Madhuswamy: ಕಾಂಗ್ರೆಸ್ ಸೇರ್ತಾರಾ ಸಚಿವ ಮಾಧುಸ್ವಾಮಿ? ಆಡಿಯೋ ಲೀಕ್ ಬೆನ್ನಲ್ಲೇ ಗುಸುಗುಸು!

ಕೆಲ ದಿನಗಳ ಹಿಂದೆಯಷ್ಟೇ ಸಚಿವ ಮಾಧುಸ್ವಾಮಿಯವರ ಆಡಿಯೋ ಲೀಕ್ ಆಗಿತ್ತು. ಮಾತ್ರವಲ್ಲ ಸರ್ಕಾರದ ವಿರುದ್ಧ ಮಾತನಾಡಿದ್ದ ಈ ಆಡಿಯೋದಿಂದ ಮುಜುಗರ ಕೂಡ ಉಂಟಾಗಿತ್ತು. ಅದಾದ ಬಳಿಕ ಮಾಧುಸ್ವಾಮಿ ಸೈಲೆಂಟ್ ಆಗಿದ್ರು. ಈಗ ಮಾಧುಸ್ವಾಮಿ ಕಾಂಗ್ರೆಸ್ ಸೇರ್ತಾರಾ ಅನ್ನೋ ಅನುಮಾನ ಮೂಡಿದೆ.

ಕಾಂಗ್ರೆಸ್ ಸೇರ್ತಾರಾ ಮಾಧುಸ್ವಾಮಿ?

ಕಾಂಗ್ರೆಸ್ ಸೇರ್ತಾರಾ ಮಾಧುಸ್ವಾಮಿ?

  • Share this:
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಬದಲಾಗ್ತಾರೆ, 3ನೇ ಸಿಎಂ (Chief Minister) ಆಗ್ತಾರೆ ಅಂತಾ ಕಾಂಗ್ರೆಸ್ (Congress) ಕಿಚ್ಚು ಹೊತ್ತಿಸಿತ್ತು. ಇದು ಬಿಜೆಪಿಯಲ್ಲೂ (BJP) ಸಂಚಲನ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಸಚಿವ ಮಾಧುಸ್ವಾಮಿಯವರ (Madhuswamy) ಆಡಿಯೋ (Audio) ಸ್ವಪಕ್ಷದಲ್ಲೇ ಕಿಡಿ ಹೊತ್ತಿಸಿದೆ. ಈ ಆಡಿಯೋ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಈ ಆಡಿಯೋ ಲೀಕ್ ಬೆನ್ನಲ್ಲೇ ಮಾಧುಸ್ವಾಮಿ ವಿರುದ್ಧ ಕೆಲ ಸಚಿವರು ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದರು. ಇದೆಲ್ಲದರ ನಡುವೆ ಈಗ ಸಚಿವ ಮಾಧುಸ್ವಾಮಿ ಬಗ್ಗೆ ಗುಸುಗುಸು ಹಬ್ಬಿದೆ. ಮಾಧುಸ್ವಾಮಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ತಾರಾ ಅನ್ನೋ ಪ್ರಶ್ನೆ ಎದ್ದಿದೆ.

ಕೆಲ ದಿನಗಳ ಹಿಂದೆಯಷ್ಟೇ ಸಚಿವ ಮಾಧುಸ್ವಾಮಿಯವರ ಆಡಿಯೋ ಲೀಕ್ ಆಗಿತ್ತು. ಮಾತ್ರವಲ್ಲ ಸರ್ಕಾರದ ವಿರುದ್ಧ ಮಾತನಾಡಿದ್ದ ಈ ಆಡಿಯೋದಿಂದ ಮುಜುಗರ ಕೂಡ ಉಂಟಾಗಿತ್ತು. ಅದಾದ ಬಳಿಕ ಮಾಧುಸ್ವಾಮಿ ಸೈಲೆಂಟ್ ಆಗಿದ್ರು. ಈಗ ಮಾಧುಸ್ವಾಮಿ ಕಾಂಗ್ರೆಸ್ ಸೇರ್ತಾರಾ ಅನ್ನೋ ಅನುಮಾನ ಮೂಡಿದೆ.
ಕೆ.ಎನ್.ರಾಜಣ್ಣ ಸ್ಫೋಟಕ ಹೇಳಿಕೆ

ಮಾಧುಸ್ವಾಮಿಯವರ ಆಡಿಯೋ ಲೀಕ್ ಬೆನ್ನಲ್ಲೇ ಸಚಿವ ಮಾಧುಸ್ವಾಮಿ ಕುರಿತು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ. ಮಾಧುಸ್ವಾಮಿಗೆ ಕಾಂಗ್ರೆಸ್ ಮೇಲೆ ಒಲವಿದೆ. ಕಾಂಗ್ರೆಸ್ನಿಂದ ಟಿಕೆಟ್ ಕೊಡಿಸುವಂತೆ ನನಗೆ ಕೇಳಿದ್ರು. ತಿಪಟೂರು ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಅಂತಾ ಬಾಂಬ್ ಸಿಡಿಸಿದ್ದಾರೆ.

ಇದನ್ನೂ ಓದಿ: ನಾವು ಶಶಿಕಲಾ‌ ಜೊಲ್ಲೆಗೆ ಹುಟ್ಟಿದವರಲ್ಲ, ಮತ್ತೆ ನಾಲಿಗೆ ಹರಿಬಿಟ್ಟ ಮೊಹಮ್ಮದ್ ನಲಪಾಡ್!

ಮಾಧುಸ್ವಾಮಿ ಕಾಂಗ್ರೆಸ್​​ಗೆ ಬಂದರೆ ಸದಾ ಸ್ವಾಗತ

ಮಾಧುಸ್ವಾಮಿಯವರು ಕಾಂಗ್ರೆಸ್​​ಗೆ ಬಂದರೆ ಸ್ವಾಗತ ಅಂತಾ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಬಿಜೆಪಿಯಲ್ಲಿ ಅವರಿಗೆ ಅಸಮಾಧಾನ ಇದೆ. ಹಾಗಾಗಿ ಸರ್ಕಾರದ ವಿರುದ್ದ ಹೇಳಿಕೆ ನೀಡಿದ್ದಾರೆ. ಸರ್ಕಾರದ ಮೇಲೆ ಅವರಿಗೆ ಒಳ್ಳೆಯ ಭಾವನೆ ಇಲ್ಲ. ಅವರ ಸಹೋದ್ಯೋಗಿಗಳೇ ಅವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಅಂತಾ ಹೇಳಿದ್ದಾರೆ.

ಮಾಧುಸ್ವಾಮಿ ರಾಜೀನಾಮೆ ಕೊಡಲಿ

ಸಚಿವ ಮಾಧುಸ್ವಾಮಿ ಬಿಜೆಪಿಗೆ ರಾಜೀನಾಮೆ ಕೊಡಲಿ. ನಂತರ ಕಾಂಗ್ರೆಸ್ಗೆ ಬರಲಿ. ಕಾಂಗ್ರೆಸ್ ನಾಯಕರಿಗೇ ನೀನೇ ಭೇಟಿ ಮಾಡಿ ಟಿಕೆಟ್ ಪಡೆಯುವಂತೆ ನಾನು ಸಲಹೆ ನೀಡಿದ್ದೆ ಎಂದು ಕೆ.ಎನ್.ರಾಜಣ್ಣ ಹೇಳಿದ್ದಾರೆ.

ತುಮಕೂರು ಡಿಸಿಸಿ ಬ್ಯಾಂಕ್ ವಿರುದ್ಧ ತನಿಖೆಗೆ ಆದೇಶ ವಿಚಾರವಾಗಿ ರಾಜಣ್ಣ ಪ್ರತಿಕ್ರಿಯಿಸಿದ್ದಾರೆ. ನನ್ನ ಮಧುಗಿರಿ ಕ್ಷೇತ್ರಕ್ಕೆ ಹೆಚ್ವಿನ ಸಾಲ ಕೊಟ್ಟಿದ್ದಾಗಿ ಮಾಧುಸ್ವಾಮಿ ಹೇಳುತ್ತಾರೆ. ಮಾಧುಸ್ವಾಮಿ ಸಣ್ಣ ನೀರಾವರಿ ಸಚಿವರಾಗಿ ಅವರ ಕ್ಷೇತ್ರಕ್ಕೆ ಹೆಚ್ಚಿಗೆ ಅನುದಾನ ತಂದಿಲ್ವಾ ಅಂತಾ ಪ್ರಶ್ನಿಸಿದ್ದಾರೆ.

ಡಿಸಿಸಿ ಬ್ಯಾಂಕ್​ನ್ನು ಸೂಪರ್ ಸೀಡ್ ಮಾಡಲಿ ಬಿಡಿ

ಡಿಸಿಸಿ ಬ್ಯಾಂಕ್​ನ್ನು ಸೂಪರ್ ಸೀಡ್ ಮಾಡೋದಾರೆ ಮಾಡಲಿ ಬಿಡಿ. ಸಚಿವ ಸೋಮಶೇಖರ್ ಇಲಾಖೆ ಚೆನ್ನಾಗಿ ನಡೆಸಿಕೊಂಡು ಬಂದಿದ್ದಾರೆ. ಸೋಮಶೇಖರ್ಗೂ ಮಾಧುಸ್ವಾಮಿ ನಡುವೆ ವ್ಯತ್ಯಾಸ ಇರಬಹುದು. ಮುಖ್ಯಮಂತ್ರಿಗಳು ಸಹಕಾರ ಖಾತೆ ಮಾಧುಸ್ವಾಮಿಗೆ ಕೊಡಲಿ ಎಂದು ನಾನು ಒತ್ತಾಯ ಮಾಡುತ್ತೀನಿ ಅಂತಾ ಹೇಳಿದರು.

ಇದನ್ನೂ ಓದಿ: ಸಂಸದೆ ಸುಮಲತಾ ಬಿಜೆಪಿ ಸೇರುವ ಬಗ್ಗೆ ಮಾಹಿತಿ ಬಿಚ್ಚಿಟ್ಟ ಬೆಂಬಲಿಗ!

ಸಂಪುಟ ಸೇರಲು ರಮೇಶ್ ಜಾರಕಿಹೊಳಿ ಕಸರತ್ತು

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತೆ ಸಂಪುಟಕ್ಕೆ ಸೇರೋದಕ್ಕೆ ಕಸರತ್ತು ನಡೆಸ್ತಿದ್ದಾರೆ. ಇಂದು ಮತ್ತೆ ರಮೇಶ್ ಜಾರಕಿಹೊಳಿಯವರು ಸಿಎಂ ಬಸವರಾಜ ಬೊಮ್ಮಾಯಿಯವರ ಭೇಟಿಗೆ ಆಗಮಿಸಿದರು. ಬಳಿಕ ಆರ್ ಟಿ ನಗರ ನಿವಾಸದಲ್ಲಿ ಸಿಎಂ ಬೊಮ್ಮಾಯಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಸಿದ್ದರಾಮಯ್ಯಗೆ ಹಾಕಿದ ರುದ್ರಾಕ್ಷಿ ಮಾಲೆ ರಹಸ್ಯವೇನು?

ಚಿಕ್ಕಮಗಳೂರು ಜಿಲ್ಲಾ ಪ್ರವಾಸದಲ್ಲಿರುವ ಸಿದ್ದರಾಮಯ್ಯ, ಬಾಳೆಹೊನ್ನೂರು ಮಠಕ್ಕೆ ಭೇಟಿ ನೀಡಿದರು. ಬಳಿಕ ಬಾಳೆಹೊನ್ನೂರು ಸ್ವಾಮೀಜಿಯ ದರ್ಶನ ಪಡೆದರು. ನಂತರ ಶ್ರೀಗಳು ಸಿದ್ದರಾಮಯ್ಯಗೆ ಕಾಶಿಯಿಂದ ತಂದಿದ್ದ ರುದ್ರಾಕ್ಷಿ ಹಾರ ಹಾಕಿ ಮುಂದಿನ ಚುನಾವಣೆ ಆಗುವವರೆಗೂ ಕೊರಳಲ್ಲಿ ಇರಲಿ ಎಂದು ಆರ್ಶೀವಾದ ಮಾಡಿದರು.
Published by:Thara Kemmara
First published: