HOME » NEWS » State » WILD ELEPHANTS ATTACK AT CHANNAPATNA AND CROP LOSS FARMERS WORRIED ATVR LG

ಚನ್ನಪಟ್ಟಣದ ತಗಚಗೆರೆ ಗ್ರಾಮದಲ್ಲಿ 8 ಕಾಡಾನೆಗಳ ದಾಳಿ; ಲಕ್ಷಾಂತರ ರೂ.ಮೌಲ್ಯದ ಬೆಳೆ ನಾಶ

ಕಾಡಾನೆಗಳ ದಾಳಿಯಿಂದ 3 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಕಳೆದ 1 ತಿಂಗಳಿಂದ ಈ ಭಾಗದಿಂದ ನಿರಂತರವಾಗಿ ಕಾಡಾನೆಗಳ ದಾಳಿ ನಡೆಯುತ್ತಿದ್ದರೂ ಸಂಬಂಧಿಸಿದ ಅರಣ್ಯಾಧಿಕಾರಿಗಳು, ಸರ್ಕಾರ ಸಹ ಯಾವುದೇ ಕ್ರಮವಹಿಸುತ್ತಿಲ್ಲ ಎಂದು ನೊಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

news18-kannada
Updated:February 18, 2021, 9:53 AM IST
ಚನ್ನಪಟ್ಟಣದ ತಗಚಗೆರೆ ಗ್ರಾಮದಲ್ಲಿ 8 ಕಾಡಾನೆಗಳ ದಾಳಿ; ಲಕ್ಷಾಂತರ ರೂ.ಮೌಲ್ಯದ ಬೆಳೆ ನಾಶ
ಕಾಡಾನೆ ದಾಳಿಗೆ ನಾಶವಾಗಿರುವ ಬೆಳೆ
  • Share this:
ರಾಮನಗರ(ಫೆ.18): ಕಾಡಾನೆಗಳ ಹಿಂಡು ರೈತರ ಜಮೀನುಗಳ ಮೇಲೆ ದಾಳಿ ಇಟ್ಟು ಬೆಳೆಗಳನ್ನು ನಾಶಪಡಿಸುತ್ತಿರುವ ಘಟನೆಗಳು ರೇಷ್ಮೆ ನಗರಿಯಲ್ಲಿ ನಡೆಯುತ್ತಲೇ ಇವೆ. ಕಾಡಂಚಿನ ಗ್ರಾಮದ ರೈತರು ಪ್ರತಿನಿತ್ಯ ಜೀವವನ್ನ ಬಿಗಿಹಿಡಿದು ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತೆಂಗು, ಮಾವು, ಟೊಮ್ಯಾಟೊ, ಬಾಳೆ ಸೇರಿದಂತೆ ರೈತರ ಬೆಳೆಗಳನ್ನ ಗಜಪಡೆಗಳ ಹಿಂಡು ನಾಶಪಡಿಸುತ್ತಲೇ ಇವೆ. ಗಜಪಡೆಗಳ ದಾಳಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ರೈತರ ಬೆಳೆ ಸಂಪೂರ್ಣ ನಾಶವಾಗಿರುವುದರಿಂದ ಅನ್ನದಾತ ಸಂಕಷ್ಟದ ಸುಳಿಗೆ ಸಿಲುಕಿ ನಲುಗುತ್ತಿದ್ದಾನೆ.

ಹೌದು, ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮದಲ್ಲಿ 8 ಕಾಡಾನೆಗಳ ಹಿಂಡು ದಾಳಿ ನಡೆಸಿ ರೈತರ ಬೆಳೆಗಳನ್ನ ಸಂಪೂರ್ಣ ನಾಶಪಡಿಸಿವೆ. ಗ್ರಾಮದ ಶಿವಲಿಂಗ ಎಂಬುವರ 2 ಎಕರೆ ಟೊಮ್ಯಾಟೊ ಬೆಳೆ, 1 ಎಕರೆ ಬಾಳೆ ಬೆಳೆಯನ್ನ ಸಂಪೂರ್ಣ ನಾಶಪಡಿಸಿವೆ. ಕಳೆದ ತಡರಾತ್ರಿ ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಬಂದಿರುವ ಕಾಡಾನೆಗಳ ಹಿಂಡು ರೈತರ ಬೆಳೆಗಳನ್ನ ಸಂಪೂರ್ಣ ನಾಶಪಡಿಸಿವೆ. ಇನ್ನೇನು ಕಟಾವು ಮಾಡಬೇಕಿದ್ದ ಟೊಮ್ಯಾಟೊ ಬೆಳೆ ಕಳೆದುಕೊಂಡ ರೈತನ ಕುಟುಂಬದವರು ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ.

ಮಹಿಳಾ ಸುರಕ್ಷತೆಗೆ ಒತ್ತು; ಪೋರ್ನ್ ವಿಡಿಯೋ ವೀಕ್ಷಿಸುವವರ ಮೇಲೆ ಪೊಲೀಸರ ಹದ್ದಿನ ಕಣ್ಣು!

ಇನ್ನು ಕಾಡಾನೆಗಳ ದಾಳಿಯಿಂದ 3 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಕಳೆದ 1 ತಿಂಗಳಿಂದ ಈ ಭಾಗದಿಂದ ನಿರಂತರವಾಗಿ ಕಾಡಾನೆಗಳ ದಾಳಿ ನಡೆಯುತ್ತಿದ್ದರೂ ಸಂಬಂಧಿಸಿದ ಅರಣ್ಯಾಧಿಕಾರಿಗಳು, ಸರ್ಕಾರ ಸಹ ಯಾವುದೇ ಕ್ರಮವಹಿಸುತ್ತಿಲ್ಲ ಎಂದು ನೊಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂದಹಾಗೇ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿವೆ. ಒಂದಲ್ಲ ಒಂದು ಗ್ರಾಮದಲ್ಲಿ ಕಾಡನೆಗಳ ಹಿಂಡು ರೈತರ ಬೆಳೆಗಳನ್ನ ನಾಶಪಡಿಸುತ್ತಲೆ ಇವೆ. ವರ್ಷಗಳಿಂದ ಕಾಪಾಡಿಕೊಂಡು ಬಂದ ಮಾವಿನ ಗಿಡಗಳು, ತೆಂಗಿನ ಮರಗಳು ನಾಶವಾಗುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳ ಆನೆಗಳು ಅರಣ್ಯದಿಂದ ಹೊರ ಬರದಂತೆ ಟ್ರಂಚ್‌ಗಳನ್ನ ನಿರ್ಮಾಣಮಾಡಬೇಕು ಅಂತಾ ರೈತರು ಆಗ್ರಹ ಪಡಿಸುತ್ತಿದ್ದಾರೆ. ಅಲ್ಲದೆ ಅರಣ್ಯ ಇಲಾಖೆ ಸರಕಾರ ಬೆಳೆಗಳನ್ನ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಒಟ್ಟಾರೆ ರಾಮನಗರ ಜಿಲ್ಲೆಯಲ್ಲಿ ಒಂದಲ್ಲ ಒಂದು ಗ್ರಾಮದಲ್ಲಿ ಪ್ರತಿನಿತ್ಯ ಆನೆಗಳು ದಾಳಿ ಮಾಡುತ್ತಲೇ ಇವೆ, ರೈತರ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶಪಡಿಸುತ್ತಲೆ ಇವೆ. ಇತ್ತ ಅರಣ್ಯ ಇಲಾಖೆ ಸಿಬ್ಬಂಧಿಗಳು ನೆಪ ಮಾತ್ರಕ್ಕೆ ಆನೆಗಳನ್ನ ಕಾಡಿಗೆ ಹೋಡಿಸಿ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ.
ವ್ಯವಸಾಯಕ್ಕೆ ಮುಳ್ಳಾಗಿರುವ ಕಾಡಾನೆಗಳು

ಈ ಭಾಗದಲ್ಲಿ ರೈತರು ವ್ಯವಸಾಯವೇ ಮಾಡಬಾರದು ಎಂಬ ಸ್ಥಿತಿಗೆ ಬಂದಿದ್ದಾರೆ. ಪ್ರತಿದಿನವೂ ಸಹ ಕಾಡುಪ್ರಾಣಿಗಳ ಹಾವಳಿಯಿಂದ ಬೇಸತ್ತಿರುವ ರೈತರು ಆತಂಕದಲ್ಲಿಯೇ ಕಾಲಕಳೆಯುವ ದುಸ್ಥಿಗೆ ತಲುಪಿದ್ದಾರೆ. ಆದರೆ ಆಡಳಿತ ನಡೆಸುವ ಸರ್ಕಾರಗಳು ‌ಮಾತ್ರ ರೈತರ ಬಗ್ಗೆ ಯಾವುದೇ ಕಾಳಜಿ ವಹಿಸುತ್ತಿಲ್ಲವೆಂದು ಈ ಭಾಗದ ನೊಂದ ರೈತರಾದ  ಶಶಿಧರ ಬೇಸರವ್ಯಕ್ತಪಡಿಸಿದ್ದಾರೆ.

(ವರದಿ : ಎ.ಟಿ‌.ವೆಂಕಟೇಶ್)
Published by: Latha CG
First published: February 18, 2021, 9:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories