ಮಂಡ್ಯ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ (Karnataka Assembly Election) ಹತ್ತಿರ ಬರ್ತಿದೆ. ದಿನ ಕಡಿಮೆ ಆಗ್ತಿದ್ದಂತೆ ಚುನಾವಣಾ ಕಾವು ಜೋರಾಗಿದೆ. ಇನ್ನೇನು ಕೆಲವೇ ವಾರಗಳಲ್ಲಿ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ (Code of Election Conduct) ಘೋಷಣೆಯಾಗಲಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಈಗಿಂದಲೇ ಮತದಾರರನ್ನು ಮನವೊಲಿಸುವ ಕಾರ್ಯದಲ್ಲಿ ನಿರತವಾಗಿದೆ. ಈ ಮಧ್ಯೆ ಒಂದು ಕಾಲದಲ್ಲಿ ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಡ್ರೋನ್ ಪ್ರತಾಪ್ (Drone Pratap) ಕೂಡ ರಾಜಕೀಯಕ್ಕೆ ಬರ್ತಾರಾ ಅನ್ನೋ ಅನುಮಾನ ಮೂಡಿದೆ.
ಹೌದು.. ಡ್ರೋನ್ ಸಂಶೋಧನೆಯ ಮೂಲಕ ಭಾರೀ ಸುದ್ದಿಯಾಗಿ ಬಳಿಕ ಟ್ರೋಲ್‌ಗೆ ಒಳಗಾಗಿದ್ದ ಪ್ರತಾಪ್ ಅವರು ತಾನು ಟೀಕೆಗೆ ಗುರಿಯಾದ ಬಳಿಕ ಸೈಲೆಂಟ್ ಆಗಿದ್ದರು. ಇದೀಗ ಮತ್ತೆ ಪ್ರತಾಪ್ ಮುನ್ನೆಲೆಗೆ ಬಂದಿದ್ದು, ಮಳವಳ್ಳಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜೊತೆ ಕಾಣಿಸಿಕೊಳ್ಳುವ ಮೂಲಕ ಸದ್ದು ಮಾಡಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್‌ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಡ್ರೋನ್ ಪ್ರತಾಪ್, ಮಳವಳ್ಳಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಒಳ್ಳೆಯದಾಗಲಿ ಎಂದು ಶುಭ ಕೋರಿದ್ದಾರೆ.
ಇದನ್ನೂ ಓದಿ: Mandya Politics: ಮಂಡ್ಯದಲ್ಲಿ ಗಿಫ್ಟ್ ಪಾಲಿಟಿಕ್ಸ್; ಗೆದ್ದ, ಸೋತ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಸ್ಮಾರ್ಟ್ ಟಿವಿ
ಏರ್‌ಪೋರ್ಟ್‌ನಲ್ಲಿ ಕೇಕ್ ಕಟ್ಟಿಂಗ್
ಅಂದ ಹಾಗೆ ಡ್ರೋನ್ ಪ್ರತಾಪ್ ಅವರು ಮಳವಳ್ಳಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಾಧವ್ ಕಿರಣ್ ಜೊತೆ ಕಾಣಿಸಿಕೊಂಡಿದ್ದು, ದೆಹಲಿಯಿಂದ ಆಗಮಿಸಿದ ಮಾಧವ್ ಕಿರಣ್ ಅವರ ಹುಟ್ಟು ಹಬ್ಬದ ಹಿನ್ನೆಲೆ ವಿಮಾನ ನಿಲ್ದಾಣದಲ್ಲೇ ಕೆಕ್ ಕತ್ತರಿಸಿ ಶುಭ ಕೋರಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್‌ಟಾಗ್ರಾಂ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿರುವ ಡ್ರೋನ್ ಪ್ರತಾಪ್ ಅವರು, ಒಳ್ಳೆಯ ಕೆಲಸ ಮಾಡಲು ಹೊರಟಿರುವ ಮಾಧವ ಕಿರಣ್ ಜೊತೆ ನಾನು ಇರ್ತೀನಿ ಎಂದು ಹೇಳಿದ್ದಾರೆ.
ಕಿರಣ್ ಮಾಧವ್ ಅವರು ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಳವಳ್ಳಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದು, ಈಗಾಗಲೇ ತಳಮಟ್ಟದಲ್ಲಿ ಮನೆ ಮನೆ ಭೇಟಿ ನೀಡಿ ಮತದಾರರ ಮನವೊಲಿಸಲು ಪ್ರಯತ್ನ ಪಡುತ್ತಿದ್ದಾರೆ. ಮಳವಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮಧ್ಯೆ ಪ್ರಬಲವಾದ ಪೈಪೋಟಿ ಇದ್ದರೂ ಕೂಡ, ಪಕ್ಷೇತರ ಅಭ್ಯರ್ಥಿಯಾಗಿ ಕಿರಣ್ ಮಾಧವ್ ಅವರು ಮತದಾರರ ಮನಗೆದ್ದು ಚುನಾವಣೆಯಲ್ಲಿ ಗೆಲುವಿನ ನಗೆ ಬೀರುತ್ತಾರೆಯೇ ಅನ್ನೋದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: R Ashok: ‘ಗೋ ಬ್ಯಾಕ್’ ಬೆನ್ನಲ್ಲೇ ಮಂಡ್ಯ ಉಸ್ತುವಾರಿಯಿಂದ ಹಿಂದಕ್ಕೆ ಸರಿಯಲು ಆರ್ ಅಶೋಕ್ ನಿರ್ಧಾರ?
ಬಿಜೆಪಿ ಕೊಡುಗೆ ಏನಪ್ಪಾ?: ಸಿದ್ದರಾಮಯ್ಯ ಪ್ರಶ್ನೆ
ಕಲಬುರಗಿ: ಅಂಬಿಗರ ಚೌಡಯ್ಯನವರ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡುವಂತೆ ಆದೇಶ ನೀಡಿದ್ದು ನಾವು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕಲಬುರಗಿಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು ನಾವು. ಬಿಜೆಪಿ ಕೊಡುಗೆ ಏನಪ್ಪಾ? ಯುವಕರಿಗೆ ಪ್ರತೀ ವರ್ಷ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಹೇಳಿದ್ದರು, ಕೊಟ್ಟಿದ್ದಾರ? ಹೀಗೆ ಮಹಿಳೆಯರಿಗೆ, ಯುವಕರಿಗೆ, ರೈತರಿಗೆ, ಬಡಜನರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಯಾವ ಸಮುದಾಯಗಳಿಗೂ ನ್ಯಾಯ ಒದಗಿಸದ ಬಿಜೆಪಿ ಪಕ್ಷವನ್ನು ನಂಬಿ ಮತ ಹಾಕುತ್ತೀರ? ಎಂದು ಪ್ರಶ್ನಿಸಿದರು.
ಇನ್ನು, ನಾವು ಮಾಡಿದ್ದ ಶಾದಿ ಭಾಗ್ಯ ಕಾರ್ಯಕ್ರಮವನ್ನು ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ನಿಲ್ಲಿಸಿದ್ರು, ಟಿಪ್ಪು ಜಯಂತಿ ಆಚರಣೆಯನ್ನು ನಿಲ್ಲಿಸಿದ್ರು, ನಾನು ಅಧಿಕಾರಕ್ಕೆ ಬರುವ ಮೊದಲು ಅಲ್ಪಸಂಖ್ಯಾತ ಕಲ್ಯಾಣ ಕಾರ್ಯಕ್ರಮಗಳಿಗೆ ನೀಡುತ್ತಿದ್ದ ವಾರ್ಷಿಕ ಅನುದಾನ 400 ಕೋಟಿ ಇತ್ತು, ಅದನ್ನು 3150 ಕೋಟಿಗೆ ಏರಿಕೆ ಮಾಡಿದ್ದೆ. ಈಗಿನ ಸರ್ಕಾರ 800 ಕೋಟಿ ಕೊಟ್ಟಿದೆ.
ಈ ಸರ್ಕಾರ ಯಾವ ವರ್ಗದ ಜನರ ಪರವಾಗಿದೆ ಎಂದು ನೀವೆ ಯೋಚನೆ ಮಾಡಿ ನೋಡಿ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ