ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election 2023) ಇದೇ ಮೇ 10 ರಂದು ನಡೆಯಲಿದ್ದು ಮೇ 13 ರಂದು ಮತ ಎಣಿಕೆ ಕೂಡ ನಡೆಯಲಿದೆ. ಎಲ್ಲಾ ಪಕ್ಷಗಳು (Political Party) ನಾ ಮುಂದು ತಾ ಮುಂದು ಎಂದು ಪ್ರಚಾರದ ಭರಾಟೆಯಲ್ಲಿ ತೊಡಗಿಕೊಂಡಿದ್ದು ಮತದಾರರನ್ನು (Voters) ತಮ್ಮತ್ತ ಸೆಳೆದುಕೊಳ್ಳುವ ರಣತಂತ್ರಗಳಲ್ಲಿ (Election Strategy) ನಿರತವಾಗಿವೆ ಇದರೊಂದಿಗೆ ಅಧಿಕಾರದ ಗದ್ದುಗೆ ಯಾರ ಪಾಲಿಗೆ ದೊರೆಯಲಿದೆ ಎಂಬ ಕುತೂಹಲ ಕೂಡ ಜನರಲ್ಲಿ ಹೆಚ್ಚಾಗಿದೆ.
ಇತರ ರಾಜ್ಯಗಳಲ್ಲಿ ಜಂಟಿಯಾಗಿ ಚುನಾವಣೆಗಳು ನಿಗದಿಯಾಗದೇ ಇರುವುದರಿಂದ ಸಾಮಾನ್ಯವಾಗಿ ಎಲ್ಲರ ಚಿತ್ತ ಕರ್ನಾಟಕ ಚುನಾವಣೆಯ ಮೇಲೆ ನೆಟ್ಟಿದೆ. ಅಂತೆಯೇ ದಿನಗಳೆದಂತೆ ಚುನಾವಣೆಯ ಕಾವು ಏರುತ್ತಿದೆ.
ರಂಗೇರುತ್ತಿರುವ ಚುನಾವಣೆಯ ಕಾವು
ಈ ಚುನಾವಣೆ ಹಲವಾರು ಪಕ್ಷಗಳ ಭವಿಷ್ಯ ನಿರ್ಧರಿಸಲಿದೆ ಹಾಗೂ ಅವಕಾಶ ದೊರೆತರೆ ಮತ್ತೊಮ್ಮೆ ಭವ್ಯ ಕರ್ನಾಟಕದ ಭವಿಷ್ಯವನ್ನು ಬದಲಾಯಿಸಲಿದ್ದೇವೆ ಎಂಬ ಪಕ್ಷಗಳ ಹೇಳಿಕೆಗೆ ಪ್ರತಿಯಾಗಿ ಚುನಾವಣೆ ಹಾಗೂ ಜನಸಮಾನ್ಯ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ರಾಮಕೃಷ್ಣ ಹೆಗಡೆಯವರ ದಾಖಲೆ
1983 ರಿಂದ 1985 ರವರೆಗೆ ಅಲ್ಪಸಂಖ್ಯಾತ ಸರ್ಕಾರವಾಗಿದ್ದ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಸರ್ಕಾರವು 1985 ರಲ್ಲಿ ಸತತ ಎರಡನೇ ಗೆಲುವು ಸಾಧಿಸಿತು.
ಕರ್ನಾಟಕದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರದ ನೇತೃತ್ವ ವಹಿಸಿದ್ದ ಹೆಗ್ಡೆಯವರು, 1984 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಶೋಚನೀಯವಾಗಿ ಸೋತ ನಂತರ ವಿಧಾನ ಸಭೆ ವಿಸರ್ಜನೆಗೆ ನಿರ್ಧರಿಸಿದ್ದರು.
ಆದರೆ ಸೋಲಿನ ನಂತರ ಹೆಗ್ಡೆ ಹಾಗೂ ಅವರ ತಂಡಕ್ಕೆ 139 ಸ್ಥಾನಗಳು ಒಲಿದು ಬಂದಿತ್ತು ಹಾಗೂ ಮೂರನೇ ಎರಡರಷ್ಟು ಬಹುಮತ ಗಳಿಸಿದ್ದರು. ಆದರೆ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಪಕ್ಷದಲ್ಲಿದ್ದ ಅಂತರ್ ಕಲಹದಿಂದ ಪಕ್ಷ ಮೂರು ಹೋಳಾಗಿ ವಿಭಜನೆಗೊಂಡಿತು ಅಂತೆಯೇ ಜನ ಪಕ್ಷದ ಮೇಲೆ ನಂಬಿಕೆ ಕಳೆದುಕೊಂಡರು.
ಪಕ್ಷದಲ್ಲಿ ಭಿನ್ನಾಭಿಪ್ರಾಯ ಬೆಳೆಯತೊಡಗಿತು ಹಾಗೂ ಪಕ್ಷದಲ್ಲಿದ್ದ ಹಿರಿಯ ನಾಯಕರ ಅಸಮಾಧಾನ ಇನ್ನಿತರ ಕಾರಣಗಳಿಂದಾಗಿ ಮೊಯ್ಲಿ ಹಾಗೂ ಅವರ ಉತ್ತರಾಧಿಕಾರಿ ಎಸ್ ಬಂಗಾರಪ್ಪ ಅವರನ್ನು ಪಕ್ಷದಿಂದ ಕೆಳಗಿಳಿಯುವಂತೆ ಮಾಡಿತು.
ಕರುನಾಡಿನ ಮತದಾರರ ನಾಡಿ ಮಿಡಿತ
ಒಟ್ಟಿನಲ್ಲಿ ರಾಜಕಾರಣ ಎಂಬುದು ಪವರ್ ಗೇಮ್ ಆಗಿ ಮಾರ್ಪಟ್ಟಿದ್ದು 1989 ರಿಂದ ನಡೆದ ಏಳು ಸಾರ್ವತ್ರಿಕ ಚುನಾವಣೆಗಳಲ್ಲಿ ರಾಜ್ಯದ ಜನರು ಕೂಡ ತಮ್ಮ ಇಚ್ಛೆಗೆ ಅನುಸಾರವಾಗಿ ಮುಖ್ಯಮಂತ್ರಿಗಳನ್ನು ಬದಲಾಯಿಸಿಕೊಂಡಿದ್ದಾರೆ ಎಂಬುದು ನಿಖರವಾಗಿದೆ.
ಈಗ ಮುಂದಿರುವ ಪ್ರಶ್ನೆ ಎಂದರೆ ಮೂರು ವರ್ಷಕ್ಕಿಂತ ಕಡಿಮೆ ಅಧಿಕಾರಾವಧಿ ಹೊಂದಿರುವ ಬಸವರಾಜ ಬೊಮ್ಮಾಯಿ ಅವರು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಸಾಧ್ಯವೇ ಎಂಬುದಾಗಿದೆ.
ಚುನಾವಣೆ ಮೋದಿ ಹಾಗೂ ಅಮಿತ್ ಶಾಗೆ ಪ್ರತಿಷ್ಠೆಯ ವಿಷಯ
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧಿಕಾರದ ಗದ್ದುಗೆಯಲ್ಲಿ ಬಿಜೆಪಿ ರಾರಾಜಿಸಬೇಕೆಂಬ ಹಿನ್ನಲೆಯಲ್ಲಿ ಸಾಕಷ್ಟು ಶಕ್ತಿ, ಸಮಯ ಮತ್ತು ಕೇಂದ್ರ ಸರ್ಕಾರದ ಸಂಪನ್ಮೂಲಗಳನ್ನು ಹೂಡಿಕೆ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಯವರು ಅನೇಕ ಪ್ರವಾಸಗಳನ್ನು ಕೈಗೊಂಡಿದ್ದಾರೆ ಹಾಗೂ ಮಹೋನ್ನತ ಯೋಜನೆಗಳನ್ನು ಉದ್ಘಾಟಿಸಿದ್ದಾರೆ.
ಈ ಮೂಲಕ ಕರ್ನಾಟಕದಲ್ಲಿ ಬಿಜೆಪಿಯನ್ನು ಆಯ್ಕೆಮಾಡಿ ಹಾಗೂ ದುಪ್ಪಟ್ಟು ಲಾಭಗಳನ್ನು ನಿಮ್ಮದಾಗಿಸಿಕೊಳ್ಳಿ ಎಂಬ ಸಂದೇಶಗಳನ್ನು ಜನರಿಗೆ ಪರೋಕ್ಷವಾಗಿ ಸಾರಿದ್ದಾರೆ.
ಇದನ್ನೂ ಓದಿ: Karnataka Election: ಏಪ್ರಿಲ್ 6ಕ್ಕೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ? ಕಮಲ ಕಲಿಗಳ ಮ್ಯಾರಥಾನ್ ಮೀಟಿಂಗ್
2008 ಮತ್ತು 2018ರಲ್ಲಿ ಎರಡು ಬಾರಿ ಬಿಜೆಪಿ 100 ಸೀಟುಗಳ ಗಡಿ ದಾಟಿದರೂ ಬಹುಮತಕ್ಕೆ ಅಲ್ಪವಾಗಿ ಕುಸಿದು ಭಾರೀ ಬೆಲೆ ತರಬೇಕಾಯಿತು. ಹೀಗಾಗಿ ಆ ತಪ್ಪುಗಳು ಈ ಚುನಾವಣೆಯಲ್ಲಿ ಮರುಕಳಿಸಬಾರದು ಎಂಬ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಜಾತಿ ಪರಿಗಣನೆ, ಪ್ರಾದೇಶಿಕ ಚಲನವಲನ ಹಾಗೂ ಅಭ್ಯರ್ಥಿಗಳ ಆಯ್ಕೆ ಈ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಮೀಸಲಾತಿ ಎಂಬ ಅಸ್ತ್ರದ ಬಳಕೆ
ಬಿಜೆಪಿ ಮೀಸಲಾತಿ ಎಂಬ ಅಸ್ತ್ರ ಬಳಸಿ ವಿವಿಧ ಸಮುದಾಯಗಳನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನದಲ್ಲಿದೆ. ಚುನಾವಣಾ ಆಯೋಗವು ಚುನಾವಣಾ ದಿನಾಂಕಗಳನ್ನು ಘೋಷಿಸುವ ನಾಲ್ಕು ದಿನಗಳ ಮೊದಲು, ಬೊಮ್ಮಾಯಿ ಸರ್ಕಾರವು ಪರಿಷ್ಕೃತ ಮೀಸಲಾತಿ ಸೂತ್ರವನ್ನು ಮಂಡಿಸಿತು.
ಒಬಿಸಿ ವರ್ಗದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ 4% ಮೀಸಲಾತಿಯನ್ನು ತೆಗೆದುಹಾಕಿ ಅದನ್ನು ಒಕ್ಕಲಿಗರು ಹಾಗೂ ಲಿಂಗಾಯಿತರಿಗೆ ಸಮಾನವಾಗಿ ಹಂಚಲು ರಾಜ್ಯಸಂಪುಟ ನಿರ್ಧರಿಸಿದೆ. ಆರ್ಥಿಕವಾಗಿ ದುರ್ಬಲ ವರ್ಗಗಳ (EWS) ಕೋಟಾದಲ್ಲಿ ಮುಸ್ಲಿಮರಿಗೆ ಅವಕಾಶ ಕಲ್ಪಿಸುವುದಾಗಿ ಸರ್ಕಾರ ಭರವಸೆ ನೀಡಿದೆ.
ಶೇಕಡಾವಾರು ಮತಗಳಿಕೆ
2018 ರ ಚುನಾವಣೆಯಲ್ಲಿ, ಕಾಂಗ್ರೆಸ್ 38% ಮತಗಳೊಂದಿಗೆ 80 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿಯ ಸ್ಥಾನಗಳು 36.2% ಮತಗಳೊಂದಿಗೆ 104 ಕ್ಕೆ ತಲುಪಿದ್ದವು. ಕಾಂಗ್ರೆಸ್ ಹೆಚ್ಚುವರಿ ಸ್ಥಾನಗಳನ್ನು ಗಳಿಸಲು ಹೆಚ್ಚಿನ ಶೇಕಡಾವಾರು ಮತಗಳೊಂದಿಗೆ ಬಿಜೆಪಿಗೆ ಸ್ಪರ್ಧೆಯನ್ನೊಡ್ಡಬೇಕಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ