ಲಾಕ್​ಡೌನ್​ವೇಳೆ ಹುಟ್ಟಿದ ಪ್ರೀತಿಗೆ ಗಂಡನನ್ನೇ ಮುಗಿಸಿದ ಹೆಂಡತಿ

ಲಾಕ್​ಡೌನ್​ ವೇಳೆ ಹುಟ್ಟಿದ ಪ್ರೀತಿಗಾಗಿ ಗಂಡನನ್ನೇ ಈಕೆ ಕೊಂದು ಈಗ ಜೈಲು ಸೇರಿದ್ದು, ಈಕೆಯ ಮಕ್ಕಳು ಈಗ ಅನಾಥವಾಗಿವೆ. 

news18-kannada
Updated:October 23, 2020, 9:55 PM IST
ಲಾಕ್​ಡೌನ್​ವೇಳೆ ಹುಟ್ಟಿದ ಪ್ರೀತಿಗೆ ಗಂಡನನ್ನೇ ಮುಗಿಸಿದ ಹೆಂಡತಿ
ಆರೋಪಿ ಪ್ರೇಮಾ
  • Share this:
ಆನೇಕಲ್ (ಅ.23): ಪ್ರೀತಿಸಿ ಮದುವೆಯಾದ ಗಂಡ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಎಂದು ಪ್ರಿಯಕರನ ಜೊತೆ ಸೇರಿ ಆತನನ್ನು ಹೆಂಡತಿ ಕೊಲೆ ಮಾಡಿರುವ ಘಟನೆ ನಡೆದಿದೆ. 28 ವರ್ಷದ ಪ್ರೇಮ ಈ ಕೃತ್ಯದ ಆರೋಪಿ. ಆಕೆಗೆ ಸಹಾಯ ಮಾಡಿದ ಶಿವಮಲ್ಲು ಆಲಿಯಾಸ್​ ಕರಿಯ ಆಕೆಯ ಪ್ರಿಯಕರ. ಸದ್ಯ ಈ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಲಾಕ್​ಡೌನ್​ ವೇಳೆ ಹುಟ್ಟಿದ ಪ್ರೀತಿಗಾಗಿ ಗಂಡನನ್ನೇ ಈಕೆ ಕೊಂದು ಈಗ ಜೈಲು ಸೇರಿದ್ದು, ಈಕೆಯ ಮಕ್ಕಳು ಈಗ ಅನಾಥವಾಗಿವೆ.  ಮೂಲತಃ ತಮಿಳುನಾಡು ನಿವಾಸಿಯಾದ ಪ್ರೇಮಾ ಎರಡು ವರ್ಷದ ಹಿಂದೆ ಮಾದೇಶ ಎಂಬಾಂತನನ್ನು ಮದುವೆಯಾಗಿದ್ದಳು. ಇವರ ಈ ದಾಂಪತ್ಯಕ್ಕೆ ಇಬ್ಬರು ಮಕ್ಕಳು ಕೂಡ ಸಾಕ್ಷಿಯಾಗಿದ್ದಾರೆ. ಈ ನಡುವೆ ಪ್ರೇಮಾಗೆ ಇನ್ನೊಂದು ಪ್ರೀತಿ ಉಂಟಾಗಿದ್ದು, ಇದು ಕೊಲೆಯ ಮಟ್ಟಕ್ಕೆ ಆಕೆಯನ್ನು ಕರೆದೊಯ್ದಿದೆ. 

ವೃತ್ತಿಯಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದ ಮಾದೇಶ ಆನೇಕಲ್ ತಾಲ್ಲೂಕಿನ ಜಿಗಣಿ ಬಳಿ ಹಾರಗದ್ದೆಯಲ್ಲಿ ಒಂದು ಸಣ್ಣದಾದ ಶಾಪ್ ಇಟ್ಟುಕೊಂಡು ಜೀವನ ಮಾಡುತ್ತಿದ್ದ. ಪ್ರೀತಿಸಿದ ಹೆಂಡತಿ  ಮಕ್ಕಳೊಂದಿಗೆ ಸುಖ ಜೀವನ ಮಾಡುತ್ತಿದ್ದ. ಕೊರೋನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಈತ ಲಾಕ್​ಡೌನ್​ ವೇಳೆ ಹೆಂಡತಿ ಮಕ್ಕಳ ಜೊತೆ ಹುಟ್ಟುರಾದ ತಮಿಳುನಾಡಿನ ಡೆಂಕಣಿಕೋಟೆಗೆ ಹೋಗಿದ್ದ.  ಅಲ್ಲಿ ಈ ಪ್ರೇಮಾಳಿಗೆ  ಅದೇ ಊರಿನ ಶಿವಮಲ್ಲು ಜೊತೆ ಪ್ರೀತಿ ಶುರುವಾಗಿದ್ದು,  ನಂತರ ಅದು ಅಕ್ರಮ ಸಂಬಂಧಕ್ಕೆ ತಿರುಗಿ ಇದೀಗ ತನ್ನ ಗಂಡನನ್ನೆ ಕೊಲೆ ಮಾಡಿಸುವ‌ ಮಟ್ಟಕ್ಕೆ ಹೋಗಿದ್ದಾಳೆ.

ಲಾಕ್ ಡೌನ್ ಸಡಿಲಿಕೆ ಬಳಿಕ ಊರಿನಿಂದ ವಾಪಸ್ ಆಗಿದ್ದ ಪ್ರೇಮಾಳಿಗೆ ಪ್ರಿಯಕರನನ್ನು ಸಂದಿಸಲಾಗದೆ ವಿರಹ ವೇದನೆ ಇನ್ನಿಲ್ಲದಂತೆ ಕಾಡಿತ್ತು. ಈ ವಿಚಾರ ಪ್ರಿಯಕರನಿಗೆ ತಿಳಿಸಿದ ಪ್ರೇಮಾ ಪತಿಯನ್ನು ಕೊಂದು ಇಬ್ಬರು ನೆಮ್ಮದಿಯಾಗಿ ಜೀವನ ನಡೆಸುವ ಆಲೋಚನೆ ಮಾಡಿದ್ದಾರೆ.

ಇದನ್ನು ಓದಿ: ರಾಜಕಾಲುವೆ ಒಡೆದು ಮುಳುಗಿದ ಹೊಸಕೆರೆಹಳ್ಳಿಯಲ್ಲಿ ಹಸುಗೂಸಿನ ರಕ್ಷಣೆ

ಅಂದುಕೊಂಡಂತೆ ಇದೇ ತಿಂಗಳ ಹದಿನೇಳನೇ ತಾರೀಖಿನಂದು ಅಂದರೆ ಶನಿವಾರ ರಾತ್ರಿ ತನ್ನ ಪ್ರಿಯತಮನ ಜೊತೆ ಸೇರಿಕೊಂಡು ತನ್ನ ಗಂಡನನ್ನೆ ಕೊಲೆ ಮಾಡಿಸಿದ್ದಾಳೆ. ಅಂದು ರಾತ್ರಿ ಮಾದೇಶ್ ಒಬ್ಬನೆ ಇದ್ದಿದ್ದನ್ನು ಕಂಡು ಆತನನ್ನು ಹಿಂಬಾಲಿಸಿದ ಪ್ರಿಯಕರ ಶಿವಮಲ್ಲು ತನ್ನ ಸ್ನೇಹಿತನಾದ  ಮಲ್ಲೇಶ್  ಸಹಾಯ ಮಾಡಿದ್ದಾನೆ.  ಆತನ ಮೇಲೆ ಕಲ್ಲು ಎತ್ತಿ ಕೊಲೆ ಮಾಡಲಾಗಿದೆ. ಬಳಿಕ ಆರೋಪಿಗಳಿಬ್ಬರು ಪರಾರಿಯಾಗಿದ್ದಾರೆ.

ಈ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸರು ಪ್ರೇಮಾ ಮತ್ತು ಆಕೆಯ ಪ್ರಿಯತಮ ಕರಿಯಾ ಮತ್ತು ಕರಿಯನ ಸ್ನೇಹಿತ ಮಲ್ಲೇಶ್ ನನ್ನು ಬಂಧಿಸಿದ್ದಾರೆ.
Published by: Seema R
First published: October 23, 2020, 9:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading