Hubballi: ಕರುಳ ಕುಡಿಯನ್ನೇ ಕೊಲ್ಲೋಕೆ ಹೋದ ತಾಯಿಯ ಬಂಧನ; 14 ದಿನ ನ್ಯಾಯಾಂಗ ಬಂಧನ

ಬಂಧಿತ  ತಾಯಿ

ಬಂಧಿತ ತಾಯಿ

ಹೆತ್ತ ಕರುಳನ್ನೇ ಕೊಲ್ಲೋಕೆ ಹೋಗಿ ಸಿಕ್ಕಿ ಹಾಕಿಕೊಂಡಿರೋ ಹೆತ್ತಮ್ಮ ಇದೀಗ ಕಂಬಿ ಎಣಿಸುತ್ತಿದ್ದಾಳೆ. ಅದೃಷ್ಟವಶಾತ್ ಬಚಾವ್ ಆಗಿರೋ ಮಗುವಿಗೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಮಗುವಿನ ಅನಾರೋಗ್ಯದ ಹಿನ್ನೆಲೆಯಲ್ಲಿ ಹಾಗೆ ಮಾಡ್ದೆ ಅಂತ ತಾಯಿ ಅಲವತ್ತುಕೊಂಡಿದ್ದಾಳೆ.

ಮುಂದೆ ಓದಿ ...
  • Share this:

ಹುಬ್ಬಳ್ಳಿ: ಕಿಮ್ಸ್ (KIMS) ಮಗು ಕಳ್ಳತನ (Baby Missing Case) ಪ್ರಕರಣದಲ್ಲಿ ಹೆತ್ತಮ್ಮಳೇ ವಿಲನ್. ಕರುಳ ಕುಡಿಯನ್ನೇ ಕೊಲ್ಲೋಕೆ ಹೋದ ಅಂಶ ಬೆಳಕಿಗೆ ಬಂದಿದೆ. ತೀವ್ರ ವಿಚಾರಣೆ ನಡೆಸಿದ ನಂತರ ಕೊನೆಗೂ ಪೊಲೀಸರು (Police) ಮಗುವಿನ ತಾಯಿ (Baby’s Mother) ಸಲ್ಮಾ‌ಳನ್ನು ಬಂಧಿಸಿದ್ದಾರೆ. ಮಗುವನ್ನು ಬಾತ್ ರೂಮ್ ನ ಕಿಟಕಿಯ (Bathroom Window) ಮೂಲಕ‌ ಹೊರಗೆ ಎಸೆದಿದ್ದ ಸಲ್ಮಾ, ನಂತರ ಮಗುವನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದಿದ್ದಳು. ಕೂಲಂಕೂಷ ವಿಚಾರಣೆಯ ಬಳಿಕ‌ ತಾಯಿ ಸಲ್ಮಾಳನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿ (Hubballi) ‌ಒಂದನೇ ಅಧಿಕ ದಿವಾಣಿ ಹಾಗೂ JMFC ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಸಲ್ಮಾಳನ್ನು ಹಾಜರುಪಡಿಸಲಾಗಿತ್ತು. 14 ದಿನಗಳ ವರಗೆ ಸಲ್ಮಾಳಿಗೆ ನ್ಯಾಯಾಂಗ ಬಂಧನ (Judicial Custody) ವಿಧಿಸಲಾಗಿದೆ.


ಮಿದುಳು ಬೆಳವಣಿಗೆ ಆಗದ ಹಿನ್ನೆಲೆ ಎಸೆದಿರುವದಾಗಿ ತಾಯಿ ಬಾಯಿಬಿಟ್ಟಿದ್ದಾಳೆ. ಹಿಂದೆ ಹುಟ್ಟಿದ ಎರಡು ಮಕ್ಕಳೂ ಅನಾರೋಗ್ಯದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದವು. ಹೀಗಾಗಿ ಅದೇ ರೀತಿಯ ಆರೋಗ್ಯ ತೊಂದರೆ ಎದುರಿಸುತ್ತಿದ್ದ 40 ದಿನದ ಹೆಣ್ಣು ಮಗು ತಾಯಿಗೆ ಬೇಡವಾಗಿತ್ತು.


ಶೌಚಾಲಯದ ಕಿಟಕಿಯಿಂದ ಹೊರ ಎಸೆದ ತಾಯಿ


ಚಿಕಿತ್ಸೆ ಪಡೆಯುತ್ತಿದ್ದ ವಾರ್ಡ್ ನ ಶೌಚಾಲಯ ಕಿಟಕಿಯಿಂದ ಮಗುವನ್ನು ಎಸೆಯಲಾಗಿತ್ತು. ಮರುದಿನ ಬೆಳಗ್ಗೆ ಎಸೆದಿದ್ದ ಜಾಗದಲ್ಲಿ ಜೀವಂತವಾಗಿ ಮಗು ಸಿಕ್ಕಿತ್ತು.


ಇದನ್ನೂ ಓದಿ:  Instagramನಲ್ಲಿ ಮುತಾಲಿಕ್, ಯಶ್​ಪಾಲ್ ಸುವರ್ಣಗೆ ಬೆದರಿಕೆ ಹಾಕಿದ್ದ ಆರೋಪಿ ಅರೆಸ್ಟ್


ಪ್ರಾಣಾಪಾಯದಿಂದ ಪಾರಾಗಿರುವ 40 ದಿನದ ಮಗುವಿಗೆ, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಜೂನ್ 13 ರಂದು ಮಧ್ಯಾಹ್ನ ಮಗು ಕಳ್ಳತನವಾಗಿದೆ ಎಂದು ದೂರು ನೀಡಲಾಗಿತ್ತು. ಕೈಯಲ್ಲಿದ್ದ ಮಗುವನ್ನು ಕಸಿದುಕೊಂಡು ಹೋದರು ಎಂದು ತಾಯಿ ಹೈಡ್ರಾಮಾ ಮಾಡಿದ್ದಳು.


woman arrested for attempted her baby murder saklb mrq
ಸಲ್ಮಾ


ತಾಯಿ ನಡವಳಿಕೆಗೆ  ಅನುಮಾನಕ್ಕೆ ಕಾರಣ


ಮಗು ನಾಪತ್ತೆಯಾದ ದಿನವೇ ತಾಯಿಯ ನಡವಳಿಕೆ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಮಗುವನ್ನು ಕದ್ದೊಯ್ಯುತ್ತಿರುವ ಅಥವಾ ಯಾರಾದ್ರೂ ತೆಗೆದುಕೊಂಡು ಹೋಗ್ತಿರೋ ದೃಶ್ಯಗಳು ಯಾವುದೇ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರಲಿಲ್ಲ. ವಿಚಿತ್ರವೆಂದರೆ ಕಿಮ್ಸ್ ಆಸ್ಪತ್ರೆಯಲ್ಲಿ 300 ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳಿದ್ದು, ಎಲ್ಲಿಯೂ ಆ ದೃಶ್ಯಗಳು ಕಾಣಿಸದೇ ಇರೋದು ಹಲವು ಅನುಮಾನಕ್ಕೆಡೆ ಮಾಡಿಕೊಟ್ಟಿತ್ತು.


ಕ್ಷಣಕ್ಕೊಮ್ಮೆ ಹೇಳಿಕ್ಕೆ ಬದಲಿಸಿದ್ದ ಮಹಿಳೆ


ಅಲ್ಲದೆ ಸಲ್ಮಾಳ ಹೇಳಿಕೆಯೂ ಕ್ಷಣಕ್ಕೊಮ್ಮೆ ಬದಲಾಗುತ್ತಿತ್ತು. ಕಪ್ಪು ವ್ಯಕ್ತಿ ಕಿತ್ತುಕೊಂಡು ಹೋದ ಎಂದು ಒಮ್ಮೆ, ಡಾಕ್ಟರ್ ಇರಬೇಕೆಂದು ಕೊಟ್ಟೆ ಎಂದು ಮತ್ತೊಂದು ಬಾರಿ ಹೀಗೆ ಹೇಳಿಕೆ ಬದಲಿಸುತ್ತಾ ಹೋಗಿದ್ದು ಅನುಮಾನಕ್ಕೆಡೆ ಮಾಡಿತ್ತು.


ಈ ಹಿನ್ನೆಲೆಯೆಲ್ಲಿ ತಾಯಿಯನ್ನು ವಶಕ್ಕೆ ಪೆಡದು ಪೊಲೀಸರು ವಿಚಾರಣೆ ನಡೆಸಿದ್ದರು. ತಾನಾಗಿಯೇ ಮಗವನ್ನು ಎಸೆದು, ಕಳ್ಳತನದ ಕಥೆ ಕಟ್ಟಿದ್ದ ತಾಯಿ ಕೊನೆಗೂ ಕಂಬಿ ಎಣಿಸುತ್ತಿದ್ದಾಳೆ. ಇದರ ಹಿಂದೆ ಬೇರೆಯವರ ಕೈವಾಡ ಇರೋ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ಇದನ್ನೂ ಓದಿ:  Karnataka Rains: ಮುಂದಿನ ಮೂರು ದಿನ ಮಳೆ ;13 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್


ಈಜಲು ಹೋದ ಇಬ್ಬರು ನೀರು ಪಾಲು


ಈಜಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲಾದ ಘಟನೆ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಗಳನ್ನು ಬ್ಯಾಹಟ್ಟಿಯ ಬಸಪ್ಪ ಬಾರಕೇರ(12) ಹಾಗೂ ಕಾರ್ತಿಕ ಗುರುಸಿದ್ಧಪ್ಪ ಹಂಚಿನಮನಿ(7) ಎಂದು ಗುರುತಿಸಲಾಗಿದೆ. ಜಮೀನಿನಲ್ಲಿದ್ದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ವೇಳೆ ದುರ್ಘಟನೆ ಸಂಭವಿಸಿದೆ.


ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಶವಗಳನ್ನು ತೆಗೆದಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Published by:Mahmadrafik K
First published: