ಬೆಳಗಾವಿ ಬದಲಿಗೆ ಬೆಂಗಳೂರಿನಲ್ಲೇ ಚಳಿಗಾಲ ಅಧಿವೇಶನ; ಸಿಎಂ ಅಧಿಕೃತ ಆದೇಶ

ರಾಜ್ಯ ಸರ್ಕಾರ ಜನರ ಆಕ್ರೋಶ ಎದುರಿಸಬೇಕಾಗುತ್ತದೆ ಎಂಬ ಭಯಕ್ಕೆ ಈ  ಬಾರಿಯ ಅಧಿವೇಶನ ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಿದೆ ಎಂದು ಕಾಂಗ್ರೆಸ್​​ ನಾಯಕರು ಆರೋಪಿಸಿದ್ದಾರೆ.

news18
Updated:September 19, 2019, 8:29 PM IST
ಬೆಳಗಾವಿ ಬದಲಿಗೆ ಬೆಂಗಳೂರಿನಲ್ಲೇ ಚಳಿಗಾಲ ಅಧಿವೇಶನ; ಸಿಎಂ ಅಧಿಕೃತ ಆದೇಶ
ಬಿ.ಎಸ್.ಯಡಿಯೂರಪ್ಪ
  • News18
  • Last Updated: September 19, 2019, 8:29 PM IST
  • Share this:
ಬೆಂಗಳೂರು(ಸೆ.19): ಬೆಳಗಾವಿ ಬದಲಿಗೆ ಈ ಬಾರಿಯ ಚಳಿಗಾಲ ಅಧಿವೇಶನ ಬೆಂಗಳೂರಿನಲ್ಲೇ ನಡೆಸಲಾಗುವುದು ಎಂದು ಸಿಎಂ ಬಿ.ಎಸ್​​​ ಯಡಿಯೂರಪ್ಪ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಭೀಕರ ಪ್ರವಾಹಕ್ಕೆ ಮುಂಬೈ ಕರ್ನಾಟಕ ತತ್ತರಿಸಿ ಹೋಗಿದೆ. ಅಲ್ಲಿನ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಬೆಳಗಾವಿ ಬದಲು ಬೆಂಗಳೂರಿನಲ್ಲೇ ಈ ಬಾರಿ ಚಳಿಗಾಲ ಅಧಿವೇಶನ ನಡೆಯಲಿದೆ. ಮುಂಬರುವ ಅಕ್ಟೋಬರ್ 14ರಿಂದ 26ರವರೆಗೆ ಅಧಿವೇಶನ ನಡೆಸಲು ತೀರ್ಮಾನಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ಧಾರೆ.

ಆಗಸ್ಟ್​​ ತಿಂಗಳಿನಲ್ಲೇ ಭೀಕರ ಪ್ರವಾಹ ಎದುರಾಗಿದೆ. ಇದರಿಂದ ಬೆಳಗಾವಿ ಜಿಲ್ಲೆಯ ಸುಮಾರು 872 ಗ್ರಾಮಗಳು ಬಾಧಿತಗೊಂಡಿವೆ. 4.15 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಇದಲ್ಲದೇ 70 ಸಾವಿರಕ್ಕಿಂತಲೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. ಆದ್ದರಿಂದ ನಾವು ಚಳಿಗಾಲ ಅಧಿವೇಶ ಬೆಳಗಾವಿಯಲ್ಲಿ ನಡೆಸಲು ಸಾಧ್ಯವಿಲ್ಲ ಎಂದು ಸಿಎಂ ಅಧಿಕೃತವಾಗಿ ಹೊರಡಿಸಿದ ಮಾಧ್ಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಂಕಷ್ಟಕ್ಕೀಡಾದ ಸಾರ್ವಜನಿಕರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಕೆಲಸ ಬಿಟ್ಟು ಅಧಿವೇಶನದ ಕಾರ್ಯದಲ್ಲಿ ಅಧಿಕಾರಿಗಳು ತೊಡಗಿದರೆ, ಸಂಕಷ್ಟಕ್ಕೀಡಾಗ ಜನರಿಗೆ ತೊಂದರೆಯಾಗುತ್ತದೆ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: Bank Holiday 2019: ಸೆ.26ರಿಂದ ಐದು ದಿನ ಬ್ಯಾಂಕ್​​ ರಜೆ; ಎಟಿಎಂನಿಂದ ಇಂದೇ ಹಣ ಡ್ರಾ ಮಾಡಿಟ್ಟುಕೊಳ್ಳಿ!

ಇನ್ನು, ಅಧಿವೇಶನದಲ್ಲಿ ಬಜೆಟ್ ಅನುಮೋದನೆ ಪಡೆಯಲಿದ್ದೇವೆ. ಅಂತೆಯೇ ಅತಿವೃಷ್ಟಿಯಿಂದ ತತ್ತರಿಸಿ ಹೋಗಿರುವ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವುದಕ್ಕೆ ಬೇಕಾದ ಬಜೆಟ್ ಮಂಡಿಸಲಿದ್ದೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ನ್ಯೂಸ್​​-18 ಕನ್ನಡಕ್ಕೆ ತಿಳಿಸಿದ್ದಾರೆ.

ಈ ಮಧ್ಯೆ ಚಳಿಗಾಲ ಅಧಿವೇಶ ಹಿಂದಿನಿಂದಲೂ ಬೆಳಗಾವಿಯಲ್ಲಿಯೇ ನಡೆಸುವುದು ಸರ್ಕಾರದ ಸಂಪ್ರದಾಯ. ರಾಜ್ಯ ಸರ್ಕಾರ ಜನರ ಆಕ್ರೋಶ ಎದುರಿಸಬೇಕಾಗುತ್ತದೆ ಎಂಬ ಭಯಕ್ಕೆ ಈ  ಬಾರಿಯ ಅಧಿವೇಶನ ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಿದೆ ಎಂದು ಕಾಂಗ್ರೆಸ್​​ ನಾಯಕರು ಆರೋಪಿಸಿದ್ದಾರೆ.

----------
First published:September 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ