Elephants: ಚನ್ನಪಟ್ಟಣದಲ್ಲಿ ಮುಂದುವರಿದ ಕಾಡಾನೆಗಳ ದಾಳಿ; ಅಸಹಾಯಕ ಸ್ಥಿತಿಯಲ್ಲಿ ಅಧಿಕಾರಿಗಳು, ರೈತರ ಗೋಳಾಟ

ಒಂದೆಡೆ ಕಾಡಾನೆಗಳ ಉಪಟಳ ಹೆಚ್ಚಾಗಿದೆ ಎಂದು ರೈತರು ಅರಣ್ಯಾಧಿಕಾರಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ. ಆದರೆ ಅಸಹಾಯಕ ಪರಿಸ್ಥಿತಿಯಲ್ಲಿ ಅಧಿಕಾರಿಗಳ ವರ್ಗ ಇದೆ ಎಂಬುದು ವಾಸ್ತವ ಸತ್ಯ.

ಆನೆ

ಆನೆ

  • Share this:
ರಾಮನಗರ ಜಿಲ್ಲೆಯ ಚನ್ನಪಟ್ಟಣದ (Chanpatan, Ramanagar) ಬಿ.ವಿ.ಹಳ್ಳಿ ವ್ಯಾಪ್ತಿಯ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ (Wild Elephants) ದಾಳಿ ಹೆಚ್ಚಾಗಿ ಮಹಿಳೆಯೊಬ್ಬರು (Woman Death) ಸಾವನ್ನಪ್ಪಿದ್ದರು. ಈ ಹಿನ್ನೆಲೆ ಸ್ಥಳೀಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಎಚ್ಚೆತ್ತ ಅರಣ್ಯ ಇಲಾಖೆ (Forest Department) ಸರ್ಕಾರದಿಂದ (Government) ಅನುಮತಿ ಪಡೆದು ಈಗ 2 ಕಾಡಾನೆಗಳನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಆದರೆ ಈ ಭಾಗದಲ್ಲಿ ಇನ್ನು 38 ಕಾಡಾನೆಗಳ ಹಿಂಡು ಇರುವ ಹಿನ್ನೆಲೆ ಸ್ಥಳೀಯ ಗ್ರಾಮಗಳಾದ ಬಿ.ವಿ.ಹಳ್ಳಿ, ಕೋಡಂಬಳ್ಳಿ, ಸಿಂಗರಾಜಿಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ರೈತರ ಬೆಳೆಗಳನ್ನ (Crop) ನಾಶ ಮಾಡ್ತಿವೆ. ಎರಡು ಕಾಡಾನೆ ಹಿಡಿದ ನಂತರ ಮತ್ತಷ್ಟು ಉಪಟಳ ಹೆಚ್ಚಾಗಿದ್ದು, ರೈತರಿಗೆ (Farmers) ಮತ್ತಷ್ಟು ತಲೆನೋವಾಗಿದೆ. ರೈತರ ತೆಂಗು, ಬಾಳೆ, ಹಲಸನ್ನ ನಾಶ ಮಾಡ್ತಿರುವ ಹಿನ್ನೆಲೆ ಈ ಭಾಗದಲ್ಲಿ ಪ್ರಮುಖವಾಗಿರುವ ಸಲಗ (ದೊಡ್ಡಾನೆಯನ್ನ) ಹಿಡಿಯಬೇಕೆಂದು ರೈತರು ನ್ಯೂಸ್ 18 ಮೂಲಕ ಆಗ್ರಹಿಸಿದ್ದಾರೆ.

ಇನ್ನು ಎಲ್ಲವನ್ನು ಸೆರೆ ಹಿಡಿಯಲು ಸಾಧ್ಯವಿಲ್ಲ. ಆದರೆ ಕಾಡಾಗೆ ಓಡಿಸುವ ಪ್ರಯತ್ನ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಈ ಬಗ್ಗೆ ಡಿಎಫ್ಒ ದೇವರಾಜು ನ್ಯೂಸ್ 18 ಜೊತೆಗೆ ಮಾತನಾಡಿ, ಹೆಚ್ಚಿನ ಆನೆಗಳನ್ನ ಹಿಡಿಯಬೇಕೆಂದು ಜನ ಹೇಳ್ತಾರೆ. ಆದರೆ ಇದನ್ನ ನಾವು ನಿರ್ಧಾರ ಮಾಡಲು ಸಾಧ್ಯವಿಲ್ಲ, ಸರ್ಕಾರ ಮತ್ತು ಇಲಾಖೆಯ ಪ್ರಧಾನ ಅಧಿಕಾರಿಗಳ ವರ್ಗ ನಿರ್ಧಾರ ಮಾಡಬೇಕಿದೆ ಎಂದಿದ್ದಾರೆ.

ಬೆಳೆ ನಾಶ


ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ವರ್ಗ

ಒಂದೆಡೆ ಕಾಡಾನೆಗಳ ಉಪಟಳ ಹೆಚ್ಚಾಗಿದೆ ಎಂದು ರೈತರು ಅರಣ್ಯಾಧಿಕಾರಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ. ಆದರೆ ಅಸಹಾಯಕ ಪರಿಸ್ಥಿತಿಯಲ್ಲಿ ಅಧಿಕಾರಿಗಳ ವರ್ಗ ಇದೆ ಎಂಬುದು ವಾಸ್ತವ ಸತ್ಯ.

ಇದನ್ನೂ ಓದಿ:  Karnataka Weather Report: ಬದಲಾಗುತ್ತಿರುವ ಹವಾಮಾನ; ಅಲ್ಲಲ್ಲಿ ಮಳೆ, ಮೋಡ ಕವಿದ ವಾತಾವರಣ

ಏಕಾಏಕಿ ಕಾಡಾನೆ ಕಾರ್ಯಾಚರಣೆ (Elephant Operation) ಮಾಡುವುದು ಅಷ್ಟು ಸುಲಭದ ಮಾತಲ್ಲ. ರಾಜ್ಯ ಸರ್ಕಾರ (Karnataka Government) ಇದರ ಬಗ್ಗೆ ಅಂತಿಮ‌ ನಿರ್ಧಾರ ಕೈಗೊಳ್ಳಬೇಕು. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳ ವರ್ಗ ಕಾಡಾನೆ ಕಾರ್ಯಾಚರಣೆ ಮಾಡಬೇಕು. ಇದಕ್ಕೆ ಅನುಮತಿ ಪಡೆಯುವುದು ಸಹ ಅಷ್ಟು ಸುಲಭದ ಮಾತಲ್ಲ. ಆದರೆ ರೈತರಿಗೆ ಆಗುವ ನೋವಿಗೆ ತಕ್ಷಣವೇ ಕಾಡಾನೆ ಕಾರ್ಯಾಚರಣೆ ಮಾಡಬೇಕೆಂದು ಒತ್ತಡ ಹಾಕುತ್ತಾರೆ. ಅದರೆ ಅರಣ್ಯಾಧಿಕಾರಿಗಳ ವಾಸ್ತವ ಪರಿಸ್ಥಿತಿ ರೈತರಿಗೆ ಅರ್ಥವಾಗುವುದಿಲ್ಲ.

ದಿನನಿತ್ಯ ಗೋಳಾಟದಲ್ಲಿ ರೈತರು

ಒಂದೆಡೆ ಕಾಡಾನೆಗಳ ಹಿಂಡು ರೈತರ ಜಮೀನಿಗೆ ನುಗ್ಗಿ ದಾಂಧಲೆ ಮಾಡುತ್ತಿದ್ದರೆ, ಇತ್ತ ಅರಣ್ಯಾಧಿಕಾರಿಗಳಿಗೆ ಇನ್ನಿಲ್ಲದ ಸಂಕಟ ಶುರುವಾಗುತ್ತದೆ. ರೈತರು ಹಿಡಿಶಾಪ ಹಾಕುತ್ತ ನಮಗೆ ಕಾಡಾನೆಗಳ ದಾಳಿಯಿಂದ ಮುಕ್ತಿ ಕೊಡಿಸಿ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಾರೆ. ಆದರೆ ಮತ್ತೊಂದು ಕಡೆ ಅರಣ್ಯಾಧಿಕಾರಿಗಳು ಸಹ ಇಲ್ಲಿ ಏನು ಮಾಡದ ಪರಿಸ್ಥಿತಿ ಇದೆ.

Wild elephants damage crops in channapatna Ramanagara atvr mrq
ಬೆಳೆ ನಾಶ


ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ

ಇಲಾಖೆಯಲ್ಲಿ ಸೂಕ್ತ ಸಿಬ್ಬಂದಿ ವ್ಯವಸ್ಥೆ ಇಲ್ಲ. ಏಕಾಏಕಿ ನಿರ್ಧಾರ ಮಾಡುವ ಅಧಿಕಾರ ಇಲ್ಲ. ಜೊತೆಗೆ ರಾಜಕಾರಣಿಗಳು ತಮ್ಮ ಹಿತಾಸಕ್ತಿಗಾಗಿ ಕಾಡುಪ್ರದೇಶವನ್ನ ಒತ್ತುವರಿ ಮಾಡುವ ಮೂಲಕ ಜಮೀನುಗಳಾಗಿ ಪರಿವರ್ತನೆ ಮಾಡಿ ಜನರಿಗೆ ಹಂಚಿಕೆ ಮಾಡಿದ್ದಾರೆ.

ಇದನ್ನೂ ಓದಿ:  White Python: ಬಿಳಿ ಹೆಬ್ಬಾವು ಪತ್ತೆ! ಹಾವಿಗೆ ಬಿಳಿ ಬಣ್ಣ ಬರೋದೇಕೆ? ಫೋಟೋಸ್ ನೋಡಿ

ಅರಣ್ಯ ಪ್ರದೇಶದ ಒತ್ತುವರಿ

ಈಗ ಕಾಡು ಪ್ರಾಣಿಗಳಿದ್ದ ಜಾಗಕ್ಕೆ ಜನರು ಹೋಗಿದ್ದಾರೆ. ಈಗ ಕಾಡು ಪ್ರದೇಶದ ಜಾಗದಲ್ಲಿ ಜನ ವ್ಯವಸಾಯ ಮಾಡ್ತಿದ್ದಾರೆ. ಆದರೆ ಕಾಡುಪ್ರಾಣಿಗಳು ಬೆಳೆ ನಾಶ ಮಾಡ್ತಿವೆ. ಈ ಸ್ಥಿತಿಯಲ್ಲಿ ಅರಣ್ಯಾಧಿಕಾರಿಗಳು ಏನು ಮಾಡಲು ಸಾಧ್ಯ ಎಂಬ ಪ್ರಶ್ನೆ ಮೂಡುತ್ತದೆ.
Published by:Mahmadrafik K
First published: