HOME » NEWS » State » WITHDRAWAL OF ALCOHOL BAN THE BSY GOVERNMENT WILL TAKE A DECISION SHORTLY MAK

ಮದ್ಯದ ಮೇಲಿನ ನಿಷೇಧ ತೆರವಾಗುತ್ತಾ?; ಬೇರೆ ರಾಜ್ಯಗಳ ನಡೆ ಗಮನಿಸಿ ತೀರ್ಮಾನ ತೆಗೆದುಕೊಳ್ಳಲಿದೆ ಬಿಎಸ್‌ವೈ ಸರ್ಕಾರ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟಕ್ಕೂ ನಿಷೇಧ ಹೇರಲಾಗಿದೆ. ಏಪ್ರಿಲ್ 14ರ ವರೆಗೆ ಮದ್ಯ ಮಾರಾಟ ಮಾಡಿದರೆ ಶಿಕ್ಷೆ ವಿಧಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಪರಿಣಾಮ ಎಲ್ಲೂ ಮದ್ಯಪಾನ ಸಿಗುತ್ತಿಲ್ಲ. ಹೀಗಾಗಿ ಮದ್ಯಪಾನ ಇಲ್ಲದೆ ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಸುಮಾರು 5 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

news18-kannada
Updated:March 31, 2020, 5:29 PM IST
ಮದ್ಯದ ಮೇಲಿನ ನಿಷೇಧ ತೆರವಾಗುತ್ತಾ?; ಬೇರೆ ರಾಜ್ಯಗಳ ನಡೆ ಗಮನಿಸಿ ತೀರ್ಮಾನ ತೆಗೆದುಕೊಳ್ಳಲಿದೆ ಬಿಎಸ್‌ವೈ ಸರ್ಕಾರ
ಸಿಎಂ ಬಿ.ಎಸ್.ಯಡಿಯೂರಪ್ಪ.
  • Share this:
ಬೆಂಗಳೂರು (ಮಾರ್ಚ್‌ 31); ದೇಶದಾದ್ಯಂತ ಲಾಕ್‌ಡೌನ್‌ ಘೋಷಿಸಲಾಗಿರುವ ಹಿನ್ನೆಲೆಯಲ್ಲಿ ಮದ್ಯದ ಅಂಗಡಿಗಳನ್ನು ತೆರೆಯಬೇಕೆ? ಬೇಡವೇ? ಎಂಬ ಕುರಿತು ಬೇರೆ ರಾಜ್ಯಗಳು ಯಾವ ತೀರ್ಮಾನ ತೆಗೆದುಕೊಳ್ಳಲಿವೆ ಎಂಬುದನ್ನು ಗಮನಿಸಿ ಈ ಕುರಿತು ಕರ್ನಾಟಕ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ರಾಜ್ಯ ಸರ್ಕಾರದ ಮೂಲಗಳಿಂದ ನ್ಯೂಸ್‌18ಗೆ ಮಾಹಿತಿ ಲಭ್ಯವಾಗಿದೆ.  

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟಕ್ಕೂ ನಿಷೇಧ ಹೇರಲಾಗಿದೆ. ಏಪ್ರಿಲ್ 14ರ ವರೆಗೆ ಮದ್ಯ ಮಾರಾಟ ಮಾಡಿದರೆ ಶಿಕ್ಷೆ ವಿಧಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಪರಿಣಾಮ ಎಲ್ಲೂ ಮದ್ಯಪಾನ ಸಿಗುತ್ತಿಲ್ಲ. ಹೀಗಾಗಿ ಮದ್ಯಪಾನ ಇಲ್ಲದೆ ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಸುಮಾರು 5 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮದ್ಯದ ಚಟಕ್ಕೆ ದಾಸರಾಗಿರುವವರು ಪ್ರತಿನಿತ್ಯ ಮದ್ಯ ಸೇವಿಸದೆ ಬದುಕುವುದು ಅಸಾಧ್ಯ. ಹೀಗಾಗಿ ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಮಾತ್ರ ವಿನಾಯಿತಿ ನೀಡಬೇಕು ಎಂದು ಅನೇಕರು ಸರ್ಕಾರಕ್ಕೆ ಕಿವಿಮಾತು ಹೇಳುತ್ತಿದ್ದಾರೆ. ರಾಜ್ಯ ಸರ್ಕಾರವೂ ಈ ಕುರಿತು ಗಂಭೀರವಾಗಿ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

ಪ್ರಸ್ತುತ ಎಣ್ಣೆ ಬ್ಯಾನ್ ನಿಂದ ಆರೋಗ್ಯದ ಮೇಲಾಗುತ್ತಿರುವ ಪರಿಣಾಮದ ಕುರಿತು ಕೇರಳ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಈ ಪರಿಶೀಲನೆಯ ಬಳಿಕೆ ಕೇರಳ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಕೆ? ಅಥವಾ ಬೇಡವೇ? ಎಂಬ ತೀರ್ಮಾನಕ್ಕೆ ಬರಲಿದೆ.

ಈ ಕುರಿತು ಕೇರಳ ಅಲ್ಲದೆ ಬೇರೆ ರಾಜ್ಯಗಳೂ ಸಹ ಚಿಂತನೆ ನಡೆಸುತ್ತಿದ್ದು, ಈ ಎಲ್ಲಾ ರಾಜ್ಯಗಳೂ ಯಾವ ನಿರ್ಧಾರ ತೆಗೆದುಕೊಳ್ಳಲಿವೆ ಎಂಬುದರ ಆಧಾರದ ಮೇಲೆ ರಾಜ್ಯದಲ್ಲಿ ಮದ್ಯದ ಮೇಲಿನ ನಿಷೇಧ ತೆರವುಗೊಳಿಸುವ ಕುರಿತು ಬಿಎಸ್‌ವೈ ಸರ್ಕಾರದ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಲಾಕ್‌ಡೌನ್ ಪಾಲಿಸದೆ ಬೇಕಾಬಿಟ್ಟಿಯಾಗಿ ಓಡಾಡಿದ್ರೆ ಕೇಂದ್ರದ NDMA ಆಕ್ಟ್ ಅಡಿಯಲ್ಲಿ ಕೇಸ್; ಭಾಸ್ಕರ್ ರಾವ್ ಎಚ್ಚರಿಕೆ
First published: March 31, 2020, 5:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories