ಕೆರೆ ಕೋಡಿ ಒಡೆದವರನ್ನು ಬಿಡುವುದಿಲ್ಲ ಎಂದ ಆರ್. ಅಶೋಕ್; ಗುತ್ತಿಗೆದಾರ ಕಾರ್ತಿಕ್ ಮೇಲೆ ನೆಟ್ಟ ಅನುಮಾನ

ಕೆರೆ ಕೋಡಿ ಯಾಕೆ ತೆಗೆದಿದ್ದಾರೆ ಎಂಬುದು ತಿಳಿಯಬೇಕಿದೆ. ಸಿಸಿಟಿವಿಯಲ್ಲಿ ಜೆಸಿಬಿಯ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಯಾರೋ ಸ್ವಾರ್ಥಕ್ಕೆ ಈ ಕೆರೆ ಕಟ್ಟೆ ಒಡೆಯುವ ಕೆಲಸ ಮಾಡಿದ್ಧಾರೆ. ಯಾರೇ ತಪ್ಪು ಮಾಡಿದರೂ ಅವರನ್ನು ಹಿಡಿದು ಕ್ರಮ ಕೈಗೊಳ್ಳುತ್ತೇವೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ.

news18
Updated:November 25, 2019, 12:51 PM IST
ಕೆರೆ ಕೋಡಿ ಒಡೆದವರನ್ನು ಬಿಡುವುದಿಲ್ಲ ಎಂದ ಆರ್. ಅಶೋಕ್; ಗುತ್ತಿಗೆದಾರ ಕಾರ್ತಿಕ್ ಮೇಲೆ ನೆಟ್ಟ ಅನುಮಾನ
ಆರ್. ಅಶೋಕ್
  • News18
  • Last Updated: November 25, 2019, 12:51 PM IST
  • Share this:
ಬೆಂಗಳೂರು(ನ. 25): ನಗರದ ಹೊರವಲಯದಲ್ಲಿರುವ ಹುಳಿಮಾವು ಕೆರೆಯ ಕಟ್ಟೆ ಒಡೆದು ಸುತ್ತಲಿನ ಸ್ಥಳಗಳು ಮುಳುಗಡೆಯಾದ ಘಟನೆ ದೇಶಾದ್ಯಂತ ದೊಡ್ಡ ಸುದ್ದಿಯಾಗಿದೆ. ಮಳೆ ಇಲ್ಲದಿದ್ದರೂ ಕೆರೆಯ ಕೋಡಿ ಒಡೆದು ನೀರು ಹೊರಬಂದಿದ್ದು ಅಚ್ಚರಿ ಮೂಡಿಸಿತ್ತು. ಯಾರೋ ಅಪರಿಚಿತ ವ್ಯಕ್ತಿಗಳು ಕೆರೆ ಕೋಡಿಯ ಮಣ್ಣು ತೆಗೆದುಹಾಕಿದ್ದರಿಂದ ನೀರು ಹೊರ ನುಗ್ಗಿರುವುದು ತಿಳಿದುಬಂದಿದೆ. 250ಕ್ಕೂ ಹೆಚ್ಚು ಮನೆಗಳು ನೀರಿನಿಂದ ಮುಳುಗಿಹೋಗಿವೆ. ಈ ಎಲ್ಲಾ ಕುಟುಂಬಗಳು ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆಯುವಂತಾಗಿದೆ.

ಕೆಲ ಸುದ್ದಿಗಳ ಪ್ರಕಾರ, ಬಿಡಿಎ ವತಿಯಿಂದ ಕೆರೆ ಕೋಡಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು ಎನ್ನಲಾಗಿದೆ. ಆದರೆ, ಬಿಡಿಎ ಈ ಬಗ್ಗೆ ಯಾವ ಸ್ಪಷ್ಟನೆಯನ್ನೂ ನೀಡಿಲ್ಲ. ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಕೆರೆಯಲ್ಲಿ ಆ ಇಲಾಖೆಯಿಂದಲೂ ಯಾವುದೇ ದುರಸ್ತಿ ಕಾರ್ಯಕ್ಕೆ ಆದೇಶ ಇರಲಿಲ್ಲ. ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ ಜೆಸಿಬಿ ಬಳಸಿ ಕೆರೆ ಕೋಡಿಯಲ್ಲಿ ಕೆಲಸ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಆದ ಯಡವಟ್ಟಿನಿಂದ ಕೋಡಿ ಕಟ್ಟೆ ಒಡೆದಿದೆ.

 ಇದನ್ನೂ ಓದಿ: ಬೆಂಗಳೂರಿಗರೇ ಹುಷಾರ್! ಕೆರೆ ಒಡೆದು ನಿಮ್ಮ ಮನೆಯೂ ಮುಳುಗೀತು

ಸಚಿವ ಆರ್. ಅಶೋಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕೆರೆಯಲ್ಲಿ ಕೆಲಸ ಮಾಡಲು ಯಾವುದೇ ಗುತ್ತಿಗೆ ನೀಡಿಲ್ಲ. ಆದರೂ ಇಲ್ಲಿ ಜೆಸಿಬಿಯಿಂದ ಮಣ್ಣು ಅಗೆಯುತ್ತಿದ್ದುದಕ್ಕೆ ಸಚಿವರು ಸಿಡಿಮಿಡಿಗೊಂಡಿದ್ಧಾರೆ.

ಕೆರೆ ಕೋಡಿ ಯಾಕೆ ತೆಗೆದಿದ್ದಾರೆ ಎಂಬುದು ತಿಳಿಯಬೇಕಿದೆ. ಸಿಸಿಟಿವಿಯಲ್ಲಿ ಜೆಸಿಬಿಯ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಯಾರೋ ಸ್ವಾರ್ಥಕ್ಕೆ ಈ ಕೆರೆ ಕಟ್ಟೆ ಒಡೆಯುವ ಕೆಲಸ ಮಾಡಿದ್ಧಾರೆ. ಯಾರೇ ತಪ್ಪು ಮಾಡಿದರೂ ಅವರನ್ನು ಹಿಡಿದು ಕ್ರಮ ಕೈಗೊಳ್ಳುತ್ತೇವೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ.

ಇದನ್ನೂ ಓದಿ: ಮಂಡ್ಯಕ್ಕೆ 8,500 ಕೋಟಿ ರೂ. ಅನುದಾನ ನೀಡಿದ್ದು ಕೇವಲ ಗಿಮಿಕ್​; ಮಗನ ಗೆಲ್ಲಿಸಲು ಮಂಡ್ಯ ಜನರಿಗೆ ಎಚ್​ಡಿಕೆ ಮೋಸ?

ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು, ನಿರಾಶ್ರಿತರಿಗೆ ಬಿಬಿಎಂಪಿ ವತಿಯಿಂದ ಪರಿಹಾರ ನೀಡಲಾಗುತ್ತದೆ. ವಾರಕ್ಕೆ ಬೇಕಾದ ದವಸ ಧಾನ್ಯದ ವ್ಯವಸ್ಥೆ ಮಾಡಲಾಗುತ್ತದೆ. ಅವರಿಗೆ ಎಲ್ಲಾ ಸೌಲಭ್ಯ ಕೊಡಲಾಗುತ್ತದೆ ಎಂದು ಭರವಸೆ ನೀಡಿದ್ಧಾರೆ. ಈ ಸಂದರ್ಭದಲ್ಲಿ ಆರ್. ಅಶೋಕ್ ಅವರು, ನಿರಾಶ್ರಿತರಿಗೆ ಸಾಂತ್ವನ ಹೇಳಿ ಬಟ್ಟೆಗಳನ್ನು ಹಂಚಿದರು.ಇನ್ನು, ಪೊಲೀಸರೂ ಕೂಡ ಕೆರೆ ಕೋಡಿ ಒಡೆದವರನ್ನು ಹುಡುಕುತ್ತಿದ್ಧಾರೆ. ಕಾರ್ತಿಕ್ ಎಂಬ ಗುತ್ತಿಗೆದಾರನ ಮೇಲೆ ಪೊಲೀಸರ ಅನುಮಾನ ನೆಟ್ಟಿದೆ. ಈತ ಸದ್ಯಕ್ಕೆ ನಾಪತ್ತೆಯಾಗಿದ್ದು, ಆತನನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸಿದ್ದಾರೆ. ಇತ್ತ, ಕೆರೆಗೆ ಯಾವುದೇ ಭದ್ರತಾ ವ್ಯವಸ್ಥೆ ಇರಲಿಲ್ಲ. ಈಗ ಒಬ್ಬ ವಾಚ್ ಮ್ಯಾನ್​ನನ್ನು ಕೆರೆ ಭದ್ರತೆಗಾಗಿ ನೇಮಿಸಲು ಸರ್ಕಾರ ಚಿಂತಿಸಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 25, 2019, 12:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading