• Home
  • »
  • News
  • »
  • state
  • »
  • Anekal: ಕಾಡಾನೆ ದಾಳಿಗಳಿಂದ ರೈತರ ಕಣ್ಣೀರು; ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದ ಆರೋಪ

Anekal: ಕಾಡಾನೆ ದಾಳಿಗಳಿಂದ ರೈತರ ಕಣ್ಣೀರು; ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದ ಆರೋಪ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಾಡಾನೆಗಳು ರೈತರ ಬೆಳೆಗಳಿಗೆ ನುಗ್ಗಿ ನಾಶ ಮಾಡುತ್ತಿವೆ. ಬೆಳೆಗಳು ನಾಶವಾದರೆ ಬೇರೆ ದಾರಿಯಿಲ್ಲದೆ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದು ಕೃಷಿಯನ್ನೇ ಅವಲಂಬಿಸಿದ ಕುಟುಂಬಗಳು ಕಣ್ಣೀರು ಹಾಕುತ್ತಿವೆ.

  • Share this:

ಆನೇಕಲ್: ರೈತರ (Farmers) ಬೆಳೆಗಳಿಗೆ ಕಾಡಾನೆಗಳ (Wild Elephants) ಹಾವಳಿ ಮುಂದುವರಿದಿದೆ. ಪದೇ ಪದೇ ರೈತರ ಬೆಳೆಗಳಿಗೆ ದಾಗುಂಡಿಯಿಡುತ್ತಿರುವ ಗಜಪಡೆಯಿಂದ ರೈತರು ಕಂಗಾಲು ಆಗಿದ್ದಾರೆ. ಕಾಡಾನೆಗಳ ದಾಳಿಗೆ ರೈತರ ಬೆಳೆಗಳು (Crop Loss) ನಾಶವಾಗಿದೆ. ಗಜಪಡೆ ದಾಂದಲೆಗೆ ಅರಣ್ಯ ಅಧಿಕಾರಿಗಳ (Forest Department Officers) ನಿರ್ಲಕ್ಷ್ಯದಿಂದ ಬೆಳೆಗಳತ್ತ ಕಾಡಾನೆ ಹಿಂಡು ಬರುತ್ತಿರುವುದಾಗಿ ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ (Anekal, Bengaluru Rural) ತಾಲ್ಲೂಕಿನ ಬನ್ನೇರುಘಟ್ಟ (Bannerughatta) ಅರಣ್ಯದಂಚಿನ ಗ್ರಾಮಗಳಾದ ಭೂತಾನಹಳ್ಳಿ ಬಳಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಇತ್ತೀಚೆಗೆ ಕಾಡಾನೆಗಳ ಹಾವಳಿಗೆ ಅರಣ್ಯದಂಚಿನ ಗ್ರಾಮಗಳ ರೈತರು ಅಕ್ಷರಶಃ ಸಹ ಕಂಗಾಲು ಆಗಿದ್ದಾರೆ.


ಕುಂಬಾರನಿಗೆ ವರ್ಷ ದೊಣ್ಣೆಗೆ ನಿಮಿಷ ಎನ್ನುವ ಹಾಗೇ  ರೈತರು ವರ್ಷ ಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕಾಡಾನೆಗಳ ಹಿಂಡು ಒಂದೇ ರಾತ್ರಿಗೆ ತಿಂದು ತುಳಿದು ನಾಶ ಮಾಡುತ್ತಿವೆ.


ಸೂಕ್ತ ಕ್ರಮಕ್ಕೆ ರೈತರ ಆಗ್ರಹ


ರೈತರ ಬೆಳೆಗಳಿಗೆ ಕಾಡಾನೆ ಹಾವಳಿ ಹೆಚ್ಚಾಗಲು ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯ ರೈತರು ಆರೋಪಿಸುತ್ತಿದ್ದಾರೆ. ಕಾಡಾನೆಗಳನ್ನು ನಾಡಿನತ್ತ ಬರದಂತೆ ರೈತರ ಬೆಳೆಗಳಿಗೆ ದಾಂಗುಡಿಯಿಡದಂತೆ ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.


ಇನ್ನೂ ಕಳೆದ ಹಲವು  ವರ್ಷಗಳಿಂದ ಅರಣ್ಯದಂಚಿನ ರೈತರಿಗೆ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಆದ್ರೆ ಅರಣ್ಯ ಅಧಿಕಾರಿಗಳು ಮಾತ್ರ ಕಾಡಾನೆಗಳ ಹಾವಳಿ ನಿಯಂತ್ರಣ ಮಾಡುತ್ತಿಲ್ಲ. ಸುತ್ತಮುತ್ತಲಿನ ಗ್ರಾಮ ವಾಸಿಗಳು ಮತ್ತು ರೈತರು ಕಾಡಾನೆಗಳ ಹಾವಳಿಗೆ ಕಂಗಾಲಾಗಿದ್ದಾರೆ.


ರೈತ ಕುಟುಂಬಗಳ ಕಣ್ಣೀರು


ಕಾಡಾನೆಗಳು ರೈತರ ಬೆಳೆಗಳಿಗೆ ನುಗ್ಗಿ ನಾಶ ಮಾಡುತ್ತಿವೆ. ಬೆಳೆಗಳು ನಾಶವಾದರೆ ಬೇರೆ ದಾರಿಯಿಲ್ಲದೆ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದು ಕೃಷಿಯನ್ನೇ ಅವಲಂಬಿಸಿದ ಕುಟುಂಬಗಳು ಕಣ್ಣೀರು ಹಾಕುತ್ತಿವೆ.


ನಿಮ್ಮ ಕನಿಷ್ಠ ಪರಿಹಾರ ಬೇಡ


ಸೋಲಾರ್ ತಂತಿ ಬೇಲಿ ಮತ್ತು ರೈಲ್ವೇ ಹಳಿ ತಡೆಗೋಡೆಗಳನ್ನು ಕೆಲವು ಕಡೆ ನಿರ್ಮಿಸದೇ ದಾರಿ ಬಿಡಲಾಗಿದೆ . ಕಾಡಾನೆಗಳ ದಾಳಿಗೆ ಬೆಳೆ ನಾಶವಾದರೆ ಕನಿಷ್ಠ ಪರಿಹಾರ ನೀಡುತ್ತಾರೆ. ಹಾಗಾಗಿ ನಮಗೆ ನಿಮ್ಮ ಪರಿಹಾರ ಬೇಡ ಕಾಡಾನೆಗಳ ಉಪಟಳ ನಿಯಂತ್ರಿಸಿ ಎಂದು ರೈತರು ಅರಣ್ಯ ಅಧಿಕಾರಿಗಳ ವಿರುದ್ಧ ರೈತ ವೆಂಕಟೇಶಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Wild elephants damage crops anekal bengaluru rural cank mrq
ಕಾಡಾನೆಗಳ ದಾಳಿ


ಒಂದು ಕಡೆ ಅತಿವೃಷ್ಟಿ, ಮತ್ತೊಂದು ಕಡೆ ಕಾಡಾನೆಗಳ ದಾಳಿ


ಒಟ್ಟಿನಲ್ಲಿ ರೈತರು ಈಗಾಗಲೇ ಮಳೆಯ ಆರ್ಭಟಕ್ಕೆ ಹೈರಾಣಾಗಿದ್ದಾರೆ. ಜೊತೆಗೆ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೇ ಕಂಗಾಲು ಆಗಿದ್ದಾರೆ. ಇದರ ನಡುವೆ ಕಾಡಾನೆಗಳು ರೈತರ ಕೈಗೆ ಬಂದ ಬೆಳೆಗಳನ್ನು ಕಿತ್ತು ತಿನ್ನುತ್ತಿವೆ.


ಅದರಲ್ಲೂ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರ ಬೆಳೆಗಳಿಗೆ ಕಾಡಾನೆಗಳು ರೈತರ ಬೆಳೆಗಳನ್ನು ನಾಶಮಾಡುತ್ತಿವೆ. ಹಾಗಾಗಿ ಅರಣ್ಯ ಅಧಿಕಾರಿಗಳು ಕಾಡು ಪ್ರಾಣಿಗಳು ನಾಡಿನತ್ತ ಬರದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.


ಸರ್ಕಾರದ ವಿರುದ್ಧ ಮಲೆನಾಡು ರೈತರ ಆಕ್ರೋಶ


ಹಾಸನ ಜಿಲ್ಲೆಯ ಮಲೆನಾಡು (Malenadu) ಭಾಗದಲ್ಲಿ ಕಾಡಾನೆಗಳ (Wild Elephant) ಉಪಟಳ ತೀವ್ರಗೊಂಡಿದೆ. ಪ್ರತಿನಿತ್ಯ ಒಂದಲ್ಲಾ ಒಂದು ಗ್ರಾಮದಲ್ಲಿ ಗಜಪಡೆ ದಾಂಧಲೆ ನಡೆಸುತ್ತಿದ್ದು ಬೆಳೆ ನಷ್ಟದಿಂದ ರೈತರು (Farmers) ಹಾಗೂ ಕಾಫಿ ಬೆಳೆಗಾರರು (Coffee Planters) ಕಂಗಾಲಾಗಿ ಹೋಗಿದ್ದಾರೆ.


ಇದನ್ನೂ ಓದಿ: Anekal: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆರೆಯಲ್ಲಿ ಮೀನುಗಳ ಮಾರಣಹೋಮ; ಜಾನುವಾರುಗಳಿಗೆ ರೋಗ ಭೀತಿ


ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಸರ್ಕಾರದ (Karnataka Government) ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ರೂಪಿಸಿ ಇಲ್ಲಾ ದಯಾಮರಣಕ್ಕೆ (Euthanasia) ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.


ಕಾಡಾನೆಗಳ ಸಂತತಿ ಮಿತಿಮೀರಿದ್ದು ಗ್ರಾಮ, ರಸ್ತೆ, ಕೆರೆ, ನದಿಗಳಲ್ಲಿ ಕಾಣಸಿಕೊಳ್ಳುತ್ತಿದ್ದು, ಜನರು, ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ.

Published by:Mahmadrafik K
First published: