ಹಾಸನ: ಜೆಡಿಎಸ್ (JDS) ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಹಾಸನ (Hasaan) ಜಿಲ್ಲೆಯಲ್ಲಿ ಶಾಸಕ ಪ್ರೀತಂಗೌಡ (Preetham J. Gowda) ಮೊದಲ ಬಾರಿಗೆ ಕಮಲ ಬಾವುಟ ಹಾರಿಸಿದ ನಾಯಕ. ಇಡೀ ಹಾಸನವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿರುವ ಬಿಜೆಪಿ (BJP) ಪ್ರೀತಂಗೌಡ ನಾಯಕತ್ವದಲ್ಲಿ ಪ್ರಚಾರ ನಡೆಸುತ್ತಿದೆ. ಇಂದು ಚುನಾವಣೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಹಾಸನ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರೀತಂಗೌಡ ಪ್ರಚಾರದ ವೇಳೆ ಹೊಸ ಬಾಂಬ್ ಸಿಡಿಸಿದ್ದಾರೆ.
ಚುನಾವಣಾ ಪ್ರಚಾರದಿಂದ ಅವಸರವಾಗಿ ಹೊರಡುತ್ತಿರುವ ವೇಳೆ ಹೊಳೆನರಸೀಪುರದಿಂದ (Holenarasipur) ನಾಮಿನೇಷನ್ ಮಾಡಬೇಕು ಎಂದು ಕಾರ್ಯಕರ್ತರ ಮುಂದೆ ಹೇಳಿರೋದು ಮಾಧ್ಯಮ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ.
ರೇವಣ್ಣ ವಿರುದ್ಧ ಪ್ರೀತಂಗೌಡ ಸ್ಪರ್ಧೆನಾ?
ಹೊಳೆ ನರಸೀಪುರದಿಂದ ಮಾಜಿ ಸಚಿವ ಹೆಚ್ ಡಿ ರೇವಣ್ಣ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ದಳದ ಪ್ರಮುಖ ನಾಯಕರಾಗಿರುವ ರೇವಣ್ಣ ಅವರನ್ನು ಸೋಲಿಸಲು ಹೊಳೆನರಸೀಪುರದಿಂದ ಪ್ರೀತಂಗೌಡರನ್ನು ಕಣಕ್ಕಿಳಿಸಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆಯಾ ಎಂಬ ಅನುಮಾನಗಳು ಮೂಡಿವೆ.
ಹೈಕಮಾಂಡ್ನಿಂದ ಸೂಚನೆ ಬಂದಿದೆಯಾ?
ಈಗಾಗಲೇ ಆರ್ ಅಶೋಕ್ ಮತ್ತು ವಿ ಸೋಮಣ್ಣ ಅವರಿಗೆ ಎರಡು ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಅದೇ ರೀತಿ ಪ್ರೀತಂಗೌಡರಿಗೂ ಸ್ಪರ್ಧೆ ಮಾಡುವಂತೆ ಹೈಕಮಾಂಡ್ ಸೂಚಿಸಿದೆಯಾ ಎಂಬ ಅನುಮಾನಗಳು ಮೂಡಿವೆ.
ಇದನ್ನು ಓದಿ: DK Suresh ಕಾಂಗ್ರೆಸ್ ಹಾಳು ಮಾಡ್ತಿದ್ದಾರೆ; ತಮ್ಮನ ಮುಂದೆ ಡಿಕೆಶಿ ಅಸಹಾಯಕ ಎಂದ ಟಿಕೆಟ್ ವಂಚಿತ
ಇಂದು ಹಾಸನದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ
ಇಂದು ಹಾಸನ (Hassan) ಜಿಲ್ಲೆಗೆ ದೇವೇಗೌಡರು, ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ. ಹಾಸನದಲ್ಲಿ ಎರಡನೇ ಬಾರಿ ನಾಮಪತ್ರ ಸಲ್ಲಿಸಲಿರುವ ಹೆಚ್.ಪಿ.ಸ್ವರೂಪ್ ಗೆ (HP Swaroop) ಹೆಚ್ಡಿಡಿ ಕುಟುಂಬ ಸಾಥ್ ನೀಡಲಿದೆ. ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಜಿಲ್ಲಾ ಕ್ರೀಡಾಂಗಣದಿಂದ ಎನ್.ಆರ್.ವೃತ್ತದವರೆಗೂ ಸ್ವರೂಪ್ ಬೃಹತ್ ರೋಡ್ ಶೋ ನಡೆಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ