Kodagu: ಬನ್ನಿ, ಬನ್ನಿ ಸಬ್ಸಿಡಿ ಲೋನ್ ಕೊಡಿಸ್ತೀನಿ ಅಂತ ಹೇಳಿ ಟೋಪಿ ಹಾಕಿದ ಲೇಡಿ

ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದೇನೆ ಎಂದು ಜನರು ನಂಬಿಸಿ ದಾಖಲೆ ಪಡೆದುಕೊಂಡ ಮಹಿಳೆ ಕುಸುಮಾವತಿ ಇನ್ನೇನು ಲೋನ್ ಸ್ಯಾಂಕ್ಷನ್ ಆಗಿಬಿಡುತ್ತದೆ. ಹೀಗಾಗಿ ನಿಮಗೆ ಕೆನರಾ ಬ್ಯಾಂಕಿನಲ್ಲಿ ಖಾತೆ ತೆರೆಯಬೇಕು ಅಂತ ಪ್ರತಿಯೊಬ್ಬರಿಂದ ಹಣ ಪಡೆದುಕೊಂಡಿದ್ದಳು.

ಕುಸುಮಾವತಿ

ಕುಸುಮಾವತಿ

  • Share this:
ಕೊಡಗು: ಸರ್ಕಾರದ ಯಾವುದಾದರು ಸಬ್ಸಿಡಿ ಲೋನ್ (Subsidy Loan) ಸಿಕ್ಕರೆ ಯಾರು ಬೇಡ ಅಂತಾರೆ ಹೇಳಿ. ಅದರಲ್ಲೂ ಮೂರು ಲಕ್ಷದವರೆಗೆ ಯಾವುದೇ ಬಡ್ಡಿ ಇಲ್ಲದೇ ಹಣ (Money) ಸಿಕ್ಕರೆ ನಮ್ಮ ಸಮಸ್ಯೆಗಳನ್ನು ನೀಗಿಸಿಕೊಳ್ಳಬಹುದಲ್ಲಾ ಎನ್ನುವ ಮಹದಾಸೆಯಲ್ಲಿ ಈ ಜನರಿದ್ದರು. ಜನರ ಈ ಆಸೆಯನ್ನೇ ದುರ್ಬಳಕೆ ಮಾಡಿಕೊಂಡ ಮಹಿಳೆಯರಿಬ್ಬರು (Woman) ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮಗಳಿಂದ ಮೂರು ಲಕ್ಷ ರೂಪಾಯಿ ಸಬ್ಸಿಡಿ ಲೋನ್ ಮಾಡಿಸಿ ಕೊಡುತ್ತೇವೆ ಅಂತ ನೂರಾರು ಜನರಿಂದ ತಲಾ ಸಾವಿರ ರೂಪಾಯಿ ಹಣಪಡೆದು ಅಮಾಯಕ ಜನರಿಂದ ದೋಖಾ ಮಾಡಿದ್ದಾರೆ. ಹೌದು, ಕೊಡಗು ಜಿಲ್ಲೆ ಕುಶಾಲನಗರ (Kushalanagara, Kodagu) ತಾಲ್ಲೂಕಿನ ಮಾದಾಪುರ, ಗುಮ್ಮನಕೊಲ್ಲಿ, ಏಳನೇ ಹೊಸಕೋಟೆ ಸೇರಿದಂತೆ ಸುತ್ತಮುತ್ತ ಗ್ರಾಮಗಳ ನೂರಾರು ಜನರಿಗೆ ಮೋಸ ಮಾಡಿದ್ದಾರೆ.

ಸಂಕಷ್ಟದಲ್ಲಿರುವ ಎಷ್ಟೋ ಕುಟುಂಬಗಳು ಸಾಲ ಸಿಕ್ಕರೆ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಮಹಿಳೆಯರು ಹೇಳಿದಂತೆ ಪ್ಯಾನ್‍ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳನ್ನು ನೀಡಿದ್ದಾರೆ.

ಒಬ್ಬೊಬ್ಬರಿಂದ ಒಂದು ಸಾವಿರ ರೂಪಾಯಿ

ತಾನು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದೇನೆ ಎಂದು ಜನರು ನಂಬಿಸಿ ದಾಖಲೆ ಪಡೆದುಕೊಂಡ ಮಹಿಳೆ ಕುಸುಮಾವತಿ ಇನ್ನೇನು ಲೋನ್ ಸ್ಯಾಂಕ್ಷನ್ ಆಗಿಬಿಡುತ್ತದೆ. ಹೀಗಾಗಿ ನಿಮಗೆ ಕೆನರಾ ಬ್ಯಾಂಕಿನಲ್ಲಿ ಖಾತೆ ತೆರೆಯಬೇಕು ಅಂತ ಪ್ರತಿಯೊಬ್ಬರಿಂದ ಒಂದು ಸಾವಿರ ಹಣ ಪಡೆದುಕೊಂಡಿದ್ದಾಳೆ.

ನರಿಬುದ್ದಿಯ ಸಾಚಾತನ ಬಯಲು

ಕುಶಾಲನಗರ ಭಾಗದಲ್ಲಿ ನೂರಾರು ಜನರಿಂದ ಸಾವಿರ ರೂಪಾಯಿ ಪಡೆದುಕೊಂಡಿದ್ದರೆ, ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ತಲಾ ಐದು ಸಾವಿರ ಪಡೆದುಕೊಂಡಿದ್ದಾರೆ.

Woman cheats people in the name of subsidy loan in kodagu rsk mrq
ಸಾಂದರ್ಭಿಕ ಚಿತ್ರ


ಮಹಿಳೆ ಕುಸುಮಾವತಿ ಒಂದು ವಾರವಾದರೂ ತಿರುಗಿ ನೋಡದ ಹಿನ್ನೆಲೆಯಲ್ಲಿ ಅನುಮಾನಗೊಂಡ ಮಾದಪಟ್ಟಣದ ಕೆಲವರು ಆಕೆಯ ವೈಯಕ್ತಿಕ ಹಿನ್ನಲೆಯನ್ನು ಪರಿಶೀಲಿಸಿದಾಗಲೇ ಆಕೆ ತಮಗೆ ಮೋಸ ಮಾಡುತ್ತಿದ್ದಾಳೆ ಎಂದು ಗೊತ್ತಾಗಿದೆ.

ಇದನ್ನೂ ಓದಿ:  HDD-Basavaraj Bommai: ದೇವೇಗೌಡರ ಮನೆಗೆ ಬಸವರಾಜ ಬೊಮ್ಮಾಯಿ ಭೇಟಿ; ಯಜಮಾನರೇ ನೀವು ಈಗ್ಲೂ ಮುದ್ದೆನೇ ತಿಂತೀರಾ ಎಂದು ಕೇಳಿದ ಸಿಎಂ

ಬಳಿಕ ಲೋನ್‍ಗಾಗಿ ಸಾವಿರ ರೂಪಾಯಿ ಕೊಟ್ಟಿದ್ದ ಮಾದಪಟ್ಟಣದ ಮಹಿಳೆ ಸಾವಿತ್ರಿ, ಕುಸುಮಾವತಿಗೆ ಕರೆ ಮಾಡಿ ಇನ್ನೂ 25 ಜನರು ಲೋನ್ ಮಾಡಿಸಿಕೊಳ್ಳುವುದಕ್ಕೆ ಸಿದ್ಧವಿದ್ದಾರೆ ಬನ್ನಿ ಎಂದು ಗ್ರಾಮಕ್ಕೆ ಕರೆಸಿಕೊಂಡಿದ್ದಾರೆ. ಅಲ್ಲಿ ಆಕೆಯನ್ನು ಲಾಕ್ ಮಾಡಿ ತರಾಟೆಗೆ ತೆಗೆದುಕೊಂಡಾಗ ಆಕೆಯ ನರಿಬುದ್ದಿಯ ಸಾಚಾತನ ಬಯಲಾಗಿದೆ.

ಈ ವೇಳೆ ಹಣ ನೀಡಿದ ಮಹಿಳೆಯರೆಲ್ಲರೂ ಸಖತ್ ಕ್ಲಾಸ್ ತೆಗೆದುಕೊಂಡಿದ್ದು, ಕುಸುಮಾವತಿಯ ಬೆವರು ಇಳಿಸಿದ್ದಾರೆ.

ಮಹಿಳೆ ಹಿಂದೆ ದೊಡ್ಡ ಜಾಲ

ನಂತರ ಊರಿನವರಿಂದ ಪಡೆದುಕೊಂಡಿರುವ ಎಲ್ಲಾ ಹಣವನ್ನು ಇಲ್ಲಿಯೇ ಚುಪ್ತಾ ಮಾಡಿದರೆ ಮಾತ್ರವೇ ಬಿಡುತ್ತೇವೆ ಎಂದು ಪಟ್ಟು ಹಿಡಿದ್ದಾರೆ. ನೂರಾರು ಜನರು ಸೇರಿ ಗಲಾಟೆ ಮಾಡುತ್ತಿರುವ ವಿಷಯ ತಿಳಿದು ಸ್ಥಳಕ್ಕೆ ಬಂದ ಕುಶಾಲನಗರ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಶುರುಮಾಡಿದ್ದಾರೆ. ಅಷ್ಟಕ್ಕೂ ಮಹಿಳೆಯ ಹಿಂದೆ ದೊಡ್ಡ ಜಾಲವೇ ಇದೆ ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

Woman cheats people in the name of subsidy loan in kodagu rsk mrq
ಸಾಂದರ್ಭಿಕ ಚಿತ್ರ


ಇದನ್ನೂ ಓದಿ:  PAYCM Poster​; ಮೂವರು ಪೊಲೀಸರ ವಶಕ್ಕೆ; ಒಂದೊಂದು ಠಾಣಾ ವ್ಯಾಪ್ತಿಯಲ್ಲಿ ನಾಲ್ಕೈದು ಕಡೆ ಪೋಸ್ಟರ್

ನೂರಾರು ಜನರಿಗೆ ಮೋಸ

ಈಕೆಗೆ ಮಂಗಳೂರಿನಲ್ಲಿ ಕೆಲವರು ಪರಿಚಯವಾಗಿ ಈ ಕೆಲಸ ಮಾಡುವುಕ್ಕೆ ಪುಸಲಾಯಿಸಿದ್ದರು ಎನ್ನುವುದನ್ನು ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ. ಸತ್ಯ ಕುಶಾಲನಗರ ಪೊಲೀಸರು ಕುಸುಮಾವತಿಯ ಹಿಂದೆ ಇರುವ ಗ್ಯಾಂಗ್ ಯಾವುದು ಅಂತ ಬಲೆ ಬೀಸಿ ತನಿಖೆ ಶುರು ಮಾಡಿದೆ.

ಏನೇ ಆಗಲಿ ಜನರ ಕಷ್ಟ, ಅಮಾಯಕತೆಗಳನ್ನು ಬಳಸಿಕೊಂಡು ನೂರಾರು ಜನರಿಗೆ ಹೀಗೆ ಟೋಪಿ ಹಾಕಿರುವುದು ಮಾತ್ರ ಅಕ್ಷಮ್ಯ ಅಪರಾಧ.
Published by:Mahmadrafik K
First published: