Crime News: ರಾತ್ರಿ ಜಗಳ.. ಬೆಳಗ್ಗೆ FBಯಲ್ಲಿ ಹೆಂಡತಿಗೆ ಶ್ರದ್ಧಾಂಜಲಿ..ಪ್ರಕರಣ ಬಿಚ್ಚಿಕೊಂಡಷ್ಟು ನಿಗೂಢ!

ಪತಿ ಮುನಿಕೃಷ್ಣ ತನ್ನ ಹೆಂಡತಿ ಲೀಲಾವತಿ ಫೋಟೋವನ್ನ ಫೇಸ್ ಬುಕ್  ಅಕೌಂಟ್ ನಲ್ಲಿ ಪೋಸ್ಟ್ ಮಾಡಿ,  RIP ಎಂದು ಬರೆದು ಶ್ರದ್ಧಾಂಜಲಿ ಸಲ್ಲಿಸಿದ್ದಾನೆ. ಫೇಸ್ ಬುಕ್  ಪೋಸ್ಟ್ ನೋಡಿ ಗಾಬರಿಗೊಂಡ ಲೀಲಾವತಿ  ಪೋಷಕರು ಆಕೆಯನ್ನ ಹುಡುಕಾಡಿದಾಗ ನಾಪತ್ತೆಯಾಗಿರೋದು ಗೊತ್ತಾಗಿದೆ. (ವರದಿ: ಮನುಕುಮಾರ್​​)

ಫೇಸ್​​ಬುಕ್​​ ನಲ್ಲಿ RIP ಪೋಸ್ಟ್​​

ಫೇಸ್​​ಬುಕ್​​ ನಲ್ಲಿ RIP ಪೋಸ್ಟ್​​

  • Share this:
    ದೊಡ್ಡಬಳ್ಳಾಪುರ : ಬರ್ತ್ ಡೇ  ಪಾರ್ಟಿ (Birthday Party) ವಿಚಾರಕ್ಕೆ ಗಂಡ, ಹೆಂಡತಿ  (Husband and Wife) ಜಗಳವಾಡಿದ್ದಾರೆ.  ಮರುದಿನ ಗಂಡ ತನ್ನ ಫೇಸ್ ಬುಕ್  (Facebook) ಅಕೌಂಟ್ ನಲ್ಲಿ ಹೆಂಡತಿಯ ಫೋಟೋ ಹಾಕಿ  RIP ಎಂದು ಶ್ರದ್ಧಾಂಜಲಿ  ಸಲ್ಲಿಸಿದ್ದಾನೆ. ಹೆಂಡತಿ ನಾಪತ್ತೆಯಾಗಿದ್ದು ಆಕೆಯ ಹೆತ್ತವರ ಆತಂಕಕ್ಕೆ  ಕಾರಣವಾಗಿದೆ.  ದೊಡ್ಡಬಳ್ಳಾಪುರ  ತಾಲೂಕಿನ  ಉದನಹಳ್ಳಿಯ ಆರ್ಕೆಸ್ಟ್ರಾ ಕಲಾವಿದ ಮುನಿಕೃಷ್ಣ  ತನ್ನ ಹೆಂಡತಿ ಲೀಲಾವತಿ  (22) ಫೋಟೋವನ್ನ  ಫೇಸ್ ಬುಕ್  ಅಕೌಂಟ್  ನಲ್ಲಿ ಪೋಸ್ಟ್  RIP ಎಂದು ಬರೆದು ಶ್ರದ್ಧಾಂಜಲಿ  ಸಲ್ಲಿಸಿದ್ದಾನೆ. ಫೇಸ್ ಬುಕ್   ಪೋಸ್ಟ್  ನೋಡಿ ಗಾಬರಿಗೊಂಡ ಲೀಲಾವತಿ  ಪೋಷಕರು ಆಕೆಯನ್ನ ಹುಡುಕಾಡಿದಾಗ ನಾಪತ್ತೆಯಾಗಿರೋದು ಗೊತ್ತಾಗಿದೆ. ದೊಡ್ಡಬಳ್ಳಾಪುರದ ಮಹಿಳಾ  ಪೊಲೀಸ್  ಠಾಣೆಗೆ ಮಗಳು ಕಾಣೆಯಾಗಿರುವ ಬಗ್ಗೆ  ದೂರು ನೀಡಿದ್ದಾರೆ.

    ಇದನ್ನೂ ಓದಿ: Ukraine Crisis: ನನ್ನ ಮಗಳಿರುವ ಸ್ಥಳದಲ್ಲೇ ಬಾಂಬ್​​ಗಳು ಸ್ಫೋಟಿಸುತ್ತಿವೆ: ಬಾಗಲಕೋಟೆಯಲ್ಲಿ ತಾಯಿಯ ಕಣ್ಣೀರು

    ಮಗಳಿಗಾಗಿ ತಂದೆಯ ಕಣ್ಣೀರು..

    ಫೆಬ್ರವರಿ  23ರ ರಾತ್ರಿ  ಮುನಿಕೃಷ್ಣ ಅವರ ತಂಗಿ ಮಗನ ಬರ್ತ್ ಡೇ ಪಾರ್ಟಿ ಗೆ  ಹೋಗಿದ್ದ, ಇದೇ ವಿಚಾರಕ್ಕೆ  ಲೀಲಾವತಿ  ಗಂಡನ ಜೊತೆ ಜಗಳ ಮಾಡಿದಳು,. ಈ ವೇಳೆ ಮುನಿಕೃಷ್ಣ  ಹೆಂಡತಿಗೆ ಹೊಡಿದಿದ್ದ,  ಮರುದಿನ ಮಧ್ಯಾಹ್ನ ಒಂದು ಗಂಟೆ ಸಮಯದಲ್ಲಿ ಮುನಿಕೃಷ್ಣ  ತನ್ನ ಫೇಸ್​​​ ಬುಕ್  ಅಕೌಂಟ್  ನಲ್ಲಿ ಹೆಂಡತಿಯ ಫೋಟೋ  ಹಾಕಿ RIP ಎಂದು ಬರೆದು ಶ್ರದ್ಧಾಂಜಲಿ  ಸಲ್ಲಿಸಿದ್ದಾನೆ. ಪೋಸ್ಟ್  ನೋಡಿ ಗಾಬರಿಗೊಂಡ  ಲೀಲಾವತಿ ತಂದೆ ಉದನಹಳ್ಳಿಗೆ ಬಂದು ಮಗಳನ್ನ ಹುಡುಕಾಡಿದ್ದಾರೆ. ಆದರೆ ಮಗಳು ಪತ್ತೆಯಾಗಿಲ್ಲ, ತನ್ನ ಮಗಳನ್ನು ಹೊಡೆದು ಸಾಯಿಸಿದ್ದಾನೆಂದು ಆರೋಪಿಸಿ ತಂದೆ ಕಣ್ಣೀರು  ಹಾಕುತ್ತಿದ್ದಾರೆ.

    ಪತಿ ಮುನಿಕೃಷ್ಣ


    ಲೀಲಾವತಿಯೇ ಪೋಸ್ಟ್​​ ಹಾಕಿದ್ದಾರೆಯೇ..? 

    ಆದರೆ ಮುನಿಕೃಷ್ಣನ ಸೋದರ ಮುನಿರಾಜು ಬೇರೆಯದ್ದೇ ಕಥೆ ಹೇಳುತ್ತಿದ್ದಾನೆ,. ಬರ್ತ್ ಡೇ ಪಾರ್ಟಿ  ವಿಚಾರಕ್ಕೆ  ಅಣ್ಣ- ಅತ್ತಿಗೆ  ನಡುವೆ ಜಗಳವಾಗಿ ಮರುದಿನ ಬೆಳಗ್ಗೆ ಅತ್ತಿಗೆಗೆ ಅಣ್ಣ ಹೊಡೆದಿದ್ದು ನಿಜ.  ಅನಂತರ ಅತ್ತಿಗೆ ಬ್ಯಾಗ್ ತೆಗೆದುಕೊಂಡು ಮನೆ ಬಿಟ್ಟು ಹೋಗಿದ್ದಾಳೆ. ಅಣ್ಣನ ಮೊಬೈಲ್ ಆಕೆಯ ಬಳಿ ಇದ್ದು , ಅತ್ತಿಗೆಯೇ ಅಣ್ಣನ ಫೇಸ್​​ಬುಕ್​​ ಅಕೌಂಟ್ ನಲ್ಲಿ ತನ್ನ ಫೋಟೋ ಹಾಕಿ RIP ಎಂದು ಬರೆದಿದ್ದಾರೆ ಎಂದು ಆರೋಪಿಸಿದರು.  ಹೀಗಾಗಿ ನಮ್ಮ ಅಣ್ಣನದ್ದು ಯಾವುದೇ ಪಾತ್ರವಿಲ್ಲ. ನಮ್ಮ ಅತ್ತಿಗೆ ಅವನ ಮೊಬೈಲ್ ತೆಗೆದುಕೊಂಡು ಆಕೆಯೇ ಹೀಗೆ ಪೋಸ್ಟ್​​ ಹಾಕಿದ್ದಾಳೆ ಎಂದು ಆರೋಪಿಸಿದ್ದಾಳೆ.

    ಇದನ್ನೂ ಓದಿ: Mysore Lovers: 5 ತಿಂಗಳ ಹಿಂದೆ ಓಡಿ ಹೋಗಿದ್ದ ಪ್ರೇಮಿಗಳು ವಾಪಸ್ ಊರಿಗೆ ಬಂದು ಹೆಣವಾಗಿದ್ದೇಕೆ?

    ದೊಡ್ಡಬಳ್ಳಾಪುರ  ಮಹಿಳಾ ಪೊಲೀಸ್  ಠಾಣೆಯಲ್ಲಿ ಲೀಲಾವತಿ  ನಾಪತ್ತೆಗೆ ಸಂಬಂಧಿಸಿದಂತೆ  ದೂರು ನೀಡಲಾಗಿದ್ದು, ಆಕೆಯ ಗಂಡ ಮುನಿಕೃಷ್ಣನನ್ನ ಠಾಣೆಗೆ ಕರೆದು ವಿಚಾರಣೆ ಮಾಡಲಾಗಿದೆ. ಜೊತೆಗೆ  ಮೊಬೈಲ್  ಟವರ್ ಲೋಕೇಷನ್  ಪತ್ತೆ ಮಾಡಿದ್ದಾಗ ಆಕೆ ತಿರುಪತಿಯಲ್ಲಿರುವ ಮಾಹಿತಿ ಬರುತ್ತಿದೆ. ಆಕೆಯ ಪತ್ತೆಯ ನಂತರವೇ RIP ಪೋಸ್ಟ್  ಹಿಂದಿನ ಅಸಲಿಯತ್ತು ಬಯಲಾಗಲಿದೆ.

    ಚಿಕ್ಕಬಳ್ಳಾಪುರದಲ್ಲಿ ಟೆಕ್ಕಿ ಸಾವು 

    ಇನ್ನು ನಿನ್ನೆ  ಕುಟುಂಬ ಕಲಹ ಹಿನ್ನೆಲೆ ನವ್ಯಾ ಎಸ್.ಆರ್ (23) ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಚಿಕ್ಕಬಳ್ಳಾಪುರ ಪ್ರಶಾಂತ್ ನಗರದ ಗಂಡನ ಮನೆಯಲ್ಲಿ ನವ್ಯಾ ಮೃತದೇಹ ದೊರೆತಿದೆ. ಗಂಡನ ಮನೆಯವರು ನವ್ಯಾಗೆ ವರದಕ್ಷಣೆ ಕಿರುಕುಳ ನೀಡಿ ನೇಣು ಹಾಕಿದ್ದಾರೆ ಎಂದು ಹೆತ್ತವರು ಆರೋಪಿಸುತ್ತಿದ್ದಾರೆ. ಮೃತಳ ತಂದೆ-ತಾಯಿ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಅಳಿಯ ಹಾಗೂ ಆತನ ಮನೆಯವರ ವಿರುದ್ಧ ದೂರು ದಾಖಲಿಸಿದ್ದಾರೆ.  ಮಗಳ ಸಾವಿನ ಸುದ್ದಿಯನ್ನು ಕೇಳಿ ನವ್ಯಾ ತಂದೆ ಅಸ್ವಸ್ಥರಾಗಿದ್ದಾರೆ. ಮೃತಳ ತಂದೆ ಎಂ.ರಾಮಚಂದ್ರಪ್ಪ ನನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನವ್ಯಾ ಸಾವಿನಿಂದ ಆಕ್ರೋಶಗೊಂಡ ಸಂಬಂಧಿಗಳು ಪತಿ ಚೇತನ್ ಕುಮಾರ್ ಗೆ ಛೀಮಾರಿ ಹಾಕಿ ಥಳಿಸಿದ್ದಾರೆ. ಮಹಿಳೆಯರ ಕೈಯಿಂದ ಚೇತನ್ ಕುಮಾರ್ ನನ್ನು ಬಿಡಿಸಲು ಪೊಲೀಸರ ಹರಸಾಹಸ ಪಡಬೇಕಾಯಿತು.
    Published by:Kavya V
    First published: