ಚಿತ್ರದುರ್ಗ(ಜೂ.24): ವಿಚಿತ್ರ ಕಾರಣಗಳಿಗಾಗಿ ಸಂಗಾತಿಯನ್ನು (Partner) ಕೊಲ್ಲುವ ಘಟನೆಗಳು ವರದಿಯಾಗುತ್ತಲೇ ಇರುತ್ತದೆ. ಆಸ್ತಿ, ಅಕ್ರಮ ಸಂಬಂಧ (Illicit Relationship), ದ್ವೇಷದ ಕಾರಣಗಳಿಗಾಗಿ ಮದುವೆಯಾದವರನ್ನೇ (Marriage) ಕೊಲ್ಲುವ ಪ್ರಕರಣಗಳೂ ಇದೇ ಮೊದಲೇನಲ್ಲ. ದಾಂಪತ್ಯಕ್ಕೆ ಕಾಲಿಡುವ ಪ್ರತಿಯೊಬ್ಬ ಹೆಣ್ಣು ಗಂಡ ಮಕ್ಕಳು ಸಂಸಾರ, ಸುಖ ಶಾಂತಿ ನೆಮ್ಮದಿಯಿಂದ ಇರಲಿ ಅಂತ ಗಂಡನ ಕೈಹಿಡಿದು ಸಪ್ತಪದಿ ತುಳಿದು ಸುಖ ದುಖಃದಲ್ಲಿ ಜೊತೆ ಇರುವೆ ಅಂತ ಅಂದುಕೊಳ್ಳೋದು ಸಹಜ. ಆದರೇ ಇಲ್ಲೊಬ್ಬ ಖತರ್ನಾಕ್ ಪಾಪಿ ಪತ್ನಿ ಪತಿಯ ಆಸ್ತಿ ಆಸೆಗೆ ಕೈ ಹಿಡಿದ ಗಂಡನನ್ನೇ (Husband) ಗುಪ್ತಾಂಗಕ್ಕೆ ಹೊಡೆದು ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ ನಡೆದಿದೆ.
ಕೆಳಗೋಟೆಯಲ್ಲೊಂದು ಮರ್ಡರ್
ಹೆಣವಾಗಿ ಬಿದ್ದಿರೋ ಮೃತದೇಹ, ಅಮಾಯಕ ಜೀವದ ಹತ್ಯೆ ತಿಳಿದು ಸಂಬಂಧಿಕರ ಆಕ್ರಂದನ. ಆಸ್ತಿಗಾಗಿ ಗಂಡನ್ನೇ ಬರ್ಬರವಾಗಿ ಹತ್ಯೆ ಮಾಡಿ ಜೈಲು ಸೇರಿರುವ ಕಿರಾತಕ ಪತ್ನಿ. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗದ ಕೆಳಗೋಟೆ ಬಡವಾಣೆಯಲ್ಲಿ.
ಪತ್ನಿ ಮೋಸಕ್ಕೆ ಹೆಣವಾದ ವ್ಯಕ್ತಿ
ಇಲ್ಲಿ ಪತ್ನಿ ಮೋಸದ ಹೊಡೆತಕ್ಕೆ ಬಲಿಯಾಗಿ ಹೆಣವಾಗಿರೋದು ಜಗದೀಶ್. ಕಳೆದ 12 ವರ್ಷಗಳ ಹಿಂದೆ ನೇತ್ರಾವತಿ ಎಂಬ ಯುವತಿಯನ್ನ ಮದುವೆಯಾಗಿದ್ದ, ಬಳಿಕ ಸುಖ ಸಂಸಾರವೂ ಸಾಗಿತ್ತು. ಇವರಿಗೆ ಈಗ 10-5 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಜಗದೀಶನಿಗೆ ಮನೆ ಸೇರಿದಂತೆ ಕೋಟ್ಯಾಂತರ ರೂ ಬೆಲೆ ಬಾಳೋ ಆಸ್ತಿ ಇದೆ. ಆದರೇ ಅದ್ಯಾವುದರಿಂದಲೂ ಆದಾಯದ ಮಾರ್ಗ ಮಾಡಿಕೊಂಡಿಲ್ಲ ಈ ಜಗದೀಶ.
ವಯಸ್ಸಾದ ಅಮ್ಮನ ಜೊತೆ ಬದುಕುತ್ತಿದ್ದ ವ್ಯಕ್ತಿ
ಇರುವ ಒಂದು ಮನೆಯ ಬಾಡಿಗೆ ಹಣದಲ್ಲಿ ಸಂಸಾರ ತೂಗಿಸಲು ಸಾಧ್ಯವಾಗದೆ, ಗಂಡ ಹೆಂಡತಿ ಪದೇ ಪದೇ ಜಗಳ ಮಾಡಿಕೊಳ್ತಿದ್ದರು. ಬಳಿಕ ಗಂಡ ಹೆಂಡ್ತಿ ದೂರವಾಗಿದ್ದಾರೆ. ಇದರಿಂದ ಬೇಸರ ಗೊಂಡ ಜಗದೀಶ್ ಪ್ರವೃತ್ತಿಯಾಗಿ ಅಲ್ಲೆ ಇದ್ದ ದೇಗುಲದಲ್ಲಿ ಪೂಜಾರಿಕೆ, ನಗರದಲ್ಲಿ ಗಾರೆ ಕೆಲಸ, ಮಾಡಿ, ತನ್ನ ವಯಸ್ಸಾದ ತಾಯಿಯೊಂದಿಗೆ ಜೀವನ ನಡೆಸ್ತಿದ್ದ.
ಬಿಟ್ಟು ಹೋದೋಳು ದಿಢೀರ್ ಬಂದು ಜೊತೆ ಸೇರಿಕೊಂಡಳು
ಆದರೆ, ಆರೋಪಿ ನೇತ್ರಾವತಿಯು ಅಕ್ರಮ ಸಂಬಂಧವನ್ನು ಇಟ್ಕೊಂಡಿದ್ದೂ, ಎರಡು ಮನೆಗಗಳು ಸೇರಿದಂತೆ ಕೊಟ್ಯಾಂತರ ರೂಪಾಯಿ ಬೆಲೆಬೇಳುವ ಆಸ್ತಿಯನ್ನು ಲಪಟಾಯಿಸಲು ಸಂಚು ನಡೆಸಿದ್ದಳು. ಗಂಡನನ್ನ ಬಿಟ್ಟು ದೂರ ಹೋಗಿದ್ದ ಅವಳು ಇದ್ದಕ್ಕಿದ್ದಂತೆ ಜೊತೆಗೆ ಇರ್ತಿನಿ ಅಂತ ಜಗದೀಶನ ಬಳಿ ಬಂದು ಸೇರಿದ್ಲು. ಹೀಗೆ ಸಂಚಿನಿಂದಲೇ ಬಂದ ನೇತ್ರಾವತಿ ಅಮಾಯಕ ಜಗದೀಶನನ್ನು ಕೊಲೆಗೈದಿದ್ದಾಳೆಂದು ಮೃತನ ಸಂಬಂದಿಗಳು ಆರೋಪ.
ಇದನ್ನೂ ಓದಿ: Basavaraj Bommai: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ಚಿಂತನೆ ಸರ್ಕಾರಕ್ಕಿಲ್ಲ; ಸಿಎಂ ಬಸವರಾಜ ಬೊಮ್ಮಾಯಿ
ಅಲ್ಲದೇ ಆಕೆಯ ನವರಂಗಿ ಆಟ ನೋಡಿದ್ದ ಸಂಬಂಧಿಕರು ಕಂಡೂ ಕಾಣದಂತೆ ಇದ್ದರಂತೆ. ಅಲ್ಲದೇ ಅನೇಕ ಬಾರಿ ಅನ್ಯ ಯುವಕ ಯಾರು ಎಂದು ಕೇಳಿದಾಗ ಆಕೆ ನಮ್ಮ ಸಂಬಂಧಿಕರು ಎಂದು ನೆಪ ಹೇಳಿ ಜಾರಿಕೊಳ್ತಿದ್ದಳು. ಈಗ ಪತಿಯ ಕೊಲೆ ಮಾಡಿ ನಮ್ಮ ಸಂಬಂಧಿಕರಿಗೆಲ್ಲಾ ರಾತ್ರಿ ವೇಳೆ ಎದೆ ನೋವಿನಿಂದ ಮೃತಪಟ್ಟಿದ್ದಾರೆ ಎಂದು ಕತೆ ಕಟ್ಟಲು ಶುರು ಮಾಡಿದ್ದಾಳೆ. ಆದ್ರೆ ಈಕೆಯ ನವರಂಗಿ ಆಟವನ್ನು ಮೊದಲೇ ಕಂಡಿದ್ದ ಮೃತನ ಸಂಬಂಧಿಕರು, ಆತನ ಬಾಡಿ ಚೆಕ್ ಮಾಡಿದಾಗ ವಿಚಿತ್ರವಾಗಿ ಮರ್ಮಾಂಗಕ್ಕೆ ಬಲವಾಗಿ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿರೋದು ಕಂಡು ಬಂದಿದೆ.
ಮರಣೋತ್ತರ ಪರೀಕ್ಷೆಯಲ್ಲಿ ರಿವೀಲ್
ಕೂಡಲೇ PM ಮಾಡಿಸಲು ವೈದ್ಯರಿಗೆ ಸೂಚಿಸಿದಾಗ ಪಾತಕಿ ನೇತ್ರಾವತಿ ಪರಾರಿಯಾಗಲು ಯತ್ನಿಸಿದ್ದು, ಕೂಡಲೇ ಅಕೆಯನ್ನು ಸಂಬಂಧಿಕರ ಆರೋಪದ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಲಯಾಗಿದೆ. ಇನ್ನೂ ಈ ಪ್ರಕರಣದ ಬೆನ್ನತ್ತಿರೋ ಚಿತ್ರದುರ್ಗದ ಬಡಾವಣೆ ಠಾಣೆ ಪೊಲೀಸರು ಆರೋಪಿಯಾದ ನೇತ್ರಾವತಿ ಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಯಾರೋ ನಾಯಿಗಳು ಎಂದು ಬೈದಿದ್ದಕ್ಕೆ; ಸಾಕು ನಾಯಿ ಬರ್ತ್ಡೇ ಆಚರಿಸಿ ಊರಿಗೆಲ್ಲಾ ಬಾಡೂಟ ಹಾಕಿದ!
ಆದ್ರೆ ಆಸ್ತಿ ಆಸೆಗಾಗಿಯೇ ಪತಿಯನ್ನು ಕೊಂದಿದ್ದಾಳೆಂದು, ಮೃತನ ಸಂಬಂಧಿಗಳು ಗಂಭೀರವಾಗಿ ಆರೋಪಿಸಿದ್ರೂ ಕೂಡ ಸೂಕ್ತ ತನಿಖೆ ಬಳಿಕವಷ್ಟೇ ಸತ್ಯಾಸತ್ಯತೆ ಬಯಲಾಗಬೇಕಿದೆ ಎಂತಾರೆ ಎಸ್ಪಿ ಪರುಶುರಾಮ್.ಒಟ್ಟಾರೆ ಪತ್ನಿಯಿಂದ ಏನನ್ನು ಅಪೇಕ್ಷಿಸದೇ ಜಗದೀಶ್ ಪತ್ನಿಯಿಂದಲೇ ಕೊಲೆಯಾಗಿದ್ದಾನೆ.ಆದ್ರೆ ಏನು ತಪ್ಪು ಮಾಡದ ಅಪ್ರಾಪ್ತ ಹೆಣ್ಮಕ್ಕಳು ಅಪ್ಪ ಅಮ್ಮ ಜಗಳದಿಂದ ಅನಾಥರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ