ಕೆ.ಆರ್​​ ಪೇಟೆ ಉಪಚುನಾವಣೆ: ಕಾಂಗ್ರೆಸ್​​ಗೆ ಸುಮಲತಾ ಅಂಬರೀಶ್​​ ಬೆಂಬಲ?; ಯಾಕೆ ಗೊತ್ತೇ?

ಕೆ.ಆರ್ ಪೇಟೆ ಕ್ಷೇತ್ರದಿಂದ ಅನರ್ಹ ಶಾಸಕ ನಾರಾಯಣ ಗೌಡ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ಎದುರಾಗಿದ್ಧಾರೆ. ಕಾಂಗ್ರೆಸ್​​​ನಿಂದ ಕೆ.ಬಿ. ಚಂದ್ರಶೇಖರ್ ಕಣಕ್ಕಿಳಿದಿದ್ದಾರೆ. ಈ ಇಬ್ಬರೂ ಅಭ್ಯರ್ಥಿಗಳು ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ ಬೆಂಬಲದ ನಿರೀಕ್ಷೆಯಲ್ಲಿದ್ದಾರೆ.

news18-kannada
Updated:November 23, 2019, 9:32 AM IST
ಕೆ.ಆರ್​​ ಪೇಟೆ ಉಪಚುನಾವಣೆ: ಕಾಂಗ್ರೆಸ್​​ಗೆ ಸುಮಲತಾ ಅಂಬರೀಶ್​​ ಬೆಂಬಲ?; ಯಾಕೆ ಗೊತ್ತೇ?
ನಾರಾಯಣಗೌಡ-ಸುಮಲತಾ-ಕೆಬಿ ಚಂದ್ರಶೇಖರ್​
  • Share this:
ಬೆಂಗಳೂರು(ನ.23): ಕರ್ನಾಟಕದ ಉಪಚುನಾವಣೆಗೆ ಕೇಂದ್ರ ಚುನಾವಣೆ ಆಯೋಗವೂ ದಿನಾಂಕ ನಿಗದಿ ಘೋಷಿಸಿದೆ. ಮುಂಬರುವ ಡಿಸೆಂಬರ್​​​ 5ನೇ ತಾರೀಕಿನಂದು ಹದಿನೈದು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಈ ಪೈಕಿ ಮಂಡ್ಯದ ಕೆ.ಆರ್​​ ಪೇಟೆ ಮಾತ್ರ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಾಲಿಗೆ ಪ್ರತಿಷ್ಠೆ ಕಣವಾಗಿದೆ. ಈ ಮಧ್ಯೆ ಪಕ್ಷೇತರ ಸಂಸದೆ ಸುಮಲತಾರಿಗೆ ಮಾತ್ರ ಕೆ.ಆರ್​​ ಪೇಟೆ ಉಪಚುನಾವಣೆ ತಲೆನೋವಾಗಿ ಪರಿಣಮಿಸಿದೆ.

ಕೆ.ಆರ್​​ ಪೇಟೆ ಉಪಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಯಾರಿಗೆ ಬೆಂಬಲ ನೀಡಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಲೋಕಸಭಾ ಚುನಾವಣೆಯಲ್ಲಿ ಸುಮಲತಾರಿಗೆ ಬಿಜೆಪಿ ಅಧಿಕೃತ ಬೆಂಬಲ ನೀಡಿದರೆ, ಕಾಂಗ್ರೆಸ್​​ನ ಶೇಕಡ 90ರಷ್ಟು ಮಂದಿ ಅವರ ಗೆಲುವಿಗೆ ಶ್ರಮಿಸಿದ್ದರು. ಫಲಿತಾಂಶದ ಬಳಿಕ ಯಾವ ಪಕ್ಷವನ್ನು ಸುಮಲತಾ ಅಂಬರೀಶ್ ಸೇರಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಹೀಗಾಗಿ ಸುಮಲತಾ ಅಂಬರೀಶ್ ಋಣಕ್ಕೆ ಕಟ್ಟುಬಿದ್ದು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕೋ, ಇಲ್ಲವೇ ಚುನಾವಣೆಯಲ್ಲಿ ಬೆಂಬಲಿಸಿದ್ದ ಬಿಜೆಪಿಗೆ ಬೆಂಬಲ ನೀಡಬೇಕೋ ಎಂದು ಗೊಂದಲಕ್ಕೆ ಸಿಲುಕಿದ್ದಾರೆ.

ಕಾಂಗ್ರೆಸ್​​-ಜೆಡಿಎಸ್​​ ಮತ್ತು ಬಿಜೆಪಿ ಅಭ್ಯರ್ಥಿ ಕೆ.ಆರ್​​ ಪೇಟೆ ಉಪಚುನಾವಣೆ ಗೆಲ್ಲಲು ಅಬ್ಬರದಿಂದ ಪ್ರಚಾರ ಮಾಡುತ್ತಿದ್ದಾರೆ. ಗೆಲುವಿಗಾಗಿ ಕಾರ್ಯತಂತ್ರ ರೂಪಿಸುತ್ತಿರುವ ಅಭ್ಯರ್ಥಿಗಳು, ಗೆಲುವಿಗಾಗಿ ಸುಮಲತಾ ಬೆಂಬಲ ಕೋರುತ್ತಿದ್ದಾರೆ. ಹಾಗಾಗಿಯೇ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರ ಎಲ್ಲರ ಗಮನ ಸೆಳೆದಿದೆ ಎನ್ನಬಹುದು.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ: ‘ಯುಎಸ್ ಕಾಂಗ್ರೆಸ್​​‘ನಲ್ಲಿ ನಿರ್ಣಯ ಮಂಡನೆ

ಕೆ.ಆರ್ ಪೇಟೆ ಕ್ಷೇತ್ರದಿಂದ ಅನರ್ಹ ಶಾಸಕ ನಾರಾಯಣ ಗೌಡ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ಎದುರಾಗಿದ್ಧಾರೆ. ಕಾಂಗ್ರೆಸ್​​​ನಿಂದ ಕೆ.ಬಿ. ಚಂದ್ರಶೇಖರ್ ಕಣಕ್ಕಿಳಿದಿದ್ದಾರೆ. ಈ ಇಬ್ಬರೂ ಅಭ್ಯರ್ಥಿಗಳು ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ ಬೆಂಬಲದ ನಿರೀಕ್ಷೆಯಲ್ಲಿದ್ದಾರೆ.

ಇನ್ನು ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಅಂಬರೀಶ್ ವಿರುದ್ಧ ಅಂದು ಜೆಡಿಎಸ್ ಶಾಸಕರಾಗಿದ್ದ ನಾರಾಯಣ ಗೌಡ ಪ್ರಚಾರ ಕಾರ್ಯ ನಡೆಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್ ಮಾತ್ರ ಪರೋಕ್ಷವಾಗಿ ಸುಮಲತಾ ಪರ ಪ್ರಚಾರ ಮಾಡಿದ್ದರು. ಆದ್ದರಿಂದ ಸುಮಲತಾ ಅಂಬರೀಶ್​​ ಕಾಂಗ್ರೆಸ್​​ ಅಭ್ಯರ್ಥಿಗೆ ಬೆಂಬಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಸುಮಲತಾ ಮಾತ್ರ  ಇಲ್ಲಿಯವರೆಗೂ ತಮ್ಮ ಬೆಂಬಲ ಯಾರಿಗೆ ಎಂದು ಗುಟ್ಟು ಬಿಟ್ಟುಕೊಡದೆ ಮೌನಕ್ಕೆ ಶರಣಾಗಿರುವುದಂತೂ ನಿಜ.
First published: November 23, 2019, 9:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading