Chitradurga: ಕಾಮದಾಸೆಗಾಗಿ ಗಂಡನಿಗೆ ಚಟ್ಟ ಕಟ್ಟಿದ್ದ ಪತ್ನಿ ಅಂದರ್; ಶವದ ಮುಂದೆ ಗಳಗಳನೇ ಅತ್ತಿದ್ದ ಹೆಂಡ್ತಿ

ಏಪ್ರಿಲ್ 20 ರ ಬೆಳಗ್ಗೆ ಎಂದಿನಂತೆ ತರಕಾರಿ ಮಾರಾಟಕ್ಕೆ ಆಟೋದಲ್ಲಿ  ತೆರಳಿದ್ದ ಗೋಪಾಲ್ , ಪತ್ನಿ ಚಂದ್ರಕಲಾ ವಾಪಾಸ್ ಬರುವ ಮಾರ್ಗ ಮದ್ಯೆ ಆಟೋದ ಗ್ಯಾಸ್ ಖಾಲಿ ಆಗಿತ್ತು, ಅದನ್ನೇ ನೆಪವಾಗಿ ಮಾಡಿದ ಚಂದ್ರಕಲಾ ತನ್ನ ಪ್ರಿಯಕರ ರಾಜಶೇಖರ್ ನಿಗೆ ಫೋನ್ ಮಾಡಿ ಬೈಕ್ ತರಿಸಿದ್ದಳು.

ಆರೋಪಿ ಚಂದ್ರಕಲಾ

ಆರೋಪಿ ಚಂದ್ರಕಲಾ

  • Share this:
ಚಿತ್ರದುರ್ಗ : ಜೀವನ ಸಾಗಿಸೋಕೆ ತರಕಾರಿ ಮಾರಲು ಪತ್ನಿ (Wife) ಜೊತೆ ಹೋಗಿದ್ದ ಪತಿ (Husband) ವಾಪಸ್ ಬಂದಿದ್ದು ಹೆಣವಾಗಿ.  ಸಹಜ ಸಾವು ಅಂತ ನಂಬಿಸಿ ಚಿತೆಯಲ್ಲಿ ಗಂಡನ ಅಂತ್ಯಕ್ರಿಯೆ ಮಾಡಿದ್ದ ಪತ್ನಿ ಈಗ ಜೈಲು ಸೇರಿದ್ದಾಳೆ. ಪರ ಪುರುಷನ ಕಾಮದಾಹಕ್ಕೆ ಬಿದ್ದ ಪಾಪಿ ಪತ್ನಿ ಕೈ ಹಿಡಿದು ಸಪ್ತಪದಿ ತುಳಿದ ಗಂಡನ ಪ್ರಾಣವನ್ನೆ ಬಲಿ ಕೊಟ್ಟಿದ್ದಾಳೆ‌. ಜೀವನದುದ್ದಕ್ಕೂ ಜೊತೆಯಾಗಿ ಇರ್ತೇನೆ ಎಂದವಳು, ಮಧ್ಯ ದಾರಿಯಲ್ಲೇ ಗಂಡನ ಕತ್ತು ಹಿಸುಕಿ (Husband Murder) ಕೊಲೆಗೈದಿದ್ದಾಳೆ. ಕಳೆದ ಏಪ್ರಿಲ್ 24ರಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ (Challakere) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೀರದಿಮ್ಮನಹಳ್ಳಿ ಗ್ರಾಮದ ಗೋಪಾಲ್ ನಾಯ್ಕ್ ಎಂಬ ವ್ಯಕ್ತಿ ಮೂರ್ಛೆ ರೋಗ ಬಂದು ಸಾವನ್ನಪ್ಪಿದ್ದಾನೆ ಎಂದು ದೂರು ದಾಖಲಾಗಿತ್ತು. ಮೃತಪಟ್ಟ ಪತಿಯ ಶವದ (Husband Deadbody) ಮುಂದೆ ಪತ್ನಿ ಚಂದ್ರಕಲಾ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಳು‌. ನನಗ್ಯಾರು ಗತಿ ಅಂತ ರೋದಿಸುತ್ತಲೇ ಮೃತ ದೇಹವನ್ನ ವೀರದಿಮ್ಮನ ಹಳ್ಳಿಗೆ ತೆಗೆದುಕೊಂಡು ಹೋಗಿ ಕುಟುಂಬದವರ ಮುಂದೆ ಮೂರ್ಛೆ ರೋಗದಿಂದ ನನ್ನ ಗಂಡ ಸತ್ತ ಅಂತ ಹೇಳಿದ್ದಳು. ಇವಳ ಈ ಆಕ್ರಂದನಕ್ಕೆ ಕರಗಿದ ಗ್ರಾಮದ ಜನರು ಆಕೆಯನ್ನ ಸಮಧಾನಪಡಿಸಿ ಸಾಂತ್ವನ ಹೇಳಿದ್ರು. ಬಳಿಕ ಸಂಪ್ರದಾಯದಂತೆ ಮೃತದೇಹವನ್ನ ಸುಟ್ಟು ಅಂತ್ಯಕ್ರಿಯೆ ಮಾಡಿದ್ದರು.

ಗಂಡ ಸಾವಿನ ಸತ್ಯದ ಹಿಂದಿನ ಕಥೆಯನ್ನ ಮಾತ್ರ ಪತ್ನಿ ಚಂದ್ರಕಲಾಳಿಂದ ಮುಚ್ಚಿಡಲು ಸಾದ್ಯವಾಗಿರಲಿಲ್ಲ. ಬದಲಾಗಿ ಗೋಪಾಲ್ ಸಾವಿಗೆ ಪತ್ನಿ ಚಂದ್ರಕಲಾಳ ಅಕ್ರಮ ಸಂಬಂಧದ ದಾಹ ಕಾರಣ ಅನ್ನೋದು ಸಾರ್ವಜನಿಕರ ಬಾಯಲ್ಲಿ ಹರಿದಾಡುತ್ತಿತ್ತು. ಆ ಮಾತು ಬಾಯಿಂದ ಬಾಯಿಗೆ, ಕಿವಿಯಿಂದ ಕಿವಿಗೆ ಸಾಗಿ ಸಾವನ್ನಪ್ಪಿದ್ದ ಗೋಪಾಲನಾಯ್ಕನ ಕುಟುಂಬಕ್ಕೂ ಕೇಳಿತ್ತು. ಅಲ್ಲಿಗೆ ಗೋಪಾಲ ನಾಯ್ಕ್ ಸಾವಿಗೆ ಟ್ವಿಸ್ ಸಿಕ್ಕಿದಂತಾಗಿತ್ತು.

ದೂರು ದಾಖಲಿಸಿದ ಗೋಪಾಲ್ ಪೋಷಕರು

ಮೊದಲಿಂದಲೂ ಚಂದ್ರಕಲಾಳ ಮೇಲೆ ಅನುಮಾನವಿದ್ದ ಕಾರಣ ಗೊಪಾಲ್ ಅಕ್ಕ ಲಕ್ಷ್ಮಿ ಬಾಯಿ ತಮ್ಮನ ಸಾವು ಸಹಜವಲ್ಲ, ಅದು ಕೊಲೆಯಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿ ಚಳ್ಳಕೆರೆ ಪೋಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೋಲೀಸರು ಚಂದ್ರಕಲಾಳನ್ನ ಠಾಣೆಗೆ ಕರೆತಂದು ವಿಚಾರಣೆ ಮಾಡಿದ್ರು. ಆ ಕ್ಷಣದವರೆಗೂ ಗಂಡನ ಸಾವಿನ ಅಸಲಿಯತ್ತನ್ನ ಮುಚ್ಚಿಟ್ಟಿದ್ದ ಚಂದ್ರಕಲಾ ಸತ್ಯ ಬಾಯಿ ಬಿಟ್ಟಿದ್ದಳು. ಆಕೆ ಹೇಳಿದ ಸತ್ಯ ಪೋಲೀಸರನ್ನೂ ಒಂದು ಕ್ಷಣ ಆಶ್ಚರ್ಯ ಪಡುವಂತೆ ಮಾಡಿತ್ತು.

ಇದನ್ನೂ ಓದಿ:  Belagavi: ಬೆಳಗಾವಿಯಿಂದ ಹೊರಟಿದ್ದ 187 ಪ್ರಯಾಣಿಕರಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ

ಸೋದರಿಯ ಪುತ್ರಿಯನ್ನ ಮದುವೆಯಾಗಿದ್ದ ಗೋಪಾಲ್

ಕಳೆದ 11 ವರ್ಷಗಳ ಹಿಂದೆ ತನ್ನ ಅಕ್ಕನ ಮಗಳನ್ನ ಒಪ್ಪಿ ಕುಟುಂಬದವರ ಸಮ್ಮುಖದಲ್ಲಿ ಅಕ್ಕನ ಮಗಳು ಚಂದ್ರಕಲಾಳನ್ನ ಗೋಪಾಲನಾಯ್ಕ ಸಪ್ತಪದಿ ತುಳಿದು ಮಾಂಗಲ್ಯ ಕಟ್ಟಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಸಂಸಾರ ಸಾಗರಕ್ಕೆ ಬಿದ್ದ ಅದ್ಯಾವ ದಂಪತಿಗಳು ಜೀವನ ಮಾರ್ಗವನ್ನ ಕಂಡುಕೊಳ್ಳದೆ ಇರಲಾರರು. ಅಲ್ಲದೇ ನನ್ನನ್ನೇ ನಂಬಿ ಬಂದ ಪತ್ನಿಯನ್ನ ಸುಖ ಸಂತೋಷದಿಂದ ಸಾಕಬೇಕು ಅನ್ನೋ ಭಾವನೆ ಅವನದು.  ಹಾಗಾಗಿ ಗೋಪಾಲನಾಯ್ಕ ಕಿರಾಣಿ ಅಂಗಡಿ ಕೆಲಸಕ್ಕೆ ಹೋಗುತ್ತಿದ್ದ, ಅದರ ಸಂಬಳದಲ್ಲಿಯೇ ಜೀವನ ನಿರ್ವಹಣೆ ಮಾಡುತ್ತಿದ್ದರು.

ತರಕಾರಿ ವ್ಯಾಪಾರ ಮಾಡುತ್ತಿದ್ದ ಚಂದ್ರಕಲಾ

ಇಬ್ಬರು ಮಕ್ಕಳಾದ್ಮೇಲೆ ಖರ್ಚು ಜಾಸ್ತಿಯಾಗಿತ್ತು. ಹಾಗಾಗಿ ಮತ್ತಷ್ಟು ದುಡಿಮೆ ಇವರಿಗೆ ಅನಿವಾರ್ಯ ಆಗಿತ್ತು. ಇದೇ ಕಾರಣಕ್ಕೆ ಚಂದ್ರಕಲಾ ಗ್ರಾಮದ ಮಹಿಳಾ ಸಂಘಗಳ ಮೂಲಕ ಸಾಲ ಪಡೆದು ಹಳ್ಳಿ ಹಳ್ಳಿಗಳಿಗೆ ಆಟೋದಲ್ಲಿ ತೆರಳಿ ತರಕಾರಿ ಮಾರಾಟ ಮಾಡಿ ಜೀವನ ಕಟ್ಟಿಕೊಳ್ಳೋಕೆ ಪ್ಲಾನ್ ಮಾಡಿದ್ದ. ಅದರಂತೆ ತರಕಾರಿ ವ್ಯಾಪಾರ ಪ್ರಾರಂಭ ಮಾಡಿ ಹಳ್ಳಿಗಳಿಗೆ ಹೋಗಿ ಮಾರಾಟ ಮಾಡಿ ಬರ್ತಿದ್ರು.

ಕಾಮದಾಸೆಗಾಗಿ ಗಂಡನಿಗೆ ಚಟ್ಟ ಕಟ್ಟಿದಳು

ಅದರಲ್ಲೇ  ಅವರ ಸಂತೋಷದ  ಜೀವನವನ ಸಾಗ್ತಿತ್ತು. ಅದು ಬಹಳಷ್ಟು ದಿನ ಸಾಗಲಿಲ್ಲ, ಯಾಕಂದ್ರೆ ಕಳೆದ ಎರಡು ವರ್ಷಗಳಿಂದ  ಸಾಲ ಕೊಟ್ಟಿದ್ದ ಫೈನಾನ್ಸ್ ನ ರಾಜಶೇಖರ್ ಅನ್ನೋ ವ್ಯಕ್ತಿಯ ಜೊತೆ ಸಲಿಗೆ ಬೆಳಸಿಕೊಂಡಿದ್ದನು. ಅಲ್ಲದೇ ಇನ್ನು ವಿವಾಹ ಆಗದೆ ಇದ್ದ ರಾಜಶೇಖರ್ ಆಕೆಯನ್ನ ಮದುವೆ ಆಗೋಣ ಅಂತ ಹೇಳಿದ್ದನಂತೆ . ಹಾಗಾಗಿ ಆರೋಪಿ ಚಂದ್ರಕಲಾ ಕಾಮದ ಆಸೆಗೆ ಗಂಡನನ್ನ ಬಿಟ್ಟು ಪ್ರಿಯಕರನ ಜೊತೆ ಮದುವೆ ಆಗುವ ಕನಸು ಕಟ್ಟಿದ್ದಳು.

ಆದ್ದರಿಂದಲೇ ಕೈ ಹಿಡಿದ ಗಂಡನ ಜೊತೆ ಆಗಾಗ ಸಣ್ಣಪುಟ್ಟ ಮನಸ್ತಾಪ ಮಾಡಿಕೊಳ್ತಿದ್ದಳು. ಅದನ್ನ ಅರಿತ ಪತಿ ಗೋಪಾಲ್ ನಾಯ್ಕ್ ಇವರಿಬ್ಬರ ನಡುವೆ ಅಕ್ರಮ ಸಂಬಂಧವಿದೆ ಅನ್ನೋ ಸುಳಿವನ್ನ ಕಂಡಿದ್ದ. ಆದರೇ ಅವರನ್ನ ದೂರ ಮಾಡೋಕೆ ಆಗಿರ್ಲಿಲ್ಲ. ಬದಲಾಗಿ ಪತ್ನಿಯನ್ನೂ ತರಕಾರಿ ವ್ಯಾಪಾರಕ್ಕೆ ಕರೆದುಕೊಂಡು ಹೋಗುತ್ತಿದ್ದನಂತೆ. ಇದರಿಂದ ಬೇಸತ್ತಿದ್ದ ಚಂದ್ರಕಲಾ ಪ್ರಿಯಕರ ರಾಜಶೇಖರನ ಜೊತೆ ಸೇರಿ ಗಂಡನನ್ನ ಕೊಲೆ ಮಾಡಿದ್ದಾಳೆ ಅನ್ನೋ ಸತ್ಯ ಬಾಯ್ಬಿಟ್ಟಿದ್ದಾಳೆ.

ಕೊಲೆ ನಡೆದಿದ್ದು ಹೇಗೆ?

ಏಪ್ರಿಲ್ 20 ರ ಬೆಳಗ್ಗೆ ಎಂದಿನಂತೆ ತರಕಾರಿ ಮಾರಾಟಕ್ಕೆ ಆಟೋದಲ್ಲಿ  ತೆರಳಿದ್ದ ಗೋಪಾಲ್ , ಪತ್ನಿ ಚಂದ್ರಕಲಾ ವಾಪಾಸ್ ಬರುವ ಮಾರ್ಗ ಮದ್ಯೆ ಆಟೋದ ಗ್ಯಾಸ್ ಖಾಲಿ ಆಗಿತ್ತು, ಅದನ್ನೇ ನೆಪವಾಗಿ ಮಾಡಿದ ಚಂದ್ರಕಲಾ ತನ್ನ ಪ್ರಿಯಕರ ರಾಜಶೇಖರ್ ನಿಗೆ ಫೋನ್ ಮಾಡಿ ಬೈಕ್ ತರಿಸಿದ್ದಳು. ಬಳಿಕ ಮೂವರೂ ಸೇರಿ ಯಲಗಟ್ಟ ಗೊಲ್ಲರಹಟ್ಟಿಯ ಒಂದು ಮನೆಯ ಬಳಿಗೆ ಆಟೋ ತಳ್ಳಿಕೊಂಡು ಹೋಗಿ ಬಿಟ್ಟು ಬೈಕಲ್ಲಿ ಊರಿಗೆ ಬರ್ತಾ ಇದ್ದರು. ಅಲ್ಲಿಗೆ ಬಂದಿದ್ದು ರಾಜಶೇಖರ್ ಅಂತ ತಿಳಿದ ಗೋಪಾಲ್ ಪತ್ನಿ ಚಂದ್ರಕಲಾ ಜೊತೆ ಜಗಳ ಮಾಡಿದ್ದಾನೆ.

ಮಾರ್ಗ ಮಧ್ಯೆ ಬೈಕ್ ನಿಲ್ಲಿಸಿ ಜಗಳ ಬಿಡಿಸುತ್ತಾ ಗೋಪಾಲ್ ನನ್ನು  ತಳ್ಳಿ ನೆಲಕ್ಕೆ ಬೀಳಿಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.  ಬಳಿಕ ಇದರಿಂದ ತಪ್ಪಿಸಿಕೊಳ್ಳಲು ಕೊಲೆಯಾಗಿದ್ದ ಮೃತ ದೇಹವನ್ನ ಚಳ್ಳಕೆರೆ ಆಸ್ಪತ್ರೆಗೆ ಬಂದು ಮೂರ್ಛೆ ರೋಗ ಬಂದಿದೆ ಚಿಕಿತ್ಸೆ ಕೊಡಿ ಅಂತ ವೈದ್ಯರನ್ನ ಕೇಳಿದ್ದಾರೆ.

ಇದನ್ನೂ ಓದಿ:  Deadly Humps: ಅವೈಜ್ಞಾನಿಕ ಹಂಪ್ ನಿಂದ ಆಕ್ಸಿಡೆಂಟ್; ಸುನೇತ್ರಾ ಪಂಡಿತ್ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಂಬಿ ಹಿಂದೆ ಬಂಧಿಯಾದ ಚಂದ್ರಕಲಾ

ಮೊದಲೇ ಮೃತಪಟ್ಟಿದ್ದ ಗೋಪಾಲ್ ನಾಯಕ್ ನನ್ನ ನೋಡಿ ಈ ವ್ಯಕ್ತಿ ಬರುವ ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ  ಅಂತ ಹೇಳಿದ್ದರು. ಆ ಸಮಯಕ್ಕೆ ವೈದ್ಯರಿಗೂ ತಿಳಿಯದೆ ಅದನ್ನ ಸರ್ಟಿಪೈ ಮಾಡಿದ್ದರು. ಬಳಿಕ ಮೃತದೇಹವನ್ನ ಸುಟ್ಟು ಅಂತ್ಯಕ್ರಿಯೆ ಮಾಡಿದ್ದ ಚಂದ್ರಕಲಾ ಪ್ರಿಯಕರನ ಜೊತೆ ಮದುವೆ ಆಗಿ ಹೋಗಬೇಕು ಅನ್ನೋ ಮತ್ತೊಂದು ಪ್ಲಾನ್ ಮಾಡಿದ್ದಳು. ಆದರೇ ಸತ್ಯ ಬಯಲಾಗಿ ಮಾಡಿದ ತಪ್ಪಿಗೆ ಪ್ರಿಯಕರನ ಜೊತೆ ತಾನೂ ಜೈಲು ಸೇರಿದ್ದಾಳೆ.
Published by:Mahmadrafik K
First published: