ಬೆಳಗಾವಿ ಅಧಿವೇಶನಕ್ಕೂ ಮುನ್ನ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ (Former Minister Ramesh Jarkiholi) ಮತ್ತು ಕೆ.ಎಸ್.ಈಶ್ವರಪ್ಪ (Former Minister KS Eshwarappa) ಕನಸು ನನಸು ಆಗುತ್ತಾ ಅನ್ನೋ ಪ್ರಶ್ನೆಗೆ ಇನ್ನೆರಡು ದಿನಗಳಲ್ಲಿ ತಿಳಿಯಲಿದೆ. ಗುಜರಾತ್ ಸಿಎಂ ಪ್ರಮಾಣ ವಚನ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (CM Basavaraj Bommai) ಗಾಂಧಿ ನಗರಕ್ಕೆ ತೆರಳಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minister Amit Shah) ಭಾಗಿಯಾಗಲಿದ್ದಾರೆ. ಡಿಸೆಂಬರ್ 14ರಂದು ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ. ಈ ಎರಡೂ ಭೇಟಿಯಲ್ಲಿ ಅಮಿತ್ ಶಾ ಜೊತೆ ಸಂಪುಟ ವಿಸ್ತರಣೆ ಅಥವಾ ಪುನರಾಚನೆ ಬಗ್ಗೆ ಸಿಎಂ ಬೊಮ್ಮಾಯಿ ಚರ್ಚೆ ನಡೆಸುವ ಸಾಧ್ಯತೆಗಳಿವೆ.
ಸಂಪುಟ ಸೇರಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್.ಈಶ್ವರಪ್ಪ ತುದಿಗಾಲಿನಲ್ಲಿ ನಿಂತಿದ್ದಾರೆ. ಇತ್ತ ಸಂಪುಟ ಸೇರುವ ಆಕಾಂಕ್ಷಿಗಳ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಇವರ ಹೆಸರಿದೆ.
ಮಂತ್ರಿ ಆಗುವ ಕನಸಿನಲ್ಲಿ ಬೆಳಗಾವಿ ಸಾಹುಕಾರ
ಬೆಳಗಾವಿ ಅಧಿವೇಶನಕ್ಕೆ ಮಂತ್ರಿಯಾಗಿ ಬರಬೇಕು ಎಂಬ ಕನಸು ಕಂಡಿರುವ ರಮೇಶ್ ಜಾರಕಿಹೊಳಿ ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರಂತೆ. ಇತ್ತ ಕ್ಲೀನ್ಚಿಟ್ ಸಿಕ್ಕ ಬಳಿಕ ಸಂಪುಟ ಸೇರಿ ತಮ್ಮ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ನಾಯಕರಿಗೆ ತಿರುಗೇಟು ನೀಡಲು ಮತ್ತೆ ಮಂತ್ರಿ ಆಗುವ ಆಸೆಯಲ್ಲಿದ್ದಾರೆ.
ಮಂತ್ರಿಯಾಗೇ ಸದನದಲ್ಲಿ ಭಾಗಿಯಾಗಬೇಕು ಅಂತ ಅಂದುಕೊಂಡಿರುವ ರಮೇಶ್ ಜಾರಕಿಹೊಳಿ ಈ ಹಿಂದೆ ಅಧಿವೇಶನಗಳಿಂದ ದೂರ ಉಳಿದಿದ್ದರು. ಕೊನೆ ಅಧಿವೇಶನದಲ್ಲಾದ್ರೂ ಮಂತ್ರಿಯಾಗಿ ಭಾಗಿಯಾಗಲು ಆಸೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸಂಪುಟ ವಿಸ್ತರಣೆಗೆ ಒತ್ತಡ
ತವರು ಜಿಲ್ಲೆಯಲ್ಲೇ ನಡೆಯುವ ಅಧಿವೇಶನದಲ್ಲಿ ಮಂತ್ರಿಯಾಗಿ ಪಾಲ್ಗೊಂಡು ಜಿಲ್ಲೆಯಲ್ಲಿ ಪ್ರಾಬಲ್ಯ ಸಾಧಿಸಲ ರಮೇಶ್ ಜಾರಕಿಹೊಳಿ ಪ್ಲಾನ್ ಮಾಡಿರೋ ಕಾರಣ ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆಗೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.
ಸಂಪುಟ ವಿಸ್ತರಣೆನಾ? ಪುನಾರಚನೆನಾ?
ಇನ್ನು ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದ್ದು, ಈ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡಬೇಕಾ? ಇದರಿಂದ ಪಕ್ಷಕ್ಕೆ ಆಗುವ ಲಾಭಗಳೇನು ಎಂಬುದರ ಬಗ್ಗೆ ಸಿಎಂ ಬೊಮ್ಮಾಯಿ ಚರ್ಚಿಸಿದ್ದಾರೆ.
ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ರಮೇಶ್ ಜಾರಕಿಹೊಳಿ ಸೇರಿದಂತೆ ಹಲವರು ಸಂಪುಟ ಸೇರಲು ಸಿದ್ಧರಾಗಿದ್ದಾರೆ. ಆದರೆ ಈ ಬಾರಿ ಸಂಪುಟ ಪುನಾರಚನೆ ಮಾಡಿ ಯುವ ಶಾಸಕರಿಗೆ ಅವಕಾಶ ನೀಡಬೇಕು ಎಂಬುದರ ಬಗ್ಗೆ ಗಹನವಾದ ಮಾತುಕತೆಗಳು ನಡೆದಿದೆಯಂತೆ.
ಇದನ್ನೂ ಓದಿ: Bus Strike: ಸಾರ್ವಜನಿಕರೇ ಗಮನಿಸಿ, ಮತ್ತೆ ಮುಷ್ಕರಕ್ಕೆ ಮುಂದಾದ ಸಾರಿಗೆ ಸಿಬ್ಬಂದಿ
ಮೂಲ ಬಿಜೆಪಿಗರಿಗೆ ಮಣೆ?
ಈ ಚುನಾವಣೆಯಲ್ಲಿ ಮೂಲ ಬಿಜೆಪಿಗರಿಗೆ ಮಣೆ ಹಾಕುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಇದರ ಜೊತೆಗೆ ಗುಜರಾತ್ನಲ್ಲಿ ಯಶಸ್ವಿಯಾಗಿರುವ ಹೊಸಬರಿಗೆ ಟಿಕೆಟ್ ನೀಡುವ ಕುರಿತು ಮಾತುಕತೆ ನಡೆದಿದೆಯಂತೆ.
ಅಲರ್ಟ್ ಆದ ಕಾಂಗ್ರೆಸ್!
ಚುನಾವಣೆ ತಯಾರಿಗೆ ಬಿಜೆಪಿ ಆ್ಯಕ್ಟಿವ್ ಆಗುತ್ತಲೇ ಕಾಂಗ್ರೆಸ್ ಕೂಡ ಅಲರ್ಟ್ ಆಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್ದೀಪ್ ಸುರ್ಜೇವಾಲಾ ಅವರು ಸಂದೇಶ ರವಾನಿಸಿದ್ದು, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ಗೆ ಒಗ್ಗಟ್ಟಿನ ಮಂತ್ರ ಜಪಿಸುವಂತೆ ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Karnataka Politics: ಬಿಜೆಪಿ ಸರ್ಕಾರ, ಪಕ್ಷದಲ್ಲಿ ಮಹತ್ವದ ಬದಲಾವಣೆ?
ಇದೇ ಸಂದೇಶದಲ್ಲಿ ಬಿಜೆಪಿ ತಂತ್ರಗಳಿಗೆ ಪ್ರತಿತಂತ್ರಗಳ ಹೆಣೆಯಲು ಸೂಚನೆ ನೀಡಲಾಗಿದೆ. ಹಿಮಾಚಲ ಪ್ರದೇಶದ ಗೆಲುವಿನ ಸೂತ್ರಗಳನ್ನು ರವಾನಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಪಕ್ಷ ಸಂಘಟನೆ, ಚುನಾವಣೆ ಪ್ರಚಾರ, ಸೋಶಿಯಲ್ ಮೀಡಿಯಾವನ್ನು ಹೆಚ್ಚು ಬಳಸುವಂತೆ ಹೇಳಿದ್ದಾರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ