• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Davanagere: ಗಂಡ ಸತ್ತಾಗ ಬಿಕ್ಕಿ ಬಿಕ್ಕಿ ಅತ್ತವಳ ಸರಸದಾಟ ಬಯಲು; ಇನಿಯನ ಜೊತೆಗಿನ ಕಾಮದಾಟ ತನಿಖೆಯಲ್ಲಿ ರಿವೀಲ್

Davanagere: ಗಂಡ ಸತ್ತಾಗ ಬಿಕ್ಕಿ ಬಿಕ್ಕಿ ಅತ್ತವಳ ಸರಸದಾಟ ಬಯಲು; ಇನಿಯನ ಜೊತೆಗಿನ ಕಾಮದಾಟ ತನಿಖೆಯಲ್ಲಿ ರಿವೀಲ್

ಚಂದ್ರಶೇಖರ್ ಮತ್ತು ಶ್ವೇತಾ

ಚಂದ್ರಶೇಖರ್ ಮತ್ತು ಶ್ವೇತಾ

ಚಂದ್ರಶೇಖರ್ ಮತ್ತು ಮಹಾಂತೇಶ್​ ಇಬ್ಬರಿಗೂ ಪರಿಚಯವಿತ್ತು. ಮಾರ್ಚ್ 23ರಂದು ಮಹಾಂತೇಶ್​ನನ್ನ ಮದ್ಯಪಾನ ಮಾಡಲು ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಮದ್ಯದಲ್ಲಿ ನಿದ್ದೆ ಮಾತ್ರೆ ಸೇರಿಸಿ ಮಹಾಂತೇಶ್​ಗೆ ಕುಡಿಸಲಾಗಿದೆ.

  • News18 Kannada
  • 4-MIN READ
  • Last Updated :
  • Davanagere, India
  • Share this:

ದಾವಣಗೆರೆ: ಇದೇ ಮಾರ್ಚ್ 23ರಂದು ದಾವಣಗೆರೆಯ ರಿಂಗ್ ರಸ್ತೆಯಲ್ಲಿ (Davanagere Ring Road) 35 ವರ್ಷದ ಮಹಾಂತೇಶ್ ಎಂಬವರ ಕೊಲೆ ನಡೆದಿತ್ತು. ಕೊಲೆ ಬಳಿಕ ಶವದ ಮುಂದೆ ಪತ್ನಿ (Wife) ಶ್ವೇತಾ (27) ಬಿಕ್ಕಿ ಬಿಕ್ಕಿ ಅತ್ತಿದ್ದಳು. ಇದೀಗ ಪೊಲೀಸರ ತನಿಖೆಯಲ್ಲಿ (Police Investigation) ಶ್ವೇತಾಳ ಸರಸದಾಟ ಬಯಲಾಗಿದ್ದು, ಗೆಳೆಯ ಚಂದ್ರಶೇಖರ್ (28) ಜೊತೆ ಸೆರೆಮನೆ ಸೇರಿದ್ದಾಳೆ. ಪೊಲೀಸರ ತನಿಖೆ ವೇಳೆ ಪ್ರಿಯಕರನ ಜೊತೆಗೂಡಿ ಕೊಲೆ ಮಾಡಿರುವ ವಿಚಾರವನ್ನ ಶ್ವೇತಾ ಒಪ್ಪಿಕೊಂಡಿದ್ದಾಳೆ. ಕೊಲೆಯಾದ ಮಹಾಂತೇಶ್ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೈಚವಳ್ಳಿ (Baichavalli, Hanagal) ಗ್ರಾಮದ ನಿವಾಸಿಯಾಗಿದ್ದು, ದಾವಣಗೆರೆಯ ಕಟಿಂಗ್ ಶಾಪ್​ನಲ್ಲಿ (Cutting Shop) ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.


ಮದುವೆಯಾದರೂ ಶ್ವೇತಾ ಬಾಲ್ಯದ ಗೆಳೆಯ ಚಂದ್ರಶೇಖರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಚಂದ್ರಶೇಖರ್ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದನು. ಜೊತೆಯಾಗಿ ಜೀವನ ನಡೆಸಬೇಕು ಅಂದುಕೊಂಡಿದ್ದ ಚಂದ್ರಶೇಖರ್ ಮತ್ತು ಶ್ವೇತಾ ಜೊತೆಯಾಗಿ ಮಹಾಂತೇಶ್​ಗೆ ಚಟ್ಟ ಕಟ್ಟಿದ್ದರು.




ಮಾರ್ಚ್​ 23ರಂದು ಕೊಲೆ


ಚಂದ್ರಶೇಖರ್ ಮತ್ತು ಮಹಾಂತೇಶ್​ ಇಬ್ಬರಿಗೂ ಪರಿಚಯವಿತ್ತು. ಮಾರ್ಚ್ 23ರಂದು ಮಹಾಂತೇಶ್​ನನ್ನ ಮದ್ಯಪಾನ ಮಾಡಲು ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಮದ್ಯದಲ್ಲಿ ನಿದ್ದೆ ಮಾತ್ರೆ ಸೇರಿಸಿ ಮಹಾಂತೇಶ್​ಗೆ ಕುಡಿಸಲಾಗಿದೆ.


ಇದನ್ನೂ ಓದಿ: Crime News: ಹೆತ್ತವರನ್ನೇ ಬರ್ಬರವಾಗಿ ಕೊಂದ 16 ವರ್ಷದ ಬಾಲಕಿ, ಪ್ರಜ್ಞೆ ತಪ್ಪಿಸಿ ಕೊಡಲಿಯಿಂದ ಕೊಚ್ಚಿ ಕೊಲೆ


ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

top videos


    ಶವದ ಮೇಲೆ ಕಾರದಪುಡಿ ಹಾಕಿ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ನಂತರ ಕತ್ತು ಕತ್ತರಿಸಿ ಮಹಾಂತೇಶ್ ಕೊಲೆ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ದಾವಣಗೆರೆಯ ವಿದ್ಯಾನಗರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    First published: