• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ರಜನಿ, ಅಕ್ಷಯ್; ಸಾಕ್ಷ್ಯಚಿತ್ರ ಚಿತ್ರೀಕರಣಕ್ಕೆ ತೀವ್ರ ಆಕ್ರೋಶ

ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ರಜನಿ, ಅಕ್ಷಯ್; ಸಾಕ್ಷ್ಯಚಿತ್ರ ಚಿತ್ರೀಕರಣಕ್ಕೆ ತೀವ್ರ ಆಕ್ರೋಶ

ರಜನೀಕಾಂತ್ ಹಾಗೂ ಬೇರ್ ಗ್ರಿಲ್ಸ್

ರಜನೀಕಾಂತ್ ಹಾಗೂ ಬೇರ್ ಗ್ರಿಲ್ಸ್

ಬೇಸಿಗೆ ಆರಂಭವಾಗಿದೆ. ಕಾಡಿನಲ್ಲಿ ಸಿಬ್ಬಂದಿಗಳು ಬೆಂಕಿ ಬೀಳದ ಹಾಗೇ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಬಂಡೀಪುರ ಅರಣ್ಯದಲ್ಲಿ ಚಿತ್ರೀಕರಣ ಮಾಡುತ್ತಿರುವುದು ಸರಿಯಲ್ಲ ಎಂದು ವನ್ಯಜೀವಿ ತಜ್ಞ ಜೋಸೆಫ್ ಹೂವರ್ ವಿರೋಧ ವ್ಯಕ್ಯಪಡಿಸಿದ್ದಾರೆ.

  • Share this:

ಚಾಮರಾಜ‌ನಗರ(ಜ.29) : ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ 'ಮ್ಯಾನ್ ವರ್ಸಸ್ ವೈಲ್ಡ್' ಸಾಕ್ಷ್ಯ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಸೂಪರ್ ಸ್ಟಾರ್ ರಜನೀಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ ಕುಮಾರ್ ನಟಿಸುತ್ತಿರುವ ಈ ಸಾಕ್ಷ್ಯಚಿತ್ರವನ್ನು ಖ್ಯಾತ ವನ್ಯಜೀವಿ ಸಾಹಸಿ ನಿರ್ದೇಶಕ ಬೇರ್ ಗ್ರಿಲ್ಸ್ ನಿರ್ದೇಶಿಸುತ್ತಿದ್ದಾರೆ. ಆದರೆ, ಹುಲಿ ರಕ್ಷಿತಾರಣ್ಯದಲ್ಲಿ ಚಿತ್ರೀಕರಣ ಮಾಡುತ್ತಿರುವುದಕ್ಕೆ ಪರಿಸರವಾದಿಗಳು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. 


ಬಂಡೀಪುರ ದೇಶದಲ್ಲೆ ಅತಿ ಹೆಚ್ಚು ಹುಲಿಗಳಿರುವ ತಾಣ. ಎರಡು ಸಾವಿರಕ್ಕೂ ಹೆಚ್ಚು ಆನೆ, ಚಿರತೆ, ಕಾಡೆಮ್ಮೆ ಕರಡಿ, ಜಿಂಕೆ ಸೇರಿದಂತೆ ಅಸಂಖ್ಯಾತ ಪ್ರಾಣಿಗಳಿರುವ  ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಮುಂಬೈನ ಬೆನಿಜಾಯ್ ಏಷ್ಯಾ ಗ್ರೂಪ್ ನ ಸೆವೆನ್ ಟಾರಸ್ ಸ್ಟುಡಿಯೋ  ಪ್ರೈವೇಟ್ ಲಿಮಿಟೆಡ್ 'ಮ್ಯಾನ್ ವರ್ಸಸ್ ವೈಲ್ಡ್' ಎಂಬ ಸಾಕ್ಷ್ಯ ಚಿತ್ರ ತಯಾರಿಸುತ್ತಿದೆ. ಸೂಪರ್ ಸ್ಟಾರ್ ರಜನೀಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಈ ಸಾಕ್ಷ್ಯ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷವಾಗಿದೆ. ಈ ಇಬ್ಬರು ಖ್ಯಾತ ನಟರು ಬಂಡೀಪುರಕ್ಕೆ ಆಗಮಿಸಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.  ಖ್ಯಾತ ವನ್ಯಜೀವಿ ಸಾಹಸಿ ನಿರ್ದೇಶಕ ಬೇರ್ ಗ್ರಿಲ್ಸ್  ಈ ಸಾಕ್ಷ್ಯ ಚಿತ್ರ ನಿರ್ದೇಶಿಸುತ್ತಿದ್ದು ಅವರು ಸಹ  ಹೆಲಿಕ್ಯಾಪ್ಟರ್ ಮೂಲಕ ಬಂಡೀಪುರಕ್ಕೆ ಆಗಮಿಸಿ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ.


ಮಾನವ ವನ್ಯಜೀವಿ ಸಂಘರ್ಷ ಕುರಿತು ತಯಾರಿಸುತ್ತಿರುವ ಈ ಸಾಕ್ಷ್ಯ ಚಿತ್ರವನ್ನು ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಚಿತ್ರೀಕರಿಸಲು ಸೇವನ್ ಟಾರಸ್ ಸಂಸ್ಥೆಗೆ ಅರಣ್ಯ ಇಲಾಖೆ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದೆ. ಅರಣ್ಯಾಧಿಕಾರಿಗಳ ಸಮಕ್ಷಮ ಚಿತ್ರೀಕರಣ ನಡೆಸಬೇಕು ವನ್ಯಜೀವಿಗಳಿಗೆ ಹಾಗು ಅರಣ್ಯ ಸಂಪತ್ತಿಗೆ ಯಾವುದೇ ರೀತಿಯ  ದಕ್ಕೆಯಾಗದಂತೆ ಚಿತ್ರೀಕರಣ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ


ಆದರೆ, ಇದಕ್ಕೆ ವನ್ಯಜೀವಿ ತಜ್ಞ ಜೋಸೆಫ್ ಹೂವರ್ ವಿರೋಧ ವ್ಯಕ್ತಪಡಿಸಿದ್ದು, ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಸಿಗೆ ಆರಂಭವಾಗಿದೆ. ಕಾಡಿನಲ್ಲಿ ಸಿಬ್ಬಂದಿಗಳು ಬೆಂಕಿ ಬೀಳದ ಹಾಗೇ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಬಂಡೀಪುರ ಅರಣ್ಯದಲ್ಲಿ ಚಿತ್ರೀಕರಣ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.


ಇದನ್ನೂ ಓದಿ : ರಾಷ್ಟ್ರೀಯ ನಾಯಕರು ಸಿಎಂ ಗೆ ಸ್ವಾತ್ರಂತ್ರ್ಯ ಕೊಡ್ತಿಲ್ಲ - ಸಂಕಷ್ಟಕ್ಕೆ ಸಿಲುಕಿದ ಯಡಿಯೂರಪ್ಪ; ಸಿದ್ಧರಾಮಯ್ಯ ಟೀಕೆ


ಇಂದು ಇಡೀ ದಿನ ಬಂಡೀಪುರ ಹುಲಿ ರಕ್ಷಿತಾರಣ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ. ಮತ್ತೆ ನಾಳೆ ಬೆಳಿಗ್ಗೆ ಯಿಂದ ಮಧ್ಯಾಹ್ನದವರೆಗೂ ಚಿತ್ರೀಕರಣ ನಡೆಯಲಿದೆ.


(ವರದಿ : ಎಸ್.ಎಂ. ನಂದೀಶ್)

top videos
    First published: