ಮ ಗೋಳಾಡುವ ದೃಶ್ಯ ಮನ ಕಲಕುವಂತಿದೆ. ನಂತರ ಕವಿತಾ ಪತಿ ರವಿಶಂಕರ್ ಮತ್ತು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕವಿತಾಗೆ ಇಬ್ಬರು ಪುಟ್ಟ ಮಕ್ಕಳಿದ್ರು
ರವಿಶಂಕರ್ ಮತ್ತು ಕವಿತಾ ಕಳೆದ ಒಂಭತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ ಏಳು ವರ್ಷದ ಗಂಡು ಹಾಗೂ ಒಂದು ವರ್ಷದ ಹೆಣ್ಣು ಮಗುವಿದೆ. ದೈಹಿಕ ಶಿಕ್ಷಕರಾಗಿರದ್ದ ರವಿಶಂಕರ್ ಮೂಲತಃ ಮಂಡ್ಯದವರಾಗಿದ್ದರು ಸಹ ಹಲವು ವರ್ಷಗಳಿಂದ ಹೆಂಡತಿ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲಸಿದ್ದರು. ಇದೀಗ ರವಿಶಂಕರ್ಗೆ ಮೈಸೂರಿನಲ್ಲಿ ಕೆಲಸ ಸಿಕ್ಕಿತ್ತು. ಈ ಕಾರಣ ಮಂಡ್ಯದ ಕೆಂಪೇಗೌಡ ಬಡಾವಣೆಯಲ್ಲಿ ಕಳೆದ ಮೂರು ತಿಂಗಳಿನಿಂದ ಬಾಡಿಗೆ ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ಇದ್ದರು.
ಇದನ್ನೂ ಓದಿ: Hijab Controversy: ಹಿಜಾಬ್ ಧರಿಸಿ ಕಾಲೇಜ್ಗೆ ಬಂದ ವಿದ್ಯಾರ್ಥಿನಿಯರು! ಉಪ್ಪಿನಂಗಡಿಯಲ್ಲಿ 6 ಮಂದಿ ಅಮಾನತು
ಸಂತೋಷವಾಗಿಯೇ ಇದ್ದ ದಂಪತಿ
ಅಕ್ಕ-ಪಕ್ಕದ ಮನೆಯವರು ಹೇಳುವ ಪ್ರಕಾರ ಇವರು ಸಂತೋಷದಿಂದಲೇ ಇದ್ದರು. ಕಳೆದ ಮೂರು ದಿನಗಳ ಹಿಂದೆ ಎರಡನೇ ಮಗುವಿನ ಮೊದಲ ಹುಟ್ಟುಹಬ್ಬವನ್ನು ಸಹ ಮಾಡಿದ್ರು. ಆದ್ರೆ ಅದ್ಯಾವ ಕಾರಣಕ್ಕೆ ಹೀಗೆ ಕವಿತಾ ಮಾಡಿಕೊಂಡಿದ್ದಾಳೆ ಎಂದು ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ.
ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ
ಕವಿತಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ನೋಟ್ನ್ನು ಬರೆದಿಟ್ಟಿದ್ದು, ಇಂದು ನನ್ನ ಕೊನೆಯ ದಿನವಾಗಿದೆ. ಎಲ್ಲ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ. ನನ್ನ ಎಲ್ಲ ಆಭರಣಗಳು ನನ್ನ ಮಗ ಮಗಳಿಗೆ ಸೇರಬೇಕು. ಇಲ್ಲವಾದರೆ ನಾನು ಮತ್ತು ನನ್ನ ದೇವರು ಕ್ಷಮಿಸುವುದಿಲ್ಲ. ಇವು ನಾನು ಕಷ್ಟಪಟ್ಟ ಆಭರಣಗಳು ಇಂತಿ ದುರ್ದೈವಿ ಕವಿತಾ ಎಂದು ಬರೆದಿದ್ದಾರೆ.
ಐಪಿಎಲ್ನಿಂದ ಹೆಚ್ಚಾಯ್ತು ಕ್ರಿಕೆಟ್ ಬೆಟ್ಟಿಂಗ್ : 33 ಆರೋಪಿಗಳ ಬಂಧನ
ಬೆಂಗಳೂರು: ನಗರದ ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಾದ ಆಯುಷ್ ಗುಪ್ತಾ ಹಾಗೂ ಪ್ರದೀಪ್ ಯಾದವ್ ನೆದರ್ಲೆಂಡ್ಸ್ ಮತ್ತು ವೆಸ್ಟ್ ಇಂಡಿಸ್ ನಡುವಣ ಪಂದ್ಯಕ್ಕೆ ಆನ್ಲೈನ್ ಮೂಲಕ ಬೆಟ್ಟಿಂಗ್ ಆಡಿಸುತ್ತಿದ್ದರು. ಈ ವೇಳೆ, ದಾಳಿ ಮಾಡಿದ ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿ ಅವರಿಂದ 10.45ಲಕ್ಷ ನಗದು ಹಾಗೂ ಮೂರು ಮೊಬೈಲ್ಗಳನ್ನ ಸೀಜ್ ಮಾಡಿದ್ದಾರೆ.
ಇದನ್ನೂ ಓದಿ: Text Book Row: ಪಠ್ಯ ಪರಿಷ್ಕರಣಾ ವಿವಾದ ಚುನಾವಣಾ ಗಿಮಿಕ್; ಪ್ರಹ್ಲಾದ್ ಜೋಶಿ ಕಿಡಿ
ಈ ಬಾರಿ ಐಪಿಎಲ್ ಸೀಸನ್ ವೇಳೆ ಹೆಚ್ಚಾಗಿ ಬೆಟ್ಟಿಂಗ್ ನಡೆದಿದ್ದು, ಸಿಸಿಬಿ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದವರ ವಿರುದ್ದ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. 2022 ಐಪಿಎಲ್ ಸೀಸನ್ನಲ್ಲಿ ಬೆಟ್ಟಿಂಗ್ ಸಂಬಂಧಿಸಿದಂತೆ ಒಟ್ಟು 29 ಕೇಸ್ ದಾಖಲಿಸಿ 33 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.ಒಟ್ಟಾರೆಯಾಗಿ ಆರೋಪಿಗಳಿಂದ 81 ಲಕ್ಷ ಸೀಜ್ ಮಾಡಲಾಗಿದೆ. ಇದರಲ್ಲಿ ನಗರದ ವೆಸ್ಟ್ ಮತ್ತು ಸೌತ್ ಡಿವಿಷನ್ನಲ್ಲಿ ಅತಿ ಹೆಚ್ಚು ಬೆಟ್ಟಿಂಗ್ ನಡೆದಿದೆ. ಬಸವನಗುಡಿ ಠಾಣಾ ವ್ಯಾಪ್ತಿಯೊಂದರಲ್ಲಿ ಆರು ಬೆಟ್ಟಿಂಗ್ ಕೇಸ್ ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ