ಪಿಎಂ ಕಿಸಾನ್ ಸ್ಕೀಮ್​ನಲ್ಲಿ ಮಹತ್ತರ ಬದಲಾವಣೆ; ಯೋಜನೆಯ ವ್ಯಾಪ್ತಿಗೆ ಹೆಚ್ಚೆಚ್ಚು ರೈತರು

ಮೂಲತಃ ಸಣ್ಣ ರೈತರಿಗೆಂದು ಪಿಎಂ ಕಿಸಾನ್ ಯೋಜನೆಯನ್ನ ರೂಪಿಸಲಾಗಿತ್ತು. 2 ಎಕರೆಗಿಂತ ಹೆಚ್ಚು ಜಮೀನು ಹೊಂದಿರದ ರೈತರು ಮಾತ್ರ ಫಲಾನುಭವಿಗಳಾಗಬಹುದಿತ್ತು. ಆದರೆ, ಈಗ ಬದಲಾವಣೆ ಆಗಿರುವ ನಿಯಮದ ಪ್ರಕಾರ ಎಷ್ಟೇ ಜಮೀನು ಹೊಂದಿರುವ ರೈತನು ಯೋಜನೆಯಲ್ಲಿ ನೊಂದಾಯಿಸಬಹುದಾಗಿದೆ.

news18
Updated:June 23, 2020, 3:35 PM IST
ಪಿಎಂ ಕಿಸಾನ್ ಸ್ಕೀಮ್​ನಲ್ಲಿ ಮಹತ್ತರ ಬದಲಾವಣೆ; ಯೋಜನೆಯ ವ್ಯಾಪ್ತಿಗೆ ಹೆಚ್ಚೆಚ್ಚು ರೈತರು
ಸಾಂದರ್ಭಿಕ ಚಿತ್ರ
  • News18
  • Last Updated: June 23, 2020, 3:35 PM IST
  • Share this:
ನವದೆಹಲಿ: ಕಳೆದ ವರ್ಷ ಕೇಂದ್ರ ಸರ್ಕಾರ ಪ್ರಕಟಿಸಿದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ದೇಶಾದ್ಯಂತ ಕೋಟ್ಯಂತರ ಸಣ್ಣ ರೈತರು ಫಲಾನುಭವಿಗಳಾಗಿದ್ದಾರೆ. ಪ್ರತಿಯೊಬ್ಬ ರೈತನಿಗೂ ವರ್ಷಕ್ಕೆ 3 ಕಂತುಗಳಲ್ಲಿ 6 ಸಾವಿರ ರೂಪಾಯಿ ನೇರವಾಗಿ ಬ್ಯಾಂಕ್ ಖಾತೆಗೆ ಸಂದಾಯವಾಗುತ್ತದೆ. ಈಗ ಕೇಂದ್ರ ಸರ್ಕಾರ ಈ ಯೋಜನೆಯಲ್ಲಿ ಮಹತ್ವದ ಬದಲಾವಣೆಯೊಂದನ್ನ ಮಾಡಿದೆ. ಅದರಂತೆ ಈಗ ಇನ್ನಷ್ಟು 2 ಕೋಟಿ ರೈತರು ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ.

ಏನು ಬದಲಾವಣೆ?

ಮೂಲತಃ ಸಣ್ಣ ರೈತರಿಗೆಂದು ಪಿಎಂ ಕಿಸಾನ್ ಯೋಜನೆಯನ್ನ ರೂಪಿಸಲಾಗಿತ್ತು. 2 ಎಕರೆಗಿಂತ ಹೆಚ್ಚು ಜಮೀನು ಹೊಂದಿರದ ರೈತರು ಮಾತ್ರ ಫಲಾನುಭವಿಗಳಾಗಬಹುದಿತ್ತು. ಆದರೆ, ಈಗ ಬದಲಾವಣೆ ಆಗಿರುವ ನಿಯಮದ ಪ್ರಕಾರ ಎಷ್ಟೇ ಜಮೀನು ಹೊಂದಿರುವ ರೈತನು ಯೋಜನೆಯಲ್ಲಿ ನೊಂದಾಯಿಸಬಹುದಾಗಿದೆ. ಇದರಿಂದ ಅಂದಾಜು 2 ಕೋಟಿ ಹೆಚ್ಚು ರೈತರು ಯೋಜನೆಗೆ ಹೊಸದಾಗಿ ಸೇರ್ಪಡೆಯಾಗುವ ಅವಕಾಶ ಇದೆ. ಹೀಗಾಗಿ ದೊಡ್ಡ ರೈತರೂ ಪಿಎಂ ಕಿಸಾನ್ ಯೋಜನೆಗೆ ಈಗ ನೊಂದಾಯಿಸಬಹುದಾಗಿದೆ.

ಇದನ್ನೂ ಓದಿ: ‘ಚೀನಾ, ಆರ್ಥಿಕ, ಕೊರೋನಾ ಎಲ್ಲಾ ಸಮಸ್ಯೆಗಳಿಗೂ ಮೋದಿ ಸರ್ಕಾರದ ತಪ್ಪು ನಡೆಗಳೇ ಕಾರಣ‘ - ಸೋನಿಯಾ ಗಾಂಧಿ

ಇದೇ ಆಗಸ್ಟ್ 1ರಂದು ಪಿಎಂ ಕಿಸಾನ್ ಯೋಜನೆಯ ಒಂದು ಕಂತಿನ ಹಣ ಬಿಡುಗಡೆಯಾಗುತ್ತಿದೆ. ಯೋಜನೆಗೆ ಹೆಸರು ನೊಂದಾಯಿಸಿದ ರೈತರು ಆಗಸ್ಟ್ ಮೊದಲ ವಾರದಲ್ಲಿ ತಮ್ಮ ಖಾತೆಗೆ 2 ಸಾವಿರ ರೂ ಹಣ ಸಂದಾಯವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಒಂದು ವೇಳೆ ಹಣ ಡಿಪಾಸಿಟ್ ಆಗಿರದಿದ್ದರೆ ಆನ್​ಲೈನ್​ನಲ್ಲೇ ಪರೀಕ್ಷಿಸಿಕೊಳ್ಳಬಹುದು.

ಯೋಜನೆಗೆಂದೇ ರೂಪುಗೊಂಡಿರುವ pmkisan.gov.in ವೆಬ್​ಸೈಟ್​ನ ಮುಖ್ಯಪುಟದಲ್ಲಿ ‘Farmer Corner’ ಮೆನು ಕೆಳಗೆ Beneficiary Status ಕ್ಲಿಕ್ ಮಾಡಿದರೆ ಅಲ್ಲಿ ನೀವು ವಿವರ ಪಡೆದುಕೊಳ್ಳಬಹುದು. ಯೋಜನೆಗೆ ನೊಂದಾವಣಿ ಆಗಿರುವ ನಿಮ್ಮ ಆಧಾರ್ ನಂಬರ್, ಅಕೌಂಟ್ ನಂಬರ್ ಅಥವಾ ಮೊಬೈಲ್ ನಂಬರ್ ಈ ಮೂರಲ್ಲಿ ಯಾವುದಾದರೂ ಒಂದನ್ನ ನಮೂದಿಸಿ ನಿಮ್ಮ ಹಣದ ಸ್ಥಿತಿಗತಿ ತಿಳಿಯಬಹುದು.

ಇದನ್ನೂ ಓದಿ: ಜೂನ್ 30ರೊಳಗೆ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ?

ಹಾಗೆಯೇ, ಪಿಎಂ ಕಿಸಾನ್ ಯೋಜನೆಯ ಫಲಾನುಭವಿ ರೈತರ ಹೊಸ ಪಟ್ಟಿಯನ್ನೂ ಇದೇ ವೆಬ್​​ಸೈಟ್​ನಲ್ಲಿ ಹಾಕಲಾಗಿದೆ. ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ಹೆಸರನ್ನ ಆಯ್ಕೆ ಮಾಡಿ ಕ್ಲಿಕ್ ಮಾಡಿದರೆ ನಿಮ್ಮ ಊರಿನ ಎಲ್ಲಾ ಫಲಾನುಭವಿಗಳ ಪಟ್ಟಿ ಸಿಗುತ್ತದೆ. ಇದರಲ್ಲಿ ನಿಮ್ಮ ಹೆಸರಿದೆಯಾ ಎಂದು ಪರಿಶೀಲಿಸಿಕೊಳ್ಳಿ.
First published: June 23, 2020, 3:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading