• Home
  • »
  • News
  • »
  • state
  • »
  • SS Mallikarjun: ವನ್ಯ ಪ್ರಾಣಿಗಳ ಪತ್ತೆ ಪ್ರಕರಣ; ಮಾಜಿ ಸಚಿವರ ರಕ್ಷಣೆಗೆ ಅರಣ್ಯ ಇಲಾಖೆ ಯತ್ನ?

SS Mallikarjun: ವನ್ಯ ಪ್ರಾಣಿಗಳ ಪತ್ತೆ ಪ್ರಕರಣ; ಮಾಜಿ ಸಚಿವರ ರಕ್ಷಣೆಗೆ ಅರಣ್ಯ ಇಲಾಖೆ ಯತ್ನ?

ಎಸ್ ಎಸ್ ಮಲ್ಲಿಕಾರ್ಜುನ್, ಮಾಜಿ ಸಚಿವ

ಎಸ್ ಎಸ್ ಮಲ್ಲಿಕಾರ್ಜುನ್, ಮಾಜಿ ಸಚಿವ

ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಲು DFO ಜಗನ್ನಾಥ್ ಹಿಂದೇಟು ಹಾಕುತ್ತಿರೋದು ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

  • News18 Kannada
  • Last Updated :
  • Davanagere, India
  • Share this:

ದಾವಣಗೆರೆ: ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ (Former Minister SS Mallikarjun) ಒಡೆತನದ ಫಾರ್ಮ್ ಹೌಸ್​ನಲ್ಲಿ ಜೀವಂತ ವನ್ಯಜೀವಿಗಳು (Live Wild Animals) ಪತ್ತೆಯಾಗಿದ್ದವು. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು (Forest Department) ಮತ್ತು ಸಿಸಿಬಿ ಪೊಲೀಸರು ಜಂಟಿಯಾಗಿ ಫಾರ್ಮ್​ಹೌಸ್ ಮೇಲೆ ದಾಳಿ ನಡೆಸಿದ್ದರು. ವನ್ಯಜೀವಿ ಕಾಯ್ದೆ ವಿರುದ್ಧ ಸಾಕಾಣಿಕೆ ಮಾಡಲಾಗುತ್ತಿದ್ದ ಪ್ರಾಣಿಗಳನ್ನು ಸಿಸಿಬಿ ಪೊಲೀಸರು (CCB Police) ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದರು. ಬುಧವಾರ ರಾತ್ರಿಯೇ ಎಲ್ಲಾ ಪ್ರಾಣಿಗಳನ್ನು ಸ್ಥಳಾಂತರ ಮಾಡಲಾಗಿತ್ತು. ಗುರುವಾರ ಬೆಳಗ್ಗೆಯೂ ಫಾರ್ಮ್​​ಹೌಸ್​ಗೆ (Farmhouse) ತೆರಳಿದ್ದ ಅಧಿಕಾರಿಗಳು ಪರಿಶೀಲನೆ ನಡೆಸಿದ್ರು. ಇದೀಗ ಅರಣ್ಯ ಇಲಾಖೆ ಮಾಜಿ ಸಚಿವ ಎಸ್.ಎಸ್​.ಮಲ್ಲಿಕಾರ್ಜುನ್ ಅವರ ರಕ್ಷಣೆಗೆ ಮುಂದಾಗಿದೆಯಾ ಎಂಬ ಅನುಮಾನಗಳು ಮೂಡಿವೆ.


ವನ್ಯ ಪ್ರಾಣಿಗಳ ಪತ್ತೆ ಸಂಬಂಧ ಎಫ್​ಐಆರ್ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನಕ್ಕೆ ಮುಂದಾಗಿರುವ ಆರೋಪಗಳು ಕೇಳಿ ಬಂದಿವೆ. ಈ ಸಂಬಂಧ ದಾಖಲಾಗಿರುವ ಎಫ್​ಐಆರ್​ನಲ್ಲಿ ಫಾರ್ಮ್​ಹೌಸ್​ನಲ್ಲಿರುವ ಮೂವರು ಕಾರ್ಮಿಕರ ಹೆಸರನ್ನು ದಾಖಲಿಸಿದೆ.


ಮಾಜಿ ಸಚಿವರನ್ನ ಉಳಿಸುವ ಉದ್ದೇಶದಿಂದಲೇ FIR ನಲ್ಲಿ ಮಲ್ಲಿಕಾರ್ಜುನ್ ಅವರ ಹೆಸರನ್ನು ಕೈಬಿಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಮಾಜಿ ಸಚಿವರ ಒಡೆತನದ ಫಾರ್ಮಹೌಸ್​ನಲ್ಲಿಯೇ ವನ್ಯ ಪ್ರಾಣಿಗಳು ಸಿಕ್ಕರೂ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರೋದು ಯಾಕೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.


ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಲು DFO ಜಗನ್ನಾಥ್ ಹಿಂದೇಟು ಹಾಕುತ್ತಿರೋದು ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.


ಫಾರ್ಮ್​​ಹೌಸ್​ನಲ್ಲಿ ಯಾವೆಲ್ಲಾ ಪ್ರಾಣಿಗಳು ಪತ್ತೆ?


ಏಳು ಚುಕ್ಕೆ ಜಿಂಕೆಗಳು, 10 ಕೃಷ್ಣಮೃಗಗಳು, ಏಳು ಕಾಡುಹಂದಿಗಳು, ಮೂರು ಮುಂಗುಸಿಗಳು, ಎರಡು ನರಿಗಳು ಸಿಕ್ಕಿವೆ ಎಂದು ತಿಳಿದು ಬಂದಿದೆ.


ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?


ಬೆಂಗಳೂರಿನ ಹೆಬ್ಬಾಳದಲ್ಲಿ ಡಿ.18ರಂದು ಜಿಂಕೆ ಚರ್ಮ, ಕೊಂಬು, ಮೂಳೆ ಮಾರಾಟ ಮಾಡಲು ಬಂದಿದ್ದ ಸೆಂಥಿಲ್‌ ಎಂಬ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ವೇಳೆ ಬಂಧಿತನನ್ನ ವಿಚಾರಣೆಗೆ ಒಳಪಡಿಸಿದಾಗ ದಾವಣಗೆರೆಯಿಂದ ಚರ್ಮ ಹಾಗೂ ಕೊಂಬು ತಂದಿರುವುದಾಗಿ ಆತ ಬಾಯ್ಬಿಟ್ಟಿದ್ದನು.


ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಎಸ್​.ಎಸ್.ಮಲ್ಲಿಕಾರ್ಜುನ್ ಒಡೆತನದ ಫಾರ್ಮ್​ಹೌಸ್​ನಲ್ಲಿ ಜೀವಂತ ವನ್ಯಪ್ರಾಣಿಗಳು ಪತ್ತಯಾಗಿವೆ. ಸಿಸಿಬಿ ಪೊಲೀಸರು ಸೆಂಥಿಲ್‌ನನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿ, ಫಾರ್ಮ್‌ನಲ್ಲಿದ್ದ ಕಾರ್ಮಿಕರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.


ಇದನ್ನೂ ಓದಿ: Exclusive |Davanagere: ರಾತ್ರಿ 2ರವರೆಗೂ ಯುವಕ, ಯುವತಿಯರ ಲೇಟ್ ನೈಟ್ ಪಾರ್ಟಿ; ಇಲ್ಲಿ ಜೋಡಿಗಳಿಗೆ ಮಾತ್ರ ಎಂಟ್ರಿ


ಎಸ್​ಎಸ್​ ಮಲ್ಲಿಕಾರ್ಜುನ್ ಪ್ರತಿಕ್ರಿಯೆ


ನಾವು ಅನುಮತಿ ಪಡೆದುಕೊಂಡು ಪ್ರಾಣಿಗಳನ್ನು ಸಾಕಿದ್ದೇವೆ ಎಂದು ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದ್ದಾರಂತೆ. ಈ ಬಗ್ಗೆ ಅರಣ್ಯ ಇಲಾಖೆ ಈ ಬಗ್ಗೆ ಮಾಹಿತಿ ನೀಡಿಲ್ಲ.


ಖಾಸಗಿ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯ!


ಕೊರೊನಾ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಖಾಸಗಿ ಶಾಲೆಗಳ ಸಿಬ್ಬಂದಿ, ಮಕ್ಕಳು ಮಾಸ್ಕ್ ಧರಿಸಬೇಕು ಎಂದು ರುಪ್ಸಾ ಸೂಚಿಸಿದೆ. ಅಗತ್ಯಬಿದ್ದರೆ ಆನ್​ಲೈನ್ ತರಗತಿ ನಡೆಸೋದಾಗಿ ತಿಳಿಸಿದೆ. ಇನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಅಲ್ಲದೇ ಎಲ್ಲಾ ವಿದ್ಯಾರ್ಥಿಗಳು ಬೂಸ್ಟರ್ ಡೋಸ್ ಪಡೆಯುವಂತೆ ಸೂಚಿಸಲಾಗಿದೆ.


ಕೊರೊನಾ ಮಾರ್ಗಸೂಚಿ ಬೆನ್ನಲ್ಲೇ ಹೋಟೆಲ್‌ಗಳಿಗೆ ಟೆನ್ಷನ್ ಶುರುವಾಗಿದೆ. ಆದ್ದರಿಂದ ಅವೈಜ್ಞಾನಿಕ ಮಾರ್ಗಸೂಚಿ ಹೊರಡಿಸಬೇಡಿ. ಈಗಾಗಲೇ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದೇವೆ. ಮಾರ್ಗಸೂಚಿ ಹೆಸೆರಿನಲ್ಲಿ ತೊಂದರೆ ಕೊಡಬೇಡಿ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್ ಮನವಿ ಮಾಡಿದ್ದಾರೆ.

Published by:Mahmadrafik K
First published: