ಬೇಸಿಗೆಗೆ ಮುನ್ನವೆ ನೀರಿಗೆ ಆಹಾಕಾರ; ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಪರದಾಡುತ್ತಿವೆ ಪ್ರಾಣಿಪಕ್ಷಿಗಳು

ಅರಣ್ಯದಲ್ಲಿ ಗಿಡ-ಮರ ಒಣಗಿ ನಿಂತಿದ್ದು ಆಹಾರಕ್ಕಾಗಿ ಪರದಾಡುವಂತಾಗಿದೆ. ಜೊತಗೆ ಕುಡಿಯುವ ನೀರಿಗಾಗಿಯೂ ಪ್ರಾಣಿಗಳು ಗ್ರಾಮಗಳತ್ತ ವಲಸೆ ಬರಲಾರಂಭಿಸಿವೆ. ಪ್ರಾಣಿಗಳ ಕಥೆ ಹೀಗಾದರೆ, ಬಂದೂಕು ಲೈಸನ್ಸ್ ಹೊಂದಿದ ವ್ಯಕ್ತಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಬೇಟೆಯಾಡುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ

G Hareeshkumar | news18
Updated:February 6, 2019, 8:42 PM IST
ಬೇಸಿಗೆಗೆ ಮುನ್ನವೆ ನೀರಿಗೆ ಆಹಾಕಾರ; ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಪರದಾಡುತ್ತಿವೆ ಪ್ರಾಣಿಪಕ್ಷಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: February 6, 2019, 8:42 PM IST
  • Share this:
- ಶಿವರಾಮ್ ಅಸುಂಡಿ

ಕಲಬುರ್ಗಿ (ಫೆ.06) : ಕಲಬುರ್ಗಿ ಬಯಲು ನಾಡೆಂದೇ ಪ್ರಸಿದ್ಧಿ ಪಡೆದ ಜಿಲ್ಲೆ. ಇಂತಹ ಬಯಲು ನಾಡು, ಬಿಸಿಲ ನಾಡಿನಲ್ಲಿಯೂ ಅರೆ ಮಲೆನಾಡು ಪ್ರದೇಶವಿದೆ. ಚಿಂಚೋಳಿ ತಾಲೂಕಿನ ಕೊಂಚವರಂ ಪ್ರದೇಶ ದಟ್ಟ ಅಡವಿಯನ್ನು ಹೊಂದಿದ್ದು, ವನ್ಯಜೀವಿ ಧಾಮ ಎಂದೂ ಸಹ ಘೋಷಿಸಲಾಗಿದೆ. ಸಂರಕ್ಷಿತ ಅರಣ್ಯ ಪ್ರದೇಶ ಒಣಗಿದಂತಾಗಿದ್ದು, ರಣ ರಣ ಎನ್ನುತ್ತಿದೆ. ಅರಣ್ಯ ಪ್ರದೇಶದಲ್ಲಿರುವ ವನ್ಯಜೀವಿಗಳು ಆಹಾರ ಮತ್ತು ನೀರಿಗಾಗಿ ಪರದಾಡುವಂತಾಗಿವೆ.

ಆಹಾರ ಮತ್ತು ನೀರು ಸಿಗದೆ ಪ್ರಾಣಿಗಳು ರಸ್ತೆಗಳಿಗೆ ಬರಲಾರಂಭಿಸಿವೆ. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಏನಾದರೂ ಹಾಕುತ್ತಾರೆಯಾ ಎಂದು ಮಂಗಗಳು ಕಾದು ಕುಳಿತುಕೊಳ್ಳಲಾರಂಭಿಸಿವೆ. ಇತರೆ ಪ್ರಾಣಿಗಳೂ ಸಹ ಅರಣ್ಯದಲ್ಲಿ ಆಹಾರಕ್ಕಾಗಿ ಪರದಾಡುತ್ತಿದ್ದು, ಅವುಗಳ ಸ್ಥಿತಿ ಚಿಂತಾಜನಕವಾಗಿದೆ.

ಇದನ್ನೂ ಓದಿ :  ನಿರ್ವಹಣೆಯಿಲ್ಲದೆ ಸೊರಗುತ್ತಿದೆ ಶಿರಸಿಯ ಕೇಂದ್ರೀಯ ಸಸ್ಯೋದ್ಯಾನ

ಚಿಂಚೋಳಿ ಹೊರವಲಯದಿಂದ ಆರಂಭಗೊಳ್ಳುವ ಅರಣ್ಯ ಪ್ರದೇಶ, ತೆಲಂಗಾಣ ಗಡಿವರೆಗೂ ವಿಸ್ತರಿಸಿದೆ. 13480 ಹೆಕ್ಟೇರ್ ಪ್ರೇದಶದಲ್ಲಿ ಅರಣ್ಯ ಪ್ರದೇಶ ಹರಡಿಕೊಂಡಿದೆ. ಬಿಸಿನ ನಾಡಿನ ಜನರ ಸ್ವರ್ಗವೆನಿಸಿಸಿಕೊಂಡ ಕೊಂಚವರಂ ಅರಣ್ಯ ಪ್ರದೇಶವನ್ನು 2011 ರಲ್ಲಿ ವನ್ಯಜೀವಿ ಧಾಮ ಎಂದು ಘೋಷಿಸಲಾಗಿದೆ. ಸದ್ಯ ಇದು ಸಂರಕ್ಷಿತ ಅರಣ್ಯ ಪ್ರದೇಶವಾಗಿದ್ದು, ಸಾವಿರಾರು ಪ್ರಾಣಿಗಳು ಇಲ್ಲಿ ವಾಸಿಸುತ್ತಿವೆ.

ಸಾವಿರಾರೂ ಪ್ರಾಣಿಪಕ್ಷಿಗಳು ಇಲ್ಲಿವೆ

ತೋಳ, ನವಿಲು, ನರಿ, ಮೊಲ, ಕತ್ತೆಕಿರುಬ, ನೀಲಗಾಯ, ಚೌಸಿಂಗ, ಮುಳ್ಳು ಹಂದಿ, ಕೃಷ್ಣಮೃಗ ಇತ್ಯಾದಿ ಪ್ರಾಣಿಗಳಿಗೆ ಈ ಅರಣ್ಯ ಪ್ರದೇಶ ನೆಲೆ ನೀಡಿದೆ. ಆದರೆ ಇಂತಹ ದಟ್ಟ ಅರಣ್ಯ ಪ್ರದೇಶ ಮಳೆಯ ಕೊರತೆಯಿಂದಾಗಿ ಒಣಗಿ ನಿಂತಿದೆ. ಅರಣ್ಯ ಪ್ರದೇಶದ ಯಾವ ದಿಕ್ಕಿಗೆ ನೋಡಿದರೂ ಗಿಡಗಲು ಒಣಗಿದಂತೆ ನಿಂತಿದ್ದು, ಬಣ ಬಣ ಎನ್ನುತ್ತಿವೆ. ಕಾಡು ಪ್ರಾಣಿಗಳಿಗೆ ತಿನ್ನಲು ಆಹಾರ ಸಿಗುತ್ತಿಲ್ಲ, ಕುಡಿಯಲು ನೀರು ಸಿಗುತ್ತಿಲ್ಲ. ಹೀಗಾಗಿ ಪ್ರಾಣಿಗಳು ನಾಡಿನ ಕಡೆ ಮುಖ ಮಾಡಿವೆ. ಅದರಲ್ಲಿಯೂ ರಸ್ತೆಗಳ ಅಕ್ಕ-ಪಕ್ಕದಲ್ಲಿ ಸುಳಿಯುತ್ತಿರುವ ಪ್ರಾಣಿಗಳು ಯಾರಾದರೂ ಆಹಾರ ಹಾಕುತ್ತಾರೆಯೇ ಎಂದು ಎದುರು ನೋಡುತ್ತಾ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.ಆಹಾರಕ್ಕಾಗಿ ಕಾದು ಕುಳಿತ್ತಿವೆ ವನ್ಯಜೀವಿಗಳು

ಚಿಂಚೋಳಿಯಿಂದ ಕೊಂಚವರಂ ಗೆ ಹೋಗುವ ರಸ್ತೆಯಲ್ಲಿ ಸಂಚರಿಸಿದರೆ ಸಾಕು ಎಷ್ಟರ ಮಟ್ಟಿಗೆ ಪ್ರಾಣಿಗಳು ಹಸಿದುಕೊಂಡಿವೆ ಎನ್ನಲು. ಪುಟ್ಟ ಮರಿಗಳಿಂದ ಹಿಡಿದು ವೃದ್ಧ ಮಂಗಗಳವರೆಗೂ ಆಹಾರಕ್ಕಾಗಿ ರಸ್ತೆಯ ಪಕ್ಕದಲ್ಲಿ ಕಾಯುತ್ತಾ ಕುಳಿತುಕೊಳ್ಳುತ್ತಿವೆ. ಉಳಿದ ಪ್ರಾಣಿಗಳ ಕಥೆ ಮತ್ತಷ್ಟು ಗಂಭೀರ. ಏಕೆಂದರೆ ಮಂಗಗಳು ರಸ್ತೆ ಬದಿಗೆ ಬಂದು ಯಾರಾದರೂ ಕಬ್ಬು, ಬಾಳೆ ಹಣ್ಣು ಮತ್ತಿತರ ವಸ್ತುಗಳನ್ನು ಹಾಕಿದಲ್ಲಿ ಎತ್ತಿಕೊಂಡು ಹೋಗಿ ತಿಂದು ಹೊಟ್ಟೆ ತುಂಬಿಸಿಕೊಳ್ಳಲಾರಂಭಿಸಿವೆ.

ನೀರಿಗಾಗಿ ಗ್ರಾಮಗಳತ್ತ ವಲಸೆ

ಅರಣ್ಯದಲ್ಲಿ ಗಿಡ-ಮರ ಒಣಗಿ ನಿಂತಿದ್ದು ಆಹಾರಕ್ಕಾಗಿ ಪರದಾಡುವಂತಾಗಿದೆ. ಜೊತಗೆ ಕುಡಿಯುವ ನೀರಿಗಾಗಿಯೂ ಪ್ರಾಣಿಗಳು ಗ್ರಾಮಗಳತ್ತ ವಲಸೆ ಬರಲಾರಂಭಿಸಿವೆ. ಪ್ರಾಣಿಗಳ ಕಥೆ ಹೀಗಾದರೆ, ಬಂದೂಕು ಲೈಸನ್ಸ್ ಹೊಂದಿದ ವ್ಯಕ್ತಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಬೇಟೆಯಾಡುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಚಿಂಚೋಳಿ ತಾಲೂಕಿನಲ್ಲಿ ಅರಣ್ಯ ಪ್ರದೇಶದಲ್ಲಿ ಬಂದೂಕು ಲೈಸನ್ಸ್ ಕೊಟ್ಟವರ ಅನುಮತಿ ರದ್ದುಗೊಳಿಸಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.

ಈ ಬಾರಿ ಮಳೆಯ ಪ್ರಮಾಣ ಕಡಿಮೆ

ಚಿಂಚೋಳಿ ತಾಲೂಕಿನಲ್ಲಿ ಪ್ರತಿ ವರ್ಷ 850 ರಿಂದ 900 ಮೀ ಮೀಟರ್ ಮಳೆಯಾಗುತ್ತಿತ್ತು. ಆದರೆ ಈ ಬಾರಿ 550 ರಿಂದ 600 ಮೀ ಮೀಟರ್ ಮಾತ್ರ ಮಳೆಯಾಗಿದೆ. ಇದರಿಂದಾಗಿ ಅರಣ್ಯ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದು ಸಹಜ. ಅದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ನೀರಿನ ಕೊರತೆ ಇರುವ ಕಡೆ ಸಿಮೆಂಟ್-ಕಾಂಕ್ರಿಟ್ ಪಾಂಡ್ ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅದರಲ್ಲಿ ನೀರು ಹಾಕುವ ಮೂಲಕ ಪ್ರಾಣಿಗಳ ದಾಹ ಇಂಗಿಸುವ ಪ್ರಯತ್ನ ಮಾಡಲಾಗುವುದು. ಆದರೆ ಪ್ರಾಣಿಗಳಿಗೆ ಆಹಾರದ ಸಮಸ್ಯೆಯಿಲ್ಲ. ಪ್ರಕೃತಿ ದತ್ತವಾಗಿಯೇ ಪ್ರಾಣಿಗಳನ್ನು ತಮ್ಮ ಆಹಾರ ಹುಡಿಕಿಕೊಳ್ಳುತ್ತವೆ.

ಇದನ್ನೂ ಓದಿ :  ಮಾತಿಗೆ ತಪ್ಪಿದ ಬಿಎಸ್​ವೈ; ಬಿಜೆಪಿ ಶಾಸಕರ ಗಲಾಟೆ, ಐದೇ ನಿಮಿಷದಲ್ಲಿ ಜಂಟಿ ಅಧಿವೇಶನದ ಭಾಷಣ ಮುಗಿಸಿದ ರಾಜ್ಯಪಾಲರು

ಅರಣ್ಯ ಇಲಾಖೆ ಅಧಿಕಾರಿಗಳು ಏನೇ ಸಮಜಾಯಿಷಿ ನೀಡಿದರೂ ಚಿಂಚೋಳಿ ವನ್ಯಜೀವಿ ಧಾಮದಲ್ಲಿ ನೀರು ಮತ್ತು ಆಹಾರಕ್ಕಾಗಿ ಪ್ರಾಣಿಗಳು ಪರದಾಡುತ್ತಿರುವುದಂತೂ ಸತ್ಯ. ಬೇಸಿಗೆ ಆರಂಭಕ್ಕೆ ಮುನ್ನವೇ ಈ ಪರಿಸ್ಥಿತಿಯಾದರೆ, ಬೇರೆಗೆ ತಾರಕಕ್ಕೇರಿದಾಗ ಮತ್ತಷ್ಟು ಬಿಗಡಾಯಿಸಲಿದೆ ಎಂಬ ಆತಂಕ ಪ್ರಾಣಿಪ್ರಿಯಾರನ್ನು ಕಾಡಲಾರಂಭಿಸಿದೆ. ಕಾಡು ಪ್ರಾಣಿಗಳ ರಕ್ಷಣೆಗೆ ಅರಣ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಅಗತ್ಯವಿದೆ.

First published: February 6, 2019, 6:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading