ಬೆಂಗಳೂರು: ಬಿಜೆಪಿ ಮೊದಲ ಪಟ್ಟಿ ರಿಲೀಸ್‌ಗೆ (BJP Candidate List) ಕ್ಷಣಗಣನೆ ಆರಂಭವಾಗಿದೆ. ಈ ಸಂಬಂಧ ದೆಹಲಿಯಲ್ಲಿ ಸಭೆ ನಡೆಯುತ್ತಿದೆ. ಈ ಬಾರಿ ಬಿಜೆಪಿಯಲ್ಲಿ ಕೆಲವು ಹಾಲಿ ಶಾಸಕರಿಗೆ (Present MLAs) ಟಿಕೆಟ್ ಮಿಸ್ ಆಗುವ ಚರ್ಚೆಗಳು ಆರಂಭಗೊಂಡಿವೆ.15-20 ಕ್ಷೇತ್ರಗಳಲ್ಲಿ ಹಾಲಿಗಳಿಗೆ ಶಾಕ್ ಕೊಡಲು ಹೈಕಮಾಂಡ್ (BJP High Command) ಮುಂದಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಎಸ್ಎ ರವೀಂದ್ರನಾಥ್, ಹಾಲಾಡಿ ಶ್ರೀನಿವಾಸ್ ಅವರು ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಭ್ರಷ್ಟಾಚಾರ ಆರೋಪದಡಿಯಲ್ಲಿ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಜೈಲು ಸೇರಿದ್ದಾರೆ. ಇದರ ಜೊತೆಗೆ ಹಲವು ಹಿರಿಯ ಶಾಸಕರಿಗೆ ಕೊಕ್ ಕೊಟ್ಟು ಹೊಸ ಮುಖಗಳಿಗೆ ಆದ್ಯತೆ ನೀಡುವ ಚಿಂತನೆಯಲ್ಲಿ ಬಿಜೆಪಿ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಯಾರಿಗೆಲ್ಲಾ ಟಿಕೆಟ್ ಸಿಗೋದು ಡೌಟ್?
ಚನ್ನಗಿರಿ - ಮಾಡಾಳ್ ವಿರೂಪಾಕ್ಷಪ್ಪ
ಹಾವೇರಿ - ನೆಹರೂ ಓಲೆಕಾರ್
ಮೂಡಿಗೆರೆ - ಎಂ ಪಿ ಕುಮಾರಸ್ವಾಮಿ
ರಾಜಾಜಿನಗರ - ಸುರೇಶ್ ಕುಮಾರ್
ಚಿತ್ರದುರ್ಗ - ಜಿ ಎಚ್ ತಿಪ್ಪಾರೆಡ್ಡಿ
ಯಾದಗಿರಿ - ವೆಂಕಟರೆಡ್ಡಿ ಮುದ್ನಾಳ
ಕನಕಗಿರಿ - ಬಸವರಾಜ ದಡೇಸುಗೂರು
ಶಿವಮೊಗ್ಗ - ಕೆ ಎಸ್ ಈಶ್ವರಪ್ಪ
ಅಥಣಿ - ಮಹೇಶ್ ಕುಮಟಳ್ಳಿ
ರಾಣೆಬೆನ್ನೂರು - ಅರುಣ್ ಕುಮಾರ್ ಪೂಜಾರ್
ರಾಯಚೂರು - ಡಾ.ಶಿವರಾಜ್ ಪಾಟೀಲ್
ಪುತ್ತೂರು - ಸಂಜೀವ್ ಮಠಂದೂರು
ಉಡುಪಿ - ರಘುಪತಿ ಭಟ್
ಭಟ್ಕಳ - ಸುನೀಲ್ ನಾಯ್ಕ
ಸೊರಬ - ಕುಮಾರ್ ಬಂಗಾರಪ್ಪ
ಆಳಂದ - ಸುಭಾಷ್ ಗುತ್ತೇದಾರ್
ಇದನ್ನೂ ಓದಿ: Tumakuru: ದೇವಾಲಯ ಪ್ರವೇಶಿಸಿದ್ದ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಹೊಸದುರ್ಗ - ಗೂಳಿಹಟ್ಟಿ ಶೇಖರ್
ಧಾರವಾಡ - ಅಮೃತ ದೇಸಾಯಿ
ದಾವಣಗೆರೆ ಉತ್ತರ - ಎಸ್ ಎ ರವೀಂದ್ರನಾಥ್
ಕಾಪು - ಲಾಲಾಜಿ ಮೆಂಡನ್
ಧಾರವಾಡ ಸೆಂಟ್ರಲ್ - ಜಗದೀಶ್ ಶೆಟ್ಟರ್
ಬಸವನಗುಡಿ - ರವಿ ಸುಬ್ರಹ್ಮಣ್ಯ
ಚಿಕ್ಕಪೇಟೆ - ಉದಯ್ ಗರುಡಾಚಾರ್
ವಿರಾಜಪೇಟೆ - ಕೆ ಜಿ ಬೋಪಯ್ಯ
ಸುಳ್ಯ- ಅಂಗಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ