ಹಾಸನ: ಒಂದು ಕುಟುಂಬ (Family) ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಆಗ್ಪೇಕು ಅಂದ್ರೆ ಪತಿ (Husband) ಹಾಗೂ ಪತ್ನಿ (Wife) ಇಬ್ಬರೂ ದುಡಿಯಬೇಕು. ಇಬ್ಬರೂ ಸಂಸಾರಕ್ಕಾಗಿ ತ್ಯಾಗ ಮಾಡಬೇಕು. ಇದ್ರಲ್ಲಿ ಒಬ್ಬರು ಹಾದಿ ತಪ್ಪಿದರೂ ಸಂಸಾರದ ಬಂಡಿ ಉರುಳೋದು ಗ್ಯಾರಂಟಿ. ಅದರಲ್ಲೂ ಸಂಸಾರ ನಿರ್ವಹಣೆಯಲ್ಲಿ ಹೆಂಡತಿಯ ಕೊಡುಗೆ ಹೆಚ್ಚೇ ಅಂತ ಹೇಳಬಹುದು. ಗಂಡ ಆರ್ಥಿಕವಾಗಿ (Financial) ಜವಾಬ್ದಾರಿ ವಹಿಸಿಕೊಂಡರೂ, ಮನೆಯಲ್ಲಿರುವವರ ಬೇಕು, ಬೇಡ, ಆರೋಗ್ಯ (Health) ನೋಡಿಕೊಂಡು, ಮಕ್ಕಳನ್ನೂ ಪೋಷಣೆ ಮಾಡಿಕೊಂಡು ಸರಿದೂಗಿಸಿಕೊಂಡು ಹೋಗುವವಳು ಹೆಣ್ಣೇ. ಆಕೆ ಸರಿಯಾಗಿ ಇಲ್ಲದಿದ್ದರೆ ಏನಾಗುತ್ತದೆ ಅನ್ನುವುದಕ್ಕೆ ಈ ಘಟನೆಯೇ ಉದಾಹರಣೆ. ಇಲ್ಲಿ ಗಂಡನಿದ್ದರೂ ಪರಪುರುಷನ ಮೋಹಕ್ಕೆ ಸಿಲುಕಿದ ಗೃಹಿಣಿ, ಈಗ ಇಡೀ ಮನೆಯ ಸರ್ವನಾಶ ಮಾಡಿದ್ದಲ್ಲದೇ ತಾನು ಜೈಲು (Jail) ಸೇರಿದ್ದಾಳೆ.
ಜನವರಿ 31ರಂದು ನಡೆದಿತ್ತು ಭೀಕರ ಕೊಲೆ
ಜ.31 ರಂದು ಹಾಸನ ಜಿಲ್ಲೆಯ, ಚನ್ನರಾಯಪಟ್ಟಣ ತಾಲೂಕಿನ ಕಾವಲುಹೊಸೂರು ಗ್ರಾಮದಲ್ಲಿ ಭೀಕರ ಕೊಲೆ ನಡೆದಿತ್ತು. ಅಲ್ಲಿ ಅದೇ ಗ್ರಾಮದ 42 ವರ್ಷದ ಆನಂದ್ ಕುಮಾರ್ ಎಂಬುವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ತಲೆಗೆ ದೊಣ್ಣೆಯಿಂದ ಹೊಡೆದು ಕೊಂದಿದ್ದ ಹಂತಕರು, ಎಸ್ಕೇಪ್ ಆಗಿದ್ದರು.
ಮಕ್ಕಳನ್ನು ಕರೆತರಲು ಹೋಗುತ್ತಿರುವಾಗ ಕೊಲೆ
ಜನವರಿ 31ರಂದು ಮೃತ ಆನಂದ್ ತನ್ನ ಮಕ್ಕಳನ್ನು ಶಾಲೆಯಿಂದ ವಾಪಸ್ ಕರೆದುಕೊಂಡು ಬರಲು ತಮ್ಮ ಬೈಕ್ ಏರಿ ಹೋಗುತ್ತಿದ್ದರು. ಆ ವೇಳೆ ದಾರಿ ಮಧ್ಯೆ ಆನಂದ್ ಅವರನ್ನು ಹಂತಕರು ಅಡ್ಡಗಟ್ಟಿದ್ದಾರೆ. ಹಿಂದಿನಿಂದ ಬಂದು ತಲೆಗೆ ದೊಣ್ಣೆಯಿಂದ ಹೊಡೆದು, ಭೀಕರವಾಗಿ ಕೊಲೆ ಮಾಡಲಾಗಿತ್ತು.
ಇದನ್ನೂ ಓದಿ: Dowry Case: "ಅಮ್ಮ ಬೇಗ ಬಾ" ಎನ್ನುತ್ತಲೇ ಪ್ರಾಣ ಬಿಟ್ಟಳು ಮಗಳು! ವರದಕ್ಷಿಣೆಗಾಗಿ ಕೊಂದರಾ ಕಿರಾತಕರು?
ಗಂಡನ ಶವದ ಮುಂದೆ ಕಣ್ಣೀರಿಟ್ಟಿದ್ದ ಪತ್ನಿ
ಆನಂದ್ ಕೊಲೆಯಾಗಿರೋ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಓಡೋಡಿ ಬಂದಿದ್ದ ಪತ್ನಿ ಸುನೀತಾ, ಗೋಳಾಡಿದ್ದಳು. ಗಂಡನ ಶವ ತಬ್ಬಿಕೊಂಡು ಕಣ್ಣೀರಿಟ್ಟಿದ್ದಳು. ಆಕೆಯ ಓವರ್ ಆ್ಯಕ್ಟಿಂಗ್ ಕಂಡಿದ್ದ ಪೊಲೀಸರಿಗೆ ಆಕೆ ಮೇಲೆ ಸಣ್ಣಗೆ ಅನುಮಾನ ಶುರುವಾಗಿತ್ತು.
ಯೋಗ ಕೇಂದ್ರದಲ್ಲೇ ಲವ್ವಿಡವ್ವಿ ಶುರು ಮಾಡಿದ್ದ ಸುನೀತಾ
ಪೊಲೀಸರು ಅನುಮಾನದ ಮೇಲೆ ಆಕೆಯನ್ನು ವಿಚಾರಣೆ ನಡೆಸಿದರು. ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದಾಗ ಆಕೆ ಯೋಗ ಕ್ಲಾಸ್ಗೆ ಹೋಗುತ್ತಿರೋ ವಿಚಾರ ತಿಳಿದು ಬಂತು. ನುಗ್ಗೇಹಳ್ಳಿಯಲ್ಲಿ ನವೀನ್ ಎಂಬಾತ ಯೋಗ ಕೇಂದ್ರ ನಡೆಸುತ್ತಿದ್ದ. ಮನೆಯಲ್ಲಿ ಹೊತ್ತು ಹೋಗೋದಿಲ್ಲ, ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಅಂತ ಗಂಡನನ್ನು ಪುಸಲಾಯಿಸಿದ ಸುನೀತಾ, ನವೀನ್ನ ಯೋಗಕೇಂದ್ರ ಸೇರಿಕೊಂಡಳು.
ಪ್ರಿಯಕರನ ಮೋಹಪಾಶದಲ್ಲಿ ಬಿದ್ದು ಗಂಡನ ಹತ್ಯೆಗೆ ಸ್ಕೆಚ್
ದಿನ ಕಳೆದಂತೆ ನವೀನ್ ಹಾಗೂ ಸುನೀತಾ ಹತ್ತಿರವಾದರು. ಯೋಗ ಕ್ಲಾಸ್ ನಂತರವೂ ‘ಪ್ರೇಮಯೋಗ’ ಶುರು ಹಚ್ಚಿಕೊಂಡರು. ತಮ್ಮಿಬ್ಬರ ಅನೈತಿಕ ಪ್ರೇಮಕ್ಕೆ ಗಂಡ ಅಡ್ಡಿಯಾಗುತ್ತಾನೆ ಅಂತ ಕಂಗಾಲಾದಳು. ಒಲ್ಲದ ಗಂಡನನ್ನು ಹೇಗಾದರೂ ಮುಗಿಸಲೇ ಬೇಕು ಅಂತ ನಿರ್ಧಾರ ಮಾಡಿದಳು.
ಇದನ್ನೂ ಓದಿ: Double Murder: ಮನೆಯಲ್ಲಿ ಅನ್ನ ತಿಂದವನೇ ದಂಪತಿಯನ್ನು ಕೊಂದಿದ್ದ! ಬಲೆಗೆ ಬಿದ್ದಿದ್ದು ಹೇಗೆ ಹಂತಕ?
ಗಂಡನ ಕೊಲೆಗೆ ಮುಹೂರ್ತವಿಟ್ಟಿದ್ದ ಪಾಪಿ
ನವೀನ್ ಜೊತೆ ಸೇರಿ ಸ್ಕೇಚ್ ಹಾಕಿದ ಸುನೀತಾ, ಗಂಡ ಆನಂದ್ ಕೊಲೆಗೆ ಮುಹೂರ್ತವಿಟ್ಟಳು. ನವೀನ್ ತನಗೆ ಗೊತ್ತಿದ್ದ ಬೆಂಗಳೂರು ಕಡೆಯ ಹುಡುಗರನ್ನು ಕರೆಸಿ, ಆನಂದ್ನನ್ನು ಹತ್ಯೆ ಮಾಡೋಕೆ ಹೇಳಿದ್ದ. ಅದರಂತೆ ಜನವರಿ 31ರಂದು ಆನಂದ್ನನ್ನು ಹತ್ಯೆ ಮಾಡಲಾಗಿತ್ತು.
ಖಾಕಿ ಬಲೆಗೆ ಬಿದ್ದ ಹಂತಕರು
ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ನುಗ್ಗೇಹಳ್ಳಿ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು. ಇದೀಗ ಹಂತಕಿ ಸುನೀತಾ, ಪ್ರಿಯಕರ ನವೀನ್ ಹಾಗೂ ಇಬ್ಬರು ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಗಂಡನ ಶವದ ಮುಂದೆ ಕಣ್ಣೀರಿಟ್ಟಿದ್ದ ಹಂತಕಿ, ಈಗ ಜೀವನ ಪೂರ್ತಿ ಕಣ್ಣೀರಿಡುವಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ