ಬೆಂಗಳೂರಿನಲ್ಲಿ ಡ್ರೋನ್ ಮೂಲಕ ಕೊರೋನಾ ಸೋಂಕು ನಿವಾರಕ ರಾಸಾಯನಿಕ ಸಿಂಪಡಣೆ; ಫಲ ನೀಡುತ್ತಾ ಯೋಜನೆ?

ಒಂದು ಡ್ರೋಣ್‌ನಲ್ಲಿ ಕನಿಷ್ಟ 16 ಲೀಟರ್ ರಾಸಾಯನಿಕ ದ್ರವ ತುಂಬಿಸಿ ಸಿಂಪಡಣೆ ಮಾಡಲಾಗುತ್ತದೆ. ಒಂದು ಬಾರಿ ಡ್ರೋಣ್ ಹಾರಿಸಿದರೆ, 15 ನಿಮಿಷ ಅದರ ಶಕ್ತಿ ಇರುತ್ತದೆ. 15 ನಿಮಿಷದಲ್ಲಿ ಒಂದೂವರೆ ಎಕರೆಯಷ್ಟು ರಾಸಾಯನಿಕ ಸಿಂಪಡಿಕೆ ಮಾಡಲಾಗುವುದು ಎಂದು ಸುಗರ್ಧನ, ದಕ್ಷಾ ಸಂಘ ತಿಳಿಸಿದೆ.

news18-kannada
Updated:July 16, 2020, 1:19 PM IST
ಬೆಂಗಳೂರಿನಲ್ಲಿ ಡ್ರೋನ್ ಮೂಲಕ ಕೊರೋನಾ ಸೋಂಕು ನಿವಾರಕ ರಾಸಾಯನಿಕ ಸಿಂಪಡಣೆ; ಫಲ ನೀಡುತ್ತಾ ಯೋಜನೆ?
ಡ್ರೋನ್‌ ಮೂಲಕ ರಾಸಾಯನಿಕ ಸಿಂಪಡಣೆಗೆ ಚಾಲನೆ ನೀಡಿದ ಆರ್‌. ಅಶೋಕ್.
  • Share this:
ಬೆಂಗಳೂರು (ಜುಲೈ 16); ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಹಾವಳಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಏನೇ ಮಾಡಿದರು ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ನಗರದ ಪ್ರತಿಯೊಂದು ವಾರ್ಡ್‌‌ನಲ್ಲೂ ಡ್ರೋನ್ ಮೂಲಕ ಸೋಂಕು ನಿವಾರಕ ರಾಸಾಯನಿಕವನ್ನು ಸಿಂಪಡಣೆ ಮಾಡಲು ಮುಂದಾಗಿದೆ.

ಕೊರೋನಾ ಸೋಂಕು ಅಧಿಕವಾಗುತ್ತಿರುವ ಕಾರಣ ಬೆಂಗಳೂರಿನಲ್ಲಿ ಈಗಾಗಲೇ ಒಂದು ವಾರಗಳ ಕಾಲ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ನಗರದ ಎಲ್ಲಾ198 ವಾರ್ಡ್‌‌ಗಳಲ್ಲೂ ಡ್ರೋನ್ ಮೂಲಕ ರಾಸಾಯನಿಕ ಸಿಂಪಡಣೆ ಮಾಡಲು ನಿರ್ಧರಿಸಲಾಗಿದೆ.

ಬೆಂಗಳೂರು ದಕ್ಷಿಣ ಭಾಗಕ್ಕೆ ಸೇರಿದ ಜಯನಗರದಿಂದ ಇಂದು ಡ್ರೋನ್ ಸಿಂಪಡಣೆ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರಾಮಲಿಂಗಾರೆಡ್ಡಿ, ಸೌಮ್ಯರೆಡ್ಡಿ, ರವಿಸುಬ್ರಮಣ್ಯ ಅವರಿಂದ ಚಾಲನೆ ನೀಡಲಾಗಿದ್ದು, ಜಯನಗರದ 3 ನೇ ಬ್ಲಾಕ್‌ನಲ್ಲಿ ಇಂದಿನಿಂದ ರಾಸಾಯನಿಕ ಸಿಂಪಡಣೆ ಕೆಲಸ ಆರಂಭವಾಗಿದೆ.

ಸುಗರ್ಧನ, ದಕ್ಷಾ ಸಂಘ ಜಂಟಿ ಸಹಭಾಗಿತ್ವದಲ್ಲಿ ಡ್ರೋಣ್ ಬಳಸಿ ರಾಸಾಯನಿಕ ಸಿಂಪಡಿಕೆಗೆ ಮಾಡಲಾಗುತ್ತಿದ್ದು, ಬೆಂಗಳೂರು ದಕ್ಷಿಣ ಜೋನ್‌ನಲ್ಲಿ ಮೊದಲು ಅನುಮತಿ ಪಡೆದುಕೊಳ್ಳಲಾಗಿದೆ. ಇಂದಿನಿಂದ ಡ್ರೋಣ್ ಮೂಲಕ ಬೆಂಗಳೂರು ದಕ್ಷಿಣ ಜೋನ್‌ನಲ್ಲಿ ರಾಸಾಯನಿಕ ಸಿಂಪಡಿಕೆ ಮಾಡಲಾಗುತ್ತದೆ. 50 ಮೀಟರ್ ಎತ್ತರಕ್ಕೆ ಡ್ರೋಣ್ ಹಾರಿಸಿ, ಪ್ರತಿ ರಸ್ತೆಯಲ್ಲೂ ಕೊರೋನಾ ನಿಯಂತ್ರಣಕ್ಕೆ ರಾಸಾಯನಿಕ ಸಿಂಪಡಣೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಒಂದು ಡ್ರೋಣ್‌ನಲ್ಲಿ ಕನಿಷ್ಟ 16 ಲೀಟರ್ ರಾಸಾಯನಿಕ ದ್ರವ ತುಂಬಿಸಿ ಸಿಂಪಡಣೆ ಮಾಡಲಾಗುತ್ತದೆ. ಒಂದು ಬಾರಿ ಡ್ರೋಣ್ ಹಾರಿಸಿದರೆ, 15 ನಿಮಿಷ ಅದರ ಶಕ್ತಿ ಇರುತ್ತದೆ. 15 ನಿಮಿಷದಲ್ಲಿ ಒಂದೂವರೆ ಎಕರೆಯಷ್ಟು ರಾಸಾಯನಿಕ ಸಿಂಪಡಿಕೆ ಮಾಡಲಾಗುವುದು ಎಂದು ಸುಗರ್ಧನ, ದಕ್ಷಾ ಸಂಘ ತಿಳಿಸಿದೆ. ಆದರೆ, ಈ ಯೋಜನೆ ಕೈ ಹಿಡಿಯುತ್ತಾ? ಇದರ ಮೂಲಕ ಕೊರೋನಾ ಸೋಂಕು ನಿವಾರಣೆ ಸಾಧ್ಯವೇ? ಎಂಬ ಪ್ರಶ್ನೆ ಇದೀಗ ಮೂಡಿದೆ.

ಇದನ್ನೂ ಓದಿ : ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ; ಇದು ಕರ್ನಾಟಕದ ಕರಾಳ ದಿನ ಎಂದು ಸಿದ್ದರಾಮಯ್ಯ ಟೀಕೆ


ಭಾರತದಲ್ಲಿ ಈವರೆಗೆ 9,36,181 ಜನರಿಗೆ ಕೊರೋನಾ ಸೋಂಕು ಆವರಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ಈ ಸೋಂಕಿಗೆ 24,309 ಜನ ಮೃತಪಟ್ಟಿದ್ದಾರೆ. ಇನ್ನೂ ಕರ್ನಾಟಕದಲ್ಲಿ ನಿನ್ನೆ ಒಂದೇ ದಿನಕ್ಕೆ 3176  ಹೊಸ ಕೊರೋನಾ ಪ್ರಕರಣಗಳು ಕಂಡುಬಂದಿವೆ. ಇದು ಈವರೆಗಿನ ದಾಖಲೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 47,253ಕ್ಕೆ ಏರಿಕೆಯಾಗಿದೆ.
Published by: MAshok Kumar
First published: July 16, 2020, 1:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading