ಮದುವೆಯಾಗೋದು ಈಕೆಯ ಖಯಾಲಿ.. 4ನೇ ಗಂಡನ ಮನೆಯನ್ನು ಗುಡಿಸಿ ಗುಂಡಾಂತರ ಮಾಡಿದ ಚಾಲಾಕಿ!

ಒಬ್ಬ ಮಹಿಳೆಗೆ ಮೋಸ ಆಗಿದ್ರೆ ಎಲ್ಲರೂ ಆಕೆಯ ಬೆನ್ನಿಗೆ ನಿಲ್ಲುತ್ತಿದ್ರು. ಇದೀಗ ನನಗೆ ಸಾಥ್ ಕೊಡುವವರು ಯಾರು ಇಲ್ಲ ಅಂತಾ ಷಡಕ್ಷರಿ ನೋವು ತೋಡಿಕೊಂಡಿದ್ದಾರೆ.

ಉಷಾ, ಷಡಕ್ಷರಿ

ಉಷಾ, ಷಡಕ್ಷರಿ

  • Share this:
ಚಿಕ್ಕಮಗಳೂರು : ಕಾಫಿನಾಡಿನ ವ್ಯಕ್ತಿಯೋರ್ವ ಜೀವನದಲ್ಲಿ ಮದ್ವೆನೇ (Marriage) ಆಗ್ಬಾರ್ದು ಅನ್ಕೊಂಡಿದ್ದ. ಈ ಮಧ್ಯೆ ತನ್ನ ಅಣ್ಣನ ಒತ್ತಾಯಕ್ಕೆ ಮಣಿದು ಮಹಿಳೆಯನ್ನ ವರಿಸಿಬಿಟ್ಟಿದ್ದ. ಮದ್ವೆ ಆದ್ಮೇಲೆ ಗೊತ್ತಾಗಿದ್ದು ತಾನು ಆಕೆಗೆ ನಾಲ್ಕನೇ ಗಂಡ (4th Husband) ಅಂತ. ಇದನ್ನ ಪ್ರಶ್ನೆ ಮಾಡುತ್ತಲೇ ಆಕೆ ಗಂಡನ ಮನೆಯಿಂದ ಕಾಲ್ಕಿತ್ತಿದ್ದು, ಚಿನ್ನ ಸೇರಿದಂತೆ ಹಣವನ್ನ ದೋಚಿಕೊಂಡು ಹೋಗಿದ್ದಾಳೆ(ran away with gold and money) . ಸದ್ಯ ಕಾಫಿನಾಡಿನ ವ್ಯಕ್ತಿ ಪತ್ನಿಯನ್ನ ಹುಡ್ಕಿಕೊಡಿ ಅಂತಾ ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾನೆ. ಚಿಕ್ಕಮಗಳೂರು ತಾಲೂಕಿನ ನೆಟ್ಟೇಕೆರೆಹಳ್ಳಿ ಷಡಕ್ಷರಿ  ಕಳೆದ ಎರಡು ವರ್ಷಗಳ ಹಿಂದೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ರಾಮಚಂದ್ರಪುರ ಗ್ರಾಮದ ಉಷಾ ಎಂಬಾಕೆಯನ್ನ ಮದ್ವೆಯಾಗಿದ್ರು. ಹೀಗೆ ಮದ್ವೆಯಾದ ಮೇಲೆಯೇ ಆಕೆಯ ಒಂದೊಂದೇ ಕಥೆಗಳು ಷಡಕ್ಷರಿಗೆ ಗೊತ್ತಾಯ್ತಂತೆ. ತಾನು ಮದ್ವೆಯಾದ ಉಷಾ ಈಗಾಗಲೇ ಮೂವರೊಂದಿಗೆ ಮದ್ವೆಯಾಗಿ ನನ್ನೊಂದಿಗೆ ನಾಲ್ಕನೇ ಮದ್ವೆ ಮಾಡಿಕೊಂಡಿದ್ದಾಳೆ ಅನ್ನೋ ವಿಚಾರ ಗೊತ್ತಾದ ಕೂಡಲೇ ಆಕೆಯನ್ನ ಷಡಕ್ಷರಿ ಪ್ರಶ್ನೆ ಮಾಡಿದ್ದಾನಂತೆ.

ಚಿನ್ನಾಭರಣ-ಹಣದೊಂದಿಗೆ ಎಸ್ಕೇಪ್​ 

ಅಷ್ಟೇ, ಒಂದು ವಾರದ ಹಿಂದೆ ಷಡಕ್ಷರಿ ಮನೆಯಿಂದ ಉಷಾ ಪರಾರಿ ಆಗಿದ್ದಾಳೆ. ಅಲ್ಲದೇ ಹೀಗೆ ಮನೆಯಿಂದ ಹೋಗ್ಬೇಕಾದ್ರೆ ಚಿನ್ನ, ಹಣವನ್ನ ಎಗರಿಸಿಕೊಂಡು ಹೋಗಿದ್ದಾಳೆ ಅಂತಾ ಪತಿರಾಯ ಷಡಕ್ಷರಿ ಅಳಲು ತೋಡಿಕೊಂಡಿದ್ದಾನೆ. ಉಷಾ ಮನೆಯಿಂದ ಹೋದ ಕೂಡಲೇ ಎಲ್ಲಾ ಕಡೆ ಹೋಗಿ ಹುಡುಕಾಟ ನಡೆಸಿದ್ದೇನೆ. ಆಕೆಯ ತವರು ಮನೆ, ಅಕ್ಕನ ಮನೆ ಎಲ್ಲಿ ಹೋದ್ರು ಆಕೆಯೇ ಸುಳಿವೇ ಇಲ್ಲ ಅನ್ನೋ ಪತಿರಾಯ, ಹೇಗಾದ್ರೂ ಮಾಡಿ ಆಕೆಯನ್ನ ಹುಡ್ಕಿಕೊಡಿ ಅಂತಾ ಬೇಡಿಕೊಂಡಿದ್ದಾನೆ. ತನ್ನ ಸ್ವಂತ ಊರು ಬೀಕನಹಳ್ಳಿ, ಈಕೆಯ ವಿಚಾರ ಗೊತ್ತಾದ ಕೂಡಲೇ ಊರಲ್ಲಿ ಇದ್ರೆ ಸರಿಯಾಗಲ್ಲ ಅಂತಾ ಊರಿಂದಲೂ ಬಿಟ್ಟು ಬಂದು ನೆಟ್ಟೇಕೆರೆಹಳ್ಳಿಯಲ್ಲಿ ಜೀವನ ಕಟ್ಕೊಂಡಿದ್ದೆ. ಇದೀಗ ಇಲ್ಲೂ ಕೂಡ ನನ್ನ ಒಂಟಿ ಮಾಡಿ ಆಕೆ ಎಸ್ಕೇಪ್ ಆಗಿದ್ದಾಳೆ, ಏನ್ ಮಾಡೋದು ಗೊತ್ತಾಗ್ತಿಲ್ಲ ಅನ್ನೋದು ಪತಿರಾಯನ ಅಳಲು.

ಹೆಂಗಸಿಗೆ ಮೋಸ ಮಾಡಿದ್ರೆ ಹೀಗೆ ಬಿಡ್ತಿದ್ದಿರಾ? 

ಪ್ರತಿದಿನ ಹುಡುಕಾಡ ನಡೆಸುತ್ತಿದ್ರೂ ಆಕೆಯ ಸುಳಿವೇ ಪತ್ತೆಯಾಗಿಲ್ಲ. ನನಗೆ ಮೋಸ ಹೋದ್ರೂ ಯಾರೂ ತಲೆಕೆಡಿಸಿಕೊಳ್ತಿಲ್ಲ, ಅದೇ ಒಬ್ಬ ಮಹಿಳೆಗೆ ಮೋಸ ಆಗಿದ್ರೆ ಎಲ್ಲರೂ ಆಕೆಯ ಬೆನ್ನಿಗೆ ನಿಲ್ಲುತ್ತಿದ್ರು. ಇದೀಗ ನನಗೆ ಸಾಥ್ ಕೊಡುವವರು ಯಾರು ಇಲ್ಲ ಅಂತಾ ಷಡಕ್ಷರಿ ನೋವು ತೋಡಿಕೊಂಡಿದ್ದಾರೆ. ಅದೇನೆ ಇರಲಿ ಸಾವಿರ ಸುಳ್ಳು ಹೇಳಿ, ಒಂದು ಮದ್ವೆ ಮಾಡಿ ಅನ್ನೋ ಹಿಂದಿನ ಗಾದೆಗೆ ತದ್ವಿರುದ್ದವಾಗಿ ಉಷಾ ಎಂಬ ಊಸರವಳ್ಳಿ ಮೂರು ಮದ್ವೆಯಾದ್ರೂ ಮರೆಮಾಚಿ ಮತ್ತೊಂದು ಮದ್ವೆಯಾಗಿ, ಮತ್ತೆ ಅಲ್ಲಿಂದಲೂ ಎಸ್ಕೇಪ್ ಆಗಿರೋದು ಷಡಕ್ಷರಿಯನ್ನ ಪೇಚಿಗೆ ಸಿಲುಕಿಸಿದೆ.

ಇದನ್ನೂ ಓದಿ: 2 ವರ್ಷದ ಹಿಂದೆ ಮದುವೆ, 1 ವರ್ಷದ ಹೆಣ್ಣು ಮಗು.. ಬೀದಿ ಹೆಣವಾದ ಮನೆ ಮಗ! 

ಇನ್ನು ಚಿಕ್ಕಬಳ್ಳಾಪುರದಲ್ಲಿ ಗಂಡ ಹೆಣ್ಣು ಮಗುವಿಗೆ ಜನ್ಮ ನೀಡಿದಕ್ಕೆ ಹೆಂಡತಿಗೆ ಟಾರ್ಚರ್​ ಕೊಟ್ಟಿದ್ದಾನೆ. ಪಾಪಿ ಗಂಡನ ಹೆಸರು ಕಲಂದರ್ ಖಾನ್​​. ಗೌರಿಬಿದನೂರು ತಾಲೂಕಿನ ಸರ್ಕಾರಿ ಉದ್ಯೋಗಿಯ ಮಗನಾದ ಈತ ಮಂಚೇನಹಳ್ಳಿ ನಿವಾಸಿ ಸರ್ಕಾರಿ ಅಧಿಕಾರಿಯ ಮಗಳು ಕರಿಷ್ಮಾಳನ್ನು ವರ್ಷದ ಹಿಂದೆ ಮದುವೆಯಾಗಿದ್ದ. ಎರಡು ತಿಂಗಳ ಹಿಂದೆ ಕರಿಷ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಅವಧಿಗೆ ಮುನ್ನ ಮಗು ಜನಿಸಿದ ಕಾರಣ ತೂಕದಲ್ಲಿ ಹಾಗೂ ಆರೋಗ್ಯದಲ್ಲಿ ಏರುಪೇರಾಗಿತ್ತು. ಇದ್ರಿಂದ ರೊಚ್ಚಿಗೆದ್ದ ಕಲಂದರ್ ಹಾಗೂ ಆತನ ತಾಯಿ, ಹೆಣ್ಣು ಮಗು ಜನಿಸಿದ್ದಕ್ಕೆ 10 ಲಕ್ಷ ರೂಪಾಯಿ ವರದಕ್ಷಣೆ ತೆಗೆದುಕೊಂಡು ಮನೆಗೆ ಬಾ ಇಲ್ಲವೆಂದ್ರೆ ಬೇಡ ಅಂತ ಕಿರುಕುಳ ನೀಡುತ್ತಿದ್ದಾರಂತೆ.
Published by:Kavya V
First published: