ಮೈಸೂರು: ಪ್ರಿಯಕರನ (Lover) ಜೊತೆ ಸೇರಿ ಪತಿಯನ್ನೇ (Husband) ಪತ್ನಿ ಕೊಲೆ ಮಾಡಿರುವ ಘಟನೆ ಮೈಸೂರಿನ (Mysuru) ವಿಜಯನಗರ ಪೊಲೀಸ್ ಠಾಣೆ (Vijayanagara Police Station) ವ್ಯಾಪ್ತಿಯಲ್ಲಿ ನಡೆದಿದೆ. ಹೂಟಗಳ್ಳಿ ನಿವಾಸಿ ಮಂಜು ಕೊಲೆಯಾದ ದುರ್ದೈವಿಯಾಗಿದ್ದಾರೆ. ಮಂಜು ಪತ್ನಿ ಲಿಖಿತಾ ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ಪ್ರಕರಣ (Police Case) ದಾಖಲು ಮಾಡಿಕೊಂಡಿರುವ ವಿಜಯನಗರ ಠಾಣೆ ಪೊಲೀಸರು ಆರೋಪಿ ಲಿಖಿತಾಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಏನಿದು ಪ್ರಕರಣ?
ಕಳೆದ 12 ವರ್ಷದ ಹಿಂದೆ ಹೂಟಗಳ್ಳಿ ನಿವಾಸಿ ಮಂಜು ಹಾಗೂ ಬೋಗಾದಿ ನಿವಾಸಿ ಲಿಖಿತಾ ಅವರ ಮದುವೆಯನ್ನು ಕುಟುಂಬಸ್ಥರು ಮಾಡಿದ್ದರು. ದಂಪತಿಗಳಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ ಇತ್ತೀಚೆಗೆ ಲಿಖಿತಾ ಪತಿಯನ್ನು ಬಿಟ್ಟು ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಳಂತೆ. ಈ ವೇಳೆ ಹಿರಿಯರು ರಾಜಿ ಪಂಚಾಯಿತಿ ನಡೆಸಿ ಲಿಖಿತಾಳನ್ನು ಮತ್ತೆ ಗಂಡನ ಮನೆಗೆ ವಾಪಸ್ ಕಳುಹಿಸಿದ್ದರಂತೆ.
ಇದನ್ನೂ ಓದಿ: Bengaluru: ಲಿವ್ ಇನ್ ಲೇಡಿ ಮರ್ಡರ್ ಕೇಸ್‌ಗೆ ಟ್ವಿಸ್ಟ್, ಜೊತೆಗಿದ್ದವನಿಂದಲೇ ಬರ್ಬರ ಹತ್ಯೆ! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ!
ಈ ನಡುವೆ ಪತಿ, ಪತ್ನಿಗೆ ಅನೈತಿಕ ಸಂಬಂಧ ಮುಂದುವರಿಸದಂತೆ ಹೇಳಿದ್ದನಂತೆ. ಪತಿ ಕಿರಿಕ್ ಮಾಡಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಪತ್ನಿ ಲಿಖಿತಾ, ರಾತ್ರೋರಾತ್ರಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲು ಮಾಡಿರುವ ಪೊಲೀಸರು ಪತ್ನಿ ಲಿಖಿತಾಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ತಂದೆಯನ್ನೇ ಕೊಲ್ಲಿಸಿದ ಪಾಪಿಪುತ್ರ?
ಆಸ್ತಿ ವಿಚಾರಕ್ಕೆ ಮಗನೇ ಸುಪಾರಿ ನೀಡಿ ತಂದೆಯನ್ನು ಕೊಲೆ ಮಾಡಿಸಿರುವ ಆರೋಪ ಬೆಂಗಳೂರಲ್ಲಿ ಕೇಳಿಬಂದಿದೆ. ಆರೋಪಿ ಮಣಿಕಂಠ ಈ ಹಿಂದೆ ತನ್ನ ಮೊದಲ ಪತ್ನಿಯನ್ನು ಕೊಂದು ಜೈಲು ಸೇರಿದ್ದ. ಜೈಲಿನಿಂದ ಹೊರಬಂದು ಮೊದಲ ವಿವಾಹ ಮುಚ್ಚಿಟ್ಟು ಎರಡನೇ ವಿವಾಹವಾಗಿದ್ದ. ಆದರೂ ಬೇರೊಬ್ಬ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದನಂತೆ.
ಈ ವಿಚಾರ ಗೊತ್ತಾಗಿ ಎರಡನೇ ಪತ್ನಿ ಪತಿಯಿಂದ ದೂರವಿದ್ದಳು. ಆದರೆ ಮಾವ ನಾರಾಯಣಸ್ವಾಮಿ ವಿಚ್ಛೇದನ ಕೊಡುವುದು ಬೇಡ ಎಂದು ಕೇಳಿಕೊಂಡಿದ್ದರಂತೆ. ಜೊತೆಗೆ ಸೈಟ್ ಆಸ್ತಿಯನ್ನು ಸೊಸೆ ಹಾಗೂ ಮೊಮ್ಮಗಳ ಹೆಸರಿಗೆ ಮಾಡಲು ಮುಂದಾಗಿದ್ದರಂತೆ. ಇದೇ ಕಾರಣಕ್ಕೆ ಮಣಿಕಂಠ ತಂದೆಯನ್ನೇ ಕೊಲೆ ಮಾಡಿಸಿದ್ದಾನಂತೆ ಎನ್ನಲಾಗಿದೆ. ಸದ್ಯ ಪೊಲೀಸರು ಮಣಿಕಂಠನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದು, ಕೊಲೆಯ ಹಿಂದೆ ಕುಟುಂಬಸ್ಥರೆ ಭಾಗಿ ಶಂಕೆ ಹಿನ್ನಲೆಯಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ: Tumakuru: ಗಂಡನ ಕೊಲೆಗೆ ಪತ್ನಿಯಿಂದಲೇ ಸುಪಾರಿ; ಹುಟ್ಟುಹಬ್ಬದಂದೇ ಕೊಲೆಗೈದು ಕೆರೆಗೆ ಎಸೆದ್ರು!
ನಿಪ್ಪಾಣಿ ಗ್ರಾಮೀಣ ಠಾಣೆಗೆ ಅತ್ಯುತ್ತಮ ಪ್ರಶಸ್ತಿ
ಕೇಂದ್ರ ಗೃಹ ಇಲಾಖೆ ನೀಡುವ 2022ನೇ ಸಾಲಿನ ಕರ್ನಾಟಕ ಅತ್ಯುತ್ತಮ ಪೊಲೀಸ್ ಠಾಣೆ ಪ್ರಶಸ್ತಿಯನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ಮುಡಿಗೆರಿಸಿಕೊಂಡಿದೆ. ಕೇಂದ್ರ ಗೃಹ ಇಲಾಖೆಯ ಸಲಹಾ ಸಂಸ್ಥೆ ತಂಡವು 2022ನೇ ಸಾಲಿನ ಅತ್ಯುತ್ತಮ ಪೊಲೀಸ್ ಠಾಣೆ ಪ್ರಶಸ್ತಿಗಾಗಿ ನಿಪ್ಪಾಣಿ ಹಾಗೂ ಕಿತ್ತೂರು ಪೊಲೀಸ್ ಠಾಣೆಗಳ ಮೌಲ್ಯಮಾಪನ ಕೈಗೊಂಡಿತ್ತು.
ಈ ವೇಳೆ ತಂಡವು ಠಾಣೆಯ ಒಳಾಂಗಣ, ಹೊರಾಂಗಣ ಸ್ವಚ್ಚತೆ, ಕುಡಿಯುವ ನೀರು, ಕಾಂಪೌಡ್ ವ್ಯವಸ್ಥೆ, ಠಾಣೆಯ ಕಟ್ಟಡ, ಲಾಕ್ ಅಪ್ ಕೋಣೆ, ಪುರುಷ ಮತ್ತು ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ದಾಖಲಾತಿಗಳ ಸಂಗ್ರಹ, ಸುರಕ್ಷತೆ, ಭದ್ರತೆ, ಶೌಚಗೃಹಗಳ ಸೌಲಭ್ಯ, ಅಪರಾಧ ಪ್ರಕರಣಗಳು, ತನಿಖಾ ವಿಧಾನ, ಅಪರಾಧ ಪತ್ತೆ ಕಾರ್ಯವಿಧಾನ, ಹಳೆಯ ಪ್ರಕರಣಗಳ ವಿಲೇವಾರಿ, ಪ್ರಕರಣಗಳಲ್ಲಿ ಶಿಕ್ಷೆ, ಕಾನೂನು ವ್ಯವಸ್ಥೆ ಸೇರಿ ಹಲವು ವಿಷಯಗಳ ಕುರಿತು ಮೌಲ್ಯಮಾಪನ ಮಾಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ