ಶೀಲ ಶಂಕಿಸಿ ಪತ್ನಿಯನ್ನು ಕೊಂದ ಪತಿ; ಬೆಳಗ್ಗೆ ತಲಾಕ್ ಕೊಟ್ಟು ಸಂಜೆ ಕತ್ತು ಕೊಯ್ದ ಪಾತಕಿ

ನೆನ್ನೆ ಬೆಳಗ್ಗೆ ಗಂಡ ಹೆಂಡತಿ ಇಬ್ಬರೂ ಬನ್ನೇರುಘಟ್ಟ ರಸ್ತೆಯಲ್ಲಿನ ಮಸೀದಿಗೆ ತೆರಳಿ ತಲಾಕ್ ತೆಗೆದುಕೊಂಡಿದ್ದರು. ಆದರೆ, ಮನೆಗೆ ಬಂದು ಮತ್ತೆ ಜಗಳ ತೆಗೆದಿದ್ದ ಗಂಡ ಕಲೀಂ ಪತ್ನಿಯನ್ನು ಹಿಗ್ಗಾಮುಗ್ಗಾ ಹೊಡೆದಿದ್ದ, ಅಲ್ಲದೆ ಜಗಳ  ಜಾಸ್ತಿಯಾಗಿ ಆಕೆಯ ಕತ್ತನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿದ್ದಾನೆ.

news18-kannada
Updated:August 6, 2020, 7:09 PM IST
ಶೀಲ ಶಂಕಿಸಿ ಪತ್ನಿಯನ್ನು ಕೊಂದ ಪತಿ; ಬೆಳಗ್ಗೆ ತಲಾಕ್ ಕೊಟ್ಟು ಸಂಜೆ ಕತ್ತು ಕೊಯ್ದ ಪಾತಕಿ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಆಗಸ್ಟ್‌ 06); ಪತ್ನಿಯ ಶೀಲ ಶಂಕಿಸಿ ಬೆಳಗ್ಗೆ ಮಸೀದಿಯಲ್ಲಿ ತಲಾಕ್ ನೀಡಿದಾತ, ಸಂಜೆ ಮನೆಗೆ ಬಂದು ಪತ್ನಿಯ ಜೊತೆ ಮತ್ತೆ ಜಗಳ ತೆಗೆದು ಆಕೆಯ ಕತ್ತು ಕುಯ್ದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ‌ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜೆಪಿನಗರದ ಎನ್ ಕ್ಲೇವ್ ಅಪಾರ್ಟ್ ಮೆಂಟ್ ಬಳಿ‌‌ ನಿನ್ನೆ ಸಂಜೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕೊಲೆಗೀಡಾದ ಮಹಿಳೆಯನ್ನು ನಜ್ನೀನ್ ತಾಜ್ (43) ಎಂದು ಗುರುತಿಸಲಾಗಿದೆ. ನಜ್ನೀನ್ ತಾಜ್ ಹಾಗೂ ಪತಿ ಕಲೀಂ ಶರೀಪ್ ದಂಪತಿಗಳಿಬ್ಬರಿಗೂ ಮನೆಯಲ್ಲಿ ಸದಾ ಗಲಾಟೆ ನಡೆಯುತ್ತಿತ್ತು. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು,ಅವರಿಗೂ ಮದುವೆಯಾಗಿದೆ. ಈ ನಡುವೆ ಶರೀಫ್ ತನ್ನ ಪತ್ನಿಯನ್ನು ಅನುಮಾನಿಸುತ್ತಿದ್ದ. ಜೊತೆಗೆ ಹಣಕಾಸಿನ ವಿಚಾರವಾಗಿಯೂ ಮನೆಯಲ್ಲಿ ಪರಸ್ಪರ ಗಲಾಟೆಯಾಗಿದೆ.

ಹೀಗಾಗಿ ನೆನ್ನೆ ಬೆಳಗ್ಗೆ ಗಂಡ ಹೆಂಡತಿ ಇಬ್ಬರೂ ಬನ್ನೇರುಘಟ್ಟ ರಸ್ತೆಯಲ್ಲಿನ ಮಸೀದಿಗೆ ತೆರಳಿ ತಲಾಕ್ ತೆಗೆದುಕೊಂಡಿದ್ದರು. ಆದರೆ, ಮನೆಗೆ ಬಂದು ಮತ್ತೆ ಜಗಳ ತೆಗೆದಿದ್ದ ಗಂಡ ಕಲೀಂ ಪತ್ನಿಯನ್ನು ಹಿಗ್ಗಾಮುಗ್ಗಾ ಹೊಡೆದಿದ್ದ, ಅಲ್ಲದೆ ಜಗಳ  ಜಾಸ್ತಿಯಾಗಿ ಆಕೆಯ ಕತ್ತನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿದ್ದಾನೆ.

ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಮಳೆಯ ಆರ್ಭಟ; ತುಂಬಿ ಹರಿಯುತ್ತಿದೆ ಕೃಷ್ಣೆಯ ಒಡಲು, ಮತ್ತೆ ಪ್ರವಾಹದ ಭೀತಿ

ಪತ್ನಿಯ ಮೃತ ದೇಹ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಗಾಬರಿಯಿಂದ ಆತ ಮನೆಯಿಂದ ಹೊರ ಹೋಗಿದ್ದ. ಈ ನಡುವೆ ಮನೆಗೆ ಮಗ ಬಂದು ನೋಡಲಾಗಿ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ಬಂಧಿಸಲಾಗಿದೆ.

ಪೊಲೀಸರ ವಿಚಾರಣೆ ವೇಳೆ ಪತ್ನಿಯ ನಡವಳಿಕೆ ಸರಿಯಿರಲಿಲ್ಲ. ನನ್ನನ್ನ ತೊರೆದು ಬೇರೆಯವನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಕಲೀಂ ಆರೋಪಿಸಿದ್ದಾನೆ. ಕೊರೊನಾ‌ ಭೀತಿ ಹಿನ್ನಲೆ ಪಿಪಿಇ ಕಿಟ್ ಧರಿಸಿ ಮಹಜರು ಮಾಡಿದ್ದು, ಕೋವಿಡ್  ಪರೀಕ್ಷೆ ವರದಿ ಬಂದ ನಂತರ ಮೃತ ದೇಹವನ್ನು ಸಂಬಂಧಿಕರಿಗೆ ನೀಡಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.
Published by: MAshok Kumar
First published: August 6, 2020, 7:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading