• Home
  • »
  • News
  • »
  • state
  • »
  • Suicide: ಹೆಣ್ಣುಮಕ್ಕಳನ್ನು ಬಾವಿಗೆ ತಳ್ಳಿ ತಾನು ಸೂಸೈಡ್ ಮಾಡಿಕೊಂಡ ತಾಯಿ! ಸಾವಿನ ಹಿಂದೆ ಹಲವು ಅನುಮಾನ

Suicide: ಹೆಣ್ಣುಮಕ್ಕಳನ್ನು ಬಾವಿಗೆ ತಳ್ಳಿ ತಾನು ಸೂಸೈಡ್ ಮಾಡಿಕೊಂಡ ತಾಯಿ! ಸಾವಿನ ಹಿಂದೆ ಹಲವು ಅನುಮಾನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಜಯಪುರದಲ್ಲಿ ತಾಯಿಯೊಬ್ಬಳು ತನ್ನ ಎರಡು ಮುದ್ದಾದ ಹೆಣ್ಣು ಮಕ್ಕಳನ್ನು ಬಾವಿಗೆ ತಳ್ಳಿ ತಾನು ಬಾವಿಗೆ ಹಾರಿ ಸೂಸೈಡ್ ಮಾಡಿಕೊಂಡಿದ್ದಾಳೆ. ಆ ತಾಯಿಯೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎಂದು ತಿಳಿದು ಬಂದಿದೆ.

  • Share this:

ಇತ್ತೀಚಿನ ದಿನಗಳಲ್ಲಿ ಕೆಲವರು ಸಣ್ಣ ಪುಟ್ಟ ಪುಟ್ಟ ವಿಷಯಕ್ಕೂ ಆತ್ಮಹತ್ಯೆ (Suicide) ಮಾಡಿಕೊಳ್ಳುತ್ತಾರೆ. ಇದೇ ರೀತಿಯ ಸುದ್ದಿಗಳನ್ನು ದಿನವೂ ನಾವು ಕೇಳುತ್ತಲೇ ಇರುತ್ತೇವೆ. ದಿನದಿಂದ ದಿನಕ್ಕೆ ಆತ್ಮಹತ್ಯೆ ಕೇಸ್‍ಗಳು (Cases) ಸಹ ಹೆಚ್ಚಾಗುತ್ತಲೇ ಇವೆ. ಗಂಡ ಬೈದ ಅಂತ, ಅಪ್ಪ ಮೊಬೈಲ್ (Mobile) ಕೊಡಿಸಲಿಲ್ಲ ಅಂತ, ಅಮ್ಮ ಇನ್ನೇನೋ ಕೊಡಲಿಲ್ಲ ಅಂತ ಆತ್ಮಹತ್ಯೆ ಮಾಡಿಕೊಳ್ಳುವವರನ್ನು ನೋಡಿದ್ದೇವೆ. ಮಾನಸಿಕಿ ಅಸ್ಥಿರತೆ ಕಾಡುತ್ತಿದ್ದಾರೆ ಮಾತ್ರ ಆತ್ಮಹತ್ಯೆಯಂತಹ ಕೃತ್ಯವೆಸಗಲು ಪ್ರೇರೆಪಿಸುತ್ತದೆ. ವಿಜಯಪುರದಲ್ಲಿ (Vijaya Pura) ತಾಯಿಯೊಬ್ಬಳು ತನ್ನ ಎರಡು ಮುದ್ದಾದ ಹೆಣ್ಣು ಮಕ್ಕಳನ್ನು ಬಾವಿಗೆ ತಳ್ಳಿ ತಾನು ಬಾವಿಗೆ ಹಾರಿ ಸೂಸೈಡ್ ಮಾಡಿಕೊಂಡಿದ್ದಾಳೆ. ಆ ತಾಯಿಯೂ ಮಾನಸಿಕ ಖಿನ್ನತೆಯಿಂದ (Mentally Disturbed) ಬಳಲುತ್ತಿದ್ದಳು ಎಂದು ತಿಳಿದು ಬಂದಿದೆ.


ಮಕ್ಕಳನ್ನು ಆ ತಾಯಿ ಬಾವಿಗೆ ತಳ್ಳಿದ್ದೇಕೆ?
ಈ ಘಟನೆ ನಡೆದಿರುವುದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಂದಿನಗೂರು ಗ್ರಾಮದಲ್ಲಿ. ಅವ್ವಮ್ಮಾ ಮತ್ತು ಶ್ರೀಶೈಲ ಎಂಬ ದಂಪತಿಗೆ ನಾಲ್ವರು ಹೆಣ್ಣು ಮಕ್ಕಳಿದ್ದರು. ಶ್ರೈಲನದ್ದು ಕುರಿ ಕಾಯೋ ಕೆಲಸ. ಪ್ರತಿ ನಿತ್ಯ ಕುರಿ ಕಾದು, ಅದರ ಸಂಪಾದನೆಯಿಂದಲೇ ಮನೆ ನಡೆಸಿಕೊಂಡು ಹೋಗುತ್ತಿದ್ದ. ಇವತ್ತು ಸಹ ಎದಿನಂದತೆ ಕುರಿ ಕಾಯಲು ಹೋಗಿದ್ದ ಆಗ ಅವ್ವಮ್ಮಾ ತನ್ನ ಇಬ್ಬರು ಪುಟಾಣಿ ಮಕ್ಕಳನ್ನು ಕೆರದುಕೊಂಡು ಹೋಗಿ ಬಾವಿಗೆ ತಳ್ಳಿದ್ದಾಳೆ. ನಂತರ ತಾನು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವ್ವಮ್ಮಾ ಕೆಲ ದಿನಗಳಿಂದ ಮಾನಿಸಿಕ ಖಿನ್ನತೆಯಿಂದ ಬಳಲುತ್ತಿದ್ದಳಂತೆ ಅದಕ್ಕೆ ಈ ರೀತಿ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.


ನಾಲ್ಕೂ ಹೆಣ್ಣು ಮಕ್ಕಳೆಂದು ಬೇಸತ್ತಿದ್ದಳಾ ತಾಯಿ?
ಗಂಡು ಮಗು ಬೇಕೆಂದು ಆಸೆ ಇಟ್ಟುಕೊಂಡಿದ್ದ ಅವ್ವಮ್ಮಾ ಮತ್ತು ಶ್ರೀಶೈಲ ದಂಪತಿಗೆ 4 ಮಕ್ಕಳು ಹೆಣ್ಣಾಗಿಯೇ ಹುಟ್ಟಿದ್ದವು. 3 ಮಕ್ಕಳಾದ ಮೇಲೆ ಗಂಡು ಹುಟ್ಟುತ್ತೆ. 3 ಹೆಣ್ಣು ಮಕ್ಕಳ ಮೇಲೆ ಗಂಡು ಹುಟ್ಟಿದ್ರೆ ಒಳ್ಳೆಯದು. ನಮ್ಮ ಅದೃಷ್ಟ ಬದಲಾಗುತ್ತೆ ಅಂದು ಕೊಂಡಿದ್ರು. ಆದ್ರೆ ನಾಲ್ಕನೇ ಮಗುವು ಹೆಣ್ಣಾಯ್ತು. ಅದರಿಂದ ಅವ್ವಮ್ಮಾ ಸ್ವಲ್ಪ ಬೇಸರದಲ್ಲಿದ್ರು. ಸಂಬಂಧಿಕರ ಚುಚ್ಚು ಮಾತುಗಳು ಬೇರೆ ಆಕೆಯನ್ನು ನೋಯಿಸಿದ್ದವು. ಆದ ಕಾರಣ ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಆದ್ದರಿಂದಲೇ ಮಕ್ಕಳು ಬಾವಿಗೆ ತಳ್ಳಿ, ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.


ಇದನ್ನೂ ಓದಿ: Student Suicide: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮೆಡಿಕಲ್​ ವಿದ್ಯಾರ್ಥಿನಿ; ರೈಲಿಗೆ ತಲೆಕೊಟ್ಟು ಆತ್ಮಹತ್ಯೆ


ಉಳಿದ ಇಬ್ಬರು ಹೆಣ್ಣು ಮಕ್ಕಳು ಉಳಿದಿದ್ದು ಹೇಗೆ?
ಮಾನಸಿಕ ಕಾಯಿಲೆಯಿಂದ ಬಳುತ್ತಿದ್ದ ಅವ್ವಮ್ಮಾ ಸಾಯುವಂತ ಕೆಟ್ಟ ನಿರ್ಧಾರ ಮಾಡಿದ್ದಾಳು. ಮನೆಯಲ್ಲಿ ಬಡತನ ಕೂಡ ಅದಕ್ಕೆ ಪ್ರೇರೆಪಿಸುತ್ತಿತ್ತು. ಅದಕ್ಕೆ
3 ವರ್ಷ ಹಾಗೂ 1 ವರ್ಷದ ಹೆಣ್ಣು ಮಗುವಿನೊಂದಿಗೆ ಸೂಸೈಡ್ ಮಾಡಿಕೊಂಡಿದ್ದಾಳೆ. ಉಳಿದ ಇಬ್ಬರು ಹೆಣ್ಣು ಮಕ್ಕಳು ಶಾಲೆಗೆ ಹೋಗಿದ್ದರಿಂದ ಬದುಕುಳಿದ್ದಾರೆ. ದೇವರಹಿಪ್ಪರಗಿ ಪೆೊಲೀಸ್ ಠಾಣಾ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ: Suicide: ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ಯುವಕ ನೇಣಿಗೆ ಶರಣು


ಏನೇ ಕಷ್ಟ ಬಂದ್ರೂ ಧೈರ್ಯವಾಗಿದ್ರೆ ಏನಾನ್ನದಾರೂ ಎದುರಿಸಬಹುದು. ಈ ರೀತಿ ಸೂಸೈಡ್ ಮಾಡಿಕೊಂಡರೆ ಏನೂ ಪ್ರಯೋಜನ. ಉಳಿದ 2 ಹೆಣ್ಣು ಮಕ್ಕಳಿಗೆ ಯಾರು ದಿಕ್ಕು. ಯಾರೂ ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರವನ್ನು ಮಾಡಬಾರದು. ಎಲ್ಲದಕ್ಕೂ ಸಾವೊಂದೆ ಪರಿಹಾರವಲ್ಲ. ಅದರಿಂದಾಚೆಗೂ ಜಗತ್ತು ಇದೆ. ತಮ್ಮ ಪ್ರೀತಿ ಪಾತ್ರ ಜನರಿಗಾದ್ರೂ ನಾವು ಬದುಕಬೇಕು. ಬದುಕಿದ್ದು ಗೆದ್ದು ತೋರಿಸಬೇಕು. ಸತ್ತರೆ, ಸಾಯುವವರಿಗಿಂದ ಬದುಕಿರೋ ಜನರಿಗೆ ಹೆಚ್ಚು ಕಷ್ಟ. ಅವರು ಸತ್ತವರ ನೆನಪಿನಲ್ಲೇ ಕಾಲ ಕಳೆಯುತ್ತಾರೆ. ಕೆಲವರಿಗೆ ಏಕಾಂಗಿ ತನ ಕಾಡುತ್ತೆ. ಆತ್ಮವಿಶ್ವಾಸದಿಂದ ಛಲ ಬಿಡದೇ ಬದುಕಿ. ಯಾರೂ ಸಾಯೋ ಯೋಚನೆ ಕೂಡ ಮಾಡಬೇಡಿ.

Published by:Savitha Savitha
First published: