ಮೇಲುಕೋಟೆಯಲ್ಲಿಂದು ಯಶ್​-ನಿಖಿಲ್​ ಪ್ರಚಾರ; ಮುಖಾಮುಖಿಯಾಗ್ತಾರಾ ರಾಕಿಭಾಯ್​- ಸಿಎಂ ಮಗ?

ನಿಖಿಲ್​ ಕುಮಾರಸ್ವಾಮಿ ಮೇಲುಕೋಟೆ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರೆ, ಮಧ್ಯಾಹ್ನ 2 ಗಂಟೆ ನಂತರ ದರ್ಶನ್​ ಕೂಡ ಇದೇ ಕ್ಷೇತ್ರದ ಹಲವು ಹಳ್ಳಿಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಈ ವೇಳೆ ಯಾವುದಾದರೂ ಹಳ್ಳಿಯಲ್ಲಿ ಸಿಎಂ ಪುತ್ರ ಹಾಗೂ ರಾಕಿ ಭಾಯ್​ ಎದುರಾಗುವ ಸಾಧ್ಯತೆ ಹೆಚ್ಚಿವೆ. 

Seema.R | news18
Updated:April 3, 2019, 11:06 AM IST
ಮೇಲುಕೋಟೆಯಲ್ಲಿಂದು ಯಶ್​-ನಿಖಿಲ್​ ಪ್ರಚಾರ; ಮುಖಾಮುಖಿಯಾಗ್ತಾರಾ ರಾಕಿಭಾಯ್​- ಸಿಎಂ ಮಗ?
ಯಶ್​-ನಿಖಿಲ್​
  • News18
  • Last Updated: April 3, 2019, 11:06 AM IST
  • Share this:
ಮಂಡ್ಯ (ಏ.3): ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಮಂಡ್ಯದಲ್ಲಿ ಪ್ರಚಾರದ ಅಬ್ಬರ ತಾರಕಕ್ಕೇರಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ದರ್ಶನ್​, ಯಶ್​ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇತ್ತ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಪರ ಜೆಡಿಎಸ್​ ನಾಯಕರು ಮತ ಯಾಚಿಸುತ್ತಿದ್ದಾರೆ.

ನಿನ್ನೆಯಿಂದ ಸುಮಲತಾ ಪರ ಬಿಡುವಿಲ್ಲದ ಪ್ರಚಾರ ನಡೆಸಿರುವ ನಟ ಯಶ್​ ಇಂದು ಮೇಲುಕೋಟೆಯಲ್ಲಿ ಮತಯಾಚಿಸಲಿದ್ದಾರೆ. ಕಾಕತಾಳೀಯ ಎಂಬಂತೆ ಇದೇ ಕ್ಷೇತ್ರದಲ್ಲಿ ಇಂದು ನಿಖಿಲ್​ ಕುಮಾರಸ್ವಾಮಿ ಕೂಡ ಪ್ರಚಾರ ನಡೆಸಲಿದ್ದು, ಇಬ್ಬರು ನಟರು ಮುಖಾಮುಖಿಯಾಗ್ತಾರಾ ಎಂಬ ಕುತೂಹಲ ಜನರಲ್ಲಿ ಮೂಡಿದೆ.

ಇಂದು ಬೆಳಗ್ಗಿನಿಂದ ನಿಖಿಲ್​ ಕುಮಾರಸ್ವಾಮಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರೆ, ಮಧ್ಯಾಹ್ನ 2 ಗಂಟೆ ನಂತರ ಯಶ್​​ ಮೇಲುಕೋಟೆ ಕ್ಷೇತ್ರದ ಹಲವು ಹಳ್ಳಿಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಈ ವೇಳೆ ಯಾವುದಾದರೂ ಹಳ್ಳಿಯಲ್ಲಿ ಸಿಎಂ ಪುತ್ರ ಹಾಗೂ ರಾಕಿ ಭಾಯ್​ ಎದುರಾಗಲಿದ್ದಾರಾ ಎನ್ನುವ ಕುತೂಹಲ ಹೆಚ್ಚಾಗಿದೆ.

ಇದನ್ನು ಓದಿ: ಮಂಡ್ಯದಲ್ಲಿ ಎಲ್ಲವೂ ಮೀರಿ ಹೋಗಿವೆ, ಕಾಂಗ್ರೆಸ್​ ನಾಯಕರು ಬೆಂಬಲ ನೀಡುತ್ತಿಲ್ಲ; ಜಿಟಿ ದೇವೇಗೌಡ ಆಕ್ರೋಶ

ಸುಮಲತಾ ಹಾಗೂ ಅವರ ಪರ ಪ್ರಚಾರ ನಡೆಸಿರುವ ಯಶ್-ದರ್ಶನ್​ ವಿರುದ್ಧ ಜೆಡಿಎಸ್​ ನಾಯಕರು ವಾಗ್ದಾಳಿ ನಡೆಸುತ್ತಲೆ  ಬಂದಿದ್ದಾರೆ. ಇನ್ನು ನಿನ್ನೆ ಕೂಡ ಜೆಡಿಎಸ್​ ನಾಯಕರ ಟೀಕೆಗೆ ಹರಿಹಾಯ್ದ ಯಶ್​, “ಹೆಣ್ಣು ಮಕ್ಕಳು ಸಾಕಷ್ಟು ತ್ಯಾಗ ಮಾಡಿದ್ದಾರೆ. ತವರು ಮನೆ ಹಾಗೂ ಗಂಡನ ಮನೆಯಲ್ಲಿ ಸೇವೆ ಮಾಡುತ್ತಾರೆ. ಆದರೆ, ಚುನಾವಣೆ ಬಂದ ತಕ್ಷಣ ಅವರು ಇಲ್ಲಿಯವರಲ್ಲ ಅಲ್ಲಿಯವರಲ್ಲ ಅನ್ನೋದು ಎಷ್ಟರ ಮಟ್ಟಿಗೆ ಸರಿ. ಹಾಗಾದರೆ ಮದುವೆ ಮಾಡಿ ಕೊಟ್ಟ ಹೆಣ್ಣಮಕ್ಕಳು ಎಲ್ಲಿಗೆ ಹೋಗಬೇಕು? ಈ ವಿಚಾರ ಇಲ್ಲಿಯ ಹೆಣ್ಣುಮಕ್ಕಳಿಗೆ ಅರ್ಥ ಆಗಬೇಕು," ಎಂದು ಜೆಡಿಎಸ್​ ನಾಯಕರ ಟೀಕೆಗೆ ತಿರುಗೇಟು ನೀಡಿದ್ದರು.

ಚುನಾವಣೆ ಸಮಯದಲ್ಲಿ ಪ್ರಚಾರ ನಡೆಸುವ ವೇಳೆ ಕೆಲವೊಮ್ಮೆ ಎದುರಾಳಿಗಳು ಮುಖಾಮುಖಿಯಾಗುವುದು ಸಹಜ. ಆದರೆ, ಇಂಥ ಪರಿಸ್ಥಿತಿ ಉದ್ಭವವಾಗದಂತೆ ನಾಯಕರು ಎಚ್ಚರವಹಿಸುತ್ತಾರೆ. ಕಾರಣ ಎದುರಾದರೆ, ಕಾರ್ಯಕರ್ತರಲ್ಲಿ ಇನ್ನಷ್ಟು ಅಸಮಾಧಾನ ಕೂಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಂತಹ ಇರಿಸು-ಮುರಿಸಿಗೆ ಕಾರಣವಾಗಿ ಪರಿಸ್ಥಿತಿ ಉದ್ಬವವಾಗದಂತೆ ನೋಡಿಕೊಳ್ಳುತ್ತಾರೆ.

ನಿಮ್ಮ ನ್ಯೂಸ್​18 ಕನ್ನಡವನ್ನು ಇನ್‌ಸ್ಟಾಗ್ರಾಮ್​ನಲ್ಲಿ ಹಿಂಬಾಲಿಸಲು ಕೆಳಗಿನ ಲಿಂಕ್​ ಕ್ಲಿಕ್ ಮಾಡಿ: www.instagram.com/news18kannada
First published: April 3, 2019, 10:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading