Damaged Road: ಒಂದೂವರೆ ತಿಂಗಳಲ್ಲೇ ಕಿತ್ತುಹೋದ ರಸ್ತೆ, ಕಾಮಗಾರಿಗೂ ಮುನ್ನವೇ 1 ಕೋಟಿ ಪಡೆದ ಗುತ್ತಿಗೆದಾರ!

ರಸ್ತೆ ನಿರ್ಮಾಣ ಮಾಡಿ ಇನ್ನೂ ಕೇವಲ ಒಂದೂವರೆ ತಿಂಗಳಷ್ಟೇ ಆಗಿದ್ದು, ಟೆಂಡರ್ ಕಾಮಗಾರಿ ನಿರ್ಮಾಣದ ಅವಧಿ ಮುಗಿಯುವ ಮನ್ನವೇ ರಸ್ತೆ ತುಂಬೆಲ್ಲಾ ಡಾಂಬರ್ ಕಿತ್ತು, ಗುಂಡಿಗಳು ಬಿದ್ದಿವೆ. ವಾಹನಗಳು ಓಡಾಡಿದ ಜಾಗದಲ್ಲೆಲ್ಲಾ ಡಾಂಬರ್ ಹರಳಿನಂತೆ ಕಿತ್ತು ಹೋಗಿದೆ.

ಒಂದೇ ತಿಂಗಳಿಗೆ ಕಿತ್ತುಹೋದ ರಸ್ತೆ

ಒಂದೇ ತಿಂಗಳಿಗೆ ಕಿತ್ತುಹೋದ ರಸ್ತೆ

  • Share this:
ಚಿತ್ರದುರ್ಗ: ಸರ್ಕಾರ (Government) ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆ (Rural Development) ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಲೇ ಇರುತ್ತದೆ. ಆದ್ರೆ ಅವೆಲ್ಲ ಅಭಿವೃದ್ಧಿಗೆ ಬಳಕೆ ಆಗುತ್ತವಾ ಎನ್ನುವುದು ಈಗಿನ ಪ್ರಶ್ನೆ. ಹಣ (Money) ಸದ್ಬಳಕೆ ಮಾಡಿಕೊಳ್ಳಲು ಕಾವಲುಗಾರಂತೆ ಕೆಲಸ ಮಾಡಬೇಕಾದ ಸರ್ಕಾರಿ ಅಧಿಕಾರಿಗಳ (Government Officers) ನಿರ್ಲಕ್ಷಕ್ಕೆ ನಿರ್ಮಾಣ ಮಾಡಿದ ಕೇವಲ ಒಂದೂವರೆ ತಿಂಗಳಲ್ಲಿ ಡಾಂಬರ್ ರಸ್ತೆ (Asphalt Road) ಕಿತ್ತು, ಗುಂಡಿ ಬಿದ್ದಿದೆ. ಇದನ್ನ ಗ್ರಾಮಸ್ಥರು ಗಮನಿಸುತ್ತಿದ್ದಂತೆ ಕಿತ್ತು ಹೋಗಿದ್ದ ಡಾಂಬರ್ ರಸ್ತೆಗೆ ಗುತ್ತಿಗೆದಾರ (Contractor) ಸೀಮೆಂಟ್ ಕಾಂಕ್ರೀಟ್ ತೇಪೆ (Cement concrete patch) ಹಾಕಿ, ಕಾಮಗಾರಿ ಪೂರ್ಣ ಆಗುವ ಮುನ್ನವೇ ಒಂದು ಕೋಟಿ ಹಣ ಬಿಲ್ (Bill) ಮಾಡಿಸಿಕೊಂಡಿದ್ದು, ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರ, ಕರ್ತವ್ಯ ನಿರ್ಲಕ್ಷ ವಹಿಸಿದ ಅಧಿಕಾರಿಗಳ ನಿರ್ಲಕ್ಷಕ್ಕೆ ಗ್ರಾಮಸ್ಥರು ಹಿಡಿ ಶಾಪ ಹಾಕಿ, ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಒಂದೂವರೆ ತಿಂಗಳಿಗೆ ಕಿತ್ತು ಹೋದ ರಸ್ತೆ

ಚಿತ್ರದುರ್ಗ ತಾಲ್ಲೂಕಿನ ದೊಡ್ಡಾಲಘಟ್ಟ ಕೋಣನೂರು ಮಾರ್ಗದ ರಸ್ತೆ ಸಂಪೂರ್ಣ ಕಳಪೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಎರಡು ಗ್ರಾಮಗಳ ಮೂಲಕ ಜಿಲ್ಲಾ ಕೇಂದ್ರಕ್ಕೆ ಹಾದು ಹೋಗಿರುವ ಸಂಪರ್ಕ ರಸ್ತೆ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ನಿರ್ಮಾಣವಾಗುತ್ತಿದ್ದು ರಸ್ತೆ ಫುಲ್ ಕಳಪೆ ಯಾಗಿದೆ. ರಸ್ತೆ ನಿರ್ಮಾಣ ಮಾಡಿ ಇನ್ನೂ ಕೇವಲ ಒಂದೂವರೆ ತಿಂಗಳಷ್ಟೇ ಆಗಿದ್ದು, ಟೆಂಡರ್ ಕಾಮಗಾರಿ ನಿರ್ಮಾಣದ ಅವಧಿ ಮುಗಿಯುವ ಮನ್ನವೇ ರಸ್ತೆ ತುಂಬೆಲ್ಲಾ ಡಾಂಬರ್ ಕಿತ್ತು, ಗುಂಡಿಗಳು ಬಿದ್ದಿವೆ. ವಾಹನಗಳು ಓಡಾಡಿದ ಜಾಗದಲ್ಲೆಲ್ಲಾ ಡಾಂಬರ್ ಹರಳಿನಂತೆ ಕಿತ್ತು ಹೋಗಿದೆ.

ಹಾಳಾಗಿರುವ ರಸ್ತೆ


ಕಾಮಗಾರಿ ಮುಗಿಯುವ ಮುನ್ನವೇ 1 ಕೋಟಿ ಬಿಲ್

ವಿಪರ್ಯಾಸ ಏನಪ್ಪಾ ಅಂದ್ರೆ ಮಂಜೂರಾತಿ ಆದೇಶದಂತೆ 5 KM ರಸ್ತೆಯಲ್ಲಿ ಈಗ  2.3 KM ಉದ್ದದ ಕಳಪೆ ಗುಣಮಟ್ಟದಲ್ಲಿ ರಸ್ತೆ ಕಾಮಗಾರಿ ಪೂರ್ಣ ಮಾಡಿರುವ ಗುತ್ತಿಗೆದಾರ ಶ್ರೀರಾಮಚಂದ್ರ ಎ. ಎಂಬಾತ ಐದು ಕಿ.ಮೀ ರಸ್ತೆ ಪೂರ್ಣವಾಗೋ ಮುನ್ನವೇ 1 ಕೋಟಿ ಬಿಲ್ ಕೂಡಾ ಪಾವತಿ ಮಾಡಿಕೊಂಡಿದ್ದಾರೆ. ಇದರಿಂದ ಐದು, ಆರು ವರ್ಷಗಳಿಗೋ, ಹತ್ತು ವರ್ಷಗಳಿಗೋ ಒಮ್ಮೆ ಮಾಡುವ ರಸ್ತೆಯನ್ನೂ ಗುಣಮಟ್ಟದಲ್ಲಿ ಮಾಡದೆ ಸಂಪೂರ್ಣ ಕಳಪೆ ಮಾಡಿರುವ ಗುತ್ತಿಗೆದಾರ ಶ್ರೀರಾಮಚಂದ್ರ , ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಯೋಜನಾ ವಿಭಾಗದ EE ಮರಿಸ್ವಾಮಿ , AEE ನಾಗರಾಜ್ , AE ತಿಮ್ಮಪ್ಪ ವಿರುದ್ಧ ಸ್ಥಳೀಯರು ಆಕ್ರೋಶ  ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Damaged Road: ಎರಡು ತಿಂಗಳ ಹಿಂದಷ್ಟೇ ಹಾಕಿದ್ದ ಟಾರ್ ಮಳೆ ಪಾಲು! ಕಳಪೆ ಕಾಮಗಾರಿಗೆ ಜನರ ಆಕ್ರೋಶ

ಅಧಿಕಾರಿಗಳು ಹೇಳುವುದು ಏನು?

ಇನ್ನೂ ರಾಜಕಾರಣಿಗಳು & ಅಧಿಕಾರಿಗಳ ಪರ್ಸೆಂಟೇಜ್ ಗಾಗಿ ರಸ್ತೆ ಬಲಿ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಈ ಕುರಿತು PRED ಇಇ ಮರಿಸ್ವಾಮಿ ಪ್ರತಿಕ್ರಿಯೆ ನೀಡಿ, ಗುತ್ತಿಗೆದಾರನಿಗೆ ನೋಟೀಸ್ ನೀಡಿ ರಸ್ತೆ ಸರಿ ಮಾಡಿಸುತ್ತೇವೆ. ಐದು ವರ್ಷಗಳವರೆಗೆ ಅವರದೇ ನಿರ್ವಹಣೆ ಇದೆ. ಐದು ವರ್ಷದಲ್ಲಿ ರಸ್ತೆ ಏನೇ ಆದರೂ ಅವರೇ ಸಂಪೂರ್ಣ ಜವಬ್ದಾರಿಯಾಗಿದ್ದು, ರಸ್ತೆ ರಿಪೇರಿ ಮಾಡಿಸಬೇಕು ಅಂತಾರೆ.

ಇದನ್ನೂ ಓದಿ: Explained: ಬೆಂಗಳೂರಿನಲ್ಲಿ ಬದುಕು ಜಟಕಾ 'ಗುಂಡಿ’! ರಾಜಧಾನಿ ರಸ್ತೆಯಲ್ಲಿರೋದು 10,282 ಹೊಂಡ!

ಕಳಪೆ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕಾಮಗಾರಿ ಪ್ರಗತಿಯಲ್ಲಿ ಇರುವಾಗ ಹಂತ ಹಂತವಾಗಿ ಬಿಲ್ ಪಾವತಿಸಬಹುದು . ಕಾಮಗಾರಿ ಇನ್ನೂ ಪೂರ್ಣ ಆಗಿಲ್ಲ , ಮಳೆಯಿಂದ ಡ್ಯಾಮೇಜ್ ಆಗಿದೆ ಎಂದು ಸಬೂಬು ಹೇಳಿದ್ದಾರೆ. ಈ ಕುರಿತು ಮೇಲಾಧಿಕಾರಿಗಳು, ಸರ್ಕಾರ ಕ್ರಮ ಕೈಗೊಲ್ಳಬೇಕು, ಇಲ್ಲವಾದ್ರೆ ಹೋರಾಟ ಮಾಡುತ್ತೇವೆ ಅಂತ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
Published by:Annappa Achari
First published: