Yadagiri: ಶವ ಸಂಸ್ಕಾರಕ್ಕೂ ಸಂಕಷ್ಟ! ಹಳ್ಳದಲ್ಲಿಯೇ ಮೃತದೇಹ ಹೊತ್ತುಕೊಂಡು ಹೋಗಿ ಅಂತ್ಯಕ್ರಿಯೆ!

ಸುಮಾರು ವರ್ಷಗಳಿಂದ ಅಂತ್ಯಕ್ರಿಯೆ ಮಾಡಲು ಹಳ್ಳದಾಟಿಕೊಂಡು ಹೋಗುವ ಬಗ್ಗೆ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದ್ರು. ಸೇತುವೆ ನಿರ್ಮಾಣ ಮಾಡುವ ಬಗ್ಗೆ ಅನೇಕ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.

ಹಳ್ಳದಾಟಲು ಹರಸಾಹಸ

ಹಳ್ಳದಾಟಲು ಹರಸಾಹಸ

  • Share this:
ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ತೆಗ್ಗಳ್ಳಿ ಗ್ರಾಮದಲ್ಲಿ ಸುಮಾರು ವರ್ಷಗಳಿಂದ  ಶವ ಹೊತ್ತು ಹಳ್ಳ ದಾಟಿಕೊಂಡು ಹೋಗಿ ಅಂತ್ಯಕ್ರಿಯೆ (Cremation) ಮಾಡುವಂತ ಪರಿಸ್ಥಿತಿ ತಲೆದೊರಿದೆ. ತೆಗ್ಗಳ್ಳಿ ಗ್ರಾಮದ ಹೊರಭಾಗದಲ್ಲಿ ದಾನಿಯೊಬ್ಬರು ಎರಡು ಎಕರೆ ಭೂಮಿಯನ್ನು ರುದ್ರಭೂಮಿಗೆ ದಾನವಾಗಿ ಭೂಮಿ ನೀಡಿದ್ದಾರೆ. ತೆಗ್ಗಳ್ಳಿ ಗ್ರಾಮದ ಎಲ್ಲಾ ಸಮುದಾಯದವರು (Community) ಇಲ್ಲಿಯೇ ಅಂತ್ಯಕ್ರಿಯೆ ಮಾಡುತ್ತಾ ಬಂದಿದ್ದಾರೆ. ಸ್ವಂತ ಜಮೀನು ಹೊಂದಿರುವ ಕೆಲವರು ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡುತ್ತಾರೆ. ಜಮೀನು ಇಲ್ಲದವರು ಈ ರುದ್ರಭೂಮಿಯಲ್ಲಿಯೇ (Burial place) ಅಂತ್ಯಕ್ರಿಯೆ ಮಾಡಬೇಕಾಗಿರುತ್ತದೆ.

ಶವದ ಜೊತೆ ಜೀವದ ಹಂಗು ತೊರೆಯಬೇಕು!

ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ.  ಯಾರಾದರೂ ಊರಲ್ಲಿ ನಿಧನರಾದರೆ ಅಂತ್ಯಕ್ರಿಯೆ ಮಾಡುವುದು ಕಷ್ಟವಾಗಿದೆ. ಇತ್ತೀಚಿಗೆ ಗ್ರಾಮದ ಶ್ರೀ ಭೀಮರಾಯ ಹಾದಿಮನಿ ನಿಧನರಾದ ಹಿನ್ನೆಲೆ ಗ್ರಾಮಸ್ಥರು ಅವರ ಅಂತ್ಯಕ್ರಿಯೆ ನಡೆಸಲು ಪರದಾಡಬೇಕಾದ ಸನ್ನಿವೇಶ ಸೃಷ್ಠಿಯಾಯಿತು. ಗ್ರಾಮದ ಹಳ್ಳವು ಉಕ್ಕಿ ಹರಿಯುತ್ತಿದ್ದರು ಸಹ ಹಾದಿಮನಿ ರವರ ಶವವನ್ನು ಅಪಾಯದ ನಡುವೆ ನೀರಿನಲ್ಲಿ ಹೊತ್ತುಕೊಂಡು ಹೋಗಿದ್ದಾರೆ. ಹಳ್ಳದಲ್ಲಿ ಎದೆಯ ಭಾಗದ ವರಗೆ ನೀರಿದ್ದರು ಗ್ರಾಮಸ್ಥರು ಬೇರೆ ದಾರಿಯಿಲ್ಲದೇ ಜೀವದ ಹಂಗು ತೊರೆದು ಶವ ತೆಗೆದುಕೊಂಡು ಹೋಗಿದ್ದಾರೆ. ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಹಳ್ಳದಾಟಿಕೊಂಡು ಸ್ಮಶಾಣಕ್ಕೆ ಹೋಗಲು ವೃದ್ದರು ಹಾಗೂ ಮಹಿಳೆಯರು  ಹರಸಾಹಸ ಪಡುವಂತಾಯಿತು.

ಸಾವಿನ ನೋವಿನ ನಡುವೆ ಅಂತ್ಯಕ್ರಿಯೆದ ನೋವು..!

ಈ ಗ್ರಾಮದಲ್ಲಿನ ಕುಟುಂಬಸ್ಥರು ಕುಟುಂಬ ಸದಸ್ಯರನ್ನು ಕಳೆದುಕೊಂಡ ನೋವಿನಲ್ಲಿರುತ್ತಾರೆ. ಇಂತಹ ನೋವಿನಲ್ಲಿಯೇ ಅಪಾಯದ ನಡುವೆ ಮತ್ತೆ ಶವ ಹೊತ್ತುಕೊಂಡು ಹೋಗುವ ನೋವು ಮತ್ತೊಂದೆಡೆ ಎದುರಿಸುತ್ತಾರೆ.
ಯಾರೆ ಸತ್ತರು ಹಳ್ಳ ದಾಟಿಯ ಅಂತ್ಯಕ್ರಿಯೆ ಮಾಡುವಂತಾಗಿದೆ.ಅಧಿಕಾರಿಗಳ ನಿಷ್ಕಾಳಜಿ!

ಸುಮಾರು ವರ್ಷಗಳಿಂದ ಅಂತ್ಯಕ್ರಿಯೆ ಮಾಡಲು ಹಳ್ಳದಾಟಿಕೊಂಡು ಹೋಗುವ ಬಗ್ಗೆ ಗ್ರಾಮಸ್ಥರು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದರ ಜೊತೆಗೆ, ಇಲ್ಲಿ ಸೇತುವೆ ನಿರ್ಮಾಣ ಮಾಡುವ ಬಗ್ಗೆ ಅನೇಕ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.

ಇದನ್ನೂ ಓದಿ: Cabinet Meeting: ಪೌರಕಾರ್ಮಿಕರಿಗೆ ಗುಡ್​ ನ್ಯೂಸ್​; ಸರ್ಕಾರಿ ನೌಕರರೆಂದು ನೇಮಕಾತಿಗೆ ಸಂಪುಟ ಸೂಚನೆ

ಜನರ ಆಕ್ರೋಶ!

ಮಳೆಗಾಲ ಸಂದರ್ಭದಲ್ಲಿ ಊರಲ್ಲಿ ಯಾರಾದರೂ ಮೃತಪಟ್ಟರೆ  ಹಳ್ಳದಾಚೆ ತೆರಳಿ ಅಂತ್ಯಕ್ರಿಯೆ ಮಾಡಬೇಕು. ಆದರೆ,ಇಲ್ಲಿವರೆಗು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಯಾವುದೇ ಅಗತ್ಯ ಕ್ರಮವಹಿಸದ ಹಿನ್ನೆಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಗ್ರಾಮಸ್ಥರಾದ ಹಣಮಂತ ಮಾತನಾಡಿ, ಹಳ್ಳದಾಚೆ ರುದ್ರಭೂಮಿ ಇದೆ. ಈಗ ಮಳೆಗಾಲದಲ್ಲಿ  ಹಳ್ಳಕ್ಕೆ ಹೆಚ್ಚಿನ ನೀರು ಇದ್ದು ಯಾರಾದರೂ ಸತ್ತರೆ ಹರಿಯುವ ಹಳ್ಳದಲ್ಲಿಯೇ ಶವ ಹೊತ್ತುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಬೇಕಾದ ಪರಿಸ್ಥಿತಿ ಇದೆ ಎಂದರು.

ಅಧಿಕಾರಿಗಳು ಭೇಟಿ!

ಮಾಹಿತಿ ಅರಿತ ಹುಣಸಗಿ ತಹಶಿಲ್ದಾರ ಜಗದೀಶ ಅವರು ತೆಗ್ಗಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ದಾರೆ. ಆದಷ್ಟು ಬೇಗ ಇಲ್ಲಿ ಮತ್ತೆ ಸರ್ವೆ ಕಾರ್ಯ  ಮಾಡಿಸಿ ತೊಂದರೆಯಾಗದಂತೆ ಅಗತ್ಯ ಕ್ರಮವಹಿಸುವದಾಗಿ ತಿಳಿಸಿದ್ದಾರೆ.

ಈ ಬಗ್ಗೆ ತಹಶಿಲ್ದಾರ ಜಗದೀಶ್ ಅವರು ಮಾತನಾಡಿ, ಹಳ್ಳದಾಚೆ ಎರಡು ಎಕರೆ ಭೂಮಿಯಲ್ಲಿ ರುದ್ರಭೂಮಿ ಇದೆ. ಎಲ್ಲಾ ಸಮುದಾಯದವರು ಹಳ್ಳದಾಟಿ ಅಂತ್ಯಕ್ರಿಯೆ ಮಾಡುತ್ತಾರೆ. ಹರಿಯುವ ನೀರಿನಲ್ಲಿ ಶವ ಹೊತ್ತುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಬಂದ ನಂತರ ಗ್ರಾಮಕ್ಕೆ ಭೇಟಿ ನೀಡಿ,ಜನರ ಸಮಸ್ಯೆ ಆಲಿಸಿದ್ದೆನೆ. ಇಲ್ಲಿ ಮತ್ತೆ ಸರ್ವೇ ನಡೆಸಿ ಗ್ರಾಮಸ್ಥರ ಬೇಡಿಕೆ ತಕ್ಕಂತೆ ಅಗತ್ಯ ಕ್ರಮವಹಿಸಲಾಗುವುದೆಂದು ತಿಳಿಸಿದ್ದಾರೆ.
Published by:ಪಾವನ ಎಚ್ ಎಸ್
First published: