ಚನ್ನಪಟ್ಟಣದಲ್ಲಿ ಕಾಡಾನೆಗಳ ದಾಳಿ; ಬಾಳೆ, ತೆಂಗು ನಾಶ; ಅರಣ್ಯಾಧಿಕಾರಿಗಳು ಭೇಟಿ, ಪರಿಹಾರದ ಭರವಸೆ

ಕಾವೇರಿ ವನ್ಯಜೀವಿ ಅಭಯಾರಣ್ಯದಿಂದ ಆನೆಗಳು ಚಿಕ್ಕಮಣ್ಣುಗುಡ್ಡೆ ಅರಣ್ಯಕ್ಕೆ ಬಂದಿದ್ದವು. ಈ ಮಧ್ಯೆ ದಾರಿಯಲ್ಲಿ ಸಿಗುವ ರೈತರ ತೋಟಗಳಿಗೆ ನುಗ್ಗಿ ದಾಳಿ ನಡೆಸಿವೆ.

ಚನ್ನಪಟ್ಟಣದಲ್ಲಿ ಕಾಡಾನೆಗಳಿಂದ ಬಾಳೆತೋಟ ನಾಶವಾಗಿರುವುದು

ಚನ್ನಪಟ್ಟಣದಲ್ಲಿ ಕಾಡಾನೆಗಳಿಂದ ಬಾಳೆತೋಟ ನಾಶವಾಗಿರುವುದು

 • Share this:
  ರಾಮನಗರ(ಮೇ 12): ಚನ್ನಪಟ್ಟಣ ತಾಲೂಕಿನ ಗೆಂಡೆಕಟ್ಟೆದೊಡ್ಡಿ ಗ್ರಾಮದಲ್ಲಿ ಕಳೆದ ರಾತ್ರಿ 8 ಕಾಡಾನೆಗಳ ಹಿಂಡೊಂದು ದಾಳಿ ನಡೆಸಿ ರೈತ ತಮ್ಮಯ್ಯಗೆ ಸೇರಿದ ಬಾಳೆ ತೋಟದ 45 ಬಾಳೆ ಗಿಡ ಹಾಗೂ ತೆಂಗಿನಮರ ಸೇರಿದಂತೆ ಪಕ್ಕದ ತೋಟದ ಸೌತೆಕಾಯಿ ಬೆಳೆಯನ್ನು ನಾಶಪಡಿಸಿವೆ. ಇವತ್ತು ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಚನ್ನಪಟ್ಟಣ ಅರಣ್ಯ ವಲಯಾಧಿಕಾರಿ ಮಹಮ್ಮದ್ ಮನ್ಸೂರ್ ಹಾಗೂ ತಂಡ ಸ್ಥಳ ಪರಿಶೀಲನೆ ನಡೆಸಿ, ವರದಿ ಪಡೆದರು.

  ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತ ತಮ್ಮಯ್ಯನಿಗೆ ಕಾಡಾನೆಗಳಿಂದ ಆಗಿರುವ ಬೆಳೆನಷ್ಟಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ಕೊಟ್ಟರು. ಜೊತೆಗೆ ನೊಂದ ರೈತ ತಮ್ಮಯ್ಯ ಮುಂದೆ ನಮ್ಮ ತೋಟಗಳಿಗೆ ಕಾಡಾನೆಗಳು ಬಾರದಂತೆ ಕ್ರಮವಹಿಸಬೇಕೆಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.

  ಇದನ್ನೂ ಓದಿ: ಕೆಲಸ ಹೋದರೆ ಚಿಂತೆ ಬೇಡ; ಮೋದಿ ಸರ್ಕಾರದ ಈ ಯೋಜನೆಯಿಂದ ನಿಮಗೆ ಸಿಗುತ್ತೆ 2 ವರ್ಷ ಸಂಬಳ

  ಕಾವೇರಿ ವನ್ಯಜೀವಿ ಅಭಯಾರಣ್ಯದಿಂದ ಆನೆಗಳು ಚಿಕ್ಕಮಣ್ಣುಗುಡ್ಡೆ ಅರಣ್ಯಕ್ಕೆ ಬಂದಿದ್ದವು. ಈ ಮಧ್ಯೆ ದಾರಿಯಲ್ಲಿ ಸಿಗುವ ರೈತರ ತೋಟಗಳಿಗೆ ನುಗ್ಗಿ ದಾಳಿ ನಡೆಸಿವೆ. ಈಗ ನಾವು ತೆಂಗಿನಕಲ್ಲು ಅರಣ್ಯಕ್ಕೆ ಅವುಗಳನ್ನ ಓಡಿಸಿದ್ದೇವೆ. ನಂತರ ಕಬ್ಬಾಳು ಅರಣ್ಯದ ಮೂಲಕ ಮತ್ತೆ ಅವುಗಳನ್ನ ಕಾವೇರಿ ವನ್ಯಜೀವಿ ಅಭಯಾರಣ್ಯಕ್ಕೆ (ಮುತ್ತತ್ತಿ) ಓಡಿಸುತ್ತೇವೆಂದು ಅರಣ್ಯಾಧಿಕಾರಿ ತಿಳಿಸಿದರು.

  ವರದಿ: ಎ.ಟಿ. ವೆಂಕಟೇಶ್

  First published: