• Home
  • »
  • News
  • »
  • state
  • »
  • Madikeri Dasara: ಮಡಿಕೇರಿ ಮಹಿಳಾ ದಸರಾದಲ್ಲಿ ಮಹಿಳೆಯರ ಕಮಾಲ್ 

Madikeri Dasara: ಮಡಿಕೇರಿ ಮಹಿಳಾ ದಸರಾದಲ್ಲಿ ಮಹಿಳೆಯರ ಕಮಾಲ್ 

ಮಡಿಕೇರಿ ದಸರಾ

ಮಡಿಕೇರಿ ದಸರಾ

ಮಹಿಳೆಯರು ತಮಗೆ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡುವಂತಾಗಬೇಕು. ಈ ಬಾರಿಯ ಮಡಿಕೇರಿ ದಸರಾ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ ಎಂದರು.

  • Share this:

ಮಡಿಕೇರಿ: ಗನ್ ಹಿಡಿದು ಬೇಟೆಗೆ ಹೋಗುತ್ತಿದ್ದ ಕೊಡಗಿನ ಮಹಿಳೆಯರಿಗೆ (Kodagu Women) ಬಲೂನ್ ಶೂಟ್ ಮಾಡುವುದು ಸಖತ್ ಖುಷಿ ನೀಡಿತು. ಇನ್ನು ಮದರಂಗಿ ಹಚ್ಚಿಕೊಳ್ಳುವುದು ಎಂದರೆ ಕೇಳಬೇಕಾ. ತಾ ಮುಂದು ನಾ ಮುಂದು ಎಂದು ಮುಗಿಬಿದ್ದು ಮದರಂಗಿ ಹಚ್ಚಿ, ತಾವೂ ಹಚ್ಚಿಸಿಕೊಂಡು ಸಂಭ್ರಮಿಸಿದರು. ಇನ್ನು ಶೃಂಗಾರಕ್ಕೆ ಹೆಣ್ಣೇ ಪ್ರತಿರೂಪ ಎನ್ನುವಾಗ ಪ್ಯಾಷನ್ ಶೋ (Fashion Show) ಇದೆ ಎಂದರೆ ಕೇಳಬೇಕಾ? ಮತ್ತಷ್ಟು ಮಗದಷ್ಟು ಎನ್ನುವಷ್ಟು ಶಂಗಾರ ಮಾಡಿಕೊಂಡು ಪ್ಯಾಷನ್ ಶೋನಲ್ಲಿ ಭಾಗವಹಿಸಿದ್ದರು. ಇಷ್ಟೇ ಏಕೆ ಮಹಿಳೆಯರು ತಾವೇ ತಯಾರಿಸಿದ ಗೃಹ ಬಳಕೆ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟ, ಮಹಿಳಾ ಸಂತೆ ಹೀಗೆ ಹತ್ತು ಹಲವು ಸ್ಪರ್ಧೆಗಳಲ್ಲಿ ಮಹಿಳೆಯರು ಭಾಗವಹಿಸಿ ಎಂಜಾಯ್ ಮಾಡಿದ ಪರಿಗೆ ಪಾರವೇ ಇರಲಿಲ್ಲ. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ, ಹೀಗೆ ಹಲವು ಕಾರ್ಯಕ್ರಮದಲ್ಲಿ ಮಹಿಳೆಯರು ವಯಸ್ಸಿನ ಭೇದವಿಲ್ಲದೆ ಮಿಂದೆದ್ದು ಸಂಭ್ರಮಿಸಿದರು. ಇದೆಲ್ಲಾ ಕಂಡು ಬಂದಿದ್ದು ಮಡಿಕೇರಿ ದಸರಾ (Madikeri Dasara) ಜನೋತ್ಸವದಲ್ಲಿ.


ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಮಡಿಕೇರಿ ದಸರಾ ಜನೋತ್ಸವ ಕಾರ್ಯಕ್ರಮದ ಪ್ರಯುಕ್ತ ನಡೆದ ಮಹಿಳಾ ದಸರಾ ಸಭಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರ ಧರ್ಮಪತ್ನಿ ರೂಪಶ್ರೀ ಸತೀಶ್ ಅವರು ಚಾಲನೆ ನೀಡಿದ್ದು ವಿಶೇಷವಾಗಿತ್ತು.


ವಿಜೃಂಭಣೆಯಿಂದ ನಡೆಯುತ್ತಿರುವ ಮಡಿಕೇರಿ ದಸರಾ


ಬಳಿಕ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ ಅವರು, ವರ್ಷಗಳ ಹಿಂದೆ ಜಿಲ್ಲೆಯ ಮೂರು ಉನ್ನತ ಸ್ಥಾನಗಳನ್ನು ಮಹಿಳೆಯರು ಅಲಂಕರಿಸಿದ್ದರು. ಇದು ಮಹಿಳೆಯರಿಗೆ ಹೆಮ್ಮೆಯ ವಿಷಯವಾಗಿದೆ. ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಧನೆ ಮಾಡಿದ್ದಾರೆ ಎಂದು ಹೇಳಿದರು.


Woman celebration madikeri dasara program rsk mrq
ಮಡಿಕೇರಿ ದಸರಾ


ಮಹಿಳೆಯರು ತಮಗೆ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡುವಂತಾಗಬೇಕು. ಈ ಬಾರಿಯ ಮಡಿಕೇರಿ ದಸರಾ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ ಎಂದರು.


ಮಹಿಳೆಯರು ಯಾರಿಗೂ ಕೂಡ ಕಮ್ಮಿ ಇಲ್ಲ. ಆದ್ದರಿಂದ ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕು. ಮಹಿಳೆಯರು ಪ್ರತಿ ಕ್ಷೇತ್ರದಲ್ಲೂ ಕೂಡ ತಮ್ಮನ್ನು ಗುರುತಿಸಿಕೊಳ್ಳುವುದರ ಜೊತೆಗೆ ಕೊಡಗನ್ನು ರಾಜ್ಯಕ್ಕೆ ಮಾದರಿ ಜಿಲ್ಲೆಯನ್ನಾಗಿಸುವತ್ತ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಅವರು ಹೇಳಿದರು.


ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಕೊಡಗು ದಸರಾ


ಜಿಲ್ಲಾಧಿಕಾರಿ ಅವರ ಧರ್ಮಪತ್ನಿ ರೂಪಶ್ರೀ ಸತೀಶ್ ಅವರು ಮಾತನಾಡಿ ಮೈಸೂರು ಮತ್ತು ಮಡಿಕೇರಿ ದಸರಾ ಒಂದೊಂದು ವಿಶೇಷತೆಗಳಿಂದ ಕೂಡಿದೆ. ಮಡಿಕೇರಿ ದಸರಾ ಪ್ರತಿಯೊಬ್ಬರನ್ನು ಆಕರ್ಷಿಸುತ್ತಿದೆ ಎಂದರು.


Woman celebration madikeri dasara program rsk mrq
ಮಡಿಕೇರಿ ದಸರಾ


ನಗರಸಭಾ ಮಾಜಿ ಸದಸ್ಯರಾದ ಮೋಂತಿ ಗಣೇಶ್ ಅವರು ಮಾತನಾಡಿ, ಮಹಿಳೆಯರು ತಮ್ಮ ಮಕ್ಕಳಿಗೆ ದೇಶಭಕ್ತಿ ಹಾಗೂ ಸಮಾಜದ ಒಳಿತಿಗೆ ಸಹಕಾರಿಯಾಗುವಂತಹ ಒಳ್ಳೆಯ ಗುಣಗಳನ್ನು ಬೆಳೆಸುವಂತಾಗಬೇಕು ಎಂದರು. ಜಿಲ್ಲೆಯೂ ಪ್ರವಾಸೋದ್ಯಮಕ್ಕೆ ಹೆಸರಾದ ಜಿಲ್ಲೆಯಾಗಿದೆ. ಆ ನಿಟ್ಟಿನಲ್ಲಿ ಜಿಲ್ಲೆಯ ಪರಿಸರವನ್ನು ಕಾಪಾಡುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಮಹಿಳೆಯರು ಪರಿಸರ ಶುಚಿತ್ವದ ಬಗ್ಗೆ ಹೆಚ್ಚಿನ ಒತ್ತು ನೀಡಿ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸುವಂತಾಗಬೇಕು ಎಂದು ಮನವಿ ಮಾಡಿದರು.


ಇದನ್ನೂ ಓದಿ:  Free Site: ಅಗಲಿದ ಮಗನ ಹೆಸರಲ್ಲಿ ಮಹಾನ್ ಕಾರ್ಯಕ್ಕೆ ಮುಂದಾದ ತಂದೆ-ತಾಯಿ; 40 ಬಡ ಕುಟುಂಬಕ್ಕೆ ಉಚಿತ ಸೈಟ್ ಹಂಚಿಕೆ!


ಮಹಿಳಾ ದಸರಾಕ್ಕೆ ಹೆಚ್ಚಿನ ಅನುದಾನ ಮೀಸಲಿಡಲಿ


ನಗರಸಭೆ ನಿವೃತ್ತ ಪೌರಾಯುಕ್ತರಾದ ಬಿ.ಬಿ.ಪುಷ್ಪಾವತಿ ಅವರು ಮಾತನಾಡಿ, ನವರಾತ್ರಿ ಉತ್ಸವ ಮಹಿಳಾ ಪ್ರಧಾನ ಆಚರಣೆಯಾಗಿದೆ. ಈ ಆಚರಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ ಎಂದರು.


ಮುಂದಿನ ದಿನಗಳಲ್ಲಿ ದಸರಾಕ್ಕೆ ಅನುದಾನ ರೂಪಿಸುವಾಗ ಮಹಿಳಾ ದಸರಾಕ್ಕೆ ಹೆಚ್ಚಿನ ಅನುದಾನವನ್ನು ಮೀಸಲಿಡುವಂತಾಗಬೇಕು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಕರೆಸುವಂತಾಗಬೇಕು. ಇದರಿಂದ ಅವರ ಅನುಭವಗಳು ಅವರು ಮಾಡಿದ ಸಾದನೆ ಇನ್ನಿತರ ಮಹಿಳೆಯರಿಗೆ ಸ್ಪೂರ್ತಿದಾಯಕವಾಗಬಹುದು ಎಂದು ಅವರು ತಿಳಿಸಿದರು.


ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ


ಕೊಡವ ಸಮಾಜದ ನಿರ್ದೇಶಕರಾದ ಕನ್ನಂಡ ಕವಿತಾ ಅವರು ಮಾತನಾಡಿ, ಮಹಿಳೆಯರು ತಮ್ಮ ಒತ್ತಡದ ಜೀವನದ ನಡುವೆಯೂ ಮಹಿಳಾ ದಸರಾದಲ್ಲಿ ಪಾಲ್ಗೊಳ್ಳುವಂತಾಗಬೇಕು. ಇದರಿಂದ ತಮ್ಮ ಒತ್ತಡದ ಬದುಕಿನ ಜೊತೆಯಲ್ಲಿ ಉತ್ಸಾಹದಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇದೊಂದು ಸದಾವಕಾಶವಾಗಿದೆ ಎಂದರು.


Woman celebration madikeri dasara program rsk mrq
ಮಡಿಕೇರಿ ದಸರಾ


ಇದನ್ನೂ ಓದಿ:  Belagavi Crime News: 10 ಬಾರಿ ದೃಶ್ಯ ಸಿನಿಮಾ ನೋಡಿ ಕೊಲೆ; ಹೆಂಡ್ತಿ, ಮಗಳು, ಆಕೆಯ ಇನಿಯ ಅರೆಸ್ಟ್


ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಸುರಯ್ಯ ಅಬ್ರಾರ್, ನಗರಸಭಾ ವ್ಯವಸ್ಥಾಪಕರಾದ ಸುಜಾತ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ನಯನ  ಮಾತನಾಡಿದರು.

Published by:Mahmadrafik K
First published: