Belagavi: 3 ಮಕ್ಕಳನ್ನು ಬಿಟ್ಟು ಮನೆಯಲ್ಲಿದ್ದ ದುಡ್ಡು ಕದ್ದು, ಪರಪುರುಷನ ಜೊತೆ ಮಹಿಳೆ ಎಸ್ಕೇಪ್

ಮನೆಯಲ್ಲಿದ್ದ ಹಣ ದೋಚಿಕೊಂಡು ಪರ ಪುರುಷನ ಜೊತೆ ಮಹಿಳೆ ಪರಾರಿಯಾಗಿರೋ ಘಟನೆ; ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಕೌಲಗುಡ್ಡ ಗ್ರಾಮದಲ್ಲಿ ಇಂತಹ ಘಟನೆ ನಡೆದಿದ್ದು, ಹೆಂಡತಿ ಫೋಟೋ ಹಿಡಿದು ಗಂಡ ಬೀದಿ ಬೀದಿ ಅಲೆಯುತ್ತಿದ್ದಾನೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಾವಿ, ಚಿಕ್ಕೋಡಿ (ಮೇ 8): ಆತನ ಜೊತೆ ಆಕೆ‌ 17 ವರ್ಷ ಸಂಸಾರ (Family) ಮಾಡಿದ್ದಳು.  ದಿನಗೂಲಿ‌ ಮಾಡಿ ಗಂಡ ಹೆಂಡತಿ (Husbend And Wife) ಅನ್ಯೋನ್ಯವಾಗಿಯೆ ಇದ್ರು. ಅವರಿಗೆ 3 ಮಕ್ಕಳು ಕೂಡ ಇದ್ದಾರೆ. ಆದರೆ 17  ವರ್ಷದ ಸಂಸಾರದಲ್ಲಿ ಈಗ ಬಿರುಕು ಬಿಟ್ಟಿದ್ದು, ಹೆಂಡತಿ, ಗಂಡ ಹಾಗೂ ಮೂರು ಮಕ್ಕಳನ್ನ (3 Childrens) ಬಿಟ್ಟು ಮನೆಯಲ್ಲಿದ್ದ ಹಣವನ್ನೆಲ್ಲಾ ತೆಗೆದುಕೊಂಡು ಹೆಂಡತಿ ಪರಾರಿಯಾಗಿದ್ದಾಳೆ. ಇದೀಗ ಮಕ್ಕಳನ್ನು ಬಿಟ್ಟು ಹೋಗಿರೋ  ಹೆಂಡತಿಗಾಗಿ ಪತಿರಾಯ ಹುಡುಕಾಟ ಶುರು ಮಾಡಿದ್ದಾನೆ. ತಾಯಿ ಇಲ್ಲದೇ ಮೂರು ಮಕ್ಕಳು ಕೂಡ ಅನಾಥರಾಗಿದ್ದಾರೆ.  ಬೆಳಗಾವಿ (Belagavi) ಜಿಲ್ಲೆ ಕಾಗವಾಡ ತಾಲೂಕಿನ ಕೌಲಗುಡ್ಡ ಗ್ರಾಮದಲ್ಲಿ ಇಂತಹ ಘಟನೆ ನಡೆದಿದ್ದು, ಹೆಂಡತಿ ಫೋಟೋ (Photo) ಹಿಡಿದು ಗಂಡ ಬೀದಿ ಬೀದಿ ಅಲೆಯುತ್ತಿದ್ದಾನೆ. 

ಕೈಯಲ್ಲಿ ಹೆಂಡತಿ ಫೋಟೋ ಹಿಡಿದುಕೊಂಡು ಹುಡುಕಾಟ

ಹೌದು ಹೀಗೆ ಕೈಯಲ್ಲಿ ಹೆಂಡತಿಯ ಫೋಟೊ ಹಿಡಿದುಕೊಂಡು ಕುಳಿತಿರುವ ಈ ವ್ಯಕ್ತಿಯ ಹೆಸರು ಸಂತೋಷ ಅವಳೆ ಅಂತ  ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಕೌಲಗುಡ್ಡ ಗ್ರಾಮದ ನಿವಾಸಿ. ಈತ 17 ವರ್ಷದ ಹಿಂದೆ ಅಥಣಿ ತಾಲೂಕಿನ ನಂದೇಶ್ವರ  ಗ್ರಾಮದ ಸಾವಿತ್ರಿ ಎಂಬ ಮಹಿಳೆಯೊಂದಿಗೆ ಮದುವೆ ಆಗಿದ್ದ, ಮದುವೆ ಆದಾಗಿಂದ ಇವರ ಸಂಸಾರ ಚೆನ್ನಾಗಿತ್ತು. ಬಡ ಕುಟುಂಬದ ಈತ ಪ್ರತಿದಿನ ಕೂಲಿ ನಾಲಿ ಮಾಡಿ ಗಂಡ ಹೆಂಡತಿ ಜೀವನ ನಡೆಸುತ್ತಿದ್ದರು. ಇವರ ಸುಖ ಸಂಸಾರಕ್ಕೆ ಸಾಕ್ಷಿಯಾಗಿ ಮೂವರು ಮಕ್ಕಳು ಹುಟ್ಟಿದ್ದಾರೆ ಒಂದು ಗಂಡು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹೀಗೆ ಇದ್ದ ಸಂಸಾರದಲ್ಲಿ ಈತನ ಹೆಂಡತಿ ಪರಪುರುಷನ ಸ್ನೇಹಕ್ಕೆ ಮನಸೋತು ಮೂವರು ಮಕ್ಕಳು ಗಂಡನನ್ನು ಬಿಟ್ಟು ಓಡಿ ಹೋಗಿದ್ದಾಳೆ.

ಇದನ್ನೂ ಓದಿ: Electric Bus: ಬಿಎಂಟಿಸಿ ಪಾಲಿಗೆ 'ಬಿಳಿಯಾನೆ' ಆದ ಎಲೆಕ್ಟ್ರಿಕ್ ಬಸ್; ಆದಾಯಕ್ಕಿಂತ ಬಾಡಿಗೆಯೇ ಜಾಸ್ತಿ!

1 ಲಕ್ಷ 70 ಸಾವಿರ ಹಣ ಕದ್ದು ಹೆಂಡತಿ ಪರಾರಿ

ಹೋದವಳು ಹೋಗಿದ್ದಾಳೆ ಹಾಗೇ ಸುಮ್ಮನೇ ಹೋಗಿಲ್ಲ ಮನೆಯಿಂದ ದುಡ್ಡು ಎಗರಿಸಿಕೊಂಡು ಎಸ್ಕೇಪ್ ಆಗಿ ಹೋಗಿದ್ದು ಮನೆಯಲ್ಲಿದ್ದ 50 ಸಾವಿರ ರೂಪಾಯಿ ಹಾಗೂ 1 ಲಕ್ಷ 20 ಸಾವಿರ ಸಂಘದ ದುಡ್ಡು ಸೇರಿ ಒಟ್ಟು 1 ಲಕ್ಷ 70 ಸಾವಿರ ರೂಪಾಯಿ ಜೊತೆಗೆ ಪರಪುರುಷನ ಜೊತೆಗೆ ಎಸ್ಕೇಪ್ ಆಗಿದ್ದು, ನನ್ನ ಹೆಂಡತಿಯನ್ನ ಹುಡುಕಿ ಕೊಡಿ ಎಂದು ಪತಿ ಸಂತೋಷ್​​ ಪೊಲೀಸ್ ಠಾಣೆ ಮೆಟ್ಟಿಲೆರಿದ್ದಾನೆ.

ಎಲ್ಲಿ ಹುಡುಕಿದ್ರೂ ಪತ್ನಿಯ ಸುಳಿವೇ ಸಿಗ್ತಿಲ್ಲ

ಇನ್ನೂ ಹೆಂಡತಿ ದುಡ್ಡು ತೆಗೆದುಕೊಂಡು ಹೋದ ಮೇಲೆ ಅವಳನ್ನ ಎಲ್ಲೆಂದರಲ್ಲಿ ಹುಡುಕಾಡಿದ್ದಾನೆ. ಆದರೆ, ಸುಳಿವು ಮಾತ್ರ ಸಿಕ್ಕಿಲ್ಲ ಹೀಗಾಗಿ ಕಾಗವಾಡ ಠಾಣೆಗೂ ದೂರು ನೀಡಿದ್ದಾನೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಇನ್ನೂ ಈತನ ಮೂವರು ಮಕ್ಕಳಲ್ಲಿ ಇಬ್ಬರೂ ಮಕ್ಕಳನ್ನ ಸಂಬಂಧಿಕರ ಮನೆಯಲ್ಲಿ ಇರಿಸಿದರೆ ಚಿಕ್ಕ ಮಗಳನ್ನ ತನ್ನ ಹತ್ತಿರ ಇಟ್ಟುಕೊಂಡಿದ್ದಾನೆ. ಈಗ ದಿನಗೂಲಿ‌ ಮಾಡಿ ಬಂದ ಹಣದಿಂದ ಹೋಟೆಲ್ ನಿಂದ ಊಟ ತಂದು ಜೀವನ ಮಾಡಬೇಕು ತುಂಬಾ ತೊಂದರೆಯಾಗುತ್ತಿದೆ. ಮಕ್ಕಳಿಗೋಸ್ಕರನಾದರೂ ಹೆಂಡತಿ ಮನೆಗೆ ಬರಲಿ ಎನ್ನುತ್ತಾನೆ.

ಇದನ್ನೂ ಓದಿ: Neo Train: ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಹೊಸ ಸೇರ್ಪಡೆ, ಶೀಘ್ರವೇ ಓಡಾಡಲಿದೆ ಮೆಟ್ರೋ ನಿಯೋ ರೈಲು

ಅಮ್ಮ ಎಲ್ಲಿದ್ದರು ಮನೆಗೆ ಬಾ ಎಂದು ಮಗಳ ಕಣ್ಣೀರು

ಇತ್ತ ಕಳೆದ ಎರಡು ತಿಂಗಳಿನಿಂದ ಅಮ್ಮ ಮನೆ ಬಿಟ್ಟು ಹೋದ ಕಾರಣ ಅಮ್ಮ ತುಂಬಾ ನೆನಪಾಗುತ್ತಾಳೆ. ಹಾಗಾಗಿ ಅಮ್ಮ ಎಲ್ಲಿದ್ದರೂ ಬಾ ಅಂತ ಮಗಳು ಕೇಳಿಕೊಳ್ಳುತ್ತಿದ್ದಾಳೆ. ಒಟ್ಟಿನಲ್ಲಿ ಪರಪುರುಷನ ಕಾಮದಾಸೆಗೆ ಬಲಿ ಬಿದ್ದು 17 ವರ್ಷದಿಂದ ಮದುವೆಯಾದ ಗಂಡನಿಗೆ ಮೋಸ ಮಾಡಿ ಮಕ್ಕಳನ್ನು ನೋಡದೇ ಮನೆಯಿಂದ ದುಡ್ಡು ಎಗರಿಸಿಕೊಂಡು ಹೋಗಿರುವುದು ವಿಪರ್ಯಾಸವೇ ಸರಿ
Published by:Pavana HS
First published: