• Home
 • »
 • News
 • »
 • state
 • »
 • ನೂತನ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಯಶಸ್ವಿಯಾದರೆ? ಹೈಕಮಾಂಡ್ ಒಳಮರ್ಮವೇನು?

ನೂತನ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಯಶಸ್ವಿಯಾದರೆ? ಹೈಕಮಾಂಡ್ ಒಳಮರ್ಮವೇನು?

ಬಿ.ಎಸ್​. ಯಡಿಯೂರಪ್ಪ - ಬಿ.ವೈ. ವಿಜಯೇಂದ್ರ.

ಬಿ.ಎಸ್​. ಯಡಿಯೂರಪ್ಪ - ಬಿ.ವೈ. ವಿಜಯೇಂದ್ರ.

ಲಿಂಗಾಯತ ಪ್ರಬಲ ನಾಯಕನಿಗೆ ಈ ನೂತನ ಸಚಿವ ಸಂಪುಟದಿಂದ ಉಂಟಾಗಿರುವ  ಸಮಾಧಾನವೆಂದರೆ, ತಮ್ಮ ವಿರುದ್ಧ ಬಹಿರಂಗವಾಗಿ ಬಂಡಾಯವೆದ್ದಿದ್ದ ಅವರ ಮೂವರು ಶತ್ರುಗಳಾದ  ಅರವಿಂದ ಬೆಲ್ಲದ್, ಸಿಪಿ ಯೋಗೀಶ್ವರ್ ಮತ್ತು ಯತ್ನಾಳ್ ಅವರಿಗೆ ಯಾವುದೇ ಸ್ಥಾನಗಳನ್ನು ನೀಡದೆ ಇರುವುದು.

 • Share this:

  ಡಿ ಪಿ ಸತೀಶ್


  ಬೆಂಗಳೂರು: ವಾರದ ಹಿಂದೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರು ಕೊನೆಗೂ ಅಳೆದು ತೂಗಿ ಬುಧವಾರದಂದು 29 ಮಂತ್ರಿಗಳನ್ನು ಸೇರಿಸಿಕೊಂಡು ತಮ್ಮ ಸಂಪುಟವನ್ನು ವಿಸ್ತರಿಸಿದ್ದಾರೆ. ಬೊಮ್ಮಾಯಿ ಅವರು ಬಿಎಸ್ ಯಡಿಯೂರಪ್ಪ ಪರವಾಗಿರುವ ಮತ್ತು ಯಡಿಯೂರಪ್ಪ ವಿರೋಧಿ ಬಣಗಳ ನಡುವೆ ಉತ್ತಮ ಸಮತೋಲನ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಈ ಮೂಲಕ ಮೇಲ್ನೋಟಕ್ಕೆ ತೋರುತ್ತಿದೆ.


  ನೂತನ ಕ್ಯಾಬಿನೆಟ್​ನಲ್ಲಿ ಸುಮಾರು 6ರಿಂದ 8 ಹೊಸ ಮುಖಗಳು ಸ್ಥಾನ ಪಡೆದಿದ್ದು, ಈ ಹೊಸಬರು ಇದುವರಗೂ ಯಾವ ಬಣದಲ್ಲಿಯೂ ಗುರುತಿಸಿಕೊಳ್ಳದ, ಯಾವುದೇ ಬಣಗಳಿಗೆ ಸಂಬಂಧವಿಲ್ಲದ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಎಂದು ಹೇಳಬಹುದು.


  ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಸಂಪುಟದಿಂದ ಹೊರಗಿಟ್ಟಿರುವುದು ಅತ್ಯಂತ ಮುಖ್ಯವಾದ ವಿಷಯ. ಯಾವುದಾದರೂ ಪ್ರಬಲ ಖಾತೆಯನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡೇ ಕ್ಯಾಬಿನೆಟ್​ಗೆ ಸೇರುತ್ತಾರೆ ಎಂದು ವ್ಯಾಪಕವಾಗಿ ವದಂತಿಗಳು ಹರಿದಾಡಿದ್ದವು. ಸರ್ಕಾರದ ಆಡಳಿತ ಸುಗಮವಾಗಿ ನಡೆಸುವ ಸಲುವಾಗಿ ಹಾಗೂ ಮುಖ್ಯಮಂತ್ರಿ ಹುದ್ದೆ ದಯಪಾಲಿಸಿದ ಯಡಿಯೂರಪ್ಪನವರ ಮಗನಿಗೆ ಸ್ಥಾನ ನೀಡಲು ಉತ್ಸುಕರಾಗಿದ್ದ ಬೊಮ್ಮಾಯಿ ಅವರ ಆಸೆಯನ್ನು ಹೈಕಮಾಂಡ್ ತಿರುಗು- ಮುರುಗು ಮಾಡಿದಂತೆ ತೋರುತ್ತಿದೆ.


  ಬಿಜೆಪಿಯ ಆಪ್ತ ಮೂಲಗಳ ಪ್ರಕಾರ, ಯಡಿಯೂರಪ್ಪ ಅವರು ತಮ್ಮ ಮಗ ಸಂಪುಟ ಸೇರುತ್ತಾರೆ ಎಂದು ದೃಢವಾಗಿ ನಂಬಿದ್ದರು. ಈಗ ಸಿಎಂ ಸ್ಥಾನದಿಂದ ಬಲವಂತವಾಗಿ ಕೆಳಗಿಳಿದಿರುವ ಯಡಿಯೂರಪ್ಪ ಅವರು ಮಾಜಿ ಸಿಎಂ ಆಗಿ ಇನ್ನೂ ಒಂದು ವಾರವೂ ಕಳೆದಿಲ್ಲ. ಆದರೆ ಈಗಾಗಲೇ ಪಕ್ಷದಲ್ಲಿ ಅವರ ಪ್ರಭಾವ, ಮಂಕಾದಂತೆ, ಹಿಡಿತ ಕಳೆದುಕೊಂಡಂತೆ ಒಂದಷ್ಟು ಲಕ್ಷಣಗಳು ಗೋಚರವಾಗುತ್ತಿದೆ.


  ಎಂ.ಪಿ ರೇಣುಕಾಚಾರ್ಯ, ಎಸ್‌ಆರ್ ವಿಶ್ವನಾಥ್, ಎಚ್ ಹಾಲಪ್ಪ ಸೇರಿದಂತೆ ಇನ್ನಿತರೇ ಬಿಎಸ್​ವೈ ನಿಷ್ಠಾವಂತರನ್ನು ಸಹ ಮಂತ್ರಿ ಮಾಡಲಾಗಿಲ್ಲ.


  ಲಿಂಗಾಯತ ಸಮುದಾಯದ ಪ್ರಬಲ ನಾಯಕನಿಗೆ ಈ ನೂತನ ಸಚಿವ ಸಂಪುಟದಿಂದ ಉಂಟಾಗಿರುವ  ಸಮಾಧಾನವೆಂದರೆ, ತಮ್ಮ ವಿರುದ್ಧ ಬಹಿರಂಗವಾಗಿ ಬಂಡಾಯವೆದ್ದಿದ್ದ ಅವರ ಮೂವರು ರಾಜಕೀಯ ಶತ್ರುಗಳಾದ  ಅರವಿಂದ ಬೆಲ್ಲದ್, ಸಿಪಿ ಯೋಗೀಶ್ವರ್ ಮತ್ತು ಯತ್ನಾಳ್ ಅವರಿಗೆ ಯಾವುದೇ ಸ್ಥಾನಗಳನ್ನು ನೀಡದೆ ಇರುವುದು. ಇಷ್ಟರ ಮಟ್ಟಿಗೆ ಬಿಎಸ್​ವೈ ಯಶಸ್ವಿಯಾಗಿದ್ದಾರೆ ಎನ್ನಬಹುದು. ಒಂದು ವಾರದ ಹಿಂದೆ ಬೆಲ್ಲದ್​ ಕೂಡ ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿದ್ದರು.


  ಮಾಜಿ ಸಿಎಂ ಜಗದೀಶ್ ಶೆಟ್ಟರ್, ಹಿರಿಯ ಶಾಸಕರಾದ ಎಸ್ ಸುರೇಶ್ ಕುಮಾರ್ ಮತ್ತು ಅರವಿಂದ ಲಿಂಬಾವಳಿ ಸೇರಿದಂತೆ ಪ್ರಮುಖರು ಸ್ಥಾನ ಕಳೆದುಕೊಂಡಿರುವುದು ಸಹ ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ.


  ಶೆಟ್ಟರ್ ತಮ್ಮ ಹಿರಿತನ ಉಲ್ಲೇಖಿಸಿ ಸಂಪುಟದಿಂದ ಹೊರನಡೆದಿದ್ದರು. ಅಲ್ಲದೇ ಬೊಮ್ಮಾಯಿ ಸಂಪುಟದಲ್ಲಿ ಇರುವುದಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ನೂತನ ಸಂಪುಟದಲ್ಲಿ ಸುರೇಶ್ ಕುಮಾರ್ ಮತ್ತು ಲಿಂಬಾವಳಿ ಮತ್ತೊಮ್ಮೆ ಮಂತ್ರಿಗಳಾಗದಿರುವುದಕ್ಕೆ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ.


  ಎರಡು ವರ್ಷಗಳ ಹಿಂದೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿಸಿದ ಬಹುತೇಕ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ತೆಳುವಾದ ಬಹುಮತ ಹೊಂದಿರುವುದರಿಂದ ಮತ್ತು ಈ ಪಕ್ಷಾಂತರಿಗಳು ಸರ್ಕಾರದೊಳಗೆ ಒಂದು ಪ್ರಬಲ ಗುಂಪನ್ನು ರಚಿಸಿಕೊಂಡಿರುವ ಕಾರಣ, ಹೊಸ ಸಿಎಂ ರಾಜಕೀಯ ವಾಸ್ತವ, ಪಲ್ಲಟಗಳನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಅನಿವಾರ್ಯವಾಗಿ ಸಂಪುಟದಲ್ಲಿ ಸೇರಿಸಿಕೊಳ್ಳಬೇಕಾಯಿತು.


  ರಾಜಕೀಯ ವಿಶ್ಲೇಷಕರ ಅಭಿಪ್ರಾಯ ನೋಡಿದರೆ, ಬಿಎಸ್‌ವೈ ಪಕ್ಷದಲ್ಲಿ ತಮ್ಮ ಹತೋಟಿಯನ್ನು ಕಳೆದುಕೊಂಡಂತೆ ತೋರುತ್ತಿರುವ ಈ ವೇಳೆಯಲ್ಲಿ, ಪಕ್ಷದ ಹೈಕಮಾಂಡ್ ಬಿಎಸ್‌ವೈಯಿಂದಲೇ ನೇಮಕವಾಗಿರುವ ಬೊಮ್ಮಾಯಿ ಅವರಿಗೆ ಅವಕಾಶ ನೀಡಲು ಸಿದ್ಧವಾಗಿದೆ.


  ಪ್ರಸ್ತುತ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿಸಬಾರದು ಎನ್ನುವ  ನಿರ್ಧಾರವನ್ನು ಬಿಜೆಪಿ ಹೈಕಮಾಂಡ್ ಕೈಗೊಂಡಿದೆ. ಯಡಿಯೂರಪ್ಪ ಸರ್ಕಾರವು ಮೂರು ಉಪಮುಖ್ಯಮಂತ್ರಿಗಳನ್ನು ಹೊಂದಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.


  ಇದನ್ನೂ ಓದಿ: 30 ವರ್ಷಗಳ ಕಠಿಣ ಪರಿಶ್ರಮದಿಂದ ಊರಿಗೆ ರಸ್ತೆ ನಿರ್ಮಿಸಿಕೊಂಡ ಇನ್ನೊಬ್ಬ ಮಾಂಜಿ..!


  ಬಿಎಸ್‌ವೈ ಪಕ್ಷದ ಹೈಕಮಾಂಡ್​ ತೆಗೆದುಕೊಂಡಿರುವ ನಿರ್ಧಾರವನ್ನು ಒಪ್ಪಿಕೊಳ್ಳುತ್ತಾರೆಯೇ? ಅಥವಾ ಮಸುಕಾಗುತ್ತಾರೆಯೇ? ಇಲ್ಲ ಅವರು ಮತ್ತೊಮ್ಮೆ ತಮ್ಮ ಮಹತ್ವವನ್ನು, ಇರುವಿಕೆಯನ್ನು ಎಲ್ಲರ ಗಮನಕ್ಕೆ ತರಲು ಪ್ರಯತ್ನಿಸುತ್ತಾರೆಯೇ? ಯಾರಿಗೆ ತಿಳಿದಿದೆ ಈ ಒಳ ಮರ್ಮ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: