ಯಲ್ಲಾಪುರ (ಡಿ.09): ಬಿಜೆಪಿ (BJP) ಮೇಲೆ ಅಸಮಾಧಾನ ಹೊಂದಿರುವ ಗಣಿ ಧಣಿ ಜನಾರ್ದನ ರೆಡ್ಡಿ ಅವರು ಬಿಜೆಪಿ ಬಿಟ್ಟು ಹೊಸ ಪಕ್ಷ ರಚಿಸುವ ಚಿಂತನೆಯಲ್ಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರ್ತಿದೆ. ಇತ್ತ ಕುಚುಕು ಗೆಳೆಯರಾಗಿರುವ ಜನಾರ್ದನ ರೆಡ್ಡಿ (Janardhan Reddy) ಹಾಗೂ ಶ್ರೀರಾಮುಲು (Sriramulu) ಅವರ ನಡುವೆ ಕೂಡ ಬಿರುಕುಂಟಾಗಿದೆ ಎನ್ನುವ ಗಾಳಿ ಸುದ್ದಿ ಕೂಡ ಎಲ್ಲೆಡೆ ಹರಡಿದೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿದ ಇಬ್ಬರು ನಾಯಕರು (Leaders) ಸಹ ನಮ್ಮ ಸ್ನೇಹ ಅಮರ ಎನ್ನುತ್ತಿದ್ದಾರೆ. ಯಲ್ಲಾಪುರದಲ್ಲಿ (Yallapura) ಮಾತಾಡಿದ ರಾಮುಲು ಅವರು ಜನಾರ್ದನ ರೆಡ್ಡಿ ಬಿಜೆಪಿ ಪಕ್ಷ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಸ್ನೇಹ ಬೇರೆ ಪಕ್ಷ ಬೇರೆ
ತಾಲೂಕಿನ ಮಾಗೋಡಿನಲ್ಲಿ ಸಿದ್ದಿ ಸಮುದಾಯದವರ ಮನೆಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಗುರುವಾರ ರಾತ್ರಿ ಆಗಮಿಸಿದ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ರು. ಜನಾರ್ದನ ರೆಡ್ಡಿ ಒಂದು ವೇಳೆ ಪಕ್ಷ ಕಟ್ಟಿದರೆ, ಸ್ನೇಹ ಬೇರೆ ಪಕ್ಷ ಬೇರೆ. ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಸ್ನೇಹ ಮತ್ತು ಪಕ್ಷ ಎರಡನ್ನೂ ಒಟ್ಟಾಗಿಯೇ ಇರುವಂತೆ ಮಾಡುತ್ತೇನೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ರೆಡ್ಡಿ ಬೇರೆ ಪಕ್ಷ ಕಟ್ಟುವ ಪ್ರಶ್ನೆಯೇ ಇಲ್ಲ
ಜನಾರ್ದನ ರೆಡ್ಡಿ ಅವರು ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ನಾಯಕರಲ್ಲೊಬ್ಬರು. ಅವರು ಈ ಪಕ್ಷವನ್ನು ಬಿಟ್ಟು ಬೇರೆ ಪಕ್ಷ ಕಟ್ಟುವ ಪ್ರಶ್ನೆಯೇ ಇಲ್ಲ. ಪಕ್ಷದೊಳಗೇ ಇರುತ್ತಾರೆ ಎಂದೂ ಪತ್ರಕರ್ತರ ಪ್ರಶ್ನೆಗೆ ಸ್ಪಷ್ಟಪಡಿಸಿದರು.
2 ಸಾವಿರ ಸಿಬ್ಬಂದಿ ನೇಮಕ
ಹೊಸ ಬಸ್ ಖರೀದಿ ಸಾರಿಗೆ ಇಲಾಖೆಯ ನಿಗಮಗಳ ಪುನಶ್ಚೇತನಕ್ಕೆ ಪ್ರಯತ್ನಿಸಲಾಗುತ್ತಿದೆ. ಸಿಬ್ಬಂದಿ ಕೊರತೆ ನೀಗಿಸಲು 2 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಸಾರಿಗೆಯನ್ನು ಹೆಚ್ಚಿಸಲು ಆದ್ಯತೆ ನೀಡಲಾಗುತ್ತಿದೆ. 30 ಸಾವಿರ ಬಸ್ಗಳನ್ನು ಬದಲಾಗಿ ಹೊಸ ಬಸ್ ಖರೀದಿಸಲಾಗುವುದು ಎಂದು ಇದೇ ವೇಳೆ ರಾಮುಲು ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಹತ್ತಿರ ಬರ್ತಿದ್ದಂತೆ ಮತ್ತೆ ರಾಜಕೀಯವಾಗಿ ಸಕ್ರಿಯರಾಗಲು ಜನಾರ್ದನ ರೆಡ್ಡಿ ಶತಪ್ರಯತ್ನ ಮಾಡ್ತಿದ್ದಾರೆ. ಆದ್ರೆ ಬಿಜೆಪಿ ನಾಯಕರಿಂದ ಯಾವುದೇ ಆಹ್ವಾನ ಸಿಕ್ಕಿಲ್ಲ. ಇದ್ರಿಂದ ರಾಜ್ಯ ಬಿಜೆಪಿ ಬಗ್ಗೆ ಕೊಂಚ ಬೇಸತ್ತಿರುವ ಜನಾರ್ದನ ರೆಡ್ಡಿ, ಹೊಸ ಪಕ್ಷ ಕಟ್ತಾರೆ ಎನ್ನುವ ಮಾತುಗಳು ಸಹ ಕೇಳಿ ಬರ್ತಿದೆ. ಜನಾರ್ದನ ರೆಡ್ಡಿ ರೆಬಲ್ ಹೇಳಿಕೆ ನೀಡ್ತಿದ್ದಂತೆ ಬೆನ್ನಲ್ಲೇ ಸಚಿವ ಹಾಗೂ ರೆಡ್ಡಿ ದೋಸ್ತು ಶ್ರೀರಾಮುಲು ಅವರು ಮತ್ತೆ ಸ್ನೇಹದ ಮಂತ್ರ ಪಟಿಸಿದ್ದಾರೆ.
ಸ್ನೇಹಕ್ಕಾಗಿ ಜೀವ ಕೊಡಲು ಸಹ ನಾನು ರೆಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ